ಹೂವಿನಿಂದ ಅದರ ಕೋಮಲತೆ ಬೇಕೆಂದರೆ ಅದ ಹೇಗೆ ಕೇಳಲಿ,

ನಾ ಪ್ರೇಮಿಸುವ ವ್ಯಕ್ತಿಯೇ ನನಗೆ ಬೇಕೆಂದು ಹೇಗೆ ತಾನೇ ಹೇಳಲಿ?

ವಿರಹತಪ್ತ ಮನ ಹೇಳುತ್ತದೆ ಜೀವನದಲ್ಲಿ ಪ್ರೇಮವೇ ಇಲ್ಲ

ಅದನ್ನು ನಿನ್ನಿಂದ ಕೇಳಿ  ಪಡೆ ಎಂದರೆ ಹೇಗೆ ತಾನೇ ಕೇಳಲಿ?

ಕೋರ್ಟ್‌ ಕಟಕಟೆ ಏರಿ ಸತ್ಯ ನುಡಿದು ಬಲಗೈ ಕಳೆದುಕೊಂಡೆ

ಹಾಗಿರುವಾಗ ನೀನೇ ನನ್ನ ಬಲಗೈ ಆಗೆಂದು ಹೇಗೆ ಹೇಳಲಿ?

ದೃಷ್ಟಿ ಬೆರೆತಾಗ ನಿನ್ನೊಡನೆ ಕಂಬನಿ ಧಾರೆಯಾಗಿ ಮಡುಗಟ್ಟಿತ್ತು

ಮತ್ತೆ ದೃಷ್ಟಿ ಬೆರೆಸಿ ನಿನ್ನಲ್ಲಿ ಪ್ರೇಮ ಭಿಕ್ಷೆ ಹೇಗೆ ಬೇಡಲಿ?

ನೀನಿಲ್ಲದೆ ನನಗಾರಿಲ್ಲ….. ನೀನಿಲ್ಲದೆ ನನಗೆ ಬಾಳೇ ಇಲ್ಲ….

ಇದೆಲ್ಲ ನಿನಗೆ ಗೊತ್ತಿದ್ದರೂ ಬಾಯಿ ಬಿಟ್ಟು ನಾ ಹೇಗೆ ಹೇಳಲಿ?

– ಕೆ. ಅನುಷಾ, ಮೈಸೂರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ