ಎಲ್ಲರೂ ಇದನ್ನು ಮಾಡಲಾಗದು! : ಒಂದು ಕಡೆ ಬ್ಯಾಲೆ ಡ್ಯಾನ್ಸ್ ಮೆರೆಯುತ್ತಿದ್ದರೆ ಇನ್ನೊಂದು ಕಡೆ ಯೂರೋಪ್, ಅಮೆರಿಕಾದಲ್ಲಿ ಮಾಡರ್ನ್ ಡ್ಯಾನ್ಸ್ ಕೂಡ ದಿನೇದಿನೇ ಜನಪ್ರಿಯವಾಗುತ್ತಿದೆ. ಕಾಂಟೆಂಪರರಿ ಡ್ಯಾನ್ಸ್ ಅಭಿಮಾನಿಗಳು ಏರೋಬಿಕ್ಸ್ ನ್ನೂ ಎಳೆತಂದು ಇದಕ್ಕೆ ಸೇರಿಸಿಕೊಳ್ಳುತ್ತಾರೆ. ಈ ಡ್ಯಾನ್ಸ್ ನಲ್ಲಿ ಡ್ರಾಮಾ, ನಾವೀನ್ಯತೆಗಳಿಗೆ ಕೊರತೆ ಇಲ್ಲ. ಬ್ಯಾಲೆ ತರಹ ಕ್ಲಿಷ್ಟಕರ ಮುದ್ರೆಗಳಿಲ್ಲ. ಜಾರ್ಜಿಯಾದಲ್ಲಿ ಪ್ರದರ್ಶನಗೊಂಡ ಈ ಡ್ಯಾನ್ಸ್ ಒಂದು ಕೈಯನ್ನು ರೇಲಿಂಗ್ಸ್ ನಲ್ಲಿ ಹಿಡಿದೇ ಮೆಟ್ಟಿಲೇರುವ ಇಳಿಯುವ ಸಾಹಸಮಯ ಪ್ರದರ್ಶನ ನೀಡಿದ್ದಾಳೆ.
ಹತ್ತಿರ ಬಂದೀರಿ ಜೋಕೆ ! : ಅಯ್ಯೋ..... ಇದೇನು ಹುಡುಗಿಯೋ ಹೆಣ್ಣು ಮೊಸಳೆಯೋ? ಹಾಗಿದೆ ಅವಳ ಗೆಟಪ್. ಕಾಸ್ ಪ್ಲೇ ಅಂದ್ರೆ ಕಾಮಿಕ್ಸ್, ವಿಡಿಯೋ ಗೇಮ್ಸ್ ನ ಪಾತ್ರಧಾರಿಗಳಂತೆ ವೇಷ ಧರಿಸಿ ಪಬ್ಲಿಕ್ ಆಗಿ ಓಡಾಡುವುದು ಆಧುನಿಕ ಫ್ಯಾಷನ್ ಆಗಿದೆ. ವಿದೇಶೀ ಯುವಜನತೆ ಇದಕ್ಕಾಗಿ ಸಾವಿರಾರು ಡಾಲರ್ ಸುರಿದು ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲೂ ಕಾಣಿಸುತ್ತಾರೆ. ನೀವು ಇಂಥ ವೇಷ ಧರಿಸಿ ಫ್ಯಾನ್ಸಿ ಶೋಗಳಲ್ಲಿ ಟ್ರೈ ಮಾಡಬಾರದೇಕೆ?
ಇದುವೇ ನೈಜ ಜೀವನ ! : ಜೋಡಿಯೊಂದಿಗೆ ಸೆಲ್ಛಿ ತೆಗೆದುಕೊಳ್ಳುವುದೇನೋ ಸರಿ, ಆದರೆ ಆಗ ಪ್ರೀತಿ ಮೊಬೈಲ್‌ನತ್ತ ವಾಲುತ್ತದೆ, ಪ್ರಿಯನತ್ತ ಅಲ್ಲ. ಹೀಗಾಗಿಯೇ ಈಗ ಸಾವಿರಾರು ವಿದೇಶೀ ಜೋಡಿಗಳು ಸಾಗರತೀರದಲ್ಲಿ ಪ್ರೊಫೆಶನಲ್ಸ್ ನ್ನು ಕರೆಸಿ ತಮ್ಮ ಪ್ರೇಮಭಂಗಿಗಳ ಫೋಟೋ ತೆಗೆಸಿಕೊಳ್ಳುತ್ತಾರೆ. ಆಗ ಅದು ಹಲವು ದಶಕಗಳಾದರೂ ಹಾಗೆಯೇ ಉಳಿಯುತ್ತವೆ. ಜಪಾನ್ ಬೀಚ್‌ನಲ್ಲಿ ಯೂರೋಪ್ ಪ್ರೇಮಿಗಳ ಭಂಗಿ ಕಂಡದ್ದು ಹೀಗೆ!
ನೃತ್ಯದಲ್ಲಿ ಹೊಸತನ : ನಮ್ಮಲ್ಲಿ ಭರತನಾಟ್ಯ ಪ್ರಸಿದ್ಧವಾಗಿರುವಂತೆ ಪಾಶ್ಚಾತ್ಯ ದೇಶಗಳಲ್ಲಿ ಬ್ಯಾಲೆ ಡ್ಯಾನ್ಸ್. ಇಲ್ಲಿನ ಬಾಲೆಯರು ಬ್ಯಾಲೆಗಾಗಿ ಬಡನಡು ಬಳುಕಿಸುತ್ತಾ ಬಾಗಬೇಕಷ್ಟೆ. ಇಲ್ಲಿನವರಂತೆ 18 ಗಜದ ಸೀರೆಯುಟ್ಟು ಅಲ್ಲಿ ನರ್ತಿಸಬೇಕಿಲ್ಲ. ಅಮೆರಿಕಾದ ಅಟ್ಲಾಂಟಾದಲ್ಲಿ ಶೆರಾನ್ ಸ್ಟೋರಿಯ ಕ್ಲಾಸ್‌ನಲ್ಲಿ ಪ್ರತಿ ವರ್ಷ ಹೊಸ ಹೊಸ ತರುಣಿಯರ ಇಂಥ ಪ್ರದರ್ಶನವಿರುತ್ತದೆ.
ನಮ್ಮ ದನಿ ಆಲಿಸಿ : ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಕಾನೂನುಬಾಹಿರ ವಿದೇಶೀಯರನ್ನು ವಾಪಸ್ಸು ಹೊರಡುವಂತೆ ಮಾಡಲು, ಚುನಾವಣೆಗಾಗಿ ತಾನು ನೀಡಿದ್ದ ಭರವಸೆಯಂತೆ ಕೆಲಸದಿಂದ ಹೊರದೂಡುತ್ತಿದ್ದಾರೆ. ಹಲವರನ್ನು ಜೇಲಿಗೂ ಹಾಕಿದ್ದಾರೆ. ಇಂಥವರು ಕೋಟ್ಯಂತರ ಡಾಲರ್ ಸುರಿದು ಅಲ್ಲೇ ಮನೆ ಕಟ್ಟಿಸಿದ್ದರು. ಇದರ ಪರಿಣಾಮವಾಗಿ ಅಂಥವರ ಮಕ್ಕಳು ಪೋಷಕರಿಂದ ದೂರಾಗಬೇಕಿದೆ. ಸಹಜವಾಗಿಯೇ ತಮಗೆ ನ್ಯಾಯ ಸಿಗಲಿ ಎಂದು ಅವರೆಲ್ಲ ಹಿಂಡು ಹಿಂಡಾಗಿ ಅಮೆರಿಕಾದಾದ್ಯಂತ ಟ್ರಂಪ್ ವಿರುದ್ಧ ಹೀಗೆ ಹೋರಾಟಕ್ಕಿಳಿದಿದ್ದಾರೆ.
ಆಟ ಒಂದು ನೆಪವಷ್ಟೆ : ರಷ್ಯಾದಲ್ಲಿ ನಡೆದ ವರ್ಲ್ಡ್ ಫುಟ್‌ಬಾಲ್ ಕಪ್ ವೀಕ್ಷಿಸಲು ಬಂದವರು ಹಾಗೂ ಕ್ರೀಡಾಪಟುಗಳ ಸಲುವಾಗಿ ಸಾವಿರಾರು ಸೆಕ್ಸ್ ವರ್ಕರ್ಸ್ ಆ ನಗರಕ್ಕೆ ಮುತ್ತಿಗೆ ಹಾಕಿ ಡೇರೆ ಹೂಡಿದ್ದಾರೆ. ಅಲ್ಲಿನ ಕಮ್ಯೂನಿಸ್ಟ್ ಪಾರ್ಟಿ ಜೋರು ಜೋರಾಗಿ, ವಿದೇಶಿಗರ ಮುಂದೆ ರಷ್ಯಾದ ಸೆಕ್ಸ್ ಇಂಡಸ್ಟ್ರಿ ಪ್ರದರ್ಶನ ಬೇಡ ಎಂದು ಅಬ್ಬರಿಸಿದ್ದೇ ಬಂತು. ಆದರೆ ಫುಟ್‌ಬಾಲ್ ಪ್ರೇಮಿಗಳು ಕೇಳಬೇಕಲ್ಲ? ಎಷ್ಟೋ ವರ್ಷಕ್ಕೊಮ್ಮೆ ನಡೆಯುವ ಈ ವಿಶ್ವ ಫುಟ್‌ಬಾಲ್ ಪಂದ್ಯಾವಳಿಗೆ ಆಟದ ನೆಪದಲ್ಲಿ ಮುಗಿಬಿದ್ದವರು, ಅಲ್ಲಿನ ರೆಡ್ ಲೈಟ್ ಏರಿಯಾಗೆ ಹೋಗದಿರುತ್ತಾರಾ? ಗ್ರಾಹಕರನ್ನು ಆಕರ್ಷಿಸಲು ಸಿದ್ಧರಾಗುತ್ತಿರುವ ಹುಡುಗಿಯರಿವರು.