ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡದೇ ಇದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಮಹಿಳೆಯರ ಅಂತಹ ಸಮಸ್ಯೆಗಳನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲೆಂದು ಮಂಗಳೂರಿನ ಪ್ರಮೀಳಾ ರಾವ್ ನೇತೃತ್ವದ `ಕಲ್ಪ ಟ್ರಸ್ಟ್' ಪ್ರಯತ್ನಶೀಲವಾಗಿದೆ.

ಪ್ರಮೀಳಾ ರಾವ್ ‌ತಮ್ಮದೇ ಆದ ಪುಟ್ಟ ಘಟಕದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಿ ಸ್ಲಮ್ ಗಳಲ್ಲಿ, ಕಾಲೋನಿಗಳಲ್ಲಿ, ವಸತಿ ನಿಲಯಗಳಲ್ಲಿ ವಾಸಿಸುವ ಹುಡುಗಿಯರಿಗೆ, ಮಹಿಳೆಯರಿಗೆ ವಿತರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಒಂದರ್ಥದಲ್ಲಿ ಅವರು `ಕರ್ನಾಟಕದ ಪ್ಯಾಡ್‌ ವುಮನ್‌' ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಪ್ರಮೀಳಾ ರಾವ್ ಮಂಗಳೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕಿ. ಪ್ರತಿ ತಿಂಗಳೂ ಪ್ಯಾಡ್‌ ತಯಾರಿಕಾ ಚಟುವಟಿಕೆಗಾಗಿ ತಮ್ಮ ಸಂಬಳದ ಬಹುಪಾಲು ಮೊತ್ತ ಅಂದರೆ 25-30 ಸಾವಿರ ರೂ. ಮೊತ್ತವನ್ನು ವಿನಿಯೋಗಿಸುತ್ತ ಮಹಿಳೆಯರ ನೋವಿನ ದಿನಗಳ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.

ಕಲ್ಪ ಟ್ರಸ್ಟ್ ಉದಯ

ಪ್ರಮೀಳಾ ರಾವ್‌ರ ಪತಿ ಹರ್ಷ ಪತ್ರಿಕೋದ್ಯಮಿ. ಅವರು ಗುಡ್ಡಗಾಡು ಜನರು, ಗ್ರಾಮೀಣ ಜನರ ಬದುಕಿನ ಬಗ್ಗೆ ಸಚಿತ್ರ ಲೇಖನಗಳನ್ನು ಬರೆದು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಾರೆ. ಪ್ರಮೀಳಾ ರಾವ್ ಪತಿಯ ಪತ್ರಿಕೋದ್ಯಮ ಚಟುವಟಿಕೆಗೆ ಸ್ಪಂದಿಸುತ್ತ ವರದಿಯ ನಂತರದ ಬೆಳವಣಿಗೆಗಳ ಬಗ್ಗೆ `ಕಲ್ಪ ಟ್ರಸ್ಟ್' ಮೂಲಕ ಸಮೀಕ್ಷೆ ನಡೆಸುತ್ತಿದ್ದರು. ಕಾಲೇಜು ಉಪನ್ಯಾಸಕಿಯಾದುದರಿಂದ ಅವರ ವಿದ್ಯಾರ್ಥಿ ಸಮೂಹವೇ ಅವರ ಸಮೀಕ್ಷೆಯ ಸಮಸ್ತ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿತ್ತು. `ಶಿಕ್ಷಣ, ಆರೋಗ್ಯ ಹಾಗೂ ಅಧ್ಯಯನ' ಇವೇ ಕಲ್ಪ ಟ್ರಸ್ಟ್ ನ ಮೂಲತತ್ವವಾಗಿದ್ದವು.

ಹಳೆಯ ಬಟ್ಟೆ ಬ್ಯಾಂಕ್

ಸ್ಲಮ್, ಕಾಲೋನಿ, ಕುಗ್ರಾಮಗಳಲ್ಲಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು, ಮಕ್ಕಳು ಬಟ್ಟೆಗಳಿಗೆ ಪರದಾಡುವುದನ್ನು ಕಾರ್ಯಕರ್ತರು ಕಂಡುಕೊಂಡರು. ಅವರಿಗಾಗಿ ನಾವು ಹಳೆಯ ಬಟ್ಟೆಗಳನ್ನು ಸಂಗ್ರಹಿಸಿ, ವಿತರಿಸುವ ಕೆಲಸವನ್ನೇಕೆ ಮಾಡಬಾರದು ಎಂದು ಕಾರ್ಯಕರ್ತರು ಪ್ರಮೀಳಾ ರಾವ್‌ರ ಮುಂದೆ ಹೇಳಿದರು. ಕಾರ್ಯಕರ್ತರ ಈ ವಿಚಾರ ಅವರಿಗೆ ಬಹಳ ಒಳ್ಳೆಯದೆನಿಸಿತು. ಅದರ ಫಲಶ್ರುತಿ ಎಂಬಂತೆ `ಓಲ್ಡ್ ಕ್ಲಾಥ್‌ ಬ್ಯಾಂಕ್‌' ಅನುಷ್ಠಾನಕ್ಕೆ ಬಂತು. ಸಂಗ್ರಹವಾದ ಹಳೆಯ ಬಟ್ಟೆಗಳನ್ನು ಶುಭ್ರಗೊಳಿಸಿ, ವರ್ಗೀಕರಣ ಮಾಡಿ ಕೊಳಚೆ ಪ್ರದೇಶ. ಕಾಲೋನಿ, ಅನಾಥಾಶ್ರಮದ ಮಹಿಳೆಯರು ಮಕ್ಕಳಿಗೆ ವಿತರಿಸುವ ಕೆಲಸ ಶುರು ಮಾಡಿದರು. ಬಟ್ಟೆ ವಿತರಣೆಯ ಜೊತೆಗೆ ಸಮೀಕ್ಷೆ, ಜಾಗೃತಿಯ ಕೆಲಸ ಮುಂದುವರಿದಿತ್ತು. ಸ್ಲಮ್, ಗ್ರಾಮೀಣ ಭಾಗಗಳಲ್ಲಿ ಹುಡುಗಿಯರು, ಮಹಿಳೆಯರು ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡದೇ ಇರುವುದು, ಅನೇಕ ಸೋಂಕುಗಳಿಗೆ ತುತ್ತಾಗುತ್ತಿರುವ ಆಘಾತಕಾರಿ ಸಂಗತಿ ಕಾರ್ಯಕರ್ತರ ಮುಖಾಂತರ ಪ್ರಮೀಳಾ ರಾವ್‌ರ ಕಿವಿಗೂ ತಲುಪಿತು. ಅಂತಹ ಮಹಿಳೆಯರಿಗೆ ಆ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಡಬೇಕು ಎಂಬ ಕಲ್ಪನೆ ಮೊಳಕೆಯೊಡೆಯಿತು. ಆಗ ಅವರ ನೆನಪಿಗೆ ಬಂದದ್ದು ದೆಹಲಿಯ `ಗೂಂಜ್‌' ಸಂಸ್ಥೆ.

ಹುಡುಗರಿಗೆ ಪ್ಯಾಡ್‌ ತಯಾರಿಕೆಯ ತರಬೇತಿ!

ಹಳೆಯ ಬಟ್ಟೆಗಳಿಂದ ಹತ್ತಿಯ ಮೃದು ಬಟ್ಟೆಗಳನ್ನು ಬೇರ್ಪಡಿಸಿಕೊಂಡು, ಬೇರೆ ಬೇರೆ ಪ್ರಕ್ರಿಯೆಗೊಳಪಡಿಸಿ ಸ್ಯಾನಿಟರಿ ಪ್ಯಾಡ್‌

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ