ರಾಕ್‌ ಸಿರಾಮಿಕ್ಸ್ ವಿಶ್ವದ ಅತಿ ದೊಡ್ಡ ಸಿರಾಮಿಕ್ಸ್ ಬ್ರಾಂಡ್‌ನಲ್ಲಿ ಒಂದೆನಿಸಿದೆ. ಇದು ತನ್ನ ಪ್ರಮುಖ ಉತ್ಪನ್ನಗಳಾದ ಸಿರಾಮಿಕ್ಸ್  ಗ್ರೀಸ್‌ ಪೋರ್ಸ್‌ ಲೈನ್‌ ವಾಲ್‌ ಮತ್ತು ಫ್ಲೋರ್‌ ಟೈಲ್ಸ್, ಟೇಬಲ್ ವೇರ್‌, ಸ್ಯಾನಿಟರಿ ವೇರ್‌ಹಾಗೂ ಫಾಸೆಟ್ಸ್ ಗಾಗಿ ಜನಪ್ರಿಯತೆ ಪಡೆದಿದೆ. ಇದರ ವಾರ್ಷಿಕ ಸಾಮರ್ಥ್ಯ 113 ಮಿಲಿಯನ್‌ ಸ್ಕ್ವೇರ್‌ ಮೀಟರ್ಸ್‌ನ ಟೈಲ್ಸ್, 5 ಮಿಲಿಯನ್‌ ಪೀಸೆಸ್‌ಸ್ಯಾನಿಟರಿ ವೇರ್‌, 24 ಮಿಲಿಯನ್‌ ಪೀಸೆಸ್‌ ಪೋರ್ಸ್‌ ಲೈನ್‌ ಟೇಬಲ್ ವೇರ್‌ ಹಾಗೂ 1 ಮಿಲಿಯನ್‌ ಪೀಸೆಸ್‌ ಫಾಸೆಟ್ಸ್ ತಯಾರಿಸಬಲ್ಲಂಥದು. ಇದು ಭಾರತ, ಬಾಂಗ್ಲಾದೇಶ, ಇರಾನ್‌ ಹಾಗೂ ಚೀನಾ ಸಮೇತ 21 ರಾಷ್ಟ್ರಗಳಲ್ಲಿ ಸ್ಥಾಪಿಸಲಾದ ಪ್ಲಾಂಟ್ಸ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಈಗ ಭಾರತದಲ್ಲಿ ಮೊದಲ ಬಾರಿಗೆ ರಾಕ್‌ ಸಿರಾಮಿಕ್ಸ್ ಮ್ಯಾಗ್ಸಿಮವ್‌ ಮೆಗಾ ಸ್ಲ್ಯಾಬ್ಸ್ ನ್ನು ದೊಡ್ಡ ಸೈಜ್‌ನಲ್ಲಿ ಪ್ರಸ್ತುತಪಡಿಸುತ್ತಿದೆ. ಇದು 135  305 ಸೆಂ.ಮೀ. ಹಾಗೂ 120  240 ಸೆಂ.ಮೀ. ಸೈಜ್‌ನಲ್ಲಿ ಲಭ್ಯ. ನೀವು ಇದರಲ್ಲಿ ಬಯಸಿದ ಕಲರ್‌ ಆಪ್ಶನ್ಸ್ ಪಡೆಯಬಹುದು. ಅದೇ ಸಮಯ ಇದರ ಥಿಕ್‌ನೆಸ್‌ 14.5  10.5 ಸೆಂ.ಮೀ. ಇರುವ ಕಾರಣ ಇದು ದೀರ್ಘಬಾಳಿಕೆ ಬರುತ್ತದೆ.

ಈ ಸ್ಲ್ಯಾಬ್ಸ್ ಕಿಚನ್‌ ಟಾಪ್ಸ್, ಕೌಂಟರ್‌ ಟಾಪ್ಸ್ ಹಾಗೂ ಹೆವಿ ಡ್ಯೂಟಿ ಏರಿಯಾಗಾಗಿ ಬಲು ಪರ್ಫೆಕ್ಟ್ ಚಾಯ್ಸ್ ಎನಿಸಿವೆ.

ನೀವು ಗಮನಿಸಬೇಕಾದುದು ಎಂದರೆ 1989ರಲ್ಲಿ ಇದರ ಹೆಡ್‌ಕ್ವಾರ್ಟರ್‌ನಲ್ಲಿ ಸ್ಥಾಪನೆಗೊಂಡಿತು. ಸದ್ಯಕ್ಕೆ ಇದು 150ಕ್ಕೂ ಹೆಚ್ಚು ದೇಶಗಳಲ್ಲಿ ಕ್ಲೈಂಟ್ಸ್ ಗೆ ಸೇವೆ ಒದಗಿಸುತ್ತಿದೆ. ಅದೂ ಸಹ ತಮ್ಮ ಯೂರೋಪ್‌, ಮಧ್ಯಪೂರ್ವ ಹಾಗೂ ಉತ್ತರ ಆಫ್ರಿಕಾ, ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ ಹಾಗೂ ಆಸ್ಟ್ರೇಲಿಯಾದಲ್ಲಿ ಸ್ಥಾಪಿಸಲಾಗಿರುವ ತಮ್ಮದೇ ನೆಟ್‌ವರ್ಕ್‌ ಕೇಂದ್ರಗಳಿಂದ. ಮತ್ತೊಂದು ವಿಶೇಷತೆ ಎಂದರೆ ಅಬೂಧಾಬಿ ಸೆಕ್ಯೂರಿಟೀಸ್‌ ಎಕ್ಸ್ ಚೇಂಜ್‌ ಹಾಗೂ ಬಾಂಗ್ಲಾದೇಶದ ಢಾಕಾ ಸ್ಟಾಕ್‌ ಎಕ್ಸ್ ಚೇಂಜ್‌ ಮೂಲಕ ಸಾರ್ವಜನಿಕ ನೋಂದಣಿಕೃತ ಕಂಪನಿ ಎಂದೂ ಘೋಷಿತಗೊಂಡಿದೆ ಹಾಗೂ ವಾರ್ಷಿಕ ಟರ್ನ್‌ ಓವರ್‌ಸುಮಾರು 1 ಬಿಲಿಯನ್‌ US ಡಾಲರ್ಸ್‌!

ಇಂಥ ಅಪರೂಪದ ಅನುಪಮ ಟೈಲ್ಸ್ ನಿಮಗೆ ಬೇರೆಲ್ಲಿ ದೊರಕೀತು ಹೇಳಿ!

– ಪರಿಮಳಾ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ