`ಕಾಂಟ್ಯಾಕ್ಟ್ ಪಾಯಿಂಟ್‌ ತಲೆನೋವು’ ಮೈಗ್ರೇನ್‌ನ ಉಪ ತಲೆನೋವು. ಈ ಬಗೆಯ ತಲೆನೋವು ಇದ್ದಾಗ ತಲೆಯಲ್ಲಿ ವಿಪರೀತ ನೋವು ಬಾಧಿಸುತ್ತದೆ ಹಾಗೂ ದೀರ್ಘ ಸಮಯದವರೆಗೆ ಇರುತ್ತದೆ. ಇದರ ಹೊರತಾಗಿ ಈ ನೋವಿನ ಕಾರಣದಿಂದ ಮುಖದ ಒಂದು ನಿರ್ದಿಷ್ಟ ಭಾಗದಲ್ಲಿ ಗಾಯ ಅಥವಾ ಚುಚ್ಚುತ್ತಿರುವಂತೆ ಭಾಸವಾಗುತ್ತದೆ. ರೋಗಿಗಳು ಈ ತೆರನಾದ ನೋವಿದ್ದಾಗ ವರ್ಷಾನುಗಟ್ಟಲೆ ಅದರ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ ಮತ್ತು ಆ ಬಗ್ಗೆ ಯಾವುದೇ ಚಿಕಿತ್ಸೆಗೆ ಮುಂದಾಗುವುದಿಲ್ಲ.

ಸಾಮಾನ್ಯವಾಗಿ ಈ ಬಗೆಯ ಸಮಸ್ಯೆ ಇದ್ದಾಗ ಜನರು ನರರೋಗ ತಜ್ಞರ ಬಳಿ, ದಂತರೋಗ ತಜ್ಞರ ಬಳಿ ಧಾವಿಸುತ್ತಾರೆ. ಆದರೆ ಇವರಲ್ಲಿ ಯಾರೂ ಇದರ ನಿಖರ ಕಾರಣ ಕಂಡುಕೊಳ್ಳಲು ಆಗುವುದಿಲ್ಲ. ಅಷ್ಟೇ ಅಲ್ಲ ನೋವು ನಿವಾರಕಗಳು, ಸೋಂಕು ರೋಧಕಗಳು ಕೂಡ ಈ ರೋಗಿಗಳ ನೆರವಿಗೆ ಬರುವುದಿಲ್ಲ. ಇಎನ್‌ಟಿ ಅಂದರೆ ಕಿವಿ, ಮೂಗು ಹಾಗೂ ಗಂಟಲು ತಜ್ಞರ ಮುಖಾಂತರ ಈ ರೋಗದ ಬಗ್ಗೆ ವಿಶ್ಲೇಷಣೆ ಮಾಡಿಸಬಹುದಾಗಿದೆ. ಅರೇ ಈ ನಿಟ್ಟಿನಲ್ಲಿ ನಿಖರ ಕಾರಣ ತಿಳಿಸಬಹುದು ಹಾಗೂ ಪರಿಹಾರ ಕೂಡ ಸೂಚಿಸಬಹುದಾಗಿದೆ.

ಸಾಮಾನ್ಯವಾಗಿ ಕಾಂಟ್ಯಾಕ್ಟ್ ಪಾಯಿಂಟ್‌ ತಲೆನೋವಿಗೆ ಒಂದು ಇತಿಹಾಸ ಇರುತ್ತದೆ. ಅದರಲ್ಲಿ ಮುಂದೆ ಹಲವು ಕಾರಣಗಳು ಸೇರ್ಪಡೆಗೊಳ್ಳಬಹುದು. ಸಾಮಾನ್ಯವಾಗಿ ಈ ತಲೆನೋವು ಉಸಿರಾಟದ ಮಾಲಿನ್ಯದಿಂದ ಉಂಟಾಗುತ್ತದೆ. ಈ ನೋವು ಮುಖದ ಒಂದು ನಿರ್ದಿಷ್ಟ ಭಾಗದಲ್ಲಿ ಅಂದರೆ ಮೇಲ್ಭಾಗದ ಹಲ್ಲುಗಳಲ್ಲಿ ಮತ್ತು ಬಾಯಿಯ ಮೇಲ್ಭಾಗದ ತನಕ ಸೀಮಿತಗೊಳ್ಳುತ್ತದೆ. ಈ ತಲೆನೋವಿನಲ್ಲಿ ಶೀತ ನೆಗಡಿಯ ಔಷಧ ಚೆನ್ನಾಗಿ ಕೆಲಸ ಮಾಡಬಹುದು. ಆದರೆ ಅದು ಯೋಗಾಯೋಗ ಅಷ್ಟೆ.

ತಲೆನೋವಿಗೆ ಕಾರಣವಾಗುವ ಸಂಗತಿಗಳು

ಶೀತಗಾಳಿ, ಹೈಪೊಗ್ಲೈಸೀಮಿಯಾ, ಭಾವನಾತ್ಮಕ ಆಘಾತ, ಅತಿಯಾಗಿ ಚಹಾ/ಕಾಫಿ ಸೇವನೆ, ನಿದ್ರಾಹೀನತೆ ಮತ್ತು ಅಸಮತೋಲನ ಆಹಾರ ಇವು ಕಾಂಟ್ಯಾಕ್ಟ್ ಪಾಯಿಂಟ್‌ ತಲೆನೋವಿಗೆ ಕಾರಣವಾಗುತ್ತವೆ.

ಏನು ಕಾರಣ?

ಮೂಗಿನ ಒಳಭಾಗದಲ್ಲಿ ಒಂದು ಜಾಗ ಇದ್ದು, ಅಲ್ಲಿ ಒಂದು ನರ ಎರಡು ಭಾಗಗಳ ನಡುವೆ ಪ್ಯಾಕ್‌ ಆಗುತ್ತದೆ. ಅದು ಬಹಳಷ್ಟು ಮಟ್ಟಿಗೆ ಕಾಲಿನ ಕಟಿ ಸ್ನಾಯು ಶೂಲದಂತೆ ಇರುತ್ತದೆ. ಆದರೆ ಇದು ಮೂಗು ಹಾಗೂ ಮುಖದ ನಡುವೆ ಇರುತ್ತದೆ, ಆ ನರ ಎರಡು ಭಾಗಗಳಲ್ಲಿ ಸುತ್ತುವರೆದಿರುತ್ತದೆ. ಅದು ಮುಂಭಾಗದಿಂದ ಮುಚ್ಚಲ್ಪಟ್ಟಿರುವ ನರವಾಗಿರಬಹುದು (ಟ್ರೈಜೆಮಿನ್‌ನ ನರ ಕಣ್ಣಿನ ಭಾಗದ ಶಾಖೆ) ಅಥವಾ ಸ್ಪೆನೊಪ್ಲೆಟೈನ್‌ ಎಂಬ ಕೇಂದ್ರವನ್ನು ಇಬ್ಭಾಗಿಸುವ ನರವಾಗಿರಬಹುದು.

ಮೇಲ್ಕಂಡ ಕಾರಣದಿಂದ ಯಾವ ಭಾಗದಲ್ಲಿ ನರಗಳು ಒತ್ತಲ್ಪಟ್ಟವಂತಾಗಿರುತ್ತವೋ, ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮೂಗಿನ ಸೈಡ್‌ ಪ್ರೊಫೈಲ್‌ನಲ್ಲಿ ಎರಡೂ ನರಗಳು ಕಂಡುಬರುತ್ತವೆ. ಮೂಗಿನ ಎಡ ಹಾಗೂ ಬಲ ಭಾಗವನ್ನು ಪ್ರತ್ಯೇಕಿಸುವ ಪೊರೆಯ ಒಳಭಾಗದಲ್ಲಿ, ಮೂಗಿನ ಮುಂಭಾಗದಲ್ಲಿ ಇವುಗಳ ಅಸ್ತಿತ್ವ ಕಂಡುಬರುತ್ತದೆ. ಪೆಟ್ರಿಗೊ ಪಿಟೈನ್‌ ಅದಕ್ಕೂ ಮುಂದೆ ಬಾಯಿ ಹಾಗೂ ಹಲ್ಲುಗಳ ಮೇಲ್ಭಾಗದಲ್ಲಿ ಪ್ರವೇಶಿಸುತ್ತದೆ.

ಒಂದು ವೇಳೆ ಎಲ್ಲ ಸಂಗತಿಗಳ ಬಗ್ಗೆ ವಿಚಾರ ಮಾಡಿದಾಗ, ಮೇಲ್ಪಂಕ್ತಿಯ ಹಲ್ಲು ಹಾಗೂ ಒಸಡುಗಳಲ್ಲಿ ನೋವು ಅಥವಾ ಬಾಯಿಯ ಮೇಲ್ಭಾಗದಲ್ಲಿ ತೊಂದರೆಯೊಂದಿಗೆ ಕಾಂಟ್ಯಾಕ್ಟ್ ಪಾಯಿಂಟ್‌ ಮೈಗ್ರೇನ್‌ನ ಅನುಭೂತಿ ಮಾಡಿಕೊಳ್ಳುವ ಸ್ಪೆನೊಪ್ಲೆಟೈನ್‌ ಕೇಂದ್ರದಲ್ಲಿ ತೊಂದರೆಯಾಗುತ್ತದೆ. ಆದರೆ ಎದುರಿನ ಭಾಗದ ಅಥಮಾಯಿಸ್‌ ನರದಲ್ಲಿ ಹೀಗಾಗುವುದಿಲ್ಲ. ಮೂಗಿನ ಒಳಭಾಗದ ಗಿಲ್ಟಿ ಪಾರ್ಟಿ ನರದ ಮೇಲೆ ಒತ್ತಡ ಹೇರುವ ಪದರದಂತಿದ್ದು, ಅದು ಮೂಗಿನ ತುದಿಯಲ್ಲಿ ಕುಳಿಯಂತೆ ಅಥವಾ ಉಬ್ಬದ ಹಾಗೆ ಉತ್ಪತ್ತಿ ಮಾಡುತ್ತದೆ. ಈ ಪದರ ಒಂದು ರೀತಿಯ ವಿಭಾಜಕದಂತಿದ್ದು, ಅದು ಪ್ರಿವಿಲಿಜ್‌ ಮತ್ತು ಮೂಗಿನ ಎಡ ಒತ್ತಡವನ್ನು ವಿಭಜಿಸುತ್ತದೆ. ಅದು ಯಾವಾಗಲೂ ನೇರವಾಗಿರಬೇಕು. ಅದರಲ್ಲಿ ಏನಾದರೂ ಏರುಪೇರು ಉಂಟಾದರೆ ಒಂದು ಬದಿ ಸಂಕುಚಿತವಾಗುತ್ತದೆ. ಗಂಭೀರ ಸ್ಥಿತಿಯಲ್ಲಿ ಇದು ಸಮಾಂತರ ನಾಝಲ್ ವಿಭಜಕದಲ್ಲಿ ಹೋಗಬಹುದು. ಅದು ಕೇಂದ್ರ ಮತ್ತು ಸರ್ಪಿಲ್ ‌ಕಾರಣದಿಂದ ಪಿನ್‌ ಪಾಯಿಂಟ್‌ ತಲೆನೋವು ಆಗಬಹುದು.

ಪದರದ ಹೊರತಾಗಿ ಇತರೆ ರಚನೆಗಳು ಕೂಡ ಇದ್ದು, ಅದು ಒಮ್ಮೊಮ್ಮೆ ನರಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಅದರಿಂದ ಕಾಂಟ್ಯಾಕ್ಟ್ ಪಾಯಿಂಟ್‌ ತಲೆನೋವು ಉಂಟಾಗಬಹುದು. ಅದರಲ್ಲಿ ಕೋಂಚ್‌ ಬುಲೋಸಾ ಕೇಂದ್ರೀಯ ಸರ್ಪಿಲ್‌ನಿಂದ ಹರಿಯುವ ವಾಯು ಅಥವಾ ಅನಿಯಮಿತ ಸ್ಥಿರ ಸರ್ಪಿಲ್‌ನ ಸಮಸ್ಯೆ ಸೇರಿದೆ. ಸರ್ಪಿಲ್‌ ಒಳಭಾಗದ ಒಂದು ವಿಶಿಷ್ಟ ರಚನೆಯಾಗಿದ್ದು, ಅದು ಮೂಗಿನ ಒಳಭಾಗದಲ್ಲಿ ಪ್ರವೇಶಿಸುವ ಗಾಳಿಯನ್ನು ಬಿಸಿ ಅಥವಾ ತಂಪುಗೊಳಿಸುವ ಕೆಲಸ ಮಾಡುತ್ತದೆ.

ಚಿಕಿತ್ಸೆ

ಕಾಂಟ್ಯಾಕ್ಟ್ ಪಾಯಿಂಟ್‌ ಮೈಗ್ರೇನ್‌ಗೆ ಕಾರಣವಾಗುವ ರಚನೆಗೆ ಇದು ಸಂಬಂಧಿಸಿದ್ದು, ಹೀಗಾಗಿ ಇದರ ಚಿಕಿತ್ಸೆಗೆ ಅಂತಹ ಯಾವುದೇ ಪ್ರಭಾವಿ ಮಾತ್ರೆಯಾಗಲಿ ಅಥವಾ ನಾಝಲ್ ಸ್ಪ್ರೇ ಆಗಲಿ ಇಲ್ಲ. ಮುರಿದ ಮೂಳೆಯನ್ನು ಯಾವ ರೀತಿ ಔಷಧಿಯಿಂದ ಗುಣಪಡಿಸಲು ಆಗುವುದಿಲ್ಲವೋ ಅದೇ ರೀತಿ ಇದೂ ಕೂಡ. ನಾಝಲ್ ಸ್ಪ್ಲಾಶ್‌ ಮತ್ತು ಕೆಮ್ಮು ಶೀತದ ಔಷಧಿಯಿಂದ ಅಷ್ಟಿಷ್ಟು ನಿರಾಳತೆ ಸಿಗಬಹುದು. ಏಕೆಂದರೆ ಈ ಉಪಾಯ ಆ ಊತವನ್ನು ಕಡಿಮೆಗೊಳಿಸುತ್ತದೆ. ಅದು ಸ್ಥಳಾವಕಾಶ ಮಾಡಿಕೊಡುವ ನರದ ಮೇಲೆ ಉಂಟಾಗುವ ಒತ್ತಡ ಕಡಿಮೆಗೊಳಿಸುವುದನ್ನು ತಡೆಯುತ್ತದೆ. ಮ್ಯೂಸೊಕ್‌ ಊತ ಹೆಚ್ಚುತ್ತಿದ್ದಂತೆ ಪುನಃ ನೋವು ಶುರುವಾಗುತ್ತದೆ.

ನೋವನ್ನು ಬೇರು ಸಮೇತ ಕಿತ್ತು ಹಾಕಬೇಕೆಂದರೆ ಸರ್ಜರಿ ಮಾಡಬೇಕು. ಇದರಿಂದ ನರದ ಮೇಲೆ ಒತ್ತಡ ತರುವ ರಚನೆಯನ್ನು ಅಥವಾ ತೆಳು ಚರ್ಮ ಅಥವಾ ಪದರವನ್ನು ಸರಿಪಡಿಸಲಾಗುತ್ತದೆ ಅಥವಾ ಸೆಪ್ಟ್‌ ಗಾರ್ಡ್‌ನ್ನು ಅಪ್ರೂಟ್‌ ಮಾಡಲಾಗುತ್ತದೆ. ಅಸಾಮಾನ್ಯ ಸ್ಥಿತಿಯಲ್ಲಿ ಸರ್ಜರಿ ಮಾಡಲೇಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಇದರ ಮುಖ್ಯ ಉದ್ದೇಶ ಮೂಗಿನಲ್ಲಿ ಸಾಧ್ಯವಾದಷ್ಟು ಸ್ಥಳಾವಕಾಶ ಮಾಡುವುದಾಗಿದೆ. ಅದರಿಂದ ನರದ ಮೇಲೆ ಒತ್ತಡ ಉಂಟಾಗುವುದಿಲ್ಲ ಹಾಗೂ ಮ್ಯೂಕೋಸ್‌ ಊತ ಕೂಡ ಬರುವುದಿಲ್ಲ. ಕೆಲವು ಅಸಾಮಾನ್ಯ ಪ್ರಕರಣಗಳಲ್ಲಿ ಬೇರೆ ಕೆಲವು ಸಂಗತಿಗಳ ಬಗ್ಗೆ ವಿಚಾರ ಮಾಡಬಹುದು. ಅದೆಂದರೆ ಇನ್‌ಫ್ಯೂಷನ್‌. ಅದರಿಂದಲೂ ಕೆಲವು ದಿನಗಳ, ವಾರಗಳ, ತಿಂಗಳುಗಳ ಮಟ್ಟಿಗೆ ನಿರಾಳತೆ ದೊರಕುತ್ತದೆ. ಆದರೆ ಅದೇ ಖಾಯಂ ಪರಿಹಾರವಲ್ಲ.

– ಡಾ. ಶಿಲ್ಪಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ