ಸ್ಕಿನ್ ಕೇರ್ ಮತ್ತು ಪರ್ಫೆಕ್ಟ್ ಲುಕ್ಸ್ ಗಾಗಿ ನೀವು ಪಾರ್ಲರ್ ಮತ್ತು ಸ್ಪಾಗಳಿಗೆ ಹೋಗುತ್ತಿದ್ದು, ತಿಂಗಳು ತಿಂಗಳೂ ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಿದ್ದರೆ, ಇನ್ನು ಮುಂದೆ ಪಾರ್ಲರ್ ಮತ್ತು ಸ್ಪಾಗಳಿಗೆ ಹೋಗುವುದನ್ನು ಕಡಿಮೆ ಮಾಡಿ. ಏಕೆಂದರೆ ನಾವೀಗ ನಿಮಗಾಗಿ ಕೆಲವು ವಿಶೇಷ ಬ್ಯೂಟಿ ಗ್ಯಾಜೆಟ್ಸ್ ನ್ನು ಪ್ರಸ್ತುತ ಪಡಿಸಲಿದ್ದೇವೆ. ಅವುಗಳನ್ನು ಉಪಯೋಗಿಸಿ, ನೀವು ಮನೆಯಲ್ಲೇ ಕುಳಿತು ಸುಲಭವಾಗಿ ಪಾರ್ಲರ್‌ನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಉತ್ತಮ ಚರ್ಮ ಮತ್ತು ಸುಂದರ ರೂಪಕ್ಕಾಗಿ ನಿಮ್ಮ ಬಳಿ ಯಾವ ಯಾವ ಬ್ಯೂಟಿ ಗ್ಯಾಜೆಟ್ಸ್ ಇರಿಸಿಕೊಂಡಿರಬೇಕು ಎಂಬುದನ್ನು ಡರ್ಮಟಾಲಜಿಸ್ಟ್ ಡಾ. ಗೀತಾಂಜಲಿ ಶೆಟ್ಟಿಯವರಿಂದ ತಿಳಿದುಕೊಳ್ಳೋಣ :
ಕ್ಲೆನ್ಸಿಂಗ್ ಬ್ರಶ್
ಒಳ್ಳೆಯ ಚರ್ಮ ಪಡೆಯಲು ಪ್ರತಿದಿನ ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಮಾಡುವುದು ಅಗತ್ಯ. ಇದರಲ್ಲಿ ಪ್ರಮುಖವಾದುದು ಎಂದರೆ ಕ್ಲೆನ್ಸಿಂಗ್. ಇದರಿಂದ ಚರ್ಮದ ಮಾಲಿನ್ಯತೆ ದೂರವಾಗುತ್ತದೆ. ಚರ್ಮ ಒಳಗಿನಿಂದ ಆರೋಗ್ಯಕರವಾಗಿರುತ್ತದೆ ಮತ್ತು ಮೊಡವೆ, ಗುಳ್ಳೆಗಳ ಸಂಭವ ಕಡಿಮೆ ಇರುತ್ತದೆ. ಆದ್ದರಿಂದ ನಿಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಕ್ಲೆನ್ಸಿಂಗ್ ಬ್ರಶ್, ಬ್ಯೂಟಿ ಗ್ಯಾಜೆಟ್ಸನ್ನು ಇರಿಸಿಕೊಳ್ಳಿ. ಇದು ಚರ್ಮವನ್ನು ಹೊರಗಿನಿಂದ ಸ್ವಚ್ಛಗೊಳಿಸಿ, ಒಳಗಿನಿಂದ ಸ್ವಸ್ಥವಾಗಿರಿಸುತ್ತದೆ. ಇದರ ಬಳಕೆಯಿಂದ ಚರ್ಮದ ಮಸಾಜ್ ಆಗುತ್ತದೆ ಮತ್ತು ಅದು ಕೋಮಲವಾಗಿರುತ್ತದೆ.
ಬಳಸುವ ಬಗೆ
ಕ್ಲೆನ್ಸಿಂಗ್ ಬ್ರಶ್‌ನ ಕಿಟ್‌ನಲ್ಲಿ ಕ್ಲೆನ್ಸಿಂಗ್ ಕ್ರೀಮ್ ಕೂಡ ಬರುತ್ತದೆ. ಮೊದಲು ಮುಖಕ್ಕೆ ಕ್ಲೆನ್ಸಿಂಗ್ ಕ್ರೀಮ್ ನ್ನು ಚೆನ್ನಾಗಿ ಹಚ್ಚಿ. ನಂತರ ಹ್ಯಾಂಡೀ ಕ್ಲೆನ್ಸಿಂಗ್ ಬ್ರಶ್‌ನ್ನು ಮುಖದ ಮೇಲೆ 5 ನಿಮಿಷಗಳ ಕಾಲ ಆಡಿಸಿ, ಬೆಚ್ಚನೆಯ ನೀರಿನಲ್ಲಿ ಮುಖ ತೊಳೆಯಿರಿ.
ಸ್ಮಾರ್ಟ್ ಟಿಪ್ಸ್
ಓಲೆ ಪ್ರೊ. ಆ್ಯಕ್ಸ್ ಮೈಕ್ರೊಡರ್ಮಾಬ್ರೆಶನ್ ಅಡ್ವಾನ್ಸ್ ಕ್ಲೆನ್ಸಿಂಗ್ ಬ್ರಶ್, ಪ್ರೊ ಆ್ಯಕ್ಟಿವ್ ಸ್ಕಿನ್ ಕ್ಲೆನ್ಸಿಂಗ್ ಬ್ರಶ್ ಮತ್ತು ಸ್ಪಾ ಸೊನಿಕ್ ಕೇರ್ ಸಿಸ್ಟಮ್, ಇವುಗಳಲ್ಲಿ ಯಾವುದಾದರೊಂದು ಕ್ಲೆನ್ಸಿಂಗ್ ಬ್ರಶ್‌ನ್ನು ಕೊಳ್ಳಬಹುದು. ಇದರ ಬೆಲೆ 16 ಸಾವಿರದವರೆಗೆ ಆಗಬಹುದು.
ರಿಂಕಲ್ ಎರೇಸರ್
ಮುಖದ ಮೇಲೆ ತೋರಿ ಬರುವ ರಿಂಕಲ್ಗಳನ್ನು ದೂರಗೊಳಿಸಲು ಪಾರ್ಲರ್‌ಗೆ ಸಾವಿರಾರು ರೂಪಾಯಿಗಳ ವೆಚ್ಚ ಮಾಡುವುದನ್ನು ತಪ್ಪಿಸಬೇಕೆಂದರೆ, ರಿಂಕಲ್ ಎರೇಸರ್ ಗ್ಯಾಜೆಟ್ಸ್ ಅಥವಾ ರಿಂಕಲ್ ಎರೇಸರ್ ಪ್ಯಾಕ್ ನಿಮ್ಮ ಬಳಿ ಇರಿಸಿಕೊಳ್ಳಿ. ಇದರಿಂದ ನೀವು ಮನೆಯಲ್ಲೇ ಕುಳಿತು ಫೈನಲ್ ಲೈನ್‌ಗಳನ್ನೂ ಕಣ್ಣುಗಳ ಕೆಳಗೆ, ತುಟಿಗಳ ಹತ್ತಿರ ಮತ್ತು ಕುತ್ತಿಗೆಯ ಮೇಲೆ ಹರಡಿರುವ ಸುಕ್ಕುಗಳನ್ನೂ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ವಾರದಲ್ಲಿ 2 ಸಲ ಬಳಸಿದಾಗ ರಿಂಕಲ್ಸ್ ಕಡಿಮೆಯಾಗುತ್ತವೆ, ಜೊತೆಗೆ ಚರ್ಮ ಫ್ರೆಶ್ ಅಂಡ್ ಯಂಗ್ ಆಗಿ ಕಾಣುತ್ತದೆ.
ಬಳಸುವ ಬಗೆ
ರಿಂಕಲ್ ಎರೇಸರ್ ಪ್ಯಾಕ್ ನ್ನು ಬಳಸುವ ಮೊದಲು ಕಣ್ಣುಗಳ ಕೆಳಗೆ ಅಂಡರ್ ಐ ಕ್ರೀಮ್ ಹಚ್ಚಿ ಆಮೇಲೆ ರಿಂಕಲ್ ಎರೇಸರ್ ಪ್ಯಾಕ್ ನ್ನು ರಿಂಕಲ್ಸ್ ಮೇಲೆ ಇಟ್ಟು ಹಗುರವಾಗಿ ಅದುಮಿ, ತೆಗೆಯಿರಿ. ಈ ರೀತಿ 2-3 ನಿಮಿಷ ಪುನರಾವರ್ತಿಸಿ. ತುಟಿಗಳ ಸುತ್ತಮುತ್ತ ಮತ್ತು ಜಾ ಲೈನ್ ರಿಂಕಲ್ಸ್ ನ್ನು ಇದೇ ರೀತಿ ನಿವಾರಿಸಬಹುದು.
ಸ್ಮಾರ್ಟ್ ಟಿಪ್ಸ್
ರಿಂಕಲ್ ಎರೇಸರ್ ಪ್ಯಾಕ್ ನ ಬೆಲೆ 2 ಸಾವಿರ ರೂಪಾಯಿ ಮತ್ತು ರಿಂಕಲ್ ಎರೇಸರ್ ಗ್ಯಾಜೆಟ್ಸ್ ನ ಬೆಲೆ 4 ಸಾವಿರ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಕೇರ್‌ಜಾಯ್, ಎರೇಸರ್ ಪ್ಯಾನ್. ಎಚ್‌ಜಿಎಫ್ ರಿಂಕಲ್ ಎರೇಸರ್ ಪ್ಯಾನ್, ಡರ್ಮಾಸ್ಕಿನ್ ಇನ್ಸ್ ಟೆಂಟ್ ರಿಂಕಲ್ ಎರೇಸರ್ ಮುಂತಾದವುಗಳಲ್ಲಿ ಒಂದನ್ನು ಉಳಿಸಿಕೊಳ್ಳಬಹುದು.
ಸ್ಕಿನ್ ಸ್ಮೂತರ್
ಮುಖದ ಚರ್ಮ ಬಹಳ ಕೋಮಲವಾಗಿರುತ್ತದೆ. ಬಿಸಿಲು, ಧೂಳು, ಮಾಲಿನ್ಯ ಹಾಗೂ ಹಾಗೂ ಬದಲಾವಣೆ ಮುಖ ಚರ್ಮವನ್ನು ಪ್ರಭಾವಿತಗೊಳಿಸುತ್ತವೆ. ಇದರಿಂದ ಚರ್ಮ ನಿಸ್ತೇಜವಾಗುತ್ತದೆ ಮತ್ತು ಅದರ ಬಣ್ಣ ದೂರವಾಗುತ್ತದೆ. ಹೀಗಾದಾಗ ಸ್ಕಿನ್‌ಸ್ಮೂತರ್ ಗ್ಯಾಜೆಟ್ಸ್ ಬಲು ಉಪಯೋಗವಾಗುತ್ತದೆ. ವಾರದಲ್ಲಿ 2 ಬಾರಿ ಇದನ್ನು ಬಳಸುವುದರಿಂದ ಒಣ ಚರ್ಮದ ಪದರ ದೂರವಾಗುತ್ತದೆ ಮತ್ತು ಹೊಸ ಚರ್ಮ ಕೋಮಲವಾಗಿ ಹೊರಸೂಸುತ್ತದೆ. ಸ್ಕಿನ್‌ಸ್ಮೂತರ್‌ನಿಂದ ಡಾರ್ಕ್ ಸ್ಪಾಟ್ಸ್ ಕೂಡ ಕಡಿಮೆಯಾಗುತ್ತದೆ.
ಬಳಸುವ ಬಗೆ
ಮುಖಕ್ಕೆ ಚೆನ್ನಾಗಿ ಮಾಯಿಶ್ಚರೈಸರ್ ಹಚ್ಚಿ ಸ್ಕಿನ್‌ಸ್ಮೂತರ್‌ನಿಂದ ಮುಖವನ್ನು ಮಸಾಜ್ ಮಾಡಿ. ಇದರಿಂದ ಒಣ ಚರ್ಮ ನಿವಾರಣೆಯಾಗುತ್ತದೆ. ಆಮೇಲೆ ಬೆಚ್ಚನೆಯ ನೀರಿನಿಂದ ಮುಖ ತೊಳೆಯಿರಿ.
ಸ್ಮಾರ್ಟ್ ಟಿಪ್ಸ್
ಫಿಲಿಪ್ಸ್ ಸ್ಕಿನ್ ಸ್ಮೂತರ್, ಪಿಎಂಡಿ ಪರ್ಸನಲ್ ಮೈಕ್ರೊಡರ್ಮ್, ಅಲ್ಟ್ರಾಸಾನಿಕ್ ಸ್ಕಿನ್ ಸ್ಮೂತರ್ ಮೆಶೀನ್ ಮುಂತಾದುವನ್ನು ಟ್ರೈ ಮಾಡಬಹುದು. ಇದರ ಬೆಲೆ 1 ಸಾವಿರ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಆನ್‌ಲೈನ್‌ನಲ್ಲಿ ತರಿಸಿದರೆ ರಿಯಾಯಿತಿಯೂ ದೊರೆಯಬಹುದು.
ಟೆಂಪರರಿ ಸ್ಕಿನ್ ಟೈಟ್‌ನರ್
ಮುಖಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ಕೆಮಿಕಲ್ ಯುಕ್ತ ಪ್ರಾಡಕ್ಟ್ಸ್ ಬಳಸುವುದರಿಂದ ಚರ್ಮ ಸಡಿಲವಾಗಿ ಇಳಿಬೀಳುತ್ತದೆ. ಅದಕ್ಕಾಗಿ ನೀವು ಪಾರ್ಲರ್‌ಗೆ ಹೋಗಿ ಬಗೆಬಗೆಯ ಬ್ಯೂಟಿ ಟ್ರೀಟ್‌ಮೆಂಟ್ಸ್ ತೆಗೆದುಕೊಳ್ಳಬಹುದು. ಆದರೆ ನಿಮಗೆ ಪಾರ್ಲರ್ ಅಥವಾ ಸ್ಪಾಗೆ ಹೋಗಲು ಸಮಯವಿಲ್ಲದಿದ್ದರೆ ನೀವು ಟೆಂಪರರಿ ಸ್ಕಿನ್ ಟೈಟ್‌ನರ್ ಗ್ಯಾಜೆಟ್ಸ್ ನ್ನು ಉಪಯೋಗಿಸಬಹುದು. ಇದರ ಬಳಕೆಯಿಂದ ಶಾಶ್ವತವಾಗಿ ಅಲ್ಲವಾದರೂ, ಕೊಂಚ ಕಾಲದವರೆಗೆ ಚರ್ಮ ಟೈಟ್ ಆಗಿರುವ ಅನುಭವವಾಗುತ್ತದೆ.
ಬಳಸುವ ಬಗೆ
ಸ್ಕಿನ್ ಟೈಟ್‌ನಿಂಗ್ ಮೆಶೀನ್‌ನ್ನು ಚರ್ಮದ ಮೇಲಿರಿಸಿ ಹಗುರವಾಗಿ ಅದುಮಿ ತೆಗೆಯಿರಿ. ಇದೇ ರೀತಿ ಕೆಲವು ನಿಮಿಷಗಳವರೆಗೆ ಮಾಡುತ್ತಾ ಇದ್ದರೆ ಚರ್ಮದಲ್ಲಿ ಕೊಂಚ ಬಿಗಿತ ಕಂಡುಬರುತ್ತದೆ.
ಸ್ಮಾರ್ಟ್ ಟಿಪ್ಸ್
ಕೆಲವು ರಿಂಕಲ್ ಎರೇಸರ್ ಗ್ಯಾಜೆಟ್ಸ್ ಚರ್ಮವನ್ನು ಸಹ ಟೈಟ್ ಮಾಡುತ್ತದೆ. ಆದರೆ ನೀವು ಸ್ಕಿನ್ ಟೈಟ್‌ನಿಂಗ್ ಮೆಶೀನನ್ನೇ ಕೊಳ್ಳಲು ಬಯಸುವಿರಾದರೆ ವೀನಸ್ ವಿಲಾ ಸ್ಕಿನ್ ಟೈಟ್‌ನಿಂಗ್ ಮಶೀನ್‌ಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು. ಇದರ ಬೆಲೆ 1,500 ರೂಪಾಯಿಯಿಂದ ಪ್ರಾರಂಭವಾಗುತ್ತದೆ.
ಸೇಫ್ಟಿ ಟಿಪ್ಸ್
ಬ್ಯೂಟಿ ಗ್ಯಾಜೆಟ್ಸ್ ಪ್ಯಾಕೆಟ್ ಮೇಲೆ ಅದನ್ನು ಬಳಸುವ ವಿಧಾನ ಇರುತ್ತದೆ, ಅಗತ್ಯ ಅದನ್ನು ಫಾಲೋ ಮಾಡಿ.
ನಿಮಗೆ ಸ್ಕಿನ್ ಅಲರ್ಜಿ ಇದ್ದರೆ, ಯಾವುದೇ ಬ್ಯೂಟಿ ಗ್ಯಾಜೆಟ್ಸ್ ಬಳಸುವ ಮೊದಲು ಡರ್ಮಟಾಲಜಿಸ್ಟ್ ರ ಸಲಹೆ ಅಗತ್ಯ ಪಡೆಯಿರಿ.
ತ್ವಚೆಗೆ ಸಂಬಂಧಿಸಿದ ಯಾವುದೇ ರೋಗದ ಕಾರಣ, ಚರ್ಮತಜ್ಞರ ಬಳಿ ನೀವು ಚಿಕಿತ್ಸೆ ಪಡೆಯುತ್ತಿದ್ದರೆ, ಇದನ್ನು ಬಳಸಲೇಬೇಡಿ.
ನೀವು ಬಸುರಿ, ಬಾಣಂತಿ ಆಗಿದ್ದರೆ ಇದನ್ನು ಬಳಸುವ ಮೊದಲು ಅಗತ್ಯ ಚರ್ಮತಜ್ಞರ ಸಲಹೆ ಪಡೆಯಿರಿ.
ಟ್ವೀಝರ್
ನಿಮ್ಮ ಐ ಬ್ರೋಸ್ ಶೇಪ್ ಹಾಳಾಗಿದ್ದು ನಿಮಗೆ ಅದು ಸಹ್ಯವಾಗದಿದ್ದರೆ, ನೀವು ಕೂಡಲೇ ಪಾರ್ಲರ್‌ಗೆ ಹೋಗುತ್ತೀರಿ. ಅದರ ಬದಲು ಟ್ವೀಝರ್‌ನ್ನು ನಿಮ್ಮ ಜೊತೆಗಿರಿಸಿಕೊಳ್ಳಿ. ಅದರ ಸಹಾಯದಿಂದ ನೀವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಐ ಬ್ರೋಸ್‌ನ ಎಕ್ಸ್ ಟ್ರಾ ಮತ್ತು ಅನಗತ್ಯ ಕೂದಲನ್ನು ನಿವಾರಿಸಬಹುದು. ಇದರಿಂದ ಐ ಬ್ರೋಸ್ ಸದಾ ಶೇಪ್‌ನಲ್ಲಿರುತ್ತದೆ ಮತ್ತು ನೀವು ಪಾರ್ಲರ್‌ಗೆ ಹೋಗುವುದು ತಪ್ಪುತ್ತದೆ.
ಬಳಸುವ ಬಗೆ
ಟ್ವೀಝರ್‌ನ್ನು ಬಳಸುವುದು ಬಹಳ ಸುಲಭ. ಇದು ಚಿಮಟದಂತೆ ಇರುತ್ತದೆ. ನೀವು ಚಿಮಟದಿಂದ ಪಾತ್ರೆಯನ್ನು ಇಳಿಸುವಂತೆ ಟ್ವೀಝರ್‌ನ ಮಧ್ಯೆ ಎಕ್ಸ್ ಟ್ರಾ ಕೂದಲನ್ನು ಹಿಡಿದು ಎಳೆಯಬೇಕಾಗುತ್ತದೆ.
ಸ್ಮಾರ್ಟ್ ಟಿಪ್ಸ್
ಟ್ವೀಜರ್ 100-600 ರೂಪಾಯಿಗಳವರೆಗೆ ದೊರೆಯುತ್ತದೆ. ಬ್ಲೂ ಸ್ಲಾಂಟ್ ಟ್ವೀಝರ್, ಟ್ವೀಝರ್ ಗುರು, ಹಾರ್‌ಪರ್ ಟೋನ್, ಪ್ಲಕ್ ಕಿಟ್ ಮುಂತಾದವನ್ನು ಕೊಳ್ಳಬಹುದು.
ಫೇಶಿಯಲ್ ಹೇರ್ ರಿಮೂವರ್
ಮುಖದ ಮೇಲಿನ ಅನಗತ್ಯ ಕೂದಲಿನ ನಿವಾರಣೆಗಾಗಿ ತಿಂಗಳಿಗೆರಡು ಬಾರಿ ಪಾರ್ಲರ್/ ಸ್ಪಾಗೆ ತಿರುಗುವ ಬದಲು ಅಂಗಡಿಗೆ ಹೋಗಿ ಫೇಶಿಯಲ್ ಹೇರ್ ರಿಮೂವರ್ ಕೊಂಡು ತನ್ನಿ. ಇದರಿಂದ ನೀವು ಮನೆಯಲ್ಲಿ ಕುಳಿತಂತೆಯೇ ನಿಮ್ಮ ಮುಖದ ಅನಗತ್ಯ ಕೂದಲನ್ನು ತೆಗೆದುಹಾಕಬಹುದು. ವ್ಯಾಕ್ಸ್ ನಿಂದ ಕೂದಲನ್ನು ತೆಗೆಯುವುದಾಗಲೀ ಅಥವಾ ಬ್ಲೀಚ್‌ನಿಂದ ಅದನ್ನು ಮೆರಮಾಚುವುದಾಗಲಿ ಮಾಡಬೇಕಿಲ್ಲ. ಇದರ ಬಳಕೆಯಿಂದ ಕೆಲವೇ ನಿಮಿಷಗಳಲ್ಲಿ ಕೂದಲು ಮಾಯವಾಗಿ ಬಿಡುತ್ತದೆ.
ಬಳಸುವ ಬಗೆ
ಫೇಶಿಯಲ್ ಹೇರ್ ರಿಮೂವರ್‌ನ ಎರಡೂ ತುದಿಗಳನ್ನು ಒಂದೊಂದು ಕೈಯಲ್ಲಿ ಹಿಡಿದು ಮೇಲಿನಿಂದ ಕೆಳಕ್ಕೆ ತಿರುಗಿಸುತ್ತಾ ಅನಗತ್ಯ ಕೂದಲನ್ನು ತೆಗೆಯಿರಿ.
ಸ್ಮಾರ್ಟ್ ಟಿಪ್ಸ್
ಟ್ವೀಝರ್‌ನಂತೆ ಫೇಶಿಯಲ್ ಹೇರ್ ರಿಮೂವರ್ ಸಹ ಅಗ್ಗವಾಗಿಯೇ ದೊರೆಯುತ್ತದೆ. ಇದರ ಬೆಲೆ 150 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಟ್ವೀಝರ್ ಮ್ಯಾನ್ ಸ್ಮೂತ್ ಫಿನಿಶ್ ಹೇರ್ ರಿಮೂವರ್, ಯೂನಿಕ್ ಹೇರ್ ರಿಮೂವರ್, ಕ್ವಿಕ್ ಹೇರ್ ರಿಮೂವರ್ ಮೊದಲಾದುವುಗಳಲ್ಲಿ ಯಾವುದನ್ನಾದರೂ ಆರಿಸಿಕೊಳ್ಳಬಹುದು.
ಹೇರ್ ರಿಮೂವರ್ ಲೇಝರ್
ಕೈಕಾಲುಗಳ ಜೊತೆಗೆ ಬಿಕಿನಿ ಲೈನ್ ಅಥವಾ ಇಡೀ ಶರೀರದ ಅನಗತ್ಯ ಕೂದಲಿನ ನಿವಾರಣೆಗಾಗಿ ನಿಮ್ಮ ಬಳಿ ಹೇರ್ ರಿಮೂವರ್ ಲೇಝರ್ ಬ್ಯೂಟಿ ಗ್ಯಾಜೆಟ್ಸ್ ಇರಿಸಿಕೊಳ್ಳಿ. ಇದು ಕೂದಲನ್ನು ನಿವಾರಿಸುವುದಲ್ಲದೆ, ಚರ್ಮವನ್ನು ಕೋಮಲವಾಗಿರಿಸುತ್ತದೆ. ಮತ್ತೊಂದು ಒಳ್ಳೆಯ ಅಂಶವೆಂದರೆ ಇದನ್ನು ಬಳಸಿದಾಗ ನೋವು ಸಹ ಆಗುವುದಿಲ್ಲ. ಪ್ರತಿ ತಿಂಗಳ ಬದಲು ಇದನ್ನು ಒಂದೂವರೆ ಅಥವಾ 2 ತಿಂಗಳಿಗೊಮ್ಮೆ ಬಳಸಬಹುದು.
ಬಳಸುವ ಬಗೆ
ಅನಗತ್ಯ ಕೂದಲು ಇರುವ ಭಾಗದಲ್ಲಿ ಹೇರ್ ರಿಮೂವರ್ ಲೇಝರ್‌ನ್ನು ಹಗುರವಾಗಿ ತಿರುಗಿಸಿ. ಆಗ ಕೂದಲು ಇಲ್ಲವಾಗಿ ಚರ್ಮ ಸ್ವಚ್ಛವಾಗುತ್ತದೆ.
ಸ್ಮಾರ್ಟ್ ಟಿಪ್ಸ್
ವೀಟ್ ಹೇರ್ ರಿಮೂವರ್ ಡಿವೈಸ್, ರ್ಸೊ ಈ ಪೇನ್ ಪರ್ಮನೆಂಟ್ ಹೇರ್ ರಿಮೂವರ್, ಟ್ರಿಯಾ ಹೇರ್ ರಿಮೂವರ್ ಲೇಝರ್‌ಮುಂತಾದವುಗಳಲ್ಲಿ ನೀವು ಯಾವುದನ್ನಾದರೂ ಕೊಳ್ಳಬಹುದು. ಇದರ ಬೆಲೆ 5 ಸಾವಿರ ರೂಪಾಯಿಯಿಂದ ಪ್ರಾರಂಭವಾಗುತ್ತದೆ.
– ಕೆ. ವಿಭಾವರಿ