ಸ್ಕಿನ್‌ ಕೇರ್‌ ಮತ್ತು ಪರ್ಫೆಕ್ಟ್ ಲುಕ್ಸ್ ಗಾಗಿ ನೀವು ಪಾರ್ಲರ್‌ ಮತ್ತು ಸ್ಪಾಗಳಿಗೆ ಹೋಗುತ್ತಿದ್ದು, ತಿಂಗಳು ತಿಂಗಳೂ ಸಾವಿರಾರು ರೂಪಾಯಿ ವೆಚ್ಚ ಮಾಡುತ್ತಿದ್ದರೆ, ಇನ್ನು ಮುಂದೆ ಪಾರ್ಲರ್‌ ಮತ್ತು ಸ್ಪಾಗಳಿಗೆ ಹೋಗುವುದನ್ನು ಕಡಿಮೆ ಮಾಡಿ. ಏಕೆಂದರೆ ನಾವೀಗ ನಿಮಗಾಗಿ ಕೆಲವು ವಿಶೇಷ ಬ್ಯೂಟಿ ಗ್ಯಾಜೆಟ್ಸ್ ನ್ನು ಪ್ರಸ್ತುತ ಪಡಿಸಲಿದ್ದೇವೆ. ಅವುಗಳನ್ನು ಉಪಯೋಗಿಸಿ, ನೀವು ಮನೆಯಲ್ಲೇ ಕುಳಿತು ಸುಲಭವಾಗಿ ಪಾರ್ಲರ್‌ನ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಉತ್ತಮ ಚರ್ಮ ಮತ್ತು ಸುಂದರ ರೂಪಕ್ಕಾಗಿ ನಿಮ್ಮ ಬಳಿ ಯಾವ ಯಾವ ಬ್ಯೂಟಿ ಗ್ಯಾಜೆಟ್ಸ್ ಇರಿಸಿಕೊಂಡಿರಬೇಕು ಎಂಬುದನ್ನು ಡರ್ಮಟಾಲಜಿಸ್ಟ್ ಡಾ. ಗೀತಾಂಜಲಿ ಶೆಟ್ಟಿಯವರಿಂದ ತಿಳಿದುಕೊಳ್ಳೋಣ :

ಕ್ಲೆನ್ಸಿಂಗ್‌ ಬ್ರಶ್‌

ಒಳ್ಳೆಯ ಚರ್ಮ ಪಡೆಯಲು ಪ್ರತಿದಿನ ಕ್ಲೆನ್ಸಿಂಗ್‌, ಟೋನಿಂಗ್‌ ಮತ್ತು ಮಾಯಿಶ್ಚರೈಸಿಂಗ್‌ ಮಾಡುವುದು ಅಗತ್ಯ. ಇದರಲ್ಲಿ ಪ್ರಮುಖವಾದುದು ಎಂದರೆ ಕ್ಲೆನ್ಸಿಂಗ್‌. ಇದರಿಂದ ಚರ್ಮದ ಮಾಲಿನ್ಯತೆ ದೂರವಾಗುತ್ತದೆ. ಚರ್ಮ ಒಳಗಿನಿಂದ ಆರೋಗ್ಯಕರವಾಗಿರುತ್ತದೆ ಮತ್ತು ಮೊಡವೆ, ಗುಳ್ಳೆಗಳ ಸಂಭವ ಕಡಿಮೆ ಇರುತ್ತದೆ. ಆದ್ದರಿಂದ ನಿಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಕ್ಲೆನ್ಸಿಂಗ್‌ ಬ್ರಶ್‌, ಬ್ಯೂಟಿ ಗ್ಯಾಜೆಟ್ಸನ್ನು ಇರಿಸಿಕೊಳ್ಳಿ. ಇದು ಚರ್ಮವನ್ನು ಹೊರಗಿನಿಂದ ಸ್ವಚ್ಛಗೊಳಿಸಿ, ಒಳಗಿನಿಂದ ಸ್ವಸ್ಥವಾಗಿರಿಸುತ್ತದೆ. ಇದರ ಬಳಕೆಯಿಂದ ಚರ್ಮದ ಮಸಾಜ್‌ ಆಗುತ್ತದೆ ಮತ್ತು ಅದು ಕೋಮಲವಾಗಿರುತ್ತದೆ.

ಬಳಸುವ ಬಗೆ

ಕ್ಲೆನ್ಸಿಂಗ್‌ ಬ್ರಶ್‌ನ ಕಿಟ್‌ನಲ್ಲಿ ಕ್ಲೆನ್ಸಿಂಗ್‌ ಕ್ರೀಮ್ ಕೂಡ ಬರುತ್ತದೆ. ಮೊದಲು ಮುಖಕ್ಕೆ ಕ್ಲೆನ್ಸಿಂಗ್‌ ಕ್ರೀಮ್ ನ್ನು ಚೆನ್ನಾಗಿ ಹಚ್ಚಿ. ನಂತರ ಹ್ಯಾಂಡೀ ಕ್ಲೆನ್ಸಿಂಗ್‌ ಬ್ರಶ್‌ನ್ನು ಮುಖದ ಮೇಲೆ 5 ನಿಮಿಷಗಳ ಕಾಲ ಆಡಿಸಿ, ಬೆಚ್ಚನೆಯ ನೀರಿನಲ್ಲಿ ಮುಖ ತೊಳೆಯಿರಿ.

ಸ್ಮಾರ್ಟ್‌ ಟಿಪ್ಸ್

ಓಲೆ ಪ್ರೊ. ಆ್ಯಕ್ಸ್ ಮೈಕ್ರೊಡರ್ಮಾಬ್ರೆಶನ್‌ ಅಡ್ವಾನ್ಸ್ ಕ್ಲೆನ್ಸಿಂಗ್‌ ಬ್ರಶ್‌, ಪ್ರೊ ಆ್ಯಕ್ಟಿವ್ ‌ಸ್ಕಿನ್‌ ಕ್ಲೆನ್ಸಿಂಗ್‌ ಬ್ರಶ್‌ ಮತ್ತು ಸ್ಪಾ ಸೊನಿಕ್‌ ಕೇರ್‌ ಸಿಸ್ಟಮ್, ಇವುಗಳಲ್ಲಿ ಯಾವುದಾದರೊಂದು ಕ್ಲೆನ್ಸಿಂಗ್‌ ಬ್ರಶ್‌ನ್ನು ಕೊಳ್ಳಬಹುದು. ಇದರ ಬೆಲೆ 16 ಸಾವಿರದವರೆಗೆ ಆಗಬಹುದು.

ರಿಂಕಲ್ ಎರೇಸರ್

ಮುಖದ ಮೇಲೆ ತೋರಿ ಬರುವ ರಿಂಕಲ್ಗಳನ್ನು ದೂರಗೊಳಿಸಲು ಪಾರ್ಲರ್‌ಗೆ ಸಾವಿರಾರು ರೂಪಾಯಿಗಳ ವೆಚ್ಚ ಮಾಡುವುದನ್ನು ತಪ್ಪಿಸಬೇಕೆಂದರೆ, ರಿಂಕಲ್ ಎರೇಸರ್‌ ಗ್ಯಾಜೆಟ್ಸ್ ಅಥವಾ ರಿಂಕಲ್ ಎರೇಸರ್‌ ಪ್ಯಾಕ್ ನಿಮ್ಮ ಬಳಿ ಇರಿಸಿಕೊಳ್ಳಿ. ಇದರಿಂದ ನೀವು ಮನೆಯಲ್ಲೇ ಕುಳಿತು ಫೈನಲ್ ಲೈನ್‌ಗಳನ್ನೂ ಕಣ್ಣುಗಳ ಕೆಳಗೆ, ತುಟಿಗಳ ಹತ್ತಿರ ಮತ್ತು ಕುತ್ತಿಗೆಯ ಮೇಲೆ ಹರಡಿರುವ ಸುಕ್ಕುಗಳನ್ನೂ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ವಾರದಲ್ಲಿ 2 ಸಲ ಬಳಸಿದಾಗ ರಿಂಕಲ್ಸ್ ಕಡಿಮೆಯಾಗುತ್ತವೆ, ಜೊತೆಗೆ ಚರ್ಮ ಫ್ರೆಶ್‌ ಅಂಡ್‌ ಯಂಗ್‌ ಆಗಿ ಕಾಣುತ್ತದೆ.

ಬಳಸುವ ಬಗೆ

ರಿಂಕಲ್ ಎರೇಸರ್‌ ಪ್ಯಾಕ್ ನ್ನು ಬಳಸುವ ಮೊದಲು ಕಣ್ಣುಗಳ ಕೆಳಗೆ ಅಂಡರ್‌ ಐ ಕ್ರೀಮ್ ಹಚ್ಚಿ ಆಮೇಲೆ ರಿಂಕಲ್ ಎರೇಸರ್ ಪ್ಯಾಕ್ ನ್ನು ರಿಂಕಲ್ಸ್ ಮೇಲೆ ಇಟ್ಟು ಹಗುರವಾಗಿ ಅದುಮಿ, ತೆಗೆಯಿರಿ. ಈ ರೀತಿ 2-3 ನಿಮಿಷ ಪುನರಾವರ್ತಿಸಿ. ತುಟಿಗಳ ಸುತ್ತಮುತ್ತ ಮತ್ತು ಜಾ ಲೈನ್‌ ರಿಂಕಲ್ಸ್ ನ್ನು ಇದೇ ರೀತಿ ನಿವಾರಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ