ತನ್ನ ಮುಖದ ಕಳೆ ಹೆಚ್ಚಿಸಿಕೊಳ್ಳಲು, ತನ್ನ ಸೌಂದರ್ಯವನ್ನು ಎಲ್ಲರಿಂದ ಹೊಗಳಿಸಿಕೊಳ್ಳುವ ಬಯಕೆ ಯಾವ ಮಹಿಳೆಗೆ ತಾನೇ ಇರುವುದಿಲ್ಲ? ಆಕೆ ಗೃಹಿಣಿ ಅಥವಾ ಉದ್ಯೋಗಸ್ಥ ವನಿತೆ ಆಗಿರಲಿ, ತಮ್ಮ ಲುಕ್ಸ್ ನ್ನು ಸುಧಾರಿಸಲು ಬಯಸುತ್ತಾರೆ. ಹೀಗಾಗಿ ಈ ಸಲದ ಮದರ್ಸ್‌ ಡೇನಂದು ನೀವು ನಿಮ್ಮ ಅಮ್ಮನಿಗಾಗಿ ಸೌಂದರ್ಯ ಮರಳಿಸುವ ಈ ಬ್ಯೂಟಿ ಗಿಫ್ಟ್ಸ್ ನೀಡಿ ಆಕೆಯನ್ನು ಖುಷಿಪಡಿಸಿ :

ಕ್ಲೇ ಮಾಸ್ಕ್ / ಕೊಲೋಜನ್‌ ಮಾಸ್ಕ್ : ಇತ್ತೀಚೆಗೆ ಕ್ಲೇ ಮಾಸ್ಕ್ ಸಾಕಷ್ಟು ಜನಪ್ರಿಯ ಎನಿಸಿದೆ. ಇದು ನಿಮ್ಮ ತಾಯಿಯ ಮುಖದಲ್ಲಿನ ಸೀಬಂ ಅಬ್ಸಾರ್ಬ್‌ ಮಾಡಿ ಕೊಳಕು, ಡೆಡ್‌ ಸೆಲ್ಸ್ ನ್ನು ಹೊರಗೆಳೆಯುತ್ತದೆ. ಜೊತೆಗೆ ಇದು ರಕ್ತ ಸಂಚಾರವನ್ನು ಹೆಚ್ಚಿಸಿ ಚರ್ಮವನ್ನು ಅಧಿಕ ಮೃದುಗೊಳಿಸುತ್ತದೆ. ಕೊಲೋಜನ್‌ ಮಾಸ್ಕ್ ತ್ವಚೆಯಲ್ಲಿ ಬಿಗುವು ತರುತ್ತದೆ. ಇದು ಚರ್ಮದ ಹೆಚ್ಚುತ್ತಿರುವ ವಯಸ್ಸನ್ನು ಮರೆಮಾಚುತ್ತದೆ. ನಿಮ್ಮ ತಾಯಿಗೆ ಈ ಮಾಸ್ಕನ್ನು ಯಾವುದೇ ಉತ್ತಮ ಕಾಸ್ಮೆಟಿಕ್‌ ಕ್ಲಿನಿಕ್‌ನಲ್ಲಿ ಹಾಕಿಸಬಹುದು. ಈ ಮಾಸ್ಕ್ ನ್ನು ಲೇಸರ್‌ ಜೊತೆ ಬಳಸುವುದರಿಂದ ಇನ್ನೂ ಉತ್ತಮ ಪರಿಣಾಮ ಸಿಗುತ್ತದೆ. ಲೇಸರ್‌ನಿಂದ ತ್ವಚೆಯ ಮೃತ ಕೋಶಗಳಿಗೆ ಹೊಸ ಜೀವ ಬರುತ್ತದೆ, ಜೊತೆಗೆ ಮಾಸ್ಕ್ ನಲ್ಲಿ 95% ಕೊಲೋಜನ್‌ ಇರುವ ಕಾರಣ ಚರ್ಮಕ್ಕೆ ಅಗತ್ಯ ಪೌಷ್ಟಿಕಾಂಶ ದೊರಕುತ್ತದೆ. ಕಂಗಳ ಕೆಳಗಿನ ಕಪ್ಪು ಗೆರೆ ಹಾಗೂ ರಿಂಕಲ್ಸ್ ದೂರ ಮಾಡಲು, ಇದಕ್ಕಿಂತ ಬೇರೊಂದು ಉತ್ತಮ ಉಪಾಯವಿಲ್ಲ.

ಸೀರಂ ಪ್ರೊಟೆಕ್ಷನ್‌ : ಪ್ರತಿ ದಿನ ಬೆಳಗ್ಗೆ ಮುಖ ತೊಳೆದು, ಲೈಟ್‌ ಸ್ಕ್ರಬ್‌ ಮಾಡಿದ ನಂತರ, ಅಮ್ಮನಿಗೆ ಮರೆಯದೆ ಕೊಲೋಜನ್‌ಸೀರಂ ಕೊಡಿ. ಇದು ಕಾನ್‌ಸನ್‌ಟ್ರೇಟಿವ್ ‌ಫಾರ್ಮ್ ನಲ್ಲಿರುತ್ತದೆ. ಆದ್ದರಿಂದ ಇದನ್ನು ಬಲು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಇದರ ಡೇಲಿ ಬಳಕೆ, ಚರ್ಮನನ್ನು ರಿಪೇರಿ ಮಾಡಿ ಅದನ್ನು ಪ್ರೊಟೆಕ್ಟ್  ಹೈಡ್ರೇಟ್‌ ಮಾಡುತ್ತದೆ, ಜೊತೆಗೆ ಏಜಿಂಗ್‌ ಸೈನ್ಸ್ ನ್ನೂ ದೂರ ಮಾಡುತ್ತದೆ.

ವಾಲ್ಯೂಮೈಸಿಂಗ್‌ ಮಸ್ಕರಾ / ಲೆಂಥ್‌ನಿಂಗ್‌ ಮಸ್ಕರಾ : ಬಾಗಿದ, ಸುಸ್ತಾದ ಕಂಗಳ ಲ್ಯಾಶೆಸ್‌ ಮೇಲೆ ಮಸ್ಕರಾದ ಕೋಟ್ಸ್ ಹಚ್ಚಬಹುದು. ಇದರಿಂದ ಕಂಗಳು ತಕ್ಷಣ ತೆರೆದಂತೆ ಎನಿಸುತ್ತದೆ. ಹೆಚ್ಚುತ್ತಿರುವ ವಯಸ್ಸಿನ ಕಾರಣ ಮಸ್ಕರಾದ ಪ್ಯಾಟರ್ನ್‌ ಸಹ ಬದಲಾಗಬೇಕು. ಅಗತ್ಯ ಬಿದ್ದಾಗ ವಾಲ್ಯೂಮೈಸಿಂಗ್‌ ಮಸ್ಕರಾದ ಬದಲು ಲೆಂಥನಿಂಗ್‌ ಮಸ್ಕರಾ ಹಚ್ಚಬಹುದು.

ಅಲ್ಫಾ ಹೈಡ್ರಾಕ್ಸಿ ಆ್ಯಸಿಡ್‌ ಕ್ರೀಂ : ಪ್ರತಿ ದಿನ ಮಲಗುವ ಮೊದಲು ಸ್ಕಿನ್‌ ಕ್ಲೀನಿಂಗ್‌ ಅತ್ಯಗತ್ಯ. ಆಗ ಮೇಕಪ್‌ ಯಾ ಧೂಳು ಉತ್ತಮವಾಗಿ ರಿಮೂವ್ ‌ಆಗುತ್ತದೆ. ಫೇಸ್‌ ಕ್ಲೀನ್‌ ಮಾಡಿದ ನಂತರ ಕ್ರೀಂನಿಂದ ಮುಖವನ್ನು ಮಸಾಜ್‌ ಮಾಡುವುದರಿಂದ ಸುಕ್ಕುಗಳು ತಗ್ಗುತ್ತವೆ. ಈ ಕ್ರೀಂ ಕಂಗಳ ಕೆಳಭಾಗದ ಕಪ್ಪು ಭಾಗ ದೂರ ಮಾಡುವುದರಲ್ಲೂ ಸಹಾಯ ಮಾಡುತ್ತದೆ. ಇದರ ಬಳಕೆಯಿಂದ ಎಕ್ಸ್ ಫಾಲಿಯೇಶನ್‌ ಹಾಗೂ ಹೊಸ ಸೆಲ್ಸ್ ತಯಾರಾಗುವ ಪ್ರಕ್ರಿಯೆ ಜೋರಾಗುತ್ತದೆ. ಇದರಿಂದ ತ್ವಚೆಯ ಕಾಂತಿ  ಹೆಚ್ಚುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ