ತನ್ನ ಮುಖದ ಕಳೆ ಹೆಚ್ಚಿಸಿಕೊಳ್ಳಲು, ತನ್ನ ಸೌಂದರ್ಯವನ್ನು ಎಲ್ಲರಿಂದ ಹೊಗಳಿಸಿಕೊಳ್ಳುವ ಬಯಕೆ ಯಾವ ಮಹಿಳೆಗೆ ತಾನೇ ಇರುವುದಿಲ್ಲ? ಆಕೆ ಗೃಹಿಣಿ ಅಥವಾ ಉದ್ಯೋಗಸ್ಥ ವನಿತೆ ಆಗಿರಲಿ, ತಮ್ಮ ಲುಕ್ಸ್ ನ್ನು ಸುಧಾರಿಸಲು ಬಯಸುತ್ತಾರೆ. ಹೀಗಾಗಿ ಈ ಸಲದ ಮದರ್ಸ್‌ ಡೇನಂದು ನೀವು ನಿಮ್ಮ ಅಮ್ಮನಿಗಾಗಿ ಸೌಂದರ್ಯ ಮರಳಿಸುವ ಈ ಬ್ಯೂಟಿ ಗಿಫ್ಟ್ಸ್ ನೀಡಿ ಆಕೆಯನ್ನು ಖುಷಿಪಡಿಸಿ :

ಕ್ಲೇ ಮಾಸ್ಕ್ / ಕೊಲೋಜನ್‌ ಮಾಸ್ಕ್ : ಇತ್ತೀಚೆಗೆ ಕ್ಲೇ ಮಾಸ್ಕ್ ಸಾಕಷ್ಟು ಜನಪ್ರಿಯ ಎನಿಸಿದೆ. ಇದು ನಿಮ್ಮ ತಾಯಿಯ ಮುಖದಲ್ಲಿನ ಸೀಬಂ ಅಬ್ಸಾರ್ಬ್‌ ಮಾಡಿ ಕೊಳಕು, ಡೆಡ್‌ ಸೆಲ್ಸ್ ನ್ನು ಹೊರಗೆಳೆಯುತ್ತದೆ. ಜೊತೆಗೆ ಇದು ರಕ್ತ ಸಂಚಾರವನ್ನು ಹೆಚ್ಚಿಸಿ ಚರ್ಮವನ್ನು ಅಧಿಕ ಮೃದುಗೊಳಿಸುತ್ತದೆ. ಕೊಲೋಜನ್‌ ಮಾಸ್ಕ್ ತ್ವಚೆಯಲ್ಲಿ ಬಿಗುವು ತರುತ್ತದೆ. ಇದು ಚರ್ಮದ ಹೆಚ್ಚುತ್ತಿರುವ ವಯಸ್ಸನ್ನು ಮರೆಮಾಚುತ್ತದೆ. ನಿಮ್ಮ ತಾಯಿಗೆ ಈ ಮಾಸ್ಕನ್ನು ಯಾವುದೇ ಉತ್ತಮ ಕಾಸ್ಮೆಟಿಕ್‌ ಕ್ಲಿನಿಕ್‌ನಲ್ಲಿ ಹಾಕಿಸಬಹುದು. ಈ ಮಾಸ್ಕ್ ನ್ನು ಲೇಸರ್‌ ಜೊತೆ ಬಳಸುವುದರಿಂದ ಇನ್ನೂ ಉತ್ತಮ ಪರಿಣಾಮ ಸಿಗುತ್ತದೆ. ಲೇಸರ್‌ನಿಂದ ತ್ವಚೆಯ ಮೃತ ಕೋಶಗಳಿಗೆ ಹೊಸ ಜೀವ ಬರುತ್ತದೆ, ಜೊತೆಗೆ ಮಾಸ್ಕ್ ನಲ್ಲಿ 95% ಕೊಲೋಜನ್‌ ಇರುವ ಕಾರಣ ಚರ್ಮಕ್ಕೆ ಅಗತ್ಯ ಪೌಷ್ಟಿಕಾಂಶ ದೊರಕುತ್ತದೆ. ಕಂಗಳ ಕೆಳಗಿನ ಕಪ್ಪು ಗೆರೆ ಹಾಗೂ ರಿಂಕಲ್ಸ್ ದೂರ ಮಾಡಲು, ಇದಕ್ಕಿಂತ ಬೇರೊಂದು ಉತ್ತಮ ಉಪಾಯವಿಲ್ಲ.

ಸೀರಂ ಪ್ರೊಟೆಕ್ಷನ್‌ : ಪ್ರತಿ ದಿನ ಬೆಳಗ್ಗೆ ಮುಖ ತೊಳೆದು, ಲೈಟ್‌ ಸ್ಕ್ರಬ್‌ ಮಾಡಿದ ನಂತರ, ಅಮ್ಮನಿಗೆ ಮರೆಯದೆ ಕೊಲೋಜನ್‌ಸೀರಂ ಕೊಡಿ. ಇದು ಕಾನ್‌ಸನ್‌ಟ್ರೇಟಿವ್ ‌ಫಾರ್ಮ್ ನಲ್ಲಿರುತ್ತದೆ. ಆದ್ದರಿಂದ ಇದನ್ನು ಬಲು ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಇದರ ಡೇಲಿ ಬಳಕೆ, ಚರ್ಮನನ್ನು ರಿಪೇರಿ ಮಾಡಿ ಅದನ್ನು ಪ್ರೊಟೆಕ್ಟ್  ಹೈಡ್ರೇಟ್‌ ಮಾಡುತ್ತದೆ, ಜೊತೆಗೆ ಏಜಿಂಗ್‌ ಸೈನ್ಸ್ ನ್ನೂ ದೂರ ಮಾಡುತ್ತದೆ.

ವಾಲ್ಯೂಮೈಸಿಂಗ್‌ ಮಸ್ಕರಾ / ಲೆಂಥ್‌ನಿಂಗ್‌ ಮಸ್ಕರಾ : ಬಾಗಿದ, ಸುಸ್ತಾದ ಕಂಗಳ ಲ್ಯಾಶೆಸ್‌ ಮೇಲೆ ಮಸ್ಕರಾದ ಕೋಟ್ಸ್ ಹಚ್ಚಬಹುದು. ಇದರಿಂದ ಕಂಗಳು ತಕ್ಷಣ ತೆರೆದಂತೆ ಎನಿಸುತ್ತದೆ. ಹೆಚ್ಚುತ್ತಿರುವ ವಯಸ್ಸಿನ ಕಾರಣ ಮಸ್ಕರಾದ ಪ್ಯಾಟರ್ನ್‌ ಸಹ ಬದಲಾಗಬೇಕು. ಅಗತ್ಯ ಬಿದ್ದಾಗ ವಾಲ್ಯೂಮೈಸಿಂಗ್‌ ಮಸ್ಕರಾದ ಬದಲು ಲೆಂಥನಿಂಗ್‌ ಮಸ್ಕರಾ ಹಚ್ಚಬಹುದು.

ಅಲ್ಫಾ ಹೈಡ್ರಾಕ್ಸಿ ಆ್ಯಸಿಡ್‌ ಕ್ರೀಂ : ಪ್ರತಿ ದಿನ ಮಲಗುವ ಮೊದಲು ಸ್ಕಿನ್‌ ಕ್ಲೀನಿಂಗ್‌ ಅತ್ಯಗತ್ಯ. ಆಗ ಮೇಕಪ್‌ ಯಾ ಧೂಳು ಉತ್ತಮವಾಗಿ ರಿಮೂವ್ ‌ಆಗುತ್ತದೆ. ಫೇಸ್‌ ಕ್ಲೀನ್‌ ಮಾಡಿದ ನಂತರ ಕ್ರೀಂನಿಂದ ಮುಖವನ್ನು ಮಸಾಜ್‌ ಮಾಡುವುದರಿಂದ ಸುಕ್ಕುಗಳು ತಗ್ಗುತ್ತವೆ. ಈ ಕ್ರೀಂ ಕಂಗಳ ಕೆಳಭಾಗದ ಕಪ್ಪು ಭಾಗ ದೂರ ಮಾಡುವುದರಲ್ಲೂ ಸಹಾಯ ಮಾಡುತ್ತದೆ. ಇದರ ಬಳಕೆಯಿಂದ ಎಕ್ಸ್ ಫಾಲಿಯೇಶನ್‌ ಹಾಗೂ ಹೊಸ ಸೆಲ್ಸ್ ತಯಾರಾಗುವ ಪ್ರಕ್ರಿಯೆ ಜೋರಾಗುತ್ತದೆ. ಇದರಿಂದ ತ್ವಚೆಯ ಕಾಂತಿ  ಹೆಚ್ಚುತ್ತದೆ.

ಫೇಶಿಯಲ್ ಕಿಟ್‌ : ವಯಸ್ಸು ಹೆಚ್ಚಿದಂತೆ ತ್ವಚೆಯ ಬಿಸುಪು ಹಾಗೂ ಕಾಂತಿ ಕುಂದತೊಡಗುತ್ತದೆ. ಹೀಗಿರುವಾಗ ನಿಯಮಿತ ಕಾಲಾವಧಿಯಲ್ಲಿ ಫೇಶಿಯಲ್ ಮಾಡುವುದರಿಂದ ಮುಖದ ಮಸಲ್ ಟೋನ್‌ ಸುಧಾರಿಸಿ ಸುಕ್ಕುಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ.

ಕಲರ್‌ ಕರೆಕ್ಷನ್‌ ಕ್ರೀಂ : ಬಹು ಹೊತ್ತು ಎಚ್ಚರ ಆಗಿರುವುದು, ಸತತ ಕಂಪ್ಯೂಟರ್‌ ಕೆಲಸ, ಬಿಸಿಲಿನಲ್ಲಿ ಓಡಾಟದಿಂದಾಗಿ ಆ್ಯಕ್ನೆ, ಕಪ್ಪು ವೃತ್ತಗಳಂಥ ಚರ್ಮದ ಸಮಸ್ಯೆಗಳು ಹೆಚ್ಚುತ್ತವೆ. ಹೀಗಾದಾಗ ಇವುಗಳನ್ನು ನಿವಾರಿಸಲು ಫೌಂಡೇಶನ್‌ ಬಳಸುವ ಬದಲು ಕಲರ್‌ ಕರೆಕ್ಷನ್‌ ಕ್ರೀಂ ಅಂದ್ರೆ ‌ BB ಕ್ರೀಂ ನೆರವಿನಿಂದ ಅವನ್ನೆಲ್ಲ ಅಡಗಿಸಬಹುದು. ಫೌಂಡೇಶನ್‌ನಿಂದ ಈ ಗುರುತುಗಳು ಪೂರ್ತಿ ಅಡಗುತ್ತವೆ.

BB ಕ್ರೀಂ ಸಂಪೂರ್ಣ ಮುಖಕ್ಕೆ ಕ್ಲಿಯರ್‌ ಲುಕ್ಸ್ ನೀಡುತ್ತದೆ.

ಮಿರಾಕಲ್ ಆಯಿಲ್ : ಡೇಲಿ ಸ್ಟೈಲಿಂಗ್‌ ಕೆಮಿಕಲ್ಸ್ ಬಳಕೆಯ ಕಾರಣ ವಯಸ್ಸಾಗುತ್ತಿದ್ದಂತೆ ಎಲ್ಲರ ಕೂದಲೂ ಡ್ರೈ ಆಗುತ್ತದೆ. ಇದು ಕೂದಲಿನ ಸೌಂದರ್ಯ ಕೆಡಿಸುತ್ತದೆ. ಈ ಸಮಯದಲ್ಲಿ ನಿಮ್ಮ ತಾಯಿಯ ಕೂದಲಿನ ಹೊಳಪು ವಾಪಸ್ಸು ತರಿಸಲು ಮಿರಾಕಲ್ ಆಯಿಲ್ ‌ಅಂದ್ರೆ ಆರ್ಗನ್‌ ಅಥವಾ ಮೆಕಾಡಾಮಿಯಾ ಆಯಿಲ್‌ನ್ನು ಬಳಸಬೇಕು. ಈ ಎಣ್ಣೆ ಕೂದಲಿನ ಬುಡ ಭಾಗದ ಆಳ ತಲುಪಿ ಪೋಷಣೆ ನೀಡುತ್ತದೆ. ಜೊತೆಗೆ ಸಶಕ್ತಗೊಳಿಸಿ, ಶೈನಿಂಗ್‌ ಹೆಚ್ಚಿಸುತ್ತದೆ. ಇದು ಸುಲಭವಾಗಿ ಹರಡುತ್ತದೆ, ಆದ್ದರಿಂದ ಇದರ ಕೆಲವೇ ಹನಿ ಬಳಸಿರಿ. ಇದನ್ನು ಕೈಮೇಲೆ ಹಾಕಿ ಹಚ್ಚಿಕೊಂಡು ಬೆರಳ ನೆರವಿನಿಂದ ಇಡೀ ಕೂದಲಿಗೆ ಸವರುತ್ತಾ, ಬುಡ ತಿಕ್ಕಿರಿ. ಹೆಚ್ಚಿನ ಲಾಭವಿದೆ.

ಟ್ರಿಪ್‌ ಆರ್‌ ಯಾ ಫೋಟೋ ಫೇಶಿಯಲ್ : ನಿಮ್ಮ ತಾಯಿ ಟ್ರಿಪ್‌ ಆರ್‌ ಯಾ ಫೋಟೋ ಫೇಶಿಯಲ್ ಮಾಡಿಸಿದರೆ ಒಳ್ಳೆಯದು. ಇದರ ಉದ್ದೇಶ ಸ್ಕಿನ್‌ನ್ನು ರಿಪ್ಲೆನಿಶ್‌, ರಿಜುವಿನೇಟ್‌ ಮಾಡುವುದಾಗಿದೆ. ಅಧಿಕ ವಯಸ್ಸಿನ ಕಾರಣ ಅವರ ಚರ್ಮ ಜೋತಾಡುತ್ತಿರುತ್ತದೆ ಅಥವಾ ಸ್ಕಿನ್‌ನ ಎಲಾಸ್ಟಿಸಿಟಿ ಕಡಿಮೆ ಆಗಿರುತ್ತದೆ. ಅಂಥವರಿಗೆ ಈ ಚಿಕಿತ್ಸೆ ಲಾಭಕರ. ಫೋಟೋ ಫೇಶಿಯಲ್‌ನಿಂದ ಹೆಚ್ಚುತ್ತಿರುವ ವಯಸ್ಸಿನ ಗುರುತುಗಳಾದ ಫೈನ್‌ ಲೈನ್ಸ್, ಸುಕ್ಕುಗಳು ಕಡಿಮೆ ಆಗುತ್ತವೆ. ತ್ವಚೆಯ ಸಡಿಲತನ ದೂರವಾಗಿ ಅದರಲ್ಲಿ ಕಸುವು ತುಂಬಿಕೊಳ್ಳುತ್ತದೆ. ಈ ಫೇಶಿಯಲ್‌ನಲ್ಲಿನ ಘಟಕಗಳಿಂದ ತ್ವಚೆಯಲ್ಲಿ ಕೊಲೋಜನ್‌ ತಯಾರಾಗುವ ಪ್ರಕ್ರಿಯೆ ಹೆಚ್ಚುತ್ತದೆ. ಇದು ತ್ವಚೆಯನ್ನು ಸೈನ್ಸ್ ಆಫ್‌ ಏಜಿಂಗ್‌ನಿಂದ ಕಾಪಾಡುತ್ತದೆ. ಇಷ್ಟು ಮಾತ್ರವಲ್ಲದೆ ಇದರಿಂದ ಎಕ್ಸ್ ಫಾಲಿಯೇಶನ್‌ ಹಾಗೂ ಹೊಸ ಸೆಲ್ಸ್ ತಯಾರಾಗುವ ಪ್ರಕ್ರಿಯೆ ಜೋರಾಗುತ್ತದೆ. ಅದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಈ ಚಿಕಿತ್ಸೆಯಲ್ಲಿ ಮೈಕ್ರೋ ಮಸಾಜ್‌ ಯಾ ಅಪ್‌ ಲಿಫ್ಟಿಂಗ್‌ ಮೆಶೀನ್‌ನಿಂದ ಫೇಸ್‌ನ್ನು ಲಿಫ್ಟ್ ಮಾಡುತ್ತಾರೆ. ಇದರಿಂದ ಸ್ಯಾಗಿ ಸ್ಕಿನ್‌ಅಪ್‌ ಲಿಫ್ಟ್ ಆಗಿ ಅದರಲ್ಲಿ ಬಿಗಿತ ಬರುತ್ತದೆ.

ಕೊನೆಯಲ್ಲಿ ಈ ಚಿಕಿತ್ಸೆ ಮುಖಾಂತರ ಒಂದು ವಿಶಿಷ್ಟ ಬಗೆಯ ಮಾಸ್ಕ್ ಅಳವಡಿಸುತ್ತಾರೆ, ಇದನ್ನೇ ಯಂಗ್‌ ಸ್ಕಿನ್‌ ಮಾಸ್ಕ್ ಎನ್ನುತ್ತಾರೆ. ಈ ಮಾಸ್ಕ್ ನಲ್ಲಿ 95% ಕೊಲೋಜನ್‌ ತುಂಬಿರುತ್ತದೆ. ಈ ಮಾಸ್ಕ್ ಧರಿಸುವುದರಿಂದ ವೃದ್ಧ ಚರ್ಮಕ್ಕೆ ಸಾಕಷ್ಟು ಪುಷ್ಟಿ ದೊರಕುತ್ತದೆ.

ಗ್ಲೈಕಾಲಿಕ್‌ ಪೀಲ್ ಡರ್ಮಾಬ್ರೇಶನ್‌ ಟೆಕ್ನಿಕ್ಸ್ : ನಿಮ್ಮ ತಾಯಿಯ ಮುಖದ ಮೇಲೆ ಪಿಗ್ಮೆಂಟೇಶನ್‌ ಕಾಣಿಸಿದ್ದರೆ, ಅವರನ್ನು ಉತ್ತಮ ಸೆಲೂನಿಗೆ ಕರೆದುಕೊಂಡು ಹೋಗಿ ಗ್ಲೈಕಾಲಿಕ್‌ ಪೀಲ್ ಡರ್ಮಾಬ್ರೇಶನ್‌ ಟೆಕ್ನಿಕ್ಸ್ ನೆರವಿನಿಂದ ಇದಕ್ಕೆ ಚಿಕಿತ್ಸೆ ಕೊಡುವ ಗಿಫ್ಟ್ ನ್ನು ನೀವು ನೀಡಬಹುದು. ಹಲವು ಸಿಟ್ಟಿಂಗ್ಸ್ ಗೆ ಈ ಚಿಕಿತ್ಸೆ ಪೂರ್ಣಗೊಳ್ಳುತ್ತದೆ.

– ಭಾರತಿ ತನೇಜಾ, ಬ್ಯೂಟಿ ಎಕ್ಸ್ ಪರ್ಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ