ನ್ಯೂಡ್‌ ಮೇಕಪ್‌ ಲುಕ್ಸ್ ಪಡೆಯಲು ನೀವು ಹೆಚ್ಚು ಶ್ರಮಪಡಬೇಕಿಲ್ಲ. ಕನಿಷ್ಠ ಮೇಕಪ್‌ ಪ್ರಾಡಕ್ಟ್ ಗಳನ್ನು ಬಳಸಿ ಮೇಕಪ್‌ನ ಲೈಟ್‌ಶೇಡ್ಸ್ ನಿಂದ ಅತ್ಯಂತ ಕಡಿಮೆ ಸಮಯದಲ್ಲಿ ನೀವು ನ್ಯೂಡ್‌ ಮೇಕಪ್‌ ಲುಕ್ಸ್ ಪಡೆಯಬಹುದು. ಇದು ಕ್ಲಾಸೀ ಮತ್ತು ಸೊಫಿಸ್ಟಿಕೇಟೆಡ್‌ ಆಗಿ ಕಾಣಿಸುತ್ತದೆ. ವಿಶೇಷ ಸಂದರ್ಭಗಳಿಗಲ್ಲದೆ ಇದನ್ನು ಅಫಿಶಿಯಲ್ ಮೀಟಿಂಗ್ಸ್ ಮತ್ತು ದಿನನಿತ್ಯದ ವ್ಯವಹಾರದ ಸಂದರ್ಭಗಳಲ್ಲೂ ಮಾಡಿಕೊಳ್ಳಬಹುದು. ನ್ಯೂಡ್‌ ಮೇಕಪ್‌ ಲುಕ್ಸ್ ಕೆಲವು ವಿಶೇಷ ಟ್ರಿಕ್ಸ್ ಬಗ್ಗೆ ತಿಳಿದುಕೊಳ್ಳೋಣ :

ಸ್ಕಿನ್‌ ಕೇರ್‌ ರೊಟೀನ್‌

ನ್ಯೂಡ್‌ ಮೇಕಪ್‌ ಲುಕ್‌ಗಾಗಿ ಮೇಕಪ್‌ನ ಡಾರ್ಕ್‌ ಶೇಡ್ಸ್ ಬಳಸಲಾಗುವುದಿಲ್ಲ. ಹೀಗಾಗಿ ಮುಖದ ಸಹಜ ರೂಪ ಎದ್ದು ತೋರುತ್ತದೆ. ಆದ್ದರಿಂದ ಚರ್ಮ ಆಂತರ್ಯದಲ್ಲಿ ಆರೋಗ್ಯಕರ ಮತ್ತು ಬಾಹ್ಯದಲ್ಲಿ ಕೋಮಲ ಮತ್ತು ಕಲೆರಹಿತವಾಗಿಯೂ ಇರುವುದು ಅಗತ್ಯ. ಇದಕ್ಕಾಗಿ ನೀವು ನಿಯಮಿತವಾಗಿ ಕ್ಲೆನ್ಸಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌ ಮತ್ತು ಸ್ಕ್ರಬಿಂಗ್ ಮಾಡಬೇಕು. ಇದರಿಂದ ಚರ್ಮ ಆರೋಗ್ಯಕರವಾಗಿದ್ದು ನ್ಯೂಡ್‌ ಮೇಕಪ್‌ ಲುಕ್‌ ಚೆನ್ನಾಗಿ ಕಾಣುತ್ತದೆ.

ಟಿಂಟ್‌ ಮಾಯಿಶ್ಚರೈಸರ್‌

ಮೊದಲು ಫೇಸ್‌ವಾಶ್‌ನಿಂದ ಮುಖ ತೊಳೆದು ಒರೆಸಿಕೊಳ್ಳಿ. ನಂತರ ಲೈಟ್‌ ಅಥವಾ ಟಿಂಟ್‌ ಮಾಯಿಶ್ಚರೈಸರ್‌ನ್ನು ಪೂರ್ತಿ ಮುಖಕ್ಕೆ ಹಚ್ಚಿ ಹಗುರವಾಗಿ ಕೈನಿಂದ ಮಾಯಿಶ್ಚರೈಸ್‌ ಮಾಡಿ. ಈಗ ಕಣ್ಣಿನ ಹತ್ತಿರ ಐ ಕ್ರೀಮ್ ಹಚ್ಚಿ. ಇದು ಸೆಟ್‌ ಆಗಲು ಸ್ವಲ್ಪ ಹೊತ್ತು ಬಿಡಿ.

ಲೈಟ್‌ ಫೌಂಡೇಶನ್‌

ಈಗ ಲೈಟ್‌ ಫೌಂಡೇಶನ್‌ ತೆಗೆದುಕೊಳ್ಳಿ.  ಇದು ನ್ಯಾಚುರಲ್ ಲುಕ್‌ ನೀಡುತ್ತದೆ. ಬ್ರಶ್‌ನ ಸಹಾಯದಿಂದ ಇದನ್ನು ಪೂರ್ತಿ ಮುಖಕ್ಕೆ  ಹತ್ತಿ ಮೇಕಪ್‌ ಬೇಸ್‌ ಸಿದ್ಧಪಡಿಸಿಕೊಳ್ಳಿ. ಒಂದು ಕೋಟ್‌ ಫೌಂಡೇಶನ್‌ನಿಂದಲೇ ಮುಖ ಪೂರ್ತಿ ಕವರ್‌ ಆಗುವಂತೆ ನೋಡಿಕೊಳ್ಳಿ. ಎರಡು ಕೋಟ್‌ ಫೌಂಡೇಶನ್‌ನಿಂದ ಮೇಕಪ್‌ ಹೆವಿ ಆಗಿ ಕಾಣುತ್ತದೆ ಮತ್ತು ಮೇಕಪ್‌ನ ಲೈಟ್‌ ಶೇಡ್‌ ಮಂಕಾಗಿ ತೋರುತ್ತದೆ.

ಟ್ರಾನ್ಸ್ ಲೂಸೆಂಟ್‌ ಪೌಡರ್‌

ನಿಮ್ಮ ಮೇಕಪ್‌ ಹೆಚ್ಚು ಕಾಲ ಉಳಿಯಬೇಕೆಂದು ಬಯಸುವಿರಾದರೆ, ಮಾಯಿಶ್ಚರೈಸರ್‌ ಮತ್ತು ಫೌಂಡೇಶನ್‌ನ ನಂತರ ಮುಖ ಮತ್ತು ಕುತ್ತಿಗೆಗೆ ಸ್ಪಾಂಜ್‌ನ ಸಹಾಯದಿಂದ ಹಗುರವಾಗಿ ಟ್ರಾನ್ಸ್ ಲೂಸೆಂಟ್‌ ಪೌಡರ್‌ ಹಚ್ಚಿ. ಇದರಿಂದ ಬೇಸ್‌ ಮೇಕಪ್‌ಗೆ ಸ್ಮೂತ್‌ ಟಚ್‌ ದೊರೆತು ಮೇಕಪ್‌ ನ್ಯಾಚುರಲ್ ಆಗಿ ಕಾಣುತ್ತದೆ. ಪೌಡರ್‌ ಹಚ್ಚಿರುವುದು ಹೆಚ್ಚಾದರೆ, ಅದನ್ನು ಕಡಿಮೆ ಮಾಡಲು ಇನ್ನೊಮ್ಮೆ ಮಾಯಿಶ್ಚರೈಸರ್‌ ಹಚ್ಚಿ.

ಬ್ರಾಂಝರ್‌ ಸ್ಪ್ರೇ ಬೇಸ್‌

ಮೇಕಪ್‌ಗೆ ಫೈನಲ್ ಟಚ್‌ ನೀಡಲು ಬ್ರಾಂಝರ್‌ ಸ್ಪ್ರೇ ಬಳಸಲು ಮರೆಯಬೇಡಿ. ನ್ಯಾಚುರಲ್ ಲುಕ್‌ಗಾಗಿ ಪೀಚ್‌, ಲೈಟ್‌ ಪಿಂಕ್ ಅಥವಾ ರೋಸಿ ಪಿಂಕ್‌ ಶೇಡ್‌ನ ಬ್ರಾಂಝರ್‌ ಬಳಸಿ. ಇದನ್ನು ಹಣೆ, ಮೂಗು, ಚೀಕ್‌, ಚಿನ್‌ ಮತ್ತು ಕುತ್ತಿಗೆಯ ಮೇಲೆ ಸ್ಪ್ರೇ ಮಾಡಿ, ಬ್ರಶ್‌ನ ಸಹಾಯದಿಂದ ಚೆನ್ನಾಗಿ ಹರಡುವಂತೆ ನೋಡಿಕೊಳ್ಳಿ. ಇದರಿಂದ ಚರ್ಮದಲ್ಲಿ ನ್ಯಾಚುರಲ್ ಗ್ಲೋ ಇರುತ್ತದೆ ಮತ್ತು ಮೇಕಪ್‌ ಹೆಚ್ಚು ಕಾಲ ಉಳಿಯುತ್ತದೆ.

ಲೈಟ್‌ ಐ ಶ್ಯಾಡೊ

ಬೇಸ್‌ ಮೇಕಪ್‌ ಚೆನ್ನಾಗಿ ಸೆಟ್‌ ಆದ ಮೇಲೆ ಐ ಶ್ಯಾಡೋನಿಂದ ಐ ಮೇಕಪ್‌ ಪ್ರಾರಂಭಿಸಿ. ಇದಕ್ಕಾಗಿ ಐ ಶ್ಯಾಡೋದ ನ್ಯೂಡ್‌ ಶೇಡ್‌ಗಳಾದ ಗ್ರೇ, ಪೀಚ್‌, ಐವರಿ, ಶಾಂಪೇನ್‌, ಬೇಬಿ ಪಿಂಕ್‌, ಬೇಜ್‌, ಕಾಪರ್‌ ಮುಂತಾದವನ್ನು ಆರಿಸಿಕೊಳ್ಳಿ. ಐ ಶ್ಯಾಡೋವನ್ನು ಕಣ್ಣೆವೆಯ ಮೇಲೆ ಚೆನ್ನಾಗಿ ಹಚ್ಚಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ