ಆಫೀಸ್‌ನಲ್ಲಿ ಪ್ರೆಸೆಂಟೆಬಲ್ ಪ್ರೊಫೆಶನಲ್ ಆಗಿ ಕಾಣಬಯಸುವಿರಾ? ಹಾಗಿದ್ದರೆ ನಿಮ್ಮ ಡ್ರೆಸ್‌ ಮೇಕಪ್‌ಗೆ ಸ್ಮಾರ್ಟ್‌ ಕಾರ್ಪೊರೇಟ್‌ಲುಕ್ಸ್ ಕೊಡಿ. ಆಗ ನೋಡಿ, ಜನರ ಮೇಲೆ ನೀವು ಎಂಥ ಪ್ರಭಾವ ಬೀರುವಿರೆಂದು! ಇದಕ್ಕಾಗಿ ಈ ಕೆಳಗಿನ ಸಲಹೆ ಅನುಸರಿಸಿ :

ಕಂಗಳು

ಇದರ ಮೇಕಪ್‌ನ ಆರಂಭ ಉತ್ತಮ ಬೇಸ್‌ ಮತ್ತು ಐ ಪ್ರೈಮರ್‌ ಹಚ್ಚುವುದರಿಂದ ಮಾಡಿ. ಆ ಮೇಕಪ್‌ ಮಾಡುವ ಸಮಯದಲ್ಲಿ ಎಂದೂ ಐ ಬ್ರೋಸ್‌ನ್ನು ನಿರ್ಲಕ್ಷಿಸದಿರಿ. ಸಮಯ ಇಲ್ಲದಾಗ ಐ ಬ್ರೋಸ್‌ಗಾಗಿ ಕ್ಲಿಯರ್‌ ಬ್ರೌನ್‌ ಜೆಲ್ ಬಳಸುವುದು ಲೇಸು.

ಮಸ್ಕರಾ ಬಳಸುವಾಗ ಅದು ದೀರ್ಘಕಾಲ ನಿಲ್ಲುವಂತಿರಬೇಕು, ಅಂದರೆ 7-8 ಘಂಟೆ ಕಾಲ ಉಳಿಯಬೇಕು.

ತುಟಿಗಳು

ಸಾಮಾನ್ಯ ಲುಕ್ಸ್ ಗಾಗಿ ನ್ಯೂಡ್‌ ಪೆನ್ಸಿಲ್‌ ಯಾ ಗ್ಲಾಸ್‌ ಬಳಸುವುದು ಬೆಟರ್‌. ಏಕೆಂದರೆ ಇಡೀ ದಿನದಲ್ಲಿ ಯಾವಾಗ ಬೇಕಾದರೂ ಸುಲಭವಾಗಿ ಇದನ್ನು ರೀ ಅಪ್ಲೈ ಮಾಡಬಹುದು.

ಸಾಮಾನ್ಯ ಲುಕ್ಸ್ ಗಾಗಿ ನ್ಯೂಟ್ರಲ್ ಪಿಂಕ್‌ಮತ್ತು ಸಾಫ್ಟ್ ಸೇಬ್‌ ಕೋರಲ್ ಶೇಡ್‌ನ್ನು ಬಳಸಬೇಕು. ವಿಶೇಷ ಲುಕ್ಸ್ ಗಾಗಿ ಬೋಲ್ಡರ್‌ ಶೇಡ್ಸ್ ಬಳಸಬೇಕು.

ಕಂಗಳಿಗೆ ಗಾಢ ಬಣ್ಣ ಬಳಸುವ ಬದಲು ತೆಳು ಬಣ್ಣ ಆ್ಯಡ್‌ ಮಾಡಿ. ಲಿಪ್‌ ಮೇಕಪ್‌ಗಾಗಿ ಡಾರ್ಕ್‌ ಶೇಡ್ಸ್ ಬಳಸಿರಿ.

ರೆಟ್ರೋ ಲೇಡಿ ಎನಿಸಲು ಸ್ಕಿನ್‌ ಟೋನ್‌ಗೆ ಹೊಂದುವ ಬೆರಿ ಯಾ ಬ್ರೌನ್‌ ರೆಡ್‌ ಶೇಡ್‌ ಬಳಸಬಹುದು.

ಕೆನ್ನೆ

ಮುಖದಲ್ಲಿ ಹೆಚ್ಚಿನ ಕಾಂತಿ ತರಲು ಕೆನ್ನೆಗಳ ಮೇಲೆ ತೆಳು ಬ್ರಶ್‌ ಇರಬೇಕಾದುದು ಅನಿವಾರ್ಯ.

ವರ್ಕ್‌ ಪ್ಲೇಸ್‌ನಲ್ಲಿ ಅತಿ ಹೆಚ್ಚು ಶಿಮರಿ ಮೇಕಪ್‌ ಪ್ರಾಡಕ್ಟ್ಸ್ ಬಳಸಬಾರದು.

ಚೀಕ್‌ ಬೋನ್ಸ್ ಮೇಲೆ ತೆಳುವಾದ ಶಿಮರ್‌ ಬಹಳ ಚೆನ್ನಾಗಿ ಒಪ್ಪುತ್ತದೆ.

ಈ ಟಿಪ್ಸ್ ನೆನಪಿರಲಿ

ಸುದೀರ್ಘ ಕಾಲ ನಿಲ್ಲುವಂಥ, ಆದರೆ ಲೋ ಮೇಂಟೆನೆನ್ಸ್ ಪ್ರಾಡಕ್ಟ್ಸ್ ಆಗಿರುವಂಥದ್ದನ್ನು ಮಾತ್ರ ಬಳಸಿರಿ.

ಮೇಕಪ್‌ನಿಂದ ನಿಮ್ಮ ಮುಖದ ಸ್ಪೆಷಲ್ ಫೀಚರ್ಸ್‌ ಎದ್ದು ಕಾಣುವಂತೆ ನೋಡಿಕೊಳ್ಳಿ.

ಮೇಕಪ್‌ ಇನ್ನೊಬ್ಬರ ಗಮನ ಸೆಳೆಯುವಂತಿರಬೇಕು ಎಂಬುದೇನೊ ಸರಿ. ಆದರೆ ಅವರು ನಿಮ್ಮ ಮಾತು ಕೇಳಿಸಿಕೊಳ್ಳುವ ಬದಲು ನಿಮ್ಮನ್ನೇ ಕೆಕ್ಕರಿಸುವಂತಿರಬಾರದು.

ಆಫೀಸ್‌ಗೆ ಹೇರ್‌ಸ್ಟೈಲ್

ಮೀಡಿಯಂ ಉದ್ದದ ಕೂದಲು ಸದಾ ಟ್ರೆಂಡ್‌ನಲ್ಲಿರುತ್ತದೆ. ಇದನ್ನು ಸ್ಟ್ರೇಟ್‌ ಆಗಿಸಿಕೊಳ್ಳಬಹುದು ಯಾ ತೆಳು ಬೂದು ಯಾ ಇತರ ಡಾರ್ಕ್‌ ಶೇಡ್ಸ್ ನಲ್ಲಿ ಕಲರ್‌ ಮಾಡಿಸಬಹುದು. ಇದರಿಂದ ವಿವಿಧ ಬಗೆಯ ಹೇರ್‌ಸ್ಟ್ಸೈಲ್ ಮಾಡಿಸಬಹುದು ಯಾ ಸ್ಟೈಲಿಶ್‌ ಲುಕ್ಸ್ ನೀಡಿ ಓಪನ್‌ ಆಗಿಯೂ ಬಿಡಬಹುದು.

ಬ್ರೆಡ್‌ ಹೇರ್‌ಸ್ಟೈಲ್

‌ಹೊಸದೇನಲ್ಲ. ಆದರೆ ಇದರಲ್ಲಿ ವೈವಿಧ್ಯಮಯ ಬದಲಾವಣೆಗಳಿಂದ ಹೊಸ ಹೊಸ ಸ್ಟೈಲ್ ‌ನೀಡಬಹುದು. ಬ್ರೆಡ್‌ ಕ್ರೌನ್‌ ಬ್ರೆಡ್‌ಪಿಗ್‌ ಟೇಲ್ಸ್ ಸಹ ಈಗಿನ ಟ್ರೆಂಡ್‌ ಎನಿಸಿದೆ.

ವಾಲ್ಯೂಂ ತುಂಬಿದ ಕೂದಲು ತಮ್ಮದಾಗಿರಬೇಕೆಂದು ಹುಡುಗಿಯರು ಸದಾ ಬಯಸುತ್ತಾರೆ. ಸಣ್ಣದು ಅಥವಾ ಉದ್ದನೆಯ ಕೂದಲು ಯಾವುದೇ ಇರಲಿ, ಎರಡಕ್ಕೂ ಇದು ಒಪ್ಪುತ್ತದೆ. ಶಾರ್ಟ್‌ ಹೇರ್‌ಗೆ ಕಲರ್‌ಹೇರ್‌ ಡ್ರೈಯರ್‌ನ ಸಹಾಯದಿಂದ ಅದನ್ನು ಕರ್ಲಿ ಯಾ ಸೀದಾ ಮಾಡಿ, ಧಾರಾಳ ವಾಲ್ಯೂಂ ತುಂಬಿರುವಂತೆ ಮಾಡಬಹುದು.

ಕಾರ್ಪೊರೇಟ್‌ ಬನ್‌

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ