ಮಹಿಳೆಯರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬಗೆಬಗೆಯ ಶೇಡ್ಸ್ ನ ಲಿಪ್‌ಸ್ಟಿಕ್‌, ಐ ಲೈನರ್‌, ಮಸ್ಕರಾ ಮೊದಲಾದ ಕಾಸ್ಮೆಟಿಕ್ಸ್ ಕೊಳ್ಳುತ್ತಾರೆ. ಆದರೆ ಅವುಗಳನ್ನು ಅರ್ಧದಷ್ಟು ಬಳಸಿರುವಾಗಲೇ ಡೇಟ್‌ ಎಕ್ಸ್ ಪೈರ್‌ ಆಗಿಬಿಟ್ಟಿರುತ್ತದೆ. ಆಗ ವಿಧಿ ಇಲ್ಲದೆ, ಅವುಗಳನ್ನು ಎಸೆಯಬೇಕಾಗುತ್ತದೆ. ಇಂತಹ ಬೆಲೆಬಾಳುವ ಕಾಸ್ಮೆಟಿಕ್‌ಗಳನ್ನು ಎಸೆಯಲು ಮನಸ್ಸು  ಬಾರದಿದ್ದರೆ, ಚಿಂತಿಸಬೇಡಿ. ನೀವು ಅವುಗಳನ್ನು ಹೀಗೆ ರೀಯೂಸ್‌ ಮಾಡಬಹುದು.

ಲಿಪ್‌ ಬಾಮ್

ಕೊರೆಯುವ ಚಳಿಯಿಂದ ನಿಮ್ಮ ಕೋಮಲ ತುಟಿಗಳ ರಕ್ಷಣೆಗಾಗಿ ನೀವು ಖಂಡಿತ ಲಿಪ್‌ಬಾಮ್ ಬಳಸುತ್ತೀರಿ. ಬೇಸಿಗೆ ಬಂದಾಗ ಅದು ಮೂಲೆ ಸೇರುತ್ತದೆ. ಮತ್ತೆ ನೋಡುವಾಗ ಅದು ಎಕ್ಸ್ ಪೈರ್‌ ಆಗಿಬಿಟ್ಟಿರುತ್ತದೆ. ಅದನ್ನು ಎಸೆಯುವ ಬದಲು ರೀಯೂಸ್‌ ಮಾಡಿ. ನಿಮಗೆ ಶೂಬೈಟ್‌ ಆಗಿದ್ದರೆ ಆ ಜಾಗಕ್ಕೆ ಲಿಪ್‌ಬಾಮ್ ಹಚ್ಚಿ. ನಂತರ ಶೂ ಹಾಕಿಕೊಳ್ಳಿ. ಆಗ ನಿಮಗೆ ಶೂಬೈಟ್‌ ಆಗುವುದಿಲ್ಲ ಮತ್ತು ಆರಾಮ ಸಿಗುತ್ತದೆ.

ಐ ಶ್ಯಾಡೊ

ನಿಮ್ಮಲ್ಲಿ ಎಕ್ಸ್ ಪೈರ್‌ ಆದ ಡಿಫರೆಂಟ್‌ ಶೇಡ್ಸ್ ನ ಐ ಶ್ಯಾಡೊ ಇವೆಯೇ? ಅವನ್ನು ಎಸೆಯಲು ಮುಂದಾಗಬೇಡಿ. ಅವುಗಳಿಂದ ನೇಲ್ ‌ಪಾಲಿಶ್‌ ತಯಾರಿಸಬಹುದೆಂದು ನಿಮಗೆ ಗೊತ್ತಿದೆಯೇ? ಅದಕ್ಕಾಗಿ ಒಂದು ಟ್ರಾನ್ಸ್ ಪರೆಂಟ್‌ ನೇಲ್ ‌ಪಾಲಿಶ್‌ ತೆಗೆದುಕೊಳ್ಳಿ. ಅದರ ಬ್ರಶ್‌ನ್ನು ನಿಮಗೆ ಬೇಕಾದ ಬಣ್ಣದ ಐ ಶ್ಯಾಡೋನಲ್ಲಿ ಚೆನ್ನಾಗಿ ಉಜ್ಜಿ, ಉಗುರಿಗೆ ಹಚ್ಚಿಕೊಳ್ಳಿ. ಹೀಗೆ ನಿಮಗೆ ಬೇರೆ ಬೇರೆ ಶೇಡ್ಸ್ ನ ನೇಲ್ ‌ಪಾಲಿಶ್‌ ಲಭ್ಯವಾಗುತ್ತದೆ.

ಲಿಪ್‌ಸ್ಟಿಕ್‌

ಡೇಟ್‌ ಎಕ್ಸ್ ಪೈರ್‌ ಆಗಿರುವುದರಿಂದ ನಿಮ್ಮ ಮೆಚ್ಚಿನ ಲಿಪ್‌ಸ್ಟಿಕ್‌ ಬಳಸುವಂತಿಲ್ಲವೆಂದು ಬೇಸರವೇ? ಯೋಚಿಸಬೇಡಿ. ಅದರಿಂದ ನೀವು ಲಿಪ್‌ ಬಾಮ್ ತಯಾರಿಸಿ ಬಳಸಬಹುದು. 1 ಬಟ್ಟಲಿನಲ್ಲಿ ವ್ಯಾಸ್‌ಲಿನ್‌ನಂತಹ ಕೋಲ್ಡ್ ಕ್ರೀಮ್ ನ್ನು 1 ಚಮಚದಷ್ಟು ತೆಗೆದುಕೊಳ್ಳಿ. ಚಾಕುವಿನಿಂದ ಕೊಂಚ ಲಿಪ್‌ಸ್ಟಿಕ್‌ನ್ನು ಕತ್ತರಿಸಿಕೊಂಡು ಅದರಲ್ಲಿ ಹಾಕಿ. ಇದನ್ನು 3 ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ. ಅದು ಕರಗಿ ಲಿಕ್ವಿಡ್‌ನಂತೆ ಆಗುತ್ತದೆ. ಅದು ಸೆಟ್‌ ಆಗಲು ಕೆಲವು ಗಂಟೆಗಳ ಕಾಲ ಫ್ರೀಜರ್‌ನಲ್ಲಿಡಿ. ಈಗ ನಿಮ್ಮ ಲಿಪ್‌ ಬಾಮ್ ರೆಡಿ!

ಕಾಜಲ್

ನೀವು ಹೊರಗೆ ಹೊರಡಲು ಸಿದ್ಧರಾಗಿ ಕನ್ನಡಿಯ ಮುಂದೆ ನಿಂತಾಗ, ಮುಂದಲೆಯಲ್ಲಿ ಮಿರುಗುವ ಪುಟ್ಟ ಬೆಳ್ಳಿ ಕೂದಲು ಕಂಡುಬರುತ್ತದೆ. ಅದನ್ನು ಕತ್ತರಿಯಿಂದ ಕತ್ತರಿಸಿದರೂ ಬುಡದಲ್ಲಿ ಅದು ಇಣುಕುತ್ತಿರುತ್ತದೆ. ಇಂತಹ ಸಮಯದಲ್ಲಿ ಎಕ್ಸ್ ಪೈರ್‌ ಆದ ಕಾಜಲ್ ಕೆಲಸಕ್ಕೆ ಬರುತ್ತದೆ. ಅದರಿಂದ ನೀವು ಕ್ಷಣಮಾತ್ರದಲ್ಲಿ ನಿಮ್ಮ ಬಿಳಿಕೂದಲನ್ನು ಕಪ್ಪಾಗಿಸಬಹುದು.

ಗ್ಲಿಟರಿಂಗ್‌ ಕಾಸ್ಮೆಟಿಕ್‌

ಫೇಸ್‌ ಪೌಡರ್‌, ಐ ಶ್ಯಾಡೊ, ಬ್ಲಶ್‌ ಆನ್‌ಗಳು ಎಕ್ಸ್ ಪೈರ್‌ ಡೇಟ್‌ ಆಗಿದ್ದರೆ, ಪೇಂಟಿಂಗ್‌ಗೆ ಹೊಸ ರೂಪ ಒದಗಿಸಲು ಅಥವಾ ಕ್ರಾಫ್ಟ್ ಪೇಪರ್‌ನ್ನು ಮಿನುಗಿಸಲು ಬಳಸಬಹುದು. ಕಾಸ್ಮೆಟಿಕ್‌ ಪ್ರಾಡಕ್ಟ್ ನಲ್ಲಿ ಶೈನೀ ಎಫೆಕ್ಟ್ ಗಾಗಿ ಬಳಸಲಾಗುವ ಗ್ಲಿಟರ್‌ ನಿಮ್ಮ ಪೇಂಟಿಂಗ್‌ಗೆ ಮತ್ತಷ್ಟು ಶೋಭೆ ನೀಡುತ್ತದೆ.

ಮಸ್ಕರಾ

ಇತರ ಮೇಕಪ್‌ ಪ್ರಾಡಕ್ಟ್ ಗಳಿಗಿಂತ ಮಸ್ಕರಾ ಬಹು ಬೇಗನೆ ಎಕ್ಸ್ ಪೈರ್‌ ಡೇಟ್‌ ಮುಟ್ಟತ್ತದೆ. ಹೀಗಾಗಿ ಅದನ್ನು ಪೂರ್ತಿ ಬಳಸದೆಯೇ ಎಸೆಯಬೇಕಾಗುತ್ತದೆ. ಅದನ್ನು ರೀಯೂಸ್‌ ಮಾಡಲಾಗದ್ದಿದರೂ ಅದರ ಬ್ರಶ್‌ ನಿಮಗೆ ಸಹಾಯಕವಾಗುತ್ತದೆ. ಆ ಬ್ರಶ್‌ನ್ನು ಚೆನ್ನಾಗಿ ತೊಳೆದು ಇಟ್ಟುಕೊಂಡು ಐ ಬ್ರೋ ಬ್ರಶ್‌ ರೀತಿಯಲ್ಲಿ ಬಳಸಬಹುದು ಮತ್ತು ಐ ಲ್ಯಾಶಸ್‌ನ್ನು ಕರ್ಲ್ ಮಾಡಲು ಉಪಯೋಗಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ