ಇತ್ತೀಚಿನ ದಿನಗಳಲ್ಲಿ ಕಲರ್ಡ್‌ ಕೂದಲಿನ ಟ್ರೆಂಡ್‌ ಹೆಚ್ಚಾಗಿದೆ. ಕೆಲವು ಮಹಿಳೆಯರು ತಮ್ಮ ಕೂದಲನ್ನು ಸಂಪೂರ್ಣವಾಗಿ ಕಲರ್ ಮಾಡಿಸಲು ಇಷ್ಟಪಟ್ಟರೆ, ಇನ್ನೂ ಕೆಲವರು ಬೋಲ್ಡ್ ಕಲರ್‌ನಿಂದ ಹೈಲೈಟ್‌ ಮಾಡಲು ಮಾತ್ರ ಬಯಸುತ್ತಾರೆ.

ಕಲರ್ಡ್‌ ಹೇರ್‌ ನಿಮ್ಮ ಲುಕ್ಸ್ ನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಇಂದು ಮಹಿಳೆಯರು ಹೇರ್‌ ಕಲರ್‌ನಿಂದ ತಮ್ಮ ಕೂದಲಿಗೆ ಯಾವುದೇ ಹಾನಿಯಾಗದಿರಲಿ ಎಂದು ಹೇರ್‌ ಪ್ರಾಡಕ್ಟ್ ಅಮೋನಿಯಾ ಫ್ರೀ ಆಗಿದೆಯೇ ಎಂದು ಎಚ್ಚರಿಕೆಯಿಂದ ಇರುತ್ತಾರೆ. ಆದರೆ ಕೂದಲಿನ ರಕ್ಷಣೆಗೆ ಇಷ್ಟೇ ಕಾಳಜಿ ಸಾಲದು ಎಂದು ನಿಮಗೆ ತಿಳಿದಿದೆಯೇ? ಬಿಸಿಲು ನಿಮ್ಮ ಕಲರ್ಡ್‌ ಕೂದಲಿನ ಮೇಲೆ ದುಷ್ಪ್ರಭಾವ ಬೀರುತ್ತದೆ. ಬನ್ನಿ, ಈ ಬಗ್ಗೆ ವಿವರವಾಗಿ ತಿಳಿಯೋಣ :

ಬಿಸಿಲಿನ ಪ್ರಭಾವ ಅಪಾಯಕಾರಿ

ನಾವು ಬಿಸಿಲಿಗೆ ಹೋದಾಗ ಸೂರ್ಯನ ಹಾನಿಕಾರಕ UV ಕಿರಣಗಳು ನಮ್ಮ ಚರ್ಮಕ್ಕೆ ಹಾನಿಯುಂಟು ಮಾಡುವುದಲ್ಲದೆ, ಕೂದಲಿನ ಸೌಂದರ್ಯವನ್ನು ಹಾಳು ಮಾಡುತ್ತದೆ. ನೀವು ಕೂದಲನ್ನು ಕಲರ್‌ ಮಾಡಿಸಿದ್ದರೆ, ಅದು ಇನ್ನೂ ಅಪಾಯಕಾರಿ ಆಗಿರುತ್ತದೆ. ಕೂದಲಿಗೆ ಕಲರ್‌ ಮಾಡುವಾಗ ಮೊದಲು ಬ್ಲೀಚ್‌ ಮಾಡಲಾಗುತ್ತದೆ. ಇಂತಹ ಕೂದಲು ಸೂರ್ಯನ UV ಕಿರಣಗಳ ಸಂಪರ್ಕಕ್ಕೆ ಬಂದಾಗ ಬಹಳ ಬೇಗ ಸತ್ವಹೀನ ಮತ್ತು ನಿರ್ಜೀವವಾಗುತ್ತದೆ ಮತ್ತು ಕೂದಲಿನ ಸೌಂದರ್ಯ ಹಾಳಾಗುತ್ತದೆ. ಹೀಗಾಗದಂತೆ ತಡೆಯಲು ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಪಾರಾಗುವುದು ಹೇಗೆ ?

ಹಾಟ್‌ ಆಯಿಲ್ ಟ್ರೀಟ್‌ಮೆಂಟ್‌ : ಸಾಧಾರಣ ಕೂದಲಿಗಿಂತ ಕಲರ್ಡ್‌ ಕೂದಲಿಗೆ ಮಾಯಿಶ್ಚರೈಸರ್‌ನ ಅಗತ್ಯ ಹೆಚ್ಚಾಗಿರುತ್ತದೆ. ಆದ್ದರಿಂದ ಆಗಾಗ ಹಾಟ್‌ ಆಯಿಲ್ ‌ಟ್ರೀಟ್‌ಮೆಂಟ್‌ ಮಾಡುತ್ತಿರಿ. ಇದರಿಂದ ಬಿಸಿಲಿನಿಂದಾಗಿ ಕೂದಲು ಡ್ಯಾಮೇಜ್‌ ಆಗುವುದು ತಪ್ಪುತ್ತದೆ.

ಆಲ್ಕೋಹಾಲ್‌ ಫ್ರೀ ಪ್ರಾಡಕ್ಟ್ : ಕಲರ್ಡ್‌ ಕೂದಲನ್ನು ಬಿಸಿಲಿನ ಹಾನಿಕಾರಕ ಪ್ರಭಾವದಿಂದ ರಕ್ಷಿಸಬಲ್ಲ ಅನೇಕ ಪ್ರಾಡಕ್ಟ್ ಗಳು ಇಂದು ಮಾರುಕಟ್ಟೆಗೆ ಬಂದಿವೆ. ನಿಮ್ಮ ಕೂದಲಿನ ಟೈಪ್‌ಗೆ ಅನುಸಾರವಾಗಿ ನೀವು ಅದನ್ನು ಆರಿಸಿಕೊಳ್ಳಬಹುದು. ಆದರೆ ಕೊಳ್ಳುವಾಗ ಅದು ಅಮೋನಿಯಾ ಮತ್ತು ಆಲ್ಕೋಹಾಲ್ ‌ಫ್ರೀ ಆಗಿದೆಯೇ ಎಂದು ಗಮನಿಸಿ. ಇಲ್ಲವಾದರೆ ಪ್ರಯೋಜನದ ಬದಲು ನಷ್ಟವಾದೀತು.

ಸ್ಕಾರ್ಫ್‌ ಬಳಕೆ : ಬಿಸಿಲಿಗೆ ಹೋಗುವಾಗ ಕ್ಯಾಪ್‌ ಅಥವಾ ಸ್ಕಾರ್ಫ್‌ ಉಪಯೋಗಿಸಿ. ಇದರಿಂದ ಕೂದಲಿಗೆ ಬಿಸಿಲಿನ ಸಂಪರ್ಕ ತಪ್ಪುತ್ತದೆ ಮತ್ತು ಕೂದಲಿಗೆ ಹಾನಿಯಾಗುವ ಸಂಭವ ಕಡಿಮೆಯಾಗುತ್ತದೆ.

ಸೂಕ್ತ ಪ್ರಾಡಕ್ಟ್ಸ್ ಆಯ್ಕೆ : ಕಲರ್ಡ್‌ ಕೂದಲಿಗಾಗಿಯೇ ತಯಾರಿಸಲ್ಪಟ್ಟಿರುವ ಪ್ರಾಡಕ್ಟ್ ಗಳನ್ನೇ ಯಾವಾಗಲೂ ಬಳಸಿ. ಏಕೆಂದರೆ ಅ ಕಲರ್ಡ್‌ ಕೂದಲನ್ನು ಬಿಸಿಲಿನ ಪ್ರಭಾವದಿಂದ ರಕ್ಷಿಸಲೆಂದೇ ತಯಾರಿಸಲ್ಪಟ್ಟಿರುವುದಲ್ಲದೇ, ಇನ್ನೂ ಅನೇಕ ಸಮಸ್ಯೆಗಳನ್ನು ದೂರಗೊಳಿಸುತ್ತದೆ.

ಕೂದಲು ಹಾರಾಡದಿರಲಿ :  ಬಿಸಿಲಿಗೆ ಹೋಗುವಾಗ ಕೂದಲನ್ನು ಹಾರಾಡಲು ಬಿಡದೆ ಪೋನಿಟೇಲ್ ‌ಕಟ್ಟಿ. ಆಗ ಎಲ್ಲ ಕೂದಲು ಬಿಸಿಲಿನ ಸಂಪರ್ಕಕ್ಕೆ ಬರುವುದಿಲ್ಲ. ಇದರಿಂದ ಕೂದಲು ಡ್ಯಾಮೇಜ್‌ ಆಗುವ ಸಂಭವ ಕಡಿಮೆಯಾಗುತ್ತದೆ.

ಸ್ವಿಮಿಂಗ್‌ ಮಾಡುವಾಗ : ಸ್ವಿಮಿಂಗ್‌ ಮಾಡಲು ಹೊರಡುವ ಮೊದಲು ತಪ್ಪದೆ ಒಂದು ಒಳ್ಳೆಯ ಹೇರ್‌ ಪ್ರೊಟೆಕ್ಷನ್‌ ಸೀರಮ್ ಬಳಸಿ. ಏಕೆಂದರೆ ಸೂರ್ಯನ ಹಾನಿಕಾರಕ UV ಕಿರಣಗಳು ನೀರಿನ ಮೇಲೆ ಬಿದ್ದಾಗ ಅವುಗಳ ಹಾನಿಕಾರಕ ಪ್ರಭಾವ ಮತ್ತೂ ಹೆಚ್ಚುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ