ಚೋಕರ್ ಲೇಯರ್ಡ್ ನೆಕ್‌ಲೇಸ್
ಟಿಪಿಕಲ್ ಚೋಕರ್‌ನ ಸೆಟ್ ಇಂಡಿಯನ್ ಲುಕ್ ಒದಗಿಸುವ ಈ ನೆಕ್‌ಲೇಸ್ ತೂಕದಲ್ಲಿ ಟಿಪಿಕಲ್ ಚೋಕರ್‌ಗಿಂತ ಹಗುರವಾಗಿರುತ್ತದೆ. ಅದನ್ನು ನೀವು ಇಂಡಿಯನ್ ವೇರ್‌ನಲ್ಲಿ ಸೀರೆ ಉಟ್ಟಾಗ ಡೀಪ್ ನೆಕ್ ಬ್ಲೌಸ್‌ನೊಂದಿಗೆ ಹಾಗೂ ವೆಸ್ಟರ್ನ್ ವೇರ್‌ನಲ್ಲಿ ಹಾಫ್ ಶೋಲ್ಡರ್ ಟಾಪ್ ಮತ್ತು ಟ್ಯೂಬ್ ಡ್ರೆಸ್‌ನೊಂದಿಗೆ ಹಾಕಿಕೊಳ್ಳಬಹುದು.
ಹೆಡ್ ಚೇನ್
ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ ಸೀರೆ, ಲಹಂಗಾ ಚೋಲಿ, ಅನಾರ್ಕಲಿ ಡ್ರೆಸ್‌ಗಳ ಜೊತೆ ಹೆಡ್ ಚೇನ್ ಹಾಕಿಕೊಳ್ಳಬಹುದು.
ಟ್ಯಾಸ್ ಇಯರ್ ರಿಂಗ್ಸ್
2022ರ ಟ್ಯಾಸ್ ಇಯರ್ ರಿಂಗ್‌ಗಳನ್ನು ಇಂಡಿಯನ್ ಮತ್ತು ವೆಸ್ಟರ್ನ್, ಎರಡೂ ಡ್ರೆಸ್‌ಗಳೊಂದಿಗೆ ಧರಿಸಬಹುದು. ಇದರ ಲುಕ್‌ಹೆವಿ ಇರುವುದರಿಂದ ಇದನ್ನು ರೆಗ್ಯುಲರ್ ಆಗಿ ಬಳಸಲಾಗುವುದಿಲ್ಲ.
ಹ್ಯಾಂಡ್ ಹಾರ್ನೆಸ್
ನಿಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸಲು ಬ್ರೇಸ್‌ಲೆಟ್ ಬದಲು ಬೇರೆ ಏನನ್ನಾದರೂ ಟ್ರೈ ಮಾಡುವಿರಾದರೆ, ಹ್ಯಾಂಡ್ ಹಾರ್ನೆಸ್‌ಗೆ ನಿಮ್ಮ ಜ್ಯೂವೆಲರಿ ಬಾಕ್ಸ್ ನಲ್ಲಿ ವಿಶೇಷ ಸ್ಥಳಾವಕಾಶವಿರಲಿ.
ಲೆದರ್ ಕೋಟರ್ಸ್
ಹೈಹೀಲ್ ಸ್ಯಾಂಡಲ್ ಧರಿಸುವ ಕಾನ್ಛಿಡೆನ್ಸ್ ಹೊಂದಿದ್ದು, ನೀವು ಅದನ್ನು ಬಳಸುತ್ತಿದ್ದರೆ, ಪಾರ್ಟಿಗಳಿಗಾಗಿ ನಿಮ್ಮ ಶೂ ರಾಕ್‌ನಲ್ಲಿ ಲೆದರ್ ಕೋಟರ್ಸ್ ಕಲೆಕ್ಷನ್‌ನ್ನು ತಪ್ಪದೆ ಇರಿಸಿಕೊಳ್ಳಿ.
ಕರ್ಮಾ ಬ್ಯಾಂಗಲ್ಸ್
ಈ ಹೊಸ ವರ್ಷದಲ್ಲಿ ನೀವು ಸಾಧಾರಣ ಬಳೆಗಳ ಬದಲು `ಕರ್ಮಾ’ ಬ್ಯಾಂಗಲ್ಸ್ ಕೊಳ್ಳಿರಿ. ಈ ಬಳೆಗಳು ವೆಸ್ಟರ್ನ್ ವೇರ್, ಫಾರ್ಮಲ್ ವೇರ್ ಹಾಗೂ ಥ್ರೀ ಫೋರ್ತ್ ಸ್ಲೀವ್ ಲೆಂತ್, ಶರ್ಟ್ ಮತ್ತು ಹೈ ವೇಸ್ಟ್ ಸ್ಕರ್ಟ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ.
ಡಲ್ ಸಿಲ್ವರ್ ಹೆಡ್ ಕಫ್
ವೆಸ್ಟರ್ನ್ ವೇರ್‌ನೊಂದಿಗೆ ಬ್ಯಾಂಗಲ್ಸ್ ಅಥವಾ ಬ್ರೇಸ್‌ಲೆಟ್‌ನ್ನು ಬಿಟ್ಟು ಹೊಸದನ್ನು ಧರಿಸಲು ಬಯಸುವಿರಾದರೆ ಕಫ್‌ನ್ನು ಟ್ರೈ ಮಾಡಿ.
ಕ್ಲಾಸಿಕ್ ಪ್ಲಾಟ್‌ಫಾರ್ಮ್
ಉದ್ಯೋಗಸ್ಥ ಮಹಿಳೆಯರಿಗಾಗಿ ರೆಗ್ಯುಲರ್ ಫಾರ್ಮಲ್ ಫುಟ್‌ವೇರ್‌ನ ಬದಲು ಈ ವರ್ಷ ಕ್ಲಾಸಿಕ್ ಪ್ಲಾಟ್‌ಫಾರ್ಮ್ ಫ್ಯಾಷನ್‌ನಲ್ಲಿರುತ್ತದೆ. ಇದು ಕಂಫರ್ಟ್‌ನೊಂದಿಗೆ ಕ್ಲಾಸೀ ಲುಕ್ ನೀಡುತ್ತದೆ.
ಆಕ್ಸಿಡೈಸ್ಡ್ ರಿಂಗ್
ಈ ಸೀಸನ್‌ನಲ್ಲಿ ಗೋಲ್ಡ್ ಮತ್ತು ಸಿಲ್ವರ್ ಬದಲು ಆಕ್ಸಿಡೈಸ್ಡ್ ರಿಂಗ್ ನಿಮ್ಮ ಮೆಚ್ಚಿನದಾಗಲಿ. ಇದು ಕುರ್ತಾ, ಅನಾರ್ಕಲಿಯ ಜೊತೆಗಲ್ಲದೆ, ವೆಸ್ಟರ್ನ್ ಟಾಪ್, ಮ್ಯಾಕ್ಸಿ ಡ್ರೆಸ್‌ಗೂ ಸಹ ಮ್ಯಾಚ್ ಆಗುತ್ತದೆ.
ಬೋಹೋ ನೆಕ್ಪೀಸ್
ಇದು ಒಂದು ಬಗೆಯ ಇಂಡೊವೆಸ್ಟರ್ನ್ ಜ್ಯೂವೆಲರಿ ಆಗಿದೆ. ಇದನ್ನು ಇಂಡಿಯನ್, ವೆಸ್ಟರ್ನ್ ಔಟ್‌ಫಿಟ್ಸ್ ನೊಂದಿಗಲ್ಲದೆ, ಇಂಡೋ ವೆಸ್ಟರ್ನ್ ವೇರ್‌ನೊಂದಿಗೂ ಧರಿಸಬಹುದು.
ಚಾಂದ್ ಬಾಲಿ
ನೀವು ಚಾಂದ್ ಬಾಲಿಯನ್ನು ಇಷ್ಟಪಡುವವರಾಗಿದ್ದರೆ, ಇದೋ ನಿಮಗೊಂದು ಸಿಹಿಸುದ್ದಿ. ಏನೆಂದರೆ ಇದರ ಫ್ಯಾಷನ್ ಈಗ ಮರಳಿ ಬಂದಿದೆ. ಹಾಫ್ ಚಾಂದ್ ಬಾಲಿ ಕೂಡ ಇಂದು ಬೇಡಿಕೆಯಲ್ಲಿದೆ.
ಟ್ರೆಂಡೀ ಬ್ಯಾಕ್ ಪ್ಯಾಕ್
ಫ್ಯಾಷನೆಬಲ್ ವೇರ್‌ನೊಂದಿಗೆ ಸ್ಟೈಲಿಶ್ ಜ್ಯೂವೆಲರಿ ಧರಿಸಿದಾಗ ನಿಮಗೆ ಸೂಪರ್ ಲುಕ್ ದೊರೆಯುವುದರಲ್ಲಿ ಸಂದೇಹವಿಲ್ಲ. ಆದರೆ ನಿಮ್ಮ ಕೈನಲ್ಲಿ ಮಾಮೂಲಿ ಲ್ಯಾಪ್‌ಟಾಪ್ ಬ್ಯಾಗ್ ಇದ್ದರೆ, ನಿಮ್ಮ ಪರ್ಸನಾಲಿಟಿ ಮಂಕಾಗಿ ತೋರುತ್ತದೆ. ಆದ್ದರಿಂದ ಈಗ ಲ್ಯಾಪ್‌ಟಾಪ್‌ಗಾಗಿ ಟ್ರೆಂಡಿ ಬ್ಯಾಕ್ ಪ್ಯಾಕ್ ಖರೀದಿಸಿ.
ಕಾಲರ್ ಚೋಕರ್
ಇಂಡಿಯನ್ ವೇರ್‌ನೊಂದಿಗೆ ಧರಿಸುವ ಚೋಕರ್‌ನ್ನು ನೀವೀಗ ವೆಸ್ಟರ್ನ್ ವೇರ್‌ನೊಂದಿಗೂ ಧರಿಸಬಹುದು. ಸೂಪರ್ ಸ್ಟೈಲಿಶ್ ಲುಕ್‌ಗಾಗಿ ವೆಸ್ಟರ್ನ್ ಟ್ಯೂಬ್, ಹಾಫ್ ಶೋಲ್ಡರ್ ಟಾಪ್, ಡ್ರೆಸ್ ಅಥವಾ ಗೌನ್‌ನೊಂದಿಗೆ ಇದನ್ನು ಧರಿಸಬಹುದು.
ಹ್ಯಾಂಡಲ್ ಗೇರ್
ಬೈತಲೆ ಬೊಟ್ಟು ಅಥವಾ ಹೆಡ್ ಚೇನ್ ಬದಾಲಾಗಿ ಹೊಸದನ್ನು ಟ್ರೈ ಮಾಡುವಿರಾದರೆ ಹೆಡ್‌ಗೇರ್‌ನ್ನು ನಿಮ್ಮ ವ್ಯಾನಿಟಿ ಬಾಕ್ಸ್ ನಲ್ಲಿ ಇರಿಸಿಕೊಳ್ಳಿ. ಇದು ನೋಟ ಮತ್ತು ತೂಕಗಳಲ್ಲಿ ಅವೆರಡಕ್ಕೆ ಮಧ್ಯಮರ್ತಿಯಾಗಿರುತ್ತದೆ.
ಕಲರ್‌ಫುಲ್ ಕಫ್ ಇಂಡಿಯನ್‌ವೇರ್‌ನೊಂದಿಗೆ ಧರಿಸಬಲ್ಲಂತಹ ಕಫ್ಸ್ ಹೆಚ್ಚಿಲ್ಲ. ಅದಕ್ಕಾಗಿ 2022ರ ಹೊಸ ವರ್ಷದಲ್ಲಿ ಕಲರ್‌ಫುಲ್ ಥಿನ್ ಕಫ್‌ನ್ನು ವಿಶೇಷವಾಗಿ ಹೊರತರಲಾಗಿದೆ.
ಟ್ರೆಂಡಿ ಜುಮಕಿ
ಯಾವಾಗಲೂ ಫ್ಯಾಷನ್‌ನಲ್ಲಿರುವ ಜುಮಕಿಗಳು 2022ರಲ್ಲೂ ಟ್ರೆಂಡ್‌ನಲ್ಲಿವೆ. ಆದರೆ ಈ ಸಲ ವೈಶಿಷ್ಟ್ಯವಿರುವುದು ಅವುಗಳ ಮೆಟಲ್ ಮೆಟೀರಿಯಲ್ ಮತ್ತು ಕಲರ್‌ಫುಲ್ ಲುಕ್ಸ್ನಲ್ಲಿ.
ಬಿಗ್ ಕ್ಲಚ್
ಕ್ಲಚ್‌ನ ಕ್ಯೂಟ್ ಲುಕ್ ನಿಮಗೆ ಪರ್ಫೆಕ್ಟ್ ಪಾರ್ಟಿ ಲುಕ್ ನೀಡುತ್ತದೆ. ಸಾಮಾನ್ಯವಾಗಿ ದೊರೆಯುವ ಚಿಕ್ಕ ಅಳತೆಯ ಕ್ಲಚ್‌ನಲ್ಲಿ ನಿಮ್ಮ ವಸ್ತುಗಳು ಹಿಡಿಯಲಾರವು. ಆದ್ದರಿಂದ 2022ರಲ್ಲಿ ನಿಮಗೆ ದೊಡ್ಡ ಅಳತೆಯ ಕ್ಲಚ್‌ಗಳು ಸಾಕಷ್ಟು ದೊರೆಯುವವು. ಅದರಲ್ಲಿ ನಿಮ್ಮ ವಸ್ತುಗಳನ್ನೆಲ್ಲ ಇರಿಸಿಕೊಂಡು ನೀವು ಪಾರ್ಟಿಗೆ ಹೋಗಬಹುದು.
– ಗೃಹಶೋಭಾ ಪ್ರತಿನಿಧಿ