ಜನ್ಮ ತಾಳಿದ ನಂತರ ಕೊನೆಯುಸಿರು ಎಳೆಯುವವರೆಗೆ ಮನುಷ್ಯ ನೂರಾರು ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಆ ಕಾಯಿಲೆಗಳು ಮಾರಣಾಂತಿಕವಾಗಬಹುದು. ಅವುಗಳ ಹಿಡಿತದಿಂದ ಪಾರಾಗಲು ಸ್ಟೆಮ್ ಸೆಲ್ಸ್ ಒಂದು ಕವಚದಂತೆ ಕೆಲಸ ಮಾಡುತ್ತದೆ. ಸ್ಟೆಮ್ ಸೆಲ್ಸ್ ಮೂಲಕ ಮೆಡಿಕಲ್ ಸೈನ್ಸ್ ನ ಕ್ಷೇತ್ರದಲ್ಲಿ ಇಂತಹ ಅನೇಕ ಕಾರ್ಯಗಳಿಗೆ ಅಂತಿಮ ಪರಿಣಾಮ ಕೊಡಲಾಗುತ್ತಿದೆ. ಅದರ ಬಗ್ಗೆ 50 ವರ್ಷಗಳ ಹಿಂದೆ ಕಲ್ಪನೆಯನ್ನೂ ಮಾಡಿಕೊಳ್ಳವಾಗುತ್ತಿರಲಿಲ್ಲ. ಸ್ಟೆಮ್ ಸೆಲ್ಸ್ ಮೆಡಿಕಲ್ ಸೈನ್ಸ್ ನ ಚಿತ್ರಣವನ್ನೇ ಬದಲಿಸಿಬಿಟ್ಟಿದೆ. ಬನ್ನಿ, ಸ್ಟೆಮ್ ಸೆಲ್ಸ್ ಎಂದರೇನು? ಕಾಯಿಲೆಯನ್ನು ದೂರ ಮಾಡಲು ಅವನ್ನು ಹೇಗೆ ಉಪಯೋಗಿಸುವುದೆಂದು ತಿಳಿಯೋಣ.
ಸ್ಟೆಮ್ ಸೆಲ್ಸ್
ಸ್ಟೆಮ್ ಸೆಲ್ಸ್ ಮನುಷ್ಯನ ಶರೀರದ ಮಾಸ್ಟರ್ ಸೆಲ್ಸ್ ಆಗಿವೆ. ಇನ್ನು ಮದರ್ ಸೆಲ್ಸ್ ಎಂದೂ ಕರೆಯುತ್ತಾರೆ. ಈ ಸೆಲ್ಸ್ ಮೂಲಕ ಇತರ ಅನೇಕ ಪ್ರಕಾರಗಳ ಸೆಲ್ಸ್ ಗಳು ಸೃಷ್ಟಿಯಾಗುತ್ತವೆ. ಅವು ಮನುಷ್ಯನ ಶರೀರದಲ್ಲಿರುವ ವಿಭಿನ್ನ ಊತಕಗಳು ಹಾಗೂ ಅಂಗಗಳನ್ನು ರಿಪೇರಿ ಮಾಡುತ್ತವೆ. ಸ್ಟೆಮ್ ಸೆಲ್ಸ್ ಹೊಕ್ಕುಳು ಬಳ್ಳಿ ಮತ್ತು ಹೊಕ್ಕುಳು ಬಳ್ಳಿಯ ರಕ್ತದಲ್ಲಿ ಸಿಗುತ್ತವೆ. ಇವು ಮನುಷ್ಯನ ಶರೀರದಲ್ಲಿ ರಕ್ತದ ಉತ್ಪತ್ತಿ ಮತ್ತು ಇಮ್ಯೂನ್ಸಿಸ್ಟಂನ್ನು ರಕ್ಷಿಸುತ್ತದೆ. ಸ್ಟೆಮ್ ಸೆಲ್ಸ್ ಗಳಲ್ಲಿ ಮಾನವನ ದೇಹದಲ್ಲಿ ಸಿಗುವ ವಿಭಿನ್ನ ರೀತಿಯ ಕೋಶಗಳಲ್ಲಿನ ವ್ಯತ್ಯಾಸ ತಿಳಿಯುವ ಅದ್ವಿತೀಯ ಕ್ಷಮತೆ ಇರುತ್ತದೆ.
ಕಾರ್ಡ್ಬ್ಲಡ್ ಮತ್ತು ಕಾರ್ಡ್ಬ್ಲಡ್ ಸ್ಟೆಮ್ ಸೆಲ್ಸ್
ಕಾರ್ಡ್ಬ್ಲಡ್ನ ಉದ್ದೇಶ ಹೊಕ್ಕುಳು ಬಳ್ಳಿಯನ್ನು ಕತ್ತರಿಸಿದ ನಂತರ ಅದರಲ್ಲಿ ಉಳಿಯುವ ರಕ್ತದೊಂದಿಗೆ ಇರುತ್ತದೆ. ಹೆಚ್ಚಾಗಿ ಇದನ್ನು ಚಿಕಿತ್ಸಾ ತ್ಯಾಜ್ಯದ ರೂಪದಲ್ಲಿ ಎಸೆಯಲಾಗುತ್ತದೆ. ಮಗುವಿನ ಹೊಕ್ಕುಳು ಬಳ್ಳಿಯ ರಕ್ತ ಹಿಮೆಟೊ ಪೊಯಿಟಿಕ್ ಸ್ಟೆಮ್ ಸೆಲ್ಸ್ ನ ಮಹತ್ವಪೂರ್ಣ ಸ್ರೋತನಾಗಿದೆ. ಅದು ರಕ್ತ ಮತ್ತು ಕಾಯ್ದಿಡು ವ್ಯವಸ್ಥೆಯಿರುವ ಕೋಶಗಳನ್ನು ತುಂಬಿಸುತ್ತದೆ. ಹೊಕ್ಕುಳು ಬಳ್ಳಿಯ ರಕ್ತ ಸ್ಟೆಮ್ ಸೆಲ್ಸ್ ಗಳಿಗೆ ಅನೇಕ ರೀತಿಯ ಕ್ಯಾನ್ಸರ್ ಮತ್ತು ರಕ್ತ ದೋಷಗಳನ್ನು ಸೇರಿದಂತೆ ಇತರ ಅನೇಕ ಕಾಯಿಲೆಗಳ ಯಶಸ್ವಿ ಚಿಕಿತ್ಸೆಗೂ ಮಹತ್ವಪೂರ್ಣ ಮತ್ತು ಲಾಭಕಾರಿಯೆಂದು ಪರಿಗಣಿಸಲಾಗಿದೆ. ಮಗುವಿನ ಹೊಕ್ಕುಳು ಬಳ್ಳಿಯನ್ನು ಬ್ಯಾಂಕ್ನಲ್ಲಿ ಇಡುವ ಲಾಭಗಳು ವೈದ್ಯರು ಲ್ಯುಕೇಮಿಯಾ ಮತ್ತು ಲಿಂಪೇಮಾ ಸೇರಿದಂತೆ ಇತರ ಅನೇಕ ರೋಗಗಳಿಗೆ ಚಿಕಿತ್ಸೆ ಮಾಡಲು ಈ ಸ್ಟೆಮ್ ಸೆಲ್ಸ್ ಉಪಯೋಗಿಸುತ್ತಾರೆ.
ಹೊಕ್ಕುಳು ಬಳ್ಳಿ ಟಿಶ್ಯೂಸ್ ಸ್ಟೆಮ್ ಸೆಲ್ಸ್
ಗರ್ಭಾಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಮಧ್ಯೆ ಹೊಕ್ಕುಳು ಬಳ್ಳಿ ಒಂದು ಜೀವನ ರೇಖೆಯ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ. ಮಗು ಹುಟ್ಟಿದ ನಂತರ ಈ ಬಳ್ಳಿಯನ್ನು ಕತ್ತರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಚಿಕಿತ್ಸಾ ತ್ಯಾಜ್ಯವೆಂದು ತಿಳಿದು ಬಿಸಾಡಲಾಗುತ್ತದೆ. ಆದರೆ ಹೊಕ್ಕುಳು ಬಳ್ಳಿ ಊತಕ ಸ್ಟೆಮ್ ಸೆಲ್ಸ್ ಗೆ ವೈವಿಧ್ಯತೆ ಕೊಡುತ್ತದೆ. ಅದರಿಂದ ಕಾಯಿಲೆಗಳ ಒಂದು ವ್ಯಾಪಕ ಶ್ರೇಣಿಯ ಚಿಕಿತ್ಸೆ ಮಾಡುವ ಸಾಮರ್ಥ್ಯ ಹೆಚ್ಚುತ್ತದೆ. ಇವುಗಳಲ್ಲಿ ಕೆಲವು ಮೆಸೆನ್ಕೈಮ್ ಸ್ಟೆಮ್ ಸೆಲ್ಸ್ ಎಪಿಥೆಲಿಯ್ಸ್ಟೆಮ್ ಸೆಲ್ಸ್ ಇರುತ್ತವೆ.
ಮೆಸೆನ್ಕೈಮ್ ಸ್ಟೆಮ್ ಸೆಲ್ಸ್
ವಿಭಿನ್ನ ರೋಗಗಳ ಚಿಕಿತ್ಸೆಯಲ್ಲಿ ಮಹತ್ವಪೂರ್ಣ ಪಾತ್ರ ನಿಭಾಯಿಸುತ್ತವೆ. ಒಂದು ಅಧ್ಯಯನದಿಂದ ತಿಳಿದುಬಂದಿದ್ದು ಏನೆಂದರೆ ಈ ಸ್ಟೆಮ್ ಸೆಲ್ಸ್ ಗಳಲ್ಲಿ ಮೂಳೆಗಳು, ಮಾಂಸಖಂಡಗಳು ಮತ್ತು ನಾಡಿ ಕೋಶಗಳನ್ನು ಪುನರ್ ವ್ಯವಸ್ಥೆ ಮಾಡುವ ಗುಣವಿದೆ. ಈ ಸ್ಟೆಮ್ ಸೆಲ್ಸ್ ಬೆನ್ನುಮೂಳೆಯ ಗಾಯಗಳು ಮತ್ತು ಮೆದುಳಿನ ಆಘಾತವನ್ನು ವಾಸಿ ಮಾಡುತ್ತವೆ. ಎಪಿಥೆಲಿಯ್ ಸ್ಟೆಮ್ ಸೆಲ್ಸ್ ಬಹಳ ನಾಜೂಕಾಗಿರುತ್ತವೆ. ಅವು ತ್ವಚೆ ಹಾಗೂ ಲಿವರ್ನ ಆಸುಪಾಸಿನಲ್ಲಿ ಇರುತ್ತವೆ.
ಮಗುವಿನ ಕಾರ್ಡ್ಬ್ಲಡ್ನ ಉಪಯೋಗ
ಮಗುವಿನ ಹೊಕ್ಕುಳು ಬಳ್ಳಿಯಿಂದ ಕೇವಲ ಅದರ ಕಾಯಿಲೆಯಷ್ಟೇ ಅಲ್ಲ, ಕುಟುಂಬದ ಇತರ ಸದಸ್ಯರು ಕಾಯಿಲೆ ಬಿದ್ದಾಗಲೂ ಉಪಚರಿಸಬಹುದು. ವಿಶೇಷವಾಗಿ ಮಗುವಿನ ಹೊಕ್ಕುಳಿನಲ್ಲಿರುವ ಬ್ಲಡ್ ಯೂನಿಟ್ ಅದರ ತಮ್ಮ ತಂಗಿಯರಿಗೆ ಉಪಯೋಗಿಸಿದರೆ ಶೇ.60ರಷ್ಟು ಹೆಚ್ಚು ವೇಗವಾಗಿ ಚಿಕಿತ್ಸೆಯಾಗುತ್ತದೆ.
ಸ್ಟೆಮ್ ಸೆಲ್ಸ್ ನ ಲಾಭಗಳು
ಪ್ರತಿ 200 ಜನರಲ್ಲಿ ಒಬ್ಬರಿಗೆ ತಮ್ಮ ಜೀವಿತಾವಧಿಯಲ್ಲಿ ಸ್ಟೆಮ್ ಸೆಲ್ಸ್ ಉಪಯೋಗಿಸಬೇಕಾಗುತ್ತದೆ.
ಭಾರತದಲ್ಲಿ ಉಚ್ಚ ಮಟ್ಟದ 10 ಸಾಮಾನ್ಯ ಕ್ಯಾನ್ಸರ್ ರೋಗಗಳಲ್ಲಿ ಹಾಜ್ಕಿನ್ಸ್ ಲಿಂಪೇಮಾ ಎಂಬ ರೋಗದ ಚಿಕಿತ್ಸೆಯನ್ನು ಸ್ಟೆಮ್ ಸೆಲ್ಸ್ ಮೂಲಕ ಮಾಡಲಾಗುತ್ತದೆ.
ಭಾರತದ ಉಚ್ಚ ಮಟ್ಟದ 5 ಸಾಮಾನ್ಯ ಬಾಲ್ಯಾವಸ್ಥೆಯಲ್ಲಿ ಉಂಟಾಗುವ ಕ್ಯಾನ್ಸರ್ ರೋಗಗಳಲ್ಲಿ 2 ರೋಗ ಲ್ಯುಕೇಮಿಯಾ ಮತ್ತು ಲಿಂಪೇಮಾ ಎಂಬ ಕಾಯಿಲೆಯ ಚಿಕಿತ್ಸೆಯನ್ನು ಸ್ಟೆಮ್ ಸೆಲ್ಸ್ ಮೂಲಕ ಮಾಡಬಹುದು.
ವಿಶ್ವದಲ್ಲಿ 500 ಮಕ್ಕಳಲ್ಲಿ 1 ಮಗು ಸೆರೆಬ್ರ್ಪಾಲ್ಸಿಗೆ ಬಲಿಯಾಗುತ್ತದೆ. ಅದು ಹುಟ್ಟಿದಾಗ ಉಂಟಾದ ಮೆದುಳಿಗೆ ಸಂಬಂಧಿಸಿದ ಕಾಯಿಲೆ. ಸೆಲ್ಯುಲರ್ ಚಿಕಿತ್ಸೆಯೊಂದಿಗೆ ಸೆರೆಬ್ರ್ಪಾಲ್ಸಿಗೆ ಚಿಕಿತ್ಸೆ ಮಾಡಬಹುದು.
ಅಮೆರಿಕಾದಲ್ಲಿ ಹುಟ್ಟಿದ ಪ್ರತಿ 6-8 ಮಕ್ಕಳಲ್ಲಿ 1 ಮಗು ಆಟಿಸಂ ಸ್ಪೆಕ್ಟ್ರಂಗೆ ಗುರಿಯಾಗಿರುತ್ತದೆ. ಅದಕ್ಕೆ ಕ್ಲಿನಿಕ್ ಟ್ರಯಲ್ ಮೂಲಕ ಚಿಕಿತ್ಸೆ ಸಾಧ್ಯವಿದೆ.
– ಡಾ. ಸುಧಾ