ದಿನೇದಿನೇ ಹೆಚ್ಚುತ್ತಿರುವ ಬೆಲೆ ಗಮನಿಸಿದರೆ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಬೇಕಾದುದು ಅನಿವಾರ್ಯ. ಹೀಗಾಗಿ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಅನೇಕ ಅವಕಾಶಗಳಿವೆ. ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಒಂದು ಉತ್ತಮ ಆಯ್ಕೆ. ಮ್ಯೂಚುವಸ್ ಫಂಡ್ ಯೋಜನೆಗಳ ಆಧಾರದಿಂದ ಖರೀದಿಸಲಾದ ಯೂನಿಟ್ಗಳಿಂದ ದೊರಕಿದ ಒಟ್ಟು ಮೊತ್ತದ ಹಣವನ್ನು ಫಂಡ್ ಮ್ಯಾನೇಜರ್ ವಿವಿಧ ಕಡೆ ಹೂಡಿಕೆ ಮಾಡುತ್ತಾನೆ. ಅಂದರೆ ಷೇರ್, ಡಿಬೆಂಚರ್ ಅಥವಾ ಓಪನ್ ಬಜಾರ್ನಲ್ಲಿ ಹೂಡಿಕೆ ಮಾಡುತ್ತಾನೆ. ಈ ರೀತಿ ಸಾಧಾರಣ ಜನರಿಗೆ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಉತ್ತಮ ಮಾಧ್ಯಮವಾಗಿದೆ. ಹೂಡಿಕೆದಾರರ ಅಗತ್ಯಗಳು, ಗುರಿ, ವಯಸ್ಸು, ಹಣಕಾಸು ಸ್ಥಿತಿ, ರಿಸ್ಕ್ ಫ್ಯಾಕ್ಟರ್ ಇತ್ಯಾದಿಗಳನ್ನು ಆಧರಿಸಿ ಮ್ಯೂಚುವಲ್ ಫಂಡ್ನ ಅನೇಕ ಯೋಜನೆಗಳಿವೆ. ಯಾವ ಸ್ಕೀಮಿನಲ್ಲಿ ಹೂಡಿಕೆದಾರರು ಎಷ್ಟು ಹಣ ಹೂಡುತ್ತಾರೋ, ಅವರಿಗೆ ಅವರ ಹೂಡಿಕೆಯ ಪ್ರಕಾರ ಯೂನಿಟ್ಸ್ ಸಿಗುತ್ತವೆ. ಪ್ರತ್ಯೇಕ ಯೂನಿಟ್ನ ಬೆಲೆಯನ್ನು ಮ್ಯೂಚುವಲ್ ಫಂಡ್ನ ಪೋರ್ಟ್ ಪೋಲಿಯೊ ಮಾರುಕಟ್ಟೆಯಲ್ಲಿ ಬದಲಾಗುತ್ತಿರುತ್ತದೆ.
ಮ್ಯೂಚುವಲ್ ಫಂಡ್ನ ಪ್ರಕಾರಗಳು
ಮ್ಯೂಚುವಲ್ ಫಂಡ್ಸ್ ಕ್ಲೋಸ್ ಎಂಡೆಡ್ ಹಾಗೂ ಓಪನ್ ಎಂಡೆಡ್ ಆಗಿರುತ್ತದೆ. ಕ್ಲೋಸ್ಎಂಡೆಂಡ್ ಮ್ಯೂಚುವಲ್ ಫಂಡ್ನ್ನು ನ್ಯೂ ಫಂಡ್ ಆಫರ್ ಮೂಲಕ ಖರೀದಿಸಿ, ನಂತರ ಪರಿಪಕ್ವಗೊಂಡಾಗ ಅದನ್ನು ಮಾರಬಹುದು. ಆದರೆ ಓಪನ್ ಎಂಡೆಡ್ ಸ್ಕೀಮಿನಲ್ಲಿ ಹೂಡಿಕೆ ಅಥವಾ ಹೂಡಿಕೆಯ ಬಿಕರಿಯನ್ನು ಯಾವಾಗ ಬೇಕಾದರೂ ಮಾಡಬಹುದು. ಹೂಡಿಕೆದಾರರು ತಮ್ಮ ಅಗತ್ಯಗಳ ಅನುಸಾರ ಇದರಿಂದ ಲಾಭ ಪಡೆಯಬಹುದು. ಮ್ಯೂಚುವಲ್ ಫಂಡ್ನ ಮೇಲ್ವಿಚಾರಣೆಯನ್ನು ಒಂದು ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಮಾಡುತ್ತದೆ. ಫಂಡ್ನ್ನು ಆರಿಸಿಕೊಳ್ಳುವಾಗ, ಯಾವ ಫಂಡ್ನಲ್ಲಿ ಹಣ ಹೂಡಲಿದ್ದೀರೋ, ಆ ಫಂಡ್ ಕುರಿತಾಗಿ ತಿಳಿದುಕೊಳ್ಳಬೇಕಾದುದು ಎಂದರೆ, ಅವರು ಆ ಹಣವನ್ನು ಎಲ್ಲೆಲ್ಲಿ ತೊಡಗಿಸಲಿದ್ದಾರೆಂಬುದು.
ಲಿಕ್ವಿಡ್ ಫಂಡ್ : 36 ತಿಂಗಳ ಅವಧಿಗೆ ಹೂಡಿಕೆ ಮಾಡಬೇಕಿದ್ದರೆ, ಲಿಕ್ವಿಡ್ ಫಂಡ್ನ್ನೇ ಆರಿಸಿ. ಇದು 91 ದಿನಗಳ ಒಳಗೆ ಮೆಚ್ಯೂರ್ಆಗುತ್ತದೆ.
ತೆರಿಗೆ ವಿನಾಯಿತಿಯ ಯೋಜನೆಗಳು : ಈ ಯೋಜನೆಗಳು ಹೂಡಿಕೆದಾರರಿಗೆ ಕಾಲಾನುಕಾಲಕ್ಕೆ ಟ್ಯಾಕ್ಸ್, ನಿಯಮಗಳ ಅನ್ವಯ, ಟ್ಯಾಕ್ಸ್ ನಿಂದ ಮುಕ್ತಿ ಕೊಡಿಸುತ್ತವೆ ಹಾಗೂ ಮ್ಯೂಚುವಲ್ ಫಂಡ್ಗಳ ಮಾಧ್ಯಮದಿಂದ ಈಕ್ವಿಟಿ ಷೇರುಗಳಲ್ಲಿ ಸುದೀರ್ಘ ಕಾಲದ ಹೂಡಿಕೆಗೆ ಪ್ರೋತ್ಸಾಹ ನೀಡುತ್ತವೆ. ನೀವು ದೀರ್ಘಾವಧಿಗಾಗಿ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಬಯಸಿದರೆ, ್ಹಪಿ ಅಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ಗೆ ತಕ್ಕಂತೆ ಹೂಡಿಕೆ ಮಾಡಬಹುದು. ಇದರಲ್ಲಿ 1 ಕಂತಿನ ನಿಶ್ಚಿತ ಮೊತ್ತವನ್ನು ಒಂದು ಸ್ಕೀಮಿನಲ್ಲಿ ನಿಯಮಿತ ರೂಪದಲ್ಲಿ ಹೂಡಿಕೆ ಮಾಡಬೇಕು. ಈ ಸ್ಕೀಂ ನಿಮಗೆ ಒಂದೇ ಸಲ ಭಾರಿ ಮೊತ್ತವನ್ನು ಹೂಡುವ ಬದಲು ಮ್ಯೂಚುವಲ್ ಫಂಡ್ನಲ್ಲಿ ಕಡಿಮೆ ಅವಧಿಗೆ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.
ಡೆಟ್ ಫಂಡ್ : ಈ ತರಹದ ಫಂಡ್ನ ಉದ್ದೇಶ ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆಯ ಮೂಲಕ ಲಾಭ ಕೊಡಿಸುತ್ತದೆ. ಸಾಮಾನ್ಯವಾಗಿ ಇಂಥ ಯೋಜನೆಗಳ ಹಣ ಸರ್ಕಾರಿ ಕ್ಷೇತ್ರ, ಬಾಂಡ್ಸ್ ಹಾಗೂ ಕಾರ್ಪೊರೇಟ್ ಡಿಬೆಂಚರ್ಗಳಲ್ಲಿ ತೊಡಗಿಸುವುದಾಗಿರುತ್ತದೆ.
ಬ್ಯಾಲೆನ್ಸ್ಡ್ ಫಂಡ್ : ಈ ಫಂಡ್ ಹೂಡಿಕೆಯ ಬೆಟರ್ ಮಾಧ್ಯಮ ಎನಿಸಿದೆ. ಈ ತರಹದ ಫಂಡ್ಗಳಲ್ಲಿ ಒಂದು ನಿಶ್ಚಿತ ಅನುಪಾತದಲ್ಲಿ ಹೂಡಿಕೆದಾರರ ಹಣ ಈಕ್ವಿಟಿ ಡೆಟ್, ಎರಡೂ ತರಹದ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದು. ತಮ್ಮ ಹಣ ನಿಧಾನವಾಗಿ ಬೆಳೆಯುವುದನ್ನು ನೋಡಬಯಸುವವರಿಗೆ ಈ ಫಂಡ್ ಹೆಚ್ಚು ಸೂಕ್ತ.
ಈಕ್ವಿಟಿ ಫಂಡ್ : ದೀರ್ಘಾವಧಿಗಾಗಿ ಹಣ ತೊಡಗಿಸಿ ಲಾಭ ಪಡೆಯ ಬಯಸುವ ಹೂಡಿಕೆದಾರರಿಗೆ ಇದು ಬಲು ಉಪಯುಕ್ತ. ಈ ಸ್ಕೀಮಿನ ಆಧಾರದಿಂದ ನಿಮ್ಮ ಹಣದ ಪ್ರಮುಖ ಭಾಗವನ್ನು ಷೇರುಗಳಲ್ಲಿ ತೊಡಗಿಸಲಾಗುತ್ತದೆ.
ಮ್ಯೂಚುವಲ್ ಫಂಡ್ನ ಲಾಭಗಳು
ಇದರಲ್ಲಿ ಹಣ ಹೂಡುವುದರಿಂದ ನೀವು ಅನುಭವಿ ಹಾಗೂ ತಜ್ಞರ ಸೇವೆಗಳನ್ನು ಪಡೆಯಬಹುದು.
ಒಂದು ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದರಿಂದ ನೀವು ಒಂದೇ ಸಲಕ್ಕೆ ಅನೇಕ ಕಂಪನಿಗಳಲ್ಲಿ ಹಣ ತೊಡಗಿಸಿಕೊಂಡಂತಾಗುತ್ತದೆ.
ಮ್ಯೂಚುವಲ್ ಫಂಡ್ ದೀರ್ಘಾವಧಿಯಿಂದ ಹಿಡಿದು ಅಲ್ಪಾವಧಿಯವರೆಗೂ ರಿಟರ್ನ್ಸ್ ಲಭ್ಯವಿವೆ.
ಓಪನ್ ಎಂಡೆಡ್ ಯೋಜನೆಯಡಿ ತಕ್ಷಣ ಸಂಬಂಧಿತ ಮೌಲ್ಯದ ಮೇಲೆ ನಿಮ್ಮ ಹಣ ಪಡೆಯಬಹುದು. ಕ್ಲೋಸ್ ಎಂಡೆಡ್ರಿಟೈರ್ಮೆಂಟ್ ಯೋಜನೆಯಲ್ಲಿ ಸ್ಟಾಕ್ ಎಕ್ಸ್ ಚೇಂಜ್ನಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆಯ ಮೌಲ್ಯಕ್ಕೆ ತಕ್ಕಂತೆ ನೀವು ನಿಮ್ಮ ಯೂನಿಟ್ಗಳನ್ನು ಮಾರಾಟ ಮಾಡಬಹುದು.
ಮ್ಯೂಚುವಲ್ ಫಂಡ್ ನಿಮಗೆ ನಿಮ್ಮ ವಿಭಿನ್ನ ಗುರಿಗಳು ಮತ್ತು ಅಗತ್ಯಗಳಿಗೆ ತಕ್ಕಂತೆ ವಿವಿಧ ಬಗೆಯ ಯೋಜನೆಗಳಲ್ಲಿ ತೊಡಗಿಕೊಳ್ಳಲು ಅವಕಾಶ ನೀಡುತ್ತದೆ.
ಹಜ್ ಮೂಲಕ ರೆಜಿಸ್ಟ್ರೇಷನ್ ಆಗುವ ಕಾರಣ, ಮ್ಯೂಚುವಲ್ ಫಂಡ್ಸ್ ಹಜ್ ಮೂಲಕ ಹೂಡಿಕೆದಾರರ ಹಿತರಕ್ಷಣೆಯನ್ನು ಗಮನದಲ್ಲಿರಿಸಿಕೊಂಡೇ ಮಾಡಲಾದ ನಿರ್ಧಾರಿತ ನಿಯಮಗಳ ತರಹವೇ ತನ್ನ ಕೆಲಸ ಮಾಡುತ್ತದೆ.
– ಪಿ. ಲಲಿತಾ.