ನಿಮ್ಮ ಕುರಿತಾಗಿ ವಿವರಿಸಿ.
ಆನಂದಿತಾ : ನಾನು ಪಾಟ್ನಾದವಳು. ನಮ್ಮ ತಂದೆಯರದು ಸದಾ ವರ್ಗಾವಣೆಯ ನೌಕರಿ. ಹೀಗಾಗಿ 6-7 ಶಾಲೆಗಳಲ್ಲಿ ನನ್ನ ಶಾಲಾ ವಿದ್ಯಾಭ್ಯಾಸ ನಡೆಯಿತು. ನನ್ನ ತಾಯಿ ಗೃಹಿಣಿ. ನನ್ನ ತಂಗಿ ಹರ್ಷಿತಾ. ನಾನು ಖರಗ್‌ಪುರದಿಂದ ಮಾಡಿದೆ. ನನ್ನದೇ ಕಂಪನಿ ಹೊಂದಿರಬೇಕೆಂಬ ಆಸೆ ಇತ್ತು, ಅದರಲ್ಲಿ ನನ್ನ ಐಡಿಯಾ ತರಹ ಕೆಲಸ ಮಾಡಬೇಕೆಂದಿತ್ತು. ಖರಗ್‌ಪುರ್‌ಗೆ ಹೋದಾಗ ಅಲ್ಲಿ `ಎಂಟರ್‌ಪ್ರಿನರ್ಶಿಪ್’ ಹೆಸರಿನ ಒಂದು ಸೊಸೈಟಿಗೆ ಹೋಗಿದ್ದೆ. ಅಲ್ಲಿಗೆ ಹೋದಾಗಿನಿಂದ ನಾನು ಅದರ ಸದಸ್ಯಳಾದೆ. ನಂತರ ನಾನು ಪುಣೆಯ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದೆ. ಅಲ್ಲೇ ನಾನು ಮನೀಷಾಳನ್ನು ಭೇಟಿ ಆದದ್ದು. ನಾವಿಬ್ಬರೂ ರೂಮ್ ಮೇಟ್ಸ್. ನಮ್ಮದೇ ಉಡುಗೆಗಳನ್ನು ಧರಿಸಿ ಬೋರ್ ಆದಾಗ ಫ್ರೆಂಡ್ಸ್, ತಂಗಿಯರಿಂದ ಡ್ರೆಸ್ ಎಕ್ಸ್ ಚೇಂಜ್ ಮಾಡಿ ಧರಿಸುತ್ತಿದ್ದೆ. ಇಲ್ಲಿಂದ ನಮಗೆ ಈ ಬಿಸ್‌ನೆಸ್ ಆರಂಭಿಸಿಲು ಪ್ರೇರಣೆ ದೊರಕಿತು.
ಮನೀಷಾ : ನಾನು ರಾಂಚಿಯವಳು. ನಮ್ಮ ತಂದೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಾರೆ. ನನ್ನ ತಾಯಿ ಗೃಹಿಣಿ. ನಮ್ಮ ಕುಟುಂಬದ ಜವಳಿ ಬಿಸ್‌ನೆಸ್ ಇದೆ. ನಾನು ಅಂಗಡಿಯಲ್ಲಿ ಕೂರುತ್ತಿದ್ದೆ. 12ನೇ ತರಗತಿ ಪಾಸಾದ ನಂತರ ನಾನೂ ಖರಗ್‌ಪುರ್‌ಗೆ ಹೋಗಿದ್ದೆ. ಅದೇ ಸಲುವಾಗಿ ನಾವಿಬ್ಬರೂ ಒಂದೇ ಫ್ಲಾಟ್ ಶೇರ್ ಮಾಡಿದೆ. ಆಗ ನಾವು ಇದೇ ವಿಷಯ ಮಾತನಾಡಿಕೊಂಡು, ಜನರು ತಾವು ಇಷ್ಟಪಟ್ಟು ಖರೀದಿಸುವ ಉಡುಗೆಗಳನ್ನು ನಾವೇಕೆ ಆನ್‌ಲೈನ್ ಸಪ್ಲೈ ಮಾಡಬಾರದು ಎಂದುಕೊಂಡೆ. ಇದರಲ್ಲಿ ಎಲ್ಲಾ ಬಗೆಯ ಡ್ರೆಸ್ ಮೆಟೀರಿಯಲ್ಸ್, ಆ್ಯಕ್ಸೆಸರೀಸ್, ಬ್ಯಾಗ್ಸ್ ಇತ್ಯಾದಿ ಮಾಮೂಲಿ ಜನರಿಂದ ಸ್ಪೆಷಲ್ ಸೆಲೆಬ್ರಿಟೀಸ್‌ರವರೆಗೆ ಸೂಟ್ ಆಗುವಂತಿದ್ದು, ಎ್ಲಲರೂ ಒಪ್ಪುವಂಥದ್ದಾಗಿರಬೇಕು.
ನಿಮ್ಮ ಕಂಪನಿ ಕುರಿತು ವಿವರವಾಗಿ ತಿಳಿಸಿ.
ಆನಂದಿತಾ : ಇದೊಂದು ವೆಬ್‌ಸೈಟ್. ಇದರ ಮೂಲಕ ಯಾರು ಬೇಕಾದರೂ ತಮ್ಮ ಬೀರುವಿನಿಂದ ಬಳಸಿದ ಬಟ್ಟೆಗಳನ್ನು ತೆಗೆದು ಸುಲಭವಾಗಿ ಮಾರಾಟ ಮಾಡಬಹುದು ಅಥವಾ ಖರೀದಿಸಬಹುದು. ದೊಡ್ಡ ದೊಡ್ಡ ಬ್ರ್ಯಾಂಡ್‌ನ ಉಡುಪುಗಳು ಬಲು ದುಬಾರಿ. ಎಲ್ಲರಿಗೂ ಅವು ಎಟುಕುವುದಿಲ್ಲ. ಇನ್ನೊಂದೂ ವಿಷಯ, ಈ ದುಬಾರಿ ಉಡುಗೆಗಳು ಬಹಳ ದಿನ ಬಾಳಿಕೆ ಬರುತ್ತಿವೆ. ಕೆಲವರು ಇನ್ನು 2-3 ಸಲ ಧರಿಸಿ ಬೋರಾಗಿರುತ್ತಾರೆ. ಅಂಥವರು ಈ ಮೂಲಕ ಸುಲಭವಾಗಿ ಅವನ್ನು ಮಾರಾಟ ಮಾಡಬಹುದು, ಇದರ ಜೊತೆ ನಾವು ಜನಪ್ರಿಯ ಸೆಲೆಬ್ರಿಟೀಸ್ ಧರಿಸಿ ತ್ಯಜಿಸಿದ ಉಡುಗೆಗಳನ್ನೂ ಮಾರಾಟ ಮಾಡುತ್ತೇವೆ. ಏಕೆಂದರೆ ಇಂಥ ಕಲಾವಿದರಿಗೆ ಬಹಳಷ್ಟು ಅಭಿಮಾನಿಗಳಿದ್ದು, ಸ್ಟಾರ್ ಧರಿಸಿದ ಬಟ್ಟೆಯನ್ನು ತಾವು ಧರಿಸಬೇಕೆಂದು ಬಯಸುತ್ತಾರೆ. ಶ್ರದ್ಧಾ ಕಪೂರ್, ನರ್ಗಿಸ್ ಫಖ್ರಿ, ಇಲಿಯಾನಾ ಡಿಕ್ರೂಜ್, ಸೈಫ್ ಆಲಿಖಾನ್, ಯುವರಾಜ್ ಸಿಂಗ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಮುಂತಾದವರ ಡ್ರೆಸ್, ಬ್ಯಾಗ್ಸ್, ಚಪ್ಪಲಿ ಇತ್ಯಾದಿಗಳು ನಮ್ಮ ಬಳಿ ಇದ್ದು, ಜನ ಯಾವಾಗ ಬೇಕಾದರೂ ಅವನ್ನು ಕೊಳ್ಳಬಹುದು. ಇವುಗಳ ಬೆಲೆಯೂ ಹೆಚ್ಚಲ್ಲ. ಶೋರೂಂ ಬೆಲೆಗೆ ಹೋಲಿಸಿದಾಗ, ಇಲ್ಲಿ 3-4 ಜೊತೆ ಕೊಳ್ಳಬಹುದು.
ಮನೀಷಾ : ನಮ್ಮ ದೇಶದಲ್ಲಿ ಯಾರು ಎಲ್ಲಿಂದ ಬೇಕಾದರೂ ಈ ರೀತಿ ವಸ್ತುಗಳನ್ನು ಕೊಂಡು, ಮಾರಾಟ ಮಾಡಬಹುದು. ನಾವು ಪ್ರತಿಯೊಂದು ವಸ್ತುವನ್ನೂ ಪರೀಕ್ಷಿಸಿ ಬೆಲೆ ನಿಗದಿಪಡಿಸುತ್ತೇವೆ. ಸ್ವಲ್ಪ ಸರಿ ಇಲ್ಲ ಎನಿಸಿದರೂ ರಿಜೆಕ್ಟ್ ಮಾಡಿಬಿಡುತ್ತೇವೆ. ಹೀಗೆ ಆರಿಸಲ್ಪಟ್ಟ ವಸ್ತುಗಳನ್ನು ಸೆನೆಟೈರ್‌ಗೊಳಿಸಿ, ಅದರ ಫೋಟೋ ತೆಗೆದು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡುತ್ತೇವೆ. ಆಗ ಜನರಿಗೆ ತಾವು ಹಳೆ ಬಟ್ಟೆ ಧರಿಸುತ್ತಿದ್ದೇವೆಂಬ ಅಳುಕು ಇರುವುದಿಲ್ಲ. ನಮ್ಮ ಬಳಿ ಮದುವೆ ಮತ್ತಿತರ ಶುಭ ಸಮಾರಂಭಗಳ ರಾಶಿ ರಾಶಿ ವಸ್ತ್ರ, ಬ್ಯಾಗ್ಸ್ ಇತ್ಯಾದಿಗಳು ಬರುತ್ತಿರುತ್ತವೆ. ಸೆಲೆಬ್ರಿಟಿಯನ್ನು ತಲುಪಲು ನಮ್ಮ ಇನ್ವೆಸ್ಟರ್ ಸಹ ಸಹಾಯ ಮಾಡುತ್ತಾರೆ. ಸೆಲೆಬ್ರಿಟಿಗಳ ಉಡುಗೆಯಿಂದ ದೊರೆತ ಹಣದಲ್ಲಿ ಒಂದಂಶವನ್ನು ಅನಾಥ ಮಕ್ಕಳಿಗೆಂದೇ ಮೀಸಲಿಟ್ಟಿದ್ದೇವೆ. ಇದರಿಂದ ಸೆಲೆಬ್ರಿಟೀಸ್‌ರನ್ನು ತಲುಪುವುದು ಸುಲಭ. ನಾವು 1 ಲಕ್ಷ ರೂ. ಬಂಡವಾಳದಿಂದ ಈ ಕೆಲಸ ಶುರು ಮಾಡಿದೆ. ಈಗ ನಮ್ಮ ಬಳಿ 7 ಮಂದಿ ಇನ್ವೆಸ್ಟರ್ಸ್ ಇದ್ದಾರೆ. ನಾವು ಲಾಭಕ್ಕಿಂತ ಹೆಚ್ಚಾಗಿ ಜನರ ಒಡನಾಟ ಬಯಸುತ್ತೇವೆ.
ನೀವಿಬ್ಬರೂ ಪರಸ್ಪರ ಹೇಗೆ ಸಮತೋಲನ ಕಾಯ್ದುಕೊಳ್ಳುತ್ತೀರಿ?
ಆನಂದಿತಾ : ನಾವಿಬ್ಬರೂ ಪರಸ್ಪರರ ವೈಶಿಷ್ಟ್ಯಗಳನ್ನು ಅರಿತಿದ್ದೇವೆ. ಯಾವುದೇ ನಿರ್ಧಾರವನ್ನು ಇಬ್ಬರೂ ಕೂಡಿಯೇ ತೆಗೆದುಕೊಳ್ಳುತ್ತೇವೆ. ಅದರಿಂದ ಒಳ್ಳೆಯ ಲಾಭವಿದೆ. ಮಹಿಳೆಯರಾದ ಕಾರಣ ನಿಮ್ಮಿಬ್ಬರಿಗೂ ಈ ಉದ್ಯಮದಲ್ಲಿ ಏನಾದರೂ ತೊಂದರೆಗಳು….?
ಮನೀಷಾ : ಮೊದಮೊದಲಲ್ಲಿ ಸ್ವಲ್ಪ ತೊಂದರೆಗಳಾದವು. ಆ ರಾಶಿ ಸಾಮಗ್ರಿ ಹೊತ್ತು ಜನರ ಮನೆಮನೆಗೂ ತಲುಪಿಸುವುದು ನಮ್ಮದೇ ಕೆಲಸವಾಗಿತ್ತು. ಹೊಸ ಹೊಸ ಜಾಗ ಹುಡುಕಿ ಹೋಗುವುದೂ ಕಷ್ಟವಾಗಿತ್ತು. ಮುಂಬೈನಲ್ಲೇನೋ ಪರವಾಗಿಲ್ಲ, ಆದರೆ ದೆಹಲಿಯಲ್ಲಿ ರಾತ್ರಿ 8 ಗಂಟೆ ನಂತರ ಹೊರಗಿನ ಓಡಾಟ ಅಪಾಯಕಾರಿಯೇ ಸರಿ.
ಆನಂದಿತಾ : ಯಾರಿಗೆ ಅವರ ವಸ್ತು ಮಾರಲಿದೆಯೋ, ಅವರ ಮನೆಗೆ ಹೋಗಿ ಇವನ್ನು ಕೊಂಡುತಂದು, ಇಲ್ಲಿ ಪ್ರೋಸೆಸ್ ಮಾಡಿ ನಂತರ ವೆಬ್‌ಸೈಟ್‌ಗೆ ಹಾಕುತ್ತೇವೆ. ಹೀಗೆ ಆರಂಭವಾದ 2-3 ತಿಂಗಳು ಬಹಳ ಗಡಿಬಿಡಿ ಆಯ್ತು. ಈಗೆಲ್ಲ ಚೆನ್ನಾಗಿ ಸೆಟ್ ಆಗಿದೆ.
ನಿಮ್ಮ ದೃಷ್ಟಿಯಲ್ಲಿ ಯಶಸ್ಸಿಗೆ ಸೂತ್ರವೇನು?
ಆನಂದಿತಾ : ನಿಮ್ಮದೇ ಆದ ಕನಸುಗಳನ್ನು ಹೊಂದಿರಬೇಕಾದುದು ಅತ್ಯಗತ್ಯ. ಆದರೆ ಅದನ್ನು ನನಸಾಗಿಸಿಕೊಳ್ಳಬೇಕೆನ್ನುವ ಛಲ, ಕೆಲಸ ಎಷ್ಟೇ ಕಷ್ಟವಾದರೂ ಅದನ್ನು ಸಾಧಿಸದೆ ಬಿಡಬಾರದು. ನಾವು ದಿನವಿಡೀ ಹಲವು ಹನ್ನೊಂದು ಸಮಸ್ಯೆ ಎದುರಿಸಿ ಪರಿಹಾರ ಹುಡುಕುತ್ತಲೇ ಇರುತ್ತೇವೆ. ರಾತ್ರಿ ನಿದ್ರಿಸುವಾಗ, ಈ ದಿನ ನಾವು ಮಾಡಿದ ಕೆಲಸ ತೃಪ್ತಿಕರ ಎನಿಸುತ್ತದೆ.
– ಜಿ. ಸುಮಾ