ನಿಮ್ಮ ಕುರಿತಾಗಿ ವಿವರಿಸಿ.

ಆನಂದಿತಾ : ನಾನು ಪಾಟ್ನಾದವಳು. ನಮ್ಮ ತಂದೆಯರದು ಸದಾ ವರ್ಗಾವಣೆಯ ನೌಕರಿ. ಹೀಗಾಗಿ 6-7 ಶಾಲೆಗಳಲ್ಲಿ ನನ್ನ ಶಾಲಾ ವಿದ್ಯಾಭ್ಯಾಸ ನಡೆಯಿತು. ನನ್ನ ತಾಯಿ ಗೃಹಿಣಿ. ನನ್ನ ತಂಗಿ ಹರ್ಷಿತಾ. ನಾನು ಖರಗ್‌ಪುರದಿಂದ ಮಾಡಿದೆ. ನನ್ನದೇ ಕಂಪನಿ ಹೊಂದಿರಬೇಕೆಂಬ ಆಸೆ ಇತ್ತು, ಅದರಲ್ಲಿ ನನ್ನ ಐಡಿಯಾ ತರಹ ಕೆಲಸ ಮಾಡಬೇಕೆಂದಿತ್ತು. ಖರಗ್‌ಪುರ್‌ಗೆ ಹೋದಾಗ ಅಲ್ಲಿ `ಎಂಟರ್‌ಪ್ರಿನರ್ಶಿಪ್‌' ಹೆಸರಿನ ಒಂದು ಸೊಸೈಟಿಗೆ ಹೋಗಿದ್ದೆ. ಅಲ್ಲಿಗೆ ಹೋದಾಗಿನಿಂದ ನಾನು ಅದರ ಸದಸ್ಯಳಾದೆ. ನಂತರ ನಾನು ಪುಣೆಯ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದೆ. ಅಲ್ಲೇ ನಾನು ಮನೀಷಾಳನ್ನು ಭೇಟಿ ಆದದ್ದು. ನಾವಿಬ್ಬರೂ ರೂಮ್ ಮೇಟ್ಸ್. ನಮ್ಮದೇ ಉಡುಗೆಗಳನ್ನು ಧರಿಸಿ ಬೋರ್‌ ಆದಾಗ ಫ್ರೆಂಡ್ಸ್, ತಂಗಿಯರಿಂದ ಡ್ರೆಸ್‌ ಎಕ್ಸ್ ಚೇಂಜ್‌ ಮಾಡಿ ಧರಿಸುತ್ತಿದ್ದೆ. ಇಲ್ಲಿಂದ ನಮಗೆ ಈ ಬಿಸ್‌ನೆಸ್‌ ಆರಂಭಿಸಿಲು ಪ್ರೇರಣೆ ದೊರಕಿತು.

ಮನೀಷಾ : ನಾನು ರಾಂಚಿಯವಳು. ನಮ್ಮ ತಂದೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಾರೆ. ನನ್ನ ತಾಯಿ ಗೃಹಿಣಿ. ನಮ್ಮ ಕುಟುಂಬದ ಜವಳಿ ಬಿಸ್‌ನೆಸ್‌ ಇದೆ. ನಾನು ಅಂಗಡಿಯಲ್ಲಿ ಕೂರುತ್ತಿದ್ದೆ. 12ನೇ ತರಗತಿ ಪಾಸಾದ ನಂತರ ನಾನೂ ಖರಗ್‌ಪುರ್‌ಗೆ ಹೋಗಿದ್ದೆ. ಅದೇ ಸಲುವಾಗಿ ನಾವಿಬ್ಬರೂ ಒಂದೇ ಫ್ಲಾಟ್‌ ಶೇರ್‌ ಮಾಡಿದೆ. ಆಗ ನಾವು ಇದೇ ವಿಷಯ ಮಾತನಾಡಿಕೊಂಡು, ಜನರು ತಾವು ಇಷ್ಟಪಟ್ಟು ಖರೀದಿಸುವ ಉಡುಗೆಗಳನ್ನು ನಾವೇಕೆ ಆನ್‌ಲೈನ್‌ ಸಪ್ಲೈ ಮಾಡಬಾರದು ಎಂದುಕೊಂಡೆ. ಇದರಲ್ಲಿ ಎಲ್ಲಾ ಬಗೆಯ ಡ್ರೆಸ್‌ ಮೆಟೀರಿಯಲ್ಸ್, ಆ್ಯಕ್ಸೆಸರೀಸ್‌, ಬ್ಯಾಗ್ಸ್ ಇತ್ಯಾದಿ ಮಾಮೂಲಿ ಜನರಿಂದ ಸ್ಪೆಷಲ್ ಸೆಲೆಬ್ರಿಟೀಸ್‌ರವರೆಗೆ ಸೂಟ್‌ ಆಗುವಂತಿದ್ದು, ಎ್ಲಲರೂ ಒಪ್ಪುವಂಥದ್ದಾಗಿರಬೇಕು.

ನಿಮ್ಮ ಕಂಪನಿ ಕುರಿತು ವಿವರವಾಗಿ ತಿಳಿಸಿ.

ಆನಂದಿತಾ : ಇದೊಂದು ವೆಬ್‌ಸೈಟ್‌. ಇದರ ಮೂಲಕ ಯಾರು ಬೇಕಾದರೂ ತಮ್ಮ ಬೀರುವಿನಿಂದ ಬಳಸಿದ ಬಟ್ಟೆಗಳನ್ನು ತೆಗೆದು ಸುಲಭವಾಗಿ ಮಾರಾಟ ಮಾಡಬಹುದು ಅಥವಾ ಖರೀದಿಸಬಹುದು. ದೊಡ್ಡ ದೊಡ್ಡ ಬ್ರ್ಯಾಂಡ್‌ನ ಉಡುಪುಗಳು ಬಲು ದುಬಾರಿ. ಎಲ್ಲರಿಗೂ ಅವು ಎಟುಕುವುದಿಲ್ಲ. ಇನ್ನೊಂದೂ ವಿಷಯ, ಈ ದುಬಾರಿ ಉಡುಗೆಗಳು ಬಹಳ ದಿನ ಬಾಳಿಕೆ ಬರುತ್ತಿವೆ. ಕೆಲವರು ಇನ್ನು 2-3 ಸಲ ಧರಿಸಿ ಬೋರಾಗಿರುತ್ತಾರೆ. ಅಂಥವರು ಈ ಮೂಲಕ ಸುಲಭವಾಗಿ ಅವನ್ನು ಮಾರಾಟ ಮಾಡಬಹುದು, ಇದರ ಜೊತೆ ನಾವು ಜನಪ್ರಿಯ ಸೆಲೆಬ್ರಿಟೀಸ್‌ ಧರಿಸಿ ತ್ಯಜಿಸಿದ ಉಡುಗೆಗಳನ್ನೂ ಮಾರಾಟ ಮಾಡುತ್ತೇವೆ. ಏಕೆಂದರೆ ಇಂಥ ಕಲಾವಿದರಿಗೆ ಬಹಳಷ್ಟು ಅಭಿಮಾನಿಗಳಿದ್ದು, ಸ್ಟಾರ್‌ ಧರಿಸಿದ ಬಟ್ಟೆಯನ್ನು ತಾವು ಧರಿಸಬೇಕೆಂದು ಬಯಸುತ್ತಾರೆ. ಶ್ರದ್ಧಾ ಕಪೂರ್, ನರ್ಗಿಸ್‌ ಫಖ್ರಿ, ಇಲಿಯಾನಾ ಡಿಕ್ರೂಜ್‌, ಸೈಫ್‌ ಆಲಿಖಾನ್‌, ಯುವರಾಜ್‌ ಸಿಂಗ್‌, ದೀಪಿಕಾ ಪಡುಕೋಣೆ, ಕರೀನಾ ಕಪೂರ್‌ ಮುಂತಾದವರ ಡ್ರೆಸ್‌, ಬ್ಯಾಗ್ಸ್, ಚಪ್ಪಲಿ ಇತ್ಯಾದಿಗಳು ನಮ್ಮ ಬಳಿ ಇದ್ದು, ಜನ ಯಾವಾಗ ಬೇಕಾದರೂ ಅವನ್ನು ಕೊಳ್ಳಬಹುದು. ಇವುಗಳ ಬೆಲೆಯೂ ಹೆಚ್ಚಲ್ಲ. ಶೋರೂಂ ಬೆಲೆಗೆ ಹೋಲಿಸಿದಾಗ, ಇಲ್ಲಿ 3-4 ಜೊತೆ ಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ