ಅಜಾಯಿತಾ ಹುಟ್ಟಿ ಬೆಳೆದದ್ದು, ಶಿಕ್ಷಣ ಪೂರೈಸಿದ್ದೆಲ್ಲ ನ್ಯೂಯಾರ್ಕಿನಲ್ಲಿ. ಆದರೆ ಈಕೆಗೆ, ತಮ್ಮ ಕೆರಿಯರ್‌ ಮತ್ತು ಭವಿಷ್ಯವನ್ನು ತಮ್ಮಿಷ್ಟದಂತೆ ರೂಪಿಸಿಕೊಳ್ಳುವುದು ಸುಲಭದ ಪ್ರಶ್ನೆ ಆಗಿರಲಿಲ್ಲ. ತಮ್ಮ ಶಾಲಾ ದಿನಗಳಿಂದಲೇ ಅಜಾಯಿತಾ ಚರ್ಚಾ ಸ್ಪರ್ಧೆ, ಆಟೋಟಗಳಲ್ಲಿ ಸದಾ ಮುಂದು. 15 ತುಂಬುವಷ್ಟರಲ್ಲೇ ಆಕೆ ಸ್ವಾವಲಂಬಿ ಆಗಿದ್ದರು. ಬೋಸ್ಟನ್‌ನ  ಟಫ್ಸ್ ಯೂನಿವರ್ಸಿಟಿಯಲ್ಲಿ ಸ್ನಾತಕ ಪದವಿ ಪಡೆದ ಮೇಲೆ, ಸ್ಪೇನ್‌ ಹಾಗೂ ವಾಶಿಂಗ್‌ಟನ್‌ನಲ್ಲಿ ತಮ್ಮ ಶಿಕ್ಷಣ ಪೂರೈಸಿದರು.

ಕಾಲೇಜಿನ ಕೊನೆಯ ಘಟ್ಟದಲ್ಲಿ ಅವರು ತಮ್ಮ ಪ್ರಾಜೆಕ್ಟ್ಸ್ ಪೂರೈಸಿಕೊಳ್ಳಲು ಹಲವಾರು ಸಲ ಭಾರತಕ್ಕೆ ಬರಬೇಕಾಯಿತು. ಭಾರತದ ಗ್ರಾಮೀಣ ಮಹಿಳೆಯರು ತಮ್ಮ ಕುಟುಂಬ ಮುನ್ನಡೆಸಲು ಪಡುತ್ತಿರುವ ಪಾಡು ಕಂಡು ಗ್ರಾಮೀಣ ಮಹಿಳೆಯರಿಗಾಗಿ ತಾವೇನಾದರೂ ಮಾಡಲೇಬೇಕು ಎನಿಸಿತು. ಮೈಕ್ರೋ ಫೈನಾನ್ಸ್ ಕುರಿತಾಗಿ ತಾವು ಅಂದುಕೊಂಡ ಯೋಜನೆ ಅನುಷ್ಠಾನಗೊಳಿಸಿದರೆ, ಈ ಮಹಿಳೆಯರ ಕಷ್ಟ ಕಳೆಯುವುದರ ಜೊತೆ ತಾವು ಏನಾದರೂ ದೊಡ್ಡ ಕೆಲಸ ಮಾಡಿದಂತಾಗುತ್ತದೆ ಎನಿಸಿತು.

ಅಜಾಯಿತಾ ಹೇಳುತ್ತಾರೆ, ``ಬೋಸ್ಟನ್‌ನಲ್ಲಿ ಶಿಕ್ಷಣ ಪೂರೈಸಿ, ಅಮೆರಿಕಾ ಇಂಡಿಯಾ ಫೌಂಡೇಶನ್‌ನ ಕ್ಲಿಂಟನ್‌ ಸರ್ವೀಸ್‌ ಕಾರ್ಪ್‌ ಫೆಲೋಶಿಪ್‌ಗೆ ನಾನು ಅಪ್ಲೈ ಮಾಡಿದೆ. ಅದು ಸಿಗುತ್ತದೆಂಬ ಖಾತ್ರಿ ಇರಲಿಲ್ಲ. ಅಕಸ್ಮಾತ್‌ ಫೆಲೋಶಿಪ್‌ ಸಿಕ್ಕಿದರೆ ನನಗೆ 10 ತಿಂಗಳು ಭಾರತದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ ಎಂದು ತಿಳಿಯಿತು. ಯಾವುದಕ್ಕೂ ಇರಲಿ ಎಂದು ನಾನು ನ್ಯೂಯಾರ್ಕಿನ ಲಾ ಫರ್ಮ್ ಸಹ ತುಂಬಿಸಿದ್ದೆ. ನಾನು ಮರಳಿ ಭಾರತಕ್ಕೆ ಹೋಗುವ ಬದಲು ಲಾ ಮಾಡುವುದೇ ವಾಸಿ ಎಂದು ತಾಯಿ ತಂದೆ ಭಾವಿಸಿದರು. ಮತ್ತೆ ನನ್ನ ಕನಸು ತುಂಡಾಗುವುದರಲ್ಲಿತ್ತು.

ಆಗ. 1 ವರ್ಷ ತಾನೇ..... ಭಾರತದಿಂದ ಬೇಗ ಮರಳಿ ಬರುತ್ತೇನೆ ಎಂದು ಅವರನ್ನು ಹೇಗೋ ಒಪ್ಪಿಸಿದೆ. ನನ್ನ ಈ ನಿರ್ಧಾರ ನನ್ನ ಬದುಕಿಗೆ ಹೊಸ ತಿರುವನ್ನು ತಂದುಕೊಟ್ಟಿತು. ಇಷ್ಟಕ್ಕೆ ನನ್ನ ಸಂಘರ್ಷ ಮುಗಿಯಲಿಲ್ಲ. ಮೇಲಿಂದ ಮೇಲೆ ಸವಾಲುಗಳು ನನ್ನನ್ನು ಸಶಕ್ತಗೊಳಿಸಿದವು. ಇದರ ಮಧ್ಯೆ ಹೊಸ ಹಾದಿ ಹುಟ್ಟುಹಾಕುವುದೇನೂ ಸುಲಭವಾಗಿರಲಿಲ್ಲ. ಭಾರತದಲ್ಲಿ ಭದ್ರವಾಗಿ ನೆಲೆಯೂರಲು ಹಾಗೂ ಗ್ರಾಮೀಣ ಭಾರತವನ್ನು ಹತ್ತಿರದಿಂದ ಗಮನಿಸಲು, 2006ರಲ್ಲಿ ನಾನು ಬೆಂಗಳೂರಿಗೆ ಬಂದೆ. ಇಲ್ಲಿನ ಉಜ್ಜೀವನ್‌ ಫೈನಾನ್ಶಿಯಲ್ ಸರ್ವೀಸಸ್‌ ಸೇರಿದ ನಂತರ, ನನ್ನ ಕನಸಿಗೊಂದು ಸಾಕಾರ ರೂಪ ಬಂತು.

``ಬೆಂಗಳೂರಿಗೆ ಬಂದು 15 ತಿಂಗಳಾಗುವಷ್ಟರಲ್ಲಿ ವಾಪಸ್ಸು ನ್ಯೂಯಾರ್ಕ್‌ಗೆ ಬರುವಂತೆ ತಾಯಿ ತಂದೆ ಒತ್ತಾಯಿಸತೊಡಗಿದರು. ವಿಧಿಯಿಲ್ಲದೆ ನಾನು ವಾಪಸ್ಸು ಹೋದೆ. ನಂತರ ಅಮೆರಿಕಾದ ಫೌಂಡೇಶನ್‌ ಜಾಯಿನ್‌ ಆದೆ. ಅಲ್ಲಿ ಫಂಡ್‌ ರೇಂಜಿಂಗ್‌ ನನ್ನ ಜವಾಬ್ದಾರಿ ಆಗಿತ್ತು. ಆ ಮೂಲಕ ನಾನು ಮತ್ತೆ ಭಾರತದೊಂದಿಗೆ ಸಂಪರ್ಕ ಹೊಂದಿದೆ.

``2006-09ರವರೆಗೆ ಭಾರತದ ಬಗ್ಗೆ ಹತ್ತಿರದಿಂದ ಚೆನ್ನಾಗಿ ತಿಳಿದುಕೊಂಡ ನಂತರ, ಮೈಕ್ರೋ ಫೈನಾನ್ಸ್ ಒಂದೇ ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ತಿಳಿಯಿತು. ವಿದ್ಯುತ್‌, ನೀರು, ಕಳಪೆ ಗುಣಮಟ್ಟದ ಸಾಮಗ್ರಿ, ಜನರ ಅಜ್ಞಾನ ಇತ್ಯಾದಿಗಳನ್ನು ಕೇವಲ ಒಂದು ಕಂಪನಿಯ ಮೂಲಕ ನಿವಾರಿಸಲಾಗದೆಂದು ತಿಳಿದುಕೊಂಡೆ. ಈ ರೀತಿ 2009ರಲ್ಲಿ ನನಗೆ ಫ್ರಾಂಟಿಯರ್‌ ಮಾರ್ಕೆಟ್‌ನ ಐಡಿಯಾ ಬಂದಿತು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ