ಬೇಡದ ವಸ್ತುಗಳ ಗುಲಾಮರಾಗದಿರಲಿ
ಹೊಸ ಅರ್ಥ ವ್ಯವಸ್ಥೆಯಲ್ಲಿ ಒಂದು ಭಾರಿ ಬದಲಾವಣೆ ಗೋಚರಿಸುತ್ತಿದೆ. ಅದೆಂದರೆ ಮಧ್ಯವರ್ತಿ ವ್ಯಾಪಾರಿಗಳ ಭಾರಿ ಇಳಿಕೆ. ಈಚೆಗಷ್ಟೇ ಹುಟ್ಟಿಕೊಂಡ ಹೊಸ ಕಂಪನಿಗಳನ್ನು ಸ್ಟಾರ್ಟ್‌ಅಪ್‌ಎಂದು ಹೇಳಲಾಗುತ್ತದೆ. ಅವು ವಾಸ್ತವದಲ್ಲಿ ಬೇರೆಯವರು ಉತ್ಪಾದಿಸಿದ ಉತ್ಪನ್ನಗಳನ್ನು ಗ್ರಾಹಕರ ತನಕ ಕಳುಹಿಸಿಕೊಡುವ ಕೆಲಸ ಮಾಡುತ್ತವೆ. ನಮ್ಮಲ್ಲಿ ಉತ್ಪಾದನೆಯಾಗುವುದು ಕಡಿಮೆ.
ಮೊದಲು ಈ ಕೆಲಸವನ್ನು ಅಮೆರಿಕಾದಲ್ಲಿ ವಾಲ್ ಮಾರ್ಟ್, ಮೆಸೇಜ್, ಭಾರತದಲ್ಲಿ ವಿಜಯ್‌ಸೇಲ್ಸ್, ಇಂಗ್ಲೆಂಡ್‌ನಲ್ಲಿ ಹಾರ್ವರ್ಡ್ಸ್ ನಂತಹ ಕಂಪನಿಗಳು ತಮ್ಮದೇ ಆದ ಸ್ಟೋರ್‌ಮಾಡಿಕೊಂಡು ಮಾರಾಟ ಮಾಡುತ್ತಿದ್ದವು. ಈ ರೀತಿಯ ಸ್ಟಾರ್ಟ್‌ಅಪ್‌ಗಳು ಇಂಟರ್‌ನೆಟ್‌ಸೌಲಭ್ಯ ಬಳಸಿ ಕಂಪ್ಯೂಟರ್‌ಅಥವಾ ಮೊಬೈಲ್‌ನಲ್ಲಿ ಚಿತ್ರ ತೋರಿಸಿ ಇ-ಕಾಮರ್ಸ್‌ನ ಹೊಸ ಮಾರಾಟ ವಿಧಾನವನ್ನು ಆರಂಭಿಸಿವೆ. ಅದರಲ್ಲಿ ಸ್ಟೋರ್‌ಗಳು, ಭಾರೀ ಶೋರೂಮ್ ಗಳು ಹಾಗೂ ಮಾಧ್ಯಮಗಳ ಅಗತ್ಯ ಅಷ್ಟವಾಗಿ ಕಂಡುಬರುವುದಿಲ್ಲ. ಉತ್ಪಾದಕರು ಹಾಗೂ ಗ್ರಾಹಕರ ನಡುವೆ ಕೇವಲ ಸ್ಟಾರ್ಟ್‌ಅಪ್‌ಇ-ಕಾಮರ್ಸ್‌ಮಾತ್ರ ಗೋಚರಿಸುತ್ತಿದೆ.
ಈಗ ಈ ತಂತ್ರಜ್ಞಾನ ಮತ್ತು ವ್ಯಾಪಾರ ಇನ್ನೂ ಕಡಿಮೆ ಪ್ರಮಾಣದಲ್ಲಿದ್ದು, ಅವು ಬೆಳೆಯುತ್ತಿರುವ ರೀತಿ ಗಮನಿಸಿದರೆ, ಸೇವೆಗಳು ಅದರಲ್ಲಿ ಹೆಚ್ಚೆಚ್ಚು ಸೇರಿಕೊಳ್ಳುತ್ತ ಹೊರಟಿವೆ. ಟ್ಯಾಕ್ಸಿ ಸೇವೆಗಳು, ದುರಸ್ತಿ ಸೇವೆ, ಕೊರಿಯರ್‌ಸೇವೆ ಇವೇ ಆ ಸೇವೆಗಳು. ಇದರಿಂದ ವ್ಯಾಪಾರ ಮತ್ತು ಮಾರಾಟದ ವಿಧಾನವೇ ಬದಲಾಗಲಿದೆ.
ಈಗ ಈ ಹೊಸ ಇ-ಕಾಮರ್ಸ್‌ನಿಂದ ಗ್ರಾಹಕ ಎಲ್ಲಿಯೇ ಇದ್ದರೂ ಅವನಿಗೆ ಉತ್ಪಾದಕನಿಂದ ಅಥವಾ ಹಂಚಿಕೆದಾರನಿಂದ ನೇರವಾಗಿ ಆದಷ್ಟು ಬೇಗ ವಸ್ತುವನ್ನು ತಲುಪಿಸಬಹುದಾಗಿದೆ. ಇದರಲ್ಲಿ ಬರೀ ಸಾಮಗ್ರಿಗಳನ್ನಷ್ಟೇ ಅಲ್ಲ, ಸೇವೆಗಳನ್ನು ಕೂಡ ಕೊಡಿಸಬಹುದಾಗಿದೆ. ಡಾಕ್ಟರ್‌ಅಥವಾ ನರ್ಸ್, ಅಡುಗೆ ಮಾಡುವವರು, ಬ್ಯೂಟಿ ಎಕ್ಸ್ ಪರ್ಟ್, ತೆರಿಗೆ ಸಲಹೆಗಾರ ಹೀಗೆ ಏನೆಲ್ಲ ಸೇವೆಗಳು ಲಭಿಸುತ್ತವೆ. ಅಂಗಡಿಗಳು ಈಗ ಮಾರುಕಟ್ಟೆಯಿಂದ ಬದಿಗೆ ಸರಿದು ಮೊಬೈಲ್‌ನಲ್ಲಿ ಪ್ರವೇಶ ಮಾಡಿವೆ. ಖರೀದಿಯ ವಿಧಾನ ಬದಲಾಗಿದೆ.
ಇದೆಲ್ಲ ಅಮೂಲಾಗ್ರ ಬದಲಾವಣೆಯ ಒಂದು ಆರಂಭ. ಇದರಿಂದ ಮಾರುಕಟ್ಟೆಗಳು ಹೆಚ್ಚು ಕಡಿಮೆ ಮುಚ್ಚಲ್ಪಡುತ್ತವೆ. ಜನರಿಗೆ ಮನೆಯಲ್ಲಿ ಕುಳಿತುಕೊಂಡೇ ಗಳಿಸುವ ಅವಕಾಶಗಳು ಲಭಿಸುತ್ತವೆ. ಅಕ್ರಮ ಸಂಗ್ರಹ, ಲಾಭಕೋರತನ ಸಾಕಷ್ಟು ಕಡಿಮೆಯಾಗುತ್ತವೆ. ಲಕ್ಷಾಂತರ ಚಿಕ್ಕಪುಟ್ಟ ವ್ಯಾಪಾರಿಗಳು ನಿರುದ್ಯೋಗಿಗಳಾಗುತ್ತಾರೆ. ಸಾಫ್ಟ್ ವೇರ್‌ನಿರ್ವಹಣೆ ಮಾಡುವವರ ಮಟ್ಟಿಗೆ ಅವು ಸೀಮಿತವಾಗುಳಿಯುತ್ತವೆ.
ಉತ್ಪಾದಕರು ಕೆಲವೇ ಕೆಲವು ಇ-ಕಾಮರ್ಸ್‌ಕಂಪನಿಗಳ ಕಪಿಮುಷ್ಟಿಯಲ್ಲಿ ಉಳಿದುಬಿಡುತ್ತಾರೆ. ಅವರು ಅಲಿಬಾಬಾ, ಅಮೆಜಾನ್, ಫ್ಲಿಪ್‌ಕಾರ್ಟ್‌ಮುಂತಾದ ಕಂಪನಿಗಳು ಹೇಳಿದಂತೆ ಕೇಳಬೇಕಾಗಿ ಬರುತ್ತದೆ. ಅಂಗಡಿಕಾರನಂತೂ ಮೊಬೈಲ್‌ಸ್ಕ್ರೀನ್‌ನ ಹಿಂದೆ ಇರುತ್ತಾನೆ. ಕ್ರಮೇಣ ಉತ್ಪಾದಕರ ಹೆಸರು ಕೂಡ ಮರೆಯಾಗುತ್ತ ಹೋಗುತ್ತದೆ. ಏಕೆಂದರೆ ಇ-ಕಾಮರ್ಸ್‌ಕಂಪನಿಗಳು ತಮ್ಮದೇ ಆದ ವರ್ಚಸ್ಸಿನ ಮೇಲೆ ಉತ್ಪಾದನೆಗಳನ್ನು ಮಾಡುತ್ತವೆ ಹಾಗೂ ಹೆಚ್ಚು ಲಾಭಕರಾಗಿರುತ್ತವೆ ಅವನ್ನಷ್ಟೇ ಮಾರಾಟ ಮಾಡಲಿವೆ.
ಇದರಿಂದ ಒಳ್ಳೆಯದಾಗುತ್ತೋ, ಕೆಟ್ಟದ್ದಾಗುತ್ತೋ ಈಗಲೇ ಹೇಳುವುದು ಕಷ್ಟ. ಆದರೆ ದೈತ್ಯಾಕಾರದ ಕಂಪನಿಗಳು ಉದ್ಭವಿಸದಿರಲಿ, ಅವು ಚಿಕ್ಕಪುಟ್ಟ ಅಂಗಡಿಗಳನ್ನು ಸ್ವಾಹಾ ಮಾಡದಿರಲಿ. ಗ್ರಾಹಕರಿಗೆ ಅನಿವಾರ್ಯವಾಗಿ ಅವರ ಬಳಿಯೇ ಹೋಗಿ ಖರೀದಿಸುವಂತಹ ಸಂದರ್ಭ ಉದ್ಭವಿಸುವಂತಾಗಬಾರದು. ಗ್ರಾಹಕರು, ಉತ್ಪಾದಕರು, ಫೈನಾನ್ಸರ್‌ಗಳು, ಪ್ರಚಾರಕರು ಅಷ್ಟೇ ಏಕೆ, ತೆರಿಗೆದಾತರು ಕೂಡ ಸ್ಕ್ಕೀನ್‌ಮೇಲಿನ ಕಂಪನಿಗಳ ಗುಲಾಮರಾಗದಿರಲಿ. ಇದು ಜಾರ್ಜ್‌ಆರ್‌ಅವರ ಬಿಗ್‌ಬ್ರದರ್‌ಗಿಂತಲೂ ಹೆಚ್ಚು ಭಯಾನಕವಾಗಬಹುದು.
ಹಣಕ್ಕಾಗಿ ತಮ್ಮವರ ಕೊಲೆ
ಅಪರಾಧದ ಘಟನೆಗಳು ಕೆಲವೊಮ್ಮೆ ಜೀವನದ ಸಂದಿಗ್ಧತೆಯ ಕನ್ನಡಿಯಾಗುತ್ತವೆ. ದೆಹಲಿಯಲ್ಲಿ ಇಬ್ಬರು ಪುತ್ರರು ಮತ್ತು ಒಬ್ಬ ಮೊಮ್ಮಗ ಸೇರಿ 88 ವರ್ಷದ ತಂದೆ ಹಾಗೂ 55 ವರ್ಷದ ಅವಿವಾಹಿತ ಸೋದರಿಯ ಹತ್ಯೆ ಮಾಡಿದ ಘಟನೆ ಜೀವನದ ಸಮಸ್ಯೆಗಳನ್ನು ಬಿಂಬಿಸುತ್ತದೆ.
ತಂದೆಯ ಹೆಸರಿನಲ್ಲಿ ಮನೆಯಿತ್ತು. ಇದು ಒಂದರಿಂದ ಒಂದೂವರೆ ಕೋಟಿ ರೂ. ಬೆಲೆ ಬಾಳುತ್ತಿತ್ತು. ಅದನ್ನು ತಂದೆ ತನ್ನ 50 ವರ್ಷದ ಅವಿವಾಹಿತ ಮಗಳ ಹೆಸರಿಗೆ ಬರೆಯಲು ನಿರ್ಧರಿಸಿದ್ದರು. ಏಕೆಂದರೆ ಕೊನೆಯವರೆಗೂ ಆಕೆ ಸುರಕ್ಷಿತವಾಗಿರಬೇಕೆನ್ನುವುದು ತಂದೆಯ ಯೋಚನೆಯಾಗಿತ್ತು. ಇದು ಒಂದು ಸಮಸ್ಯೆಯ ಮುಖ ಅಷ್ಟೆ. ಸಕಾಲಕ್ಕೆ ಹುಡುಗಿಯ ಮದುವೆ ಮಾಡದಿದ್ದರೆ, ಆಕೆಗೆ ಗಂಡಮಕ್ಕಳು ಇರದೇ ಇದ್ದರೆ ಆಕೆ ತಂದೆತಾಯಿಗೆ ಭಾರವಾಗುತ್ತಾಳೆ. ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ, ಮೃತರ ಇಬ್ಬರು ಮಕ್ಕಳು 60 ಮತ್ತು 57 ವರ್ಷದವರು. ಅವರಿಗೆ ತಮ್ಮ ಕೈಯಿಂದ ಆಸ್ತಿ ಕೈಬಿಟ್ಟು ಹೋಗುವುದನ್ನು ನೋಡಲಾಗುವುದಿಲ್ಲ.
ಹೆಣ್ಣುಮಗಳ ಮದುವೆಯನ್ನು ಸಕಾಲಕ್ಕೆ ಮಾಡದೇ ಇದ್ದರೆ ಮನೆಯವರಿಗೆ ಅದು ಒಂದು ರೀತಿಯ ಮಾನಸಿಕ ಹೊರೆಯಾಗಿ ಪರಿಣಮಿಸುತ್ತದೆ. ಅವರಿಗೆ 50 ವರ್ಷದ ಒಬ್ಬ ಮಹಿಳೆ ಆಧಾರವಾಗಿ ಪರಿಣಮಿಸುವುದಿಲ್ಲ. ಅದರಿಂದ ಮುಕ್ತಿ ಪಡೆದುಕೊಳ್ಳಲು ಹತ್ಯೆಯಂತಹ ಸಂಚು ರೂಪಿಸಬಹುದಾಗಿದೆ.
ಹತ್ಯೆ ಮಾಡಿದ ಒಬ್ಬ ವ್ಯಕ್ತಿಗೆ ಸಾಕಷ್ಟು ಸಾಲವಿತ್ತು. ತಂದೆಯ ಮನೆಯನ್ನು ಮಾರುವುದರ ಮೂಲಕ ಅವನು ಆ ಸವಾಲನ್ನು ತೀರಿಸಲು ಪ್ರಯತ್ನಿಸುತ್ತಿದ್ದ. ತನ್ನ ಮಗಳ ಮದುವೆಗಾಗಿ ಆತ ಸಾಲ ಮಾಡಿದ್ದ. ಬಳಿಕ ಆಕೆ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದಳು.
ಅದಾದ ನಂತರ ಆಕೆಯನ್ನು ಶಾಸ್ತ್ರೋಕ್ತವಾಗಿ ಕಳಿಸಿಕೊಟ್ಟಿದ್ದ. ಈ ಕುರಿತಂತೆ ಎಲ್ಲ ಸಂಬಂಧಗಳ ಬಗ್ಗೆ ಅವನು ಉದಾಸೀನಗೊಂಡಿರಬಹುದು. ಹಾಗೆಂದೇ ಅವನಿಗೆ ತಂದೆ ಮತ್ತು ತಂಗಿಯ ಕೊಲೆ ಮಾಡುವಲ್ಲಿ ಯಾವುದೇ ತಪ್ಪು ಅನಿಸಿರಲಿಕ್ಕಿಲ್ಲ.
ಹೆಣ್ಣುಮಕ್ಕಳ ಹಕ್ಕು, ಗಂಡುಮಕ್ಕಳನ್ನು ಎಷ್ಟು ಚಿಂತಗೀಡು ಮಾಡುತ್ತದೆ ಎನ್ನುವುದು ಕೂಡ ಇದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಆಸ್ತಿ ತಂದೆಯದು. ಅದನ್ನು ಅವರು ತಮ್ಮ ಇಚ್ಛೆಯ ಮೇರೆಗೆ ಇಬ್ಬರು ಹೆಣ್ಣುಮಕ್ಕಳಲ್ಲಿ ಅಥವಾ ಎಲ್ಲ ಮಕ್ಕಳಿಗೆ ಅಥವಾ ಕಷ್ಟದಲ್ಲಿರುವವರಿಗೆ ಹಂಚಬೇಕಿತ್ತು. ಗಂಡು ಮಕ್ಕಳು ಈಗಲೂ ಆಸ್ತಿಯ ಮೇಲೆ ತಮಗಷ್ಟೇ ಹಕ್ಕು ಎಂದು ಭಾವಿಸಿದ್ದಾರೆ. ತಂಗಿ ಅಥವಾ ಅಕ್ಕನಿಗೆ ಪಾಲು ಕೊಡಬೇಕೆಂದು ಹೇಳಿದಾಗ ಅವರಿಗೆ ಹಾವು ಚೇಳು ಕಚ್ಚಿದಂತೆ ಆಗುತ್ತದೆ, ಕಣ್ಣಲ್ಲಿ ರಕ್ತ ಉಕ್ಕುತ್ತದೆ. ಅದು ಅಪರಾಧದ ಘಟನೆಯೇ ಆಗಿರಬಹುದು, ಸಾಮಾಜಿಕ ಹಾಗೂ ಕೌಟುಂಬಿಕ ಆರ್ಥಿಕ ಹೊರೆ ಹಲವು ಸಲ ಎಷ್ಟೊಂದು ವಿಕೋಪಕ್ಕೆ ಹೋಗುತ್ತದೆ ಎಂದರೆ, ಜನ ಮುಂದಿನ ಪರಿಣಾಮವನ್ನು ಲೆಕ್ಕಿಸುವುದೇ ಇಲ್ಲ. ಅಪರಾಧ ಎಸಗುವವನಿಗೆ ಬಂಧಿಸಲ್ಪಟ್ಟರೆ ತಾನು ಏನನ್ನು ಬಯಸುತ್ತಿದ್ದೆ ಅದು ಸಿಗುವುದಿರಲಿ, ತನ್ನ ಬಳಿ ಇರುವುದು ಕೂಡ ಹೊರಟುಹೋಗುತ್ತದೆ ಎಂಬ ಅರಿವಿರುತ್ತದೆ.
ತಂದೆಯ ವಯಸ್ಸಿನ ಇಬ್ಬರು ವ್ಯಕ್ತಿಗಳು ಹಾಗೂ ಒಬ್ಬ ಮಗ ಜೈಲು ಕಂಬಿಗಳ ಹಿಂದಿದ್ದಾರೆ. ಅಪರಾಧದ ಸ್ಥಳವಾಗಿರುವುದರಿಂದ ಆ ಮನೆ 8-10 ವರ್ಷಗಳ ಕಾಲ ಮುಚ್ಚಿರುತ್ತದೆ. ಎರಡೂ ಮನೆಯವರೂ ಒಂದೊಂದು ರೂಪಾಯಿಗಾಗಿ ಪರದಾಡುವಂತಹ ಸ್ಥಿತಿ ಉಂಟಾಗುತ್ತದೆ. ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಬದಲು ಕೌಟುಂಬಿಕ ದುಃಖ ಎಷ್ಟೊಂದು ಹೆಚ್ಚಿಬಿಡುತ್ತದೆಂದರೆ ಖಿನ್ನತೆ, ಬಡತನ ಹಾಗೂ ಕಷ್ಟಗಳಿಗೆ ತುತ್ತಾಗಬೇಕಾಗುತ್ತದೆ.
ಕುಟುಂಬ ಎನ್ನುವುದು ಸೂರು ಮತ್ತು ಸುರಕ್ಷತೆ ದೊರಕಿಸಿಕೊಡುತ್ತದೆ. ಅದನ್ನು ಉಲ್ಲಂಘಿಸಿದರೆ ಕೋಪ ಮತ್ತು ದುಃಖವಷ್ಟೇ ಸಿಗುತ್ತದೆ. ಒಂದ ವೇಳೆ ಅಪರಾಧದ ತನಕ ತಲುಪದಿದ್ದರೂ ಕುಟುಂಬದ ಕಾರಣದಿಂದಾಗಿ ಕೊನೆಗೂ ದುಃಖಿತರಾಗಿ ಉಳಿಯುತ್ತಾರೆ. ಅದು ಅಪರಾಧದ ಈ ಘಟನೆಯಿಂದ ಸಾಬೀತಾಗುತ್ತದೆ.
ನಮ್ಮದನ್ನು ನಂಬಿ ಮತ್ತು ಸುಖಿಯಾಗಿರಿ
ಮಾನವ ದೇಹ ಒಂದೇ ಆಕಾರದಲ್ಲಿ ಎಲ್ಲಿ ತಾನೆ ಇರುತ್ತದೆ? ಅದರಲ್ಲಿ ಸಾವಿರಾರು ಮಾಡೆಲ್ನ ನೋಡಲು ಸಿಗುತ್ತಿ. ಆದರೆ ಎಲ್ಲ ಮಾಡೆಲ್‌ಗಳೂ ಒಂದೇ ರೀತಿಯಲ್ಲಿ ಕೆಲಸ ಮಾಡುತ್ತವೆ. ಬಾರ್ಬಿ ಡಾಲ್‌ತಯಾರಿಸುವ ಕಂಪನಿ ಕಳೆದ 57 ವರ್ಷಗಳಿಂದ ಒಂದೇ ರೀತಿಯ ಗೊಂಬೆಗಳನ್ನು ತಯಾರಿಸುತ್ತಿತ್ತು. ಮಕ್ಕಳ ಮನಸ್ಸಿನಲ್ಲಿ ಗೊಂಬೆಯ ಆ ರೂಪ ಹಾಗೆಯೇ ಉಳಿದುಬಿಡುತ್ತಿತ್ತು. ಬಾರ್ಬಿ ಎಷ್ಟೊಂದು ಸುಂದರ ಎನ್ನುವುದು ಕೂಡ ಅವರ ಮನಸ್ಸಿನಲ್ಲಿರುತ್ತಿತ್ತು. ಈಗ ಬಾರ್ಬಿ ವೈವಿಧ್ಯತೆಯನ್ನು ಮೈಗೂಡಿಸಿಕೊಳ್ಳಲಿದೆ.
ಜಗತ್ತಿನ ಎಲ್ಲ ರಾಷ್ಟ್ರಗಳು ಈಗ ವೈವಿಧ್ಯತೆಗೆ ಪ್ರಾಮುಖ್ಯತೆ ಕೊಡುತ್ತಿವೆ. ಅಮೆರಿಕಾದ ಯಶಸ್ಸಿನ ಹಿಂದೆ ಅದರ ವೈವಿಧ್ಯತೆಯೇ ಕಾರಣ. ಅಲ್ಲಿ ನೂರಾರು ದೇಶಗಳ ನಾಗರಿಕರು ವೈವಿದ್ಯತೆಯನ್ನು ಬಿಂಬಿಸುತ್ತಿದ್ದಾರೆ. ತಾವು ಒಂದೇ ದೇಶದವರು ಎಂದು ಹೇಳಿಕೊಳ್ಳುತ್ತಾರೆ.
ಅದಕ್ಕೆ ಹೋಲಿಸಿದರೆ ಸೌದಿ ಅರೇಬಿಯಾ ಒಂದು ರೀತಿಯ ಧರ್ಮಾಂಧ ದೇಶ. ಅಲ್ಲಿ ಒಂದೇ ಜಾತಿಯ, ಒಂದೇ ಬಗೆಯ ವೇಷಭೂಷಣ ಧರಿಸಿದ, ಒಂದೇ ಭಾಷೆ ಮಾತನಾಡುವ ಜನರನ್ನು ಇಷ್ಟಪಡಲಾಗುತ್ತದೆ. ಒಂದು ವೇಳೆ ಸೌದಿ ಆರೇಬಿಯಾ ಬಳಿ ತೈಲ ಇರದೇ ಹೋಗಿದ್ದರೆ, ಮೆಕ್ಕಾ ಮದೀನಾದ ಹೊರತಾಗಿ ಅದರ ಸ್ಥಿತಿ ಭಾರತದ ಅಜ್ಮೇರ್‌ಗಿಂತ ಚೆನ್ನಾಗೇನೂ ಇರುತ್ತಿರಲಿಲ್ಲ. ಕೆಟ್ಟ ರಸ್ತೆಗಳು, ಕಿಷ್ಕಿಂದೆ ಗಲ್ಲಿಗಳು, ಬಡತನ ತಾಂಡವಾಡುತ್ತಿತ್ತು.
ಭಾರತದಲ್ಲಿ ಒಂದು ವರ್ಗ ಭಾರತವನ್ನು ಒಂದೇ ಅಚ್ಚಿನಡಿ ಹಾಕಲು ಪ್ರಯತ್ನ ಮಾಡುತ್ತಿದೆ. ಆ ಅಚ್ಚಿನ ಡಿಸೈನ್‌ಗಾಗಿ ಮೇಲಿಂದ ಮೇಲೆ ರಾಮಾಯಣ, ಮಹಾಭಾರತ ಪುರಾಣ ಮತ್ತು ಮನುಸ್ಮೃತಿಯ ಬಗ್ಗೆ ಉಲ್ಲೇಖಿಸುತ್ತಿರುತ್ತದೆ. ಅವರಿಗೆ ಇಲ್ಲಿ ಎಂತಹ ಕೆಟ್ಟ ಸ್ಥಿತಿ ಇದೆ ಎಂದರೆ ಲಕ್ಷ ಲಕ್ಷ ಪ್ರಯತ್ನಗಳ ಬಳಿಕ ಭಾರತವನ್ನು ಬಾರ್ಬಿ ಡಾಲ್‌ನಂತೆ ಒಂದೇ ಅಚ್ಚಿನಲ್ಲಿ ರೂಪುಗೊಳಿಸಲು ಆಗುವುದಿಲ್ಲ.
ಬಾರ್ಬಿ ಡಾಲ್‌ಕಂಪನಿ ವೈವಿಧ್ಯತೆಯನ್ನು ಸ್ವೀಕರಿಸಿದೆ. ಬೇರೆ ಬೇರೆ ರೀತಿಯ ಜನರು ಜೊತೆ ಜೊತೆಗೆ ಖುಷಿಯಿಂದ ಇರಬಹುದು, ಸಂಬಂಧ ಬೆಳೆಸಬಹುದು. ವೈವಿಧ್ಯತೆಯ ಜನರು ಜೊತೆಜೊತೆಗೆ ಇದ್ದಾಗಲೇ ಸಮಾಜ ಎನಿಸಿಕೊಳ್ಳುತ್ತದೆ. ಎಷ್ಟೋ ಸಲ ತಲೆ ಕೆಟ್ಟವರಿಂದಲೇ ಸಮಾಜ ಮುಂದೆ ಸಾಗಿದೆ. ಒಂದು ವೇಳೆ ಕೊಲಂಬಸ್‌ಪಶ್ಚಿಮದಿಂದ ಪೂರ್ವಕ್ಕೆ ಶೋಧನೆ ಮಾಡುವ ಹುಚ್ಚುತನ ತೋರದೆ ಇದ್ದಿದ್ದರೆ ಅವನು ಹಡಗಿನಲ್ಲಿ ಅಟ್ಲಾಂಟಿಕ್‌ಸಾಗರವನ್ನು ಪಾರು ಮಾಡುತ್ತಿದ್ದನೆ? ಒಂದು ವೇಳೆ ನ್ಯೂಟನ್‌ತಲೆಯ ಮೇಲೆ ಸೇಬುಹಣ್ಣು ಬೀಳುತ್ತಿದ್ದುದನ್ನು ನೋಡಿ ತಲೆ ಕೆಡಿಸಿಕೊಳ್ಳದೇ ಇದ್ದಿದ್ದರೆ ಅವನು ಭೌತಶಾಸ್ತ್ರದ ಸಿದ್ಧಾಂತಗಳನ್ನು ಕಂಡುಹಿಡಿಯುತ್ತಿದ್ದನೆ?
ಮನೆಮನೆಗಳಲ್ಲಿ ವೈವಿಧ್ಯತೆಗೆ ಅನುವು ಸಿಗಬೇಕು. ಸೊಸೆ ತನ್ನದೇ ಆದ ರೀತಿಯಲ್ಲಿ ನಡೆದುಕೊಂಡು ಹೋಗಬೇಕು. ಅಪ್ಪ ಮಾಡಿದ ರೀತಿಯಲ್ಲಿಯೇ ಮಗ ಇರಬೇಕೆಂದು ಒತ್ತಾಯ ತರುವುದು ಸರಿಯಲ್ಲ.
ಹೆಣ್ಣುಮಕ್ಕಳಿಗೆ ಬಾರ್ಬಿ ಡಾಲ್‌ನ ಹಾಗೆ ದೇಹ ಇರಬೇಕೆಂದು ಒತ್ತಡ ಹೇರಬಾರದು. ಆಕೆಗೆ ವೈವಿಧ್ಯಮಯ ಸ್ನೇಹಿತೆಯರಿರಬೇಕು. ತನಗಿಂತ ವಿಭಿನ್ನ, ಕೆಲವರು ಮುಖದ ಮೇಲೆ ಹೊಡೆದಂತೆ ಮಾತನಾಡುವರು, ಇನ್ನು ಕೆಲವರು ಹಠಮಾರಿ ಸ್ವಭಾದವರು, ಮತ್ತೆ ಕೆಲವರು ಬಿಂದಾಸ್‌ಪ್ರವೃತ್ತಿಯವರು ಇರಬೇಕು. ಆಗಲೇ ಸ್ನೇಹಕ್ಕೆ ರಂಗು ದೊರೆಯುತ್ತದೆ. ಬಾರ್ಬಿ ಡಾಲ್ ಈಗ ಏಳು ಬಣ್ಣಗಳಲ್ಲಿ ಬರುತ್ತಿದೆ. ಅದು ಮುಂಚಿನ ಹಾಗೆ ಸಪೂರ ದೇಹದಷ್ಟೇ ಆಗಿರುವುದಿಲ್ಲ. ತುಂಬಿಕೊಂಡ ದೇಹದ್ದೂ ಕೂಡ ಆಗಿರುತ್ತದೆ. ನಿಮ್ಮ ಮೆದುಳಿನ ಬಾರ್ಬಿಯನ್ನು ಕೂಡ ಹೊಸ ಮಾಡೆಲ್‌ಗಾಗಿ ಸಿದ್ಧವಾಗಿಟ್ಟುಕೊಳ್ಳಿ.