ಸೂರ್ಯನ ಅತಿನೇರಳೆ ಕಿರಣಗಳು ಕೇವಲ ನಮ್ಮ ಚರ್ಮಕ್ಕೆ ಮಾತ್ರವಲ್ಲದೆ, ಕಂಗಳ ಮೇಲೂ ತೀವ್ರ ದುಷ್ಪರಿಣಾಮ ಬೀರುತ್ತವೆ. ಹೀಗಿರುವಾಗ ಬಿರುಬಿಸಿಲಿನ ಈ ದಿನಗಳಲ್ಲಿ ಇಂಥ ತಂಪು ಕನ್ನಡಕಗಳು ಸೂರ್ಯನ ಹಾನಿಕಾರಕ ಕಿರಣಗಳಿಂದ ಕಂಗಳನ್ನು ರಕ್ಷಿಸುತ್ತವೆ.

ಆದರೆ ಕಂಗಳಿಗೆ ಈ ತಂಪು ಕನ್ನಡಕ ಅಗತ್ಯವೇ? ಎಷ್ಟೋ ಜನ ಫ್ಯಾಷನ್‌ ಆ್ಯಕ್ಸೆಸರಿಯಾಗಿ ಇವು ಅಗತ್ಯ ಎನ್ನುತ್ತಾರೆ, ಇವು ನಮ್ಮನ್ನು ಸ್ಟೈಲಿಶ್‌ ಆಗಿಡುತ್ತವೆ ಎನ್ನುತ್ತಾರೆ. ತೀವ್ರ ಬಿಸಿಲಿನ ಪ್ರಖರತೆ ತಪ್ಪಿಸಲು ಇವು ಅನಿವಾರ್ಯ ಎನ್ನುತ್ತಾರೆ. ಎಷ್ಟೋ ಜನ ಇದೇನೂ ಅಗತ್ಯವಿಲ್ಲ ಬಿಡಿ ಎಂದು ತಿರಸ್ಕರಿಸುತ್ತಾರೆ. ಕೇವಲ ಕೆಲವೇ ಮಂದಿ ಮಾತ್ರ ಈ ತಂಪು ಕನ್ನಡಕ ತಮ್ಮನ್ನು ಸೂರ್ಯನ ಅಪಾಯಕಾರಿ ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತವೆ ಎನ್ನುತ್ತಾರೆ.

ಕಂಗಳ ಸುರಕ್ಷತೆಗಾಗಿ

ಸೂರ್ಯನ ಈ ಅತಿನೇರಳೆ ಕಿರಣಗಳ ತೀವ್ರತೆಯಿಂದ ಕಂಗಳಿಗೆ ಕ್ಯಾಟ್ರಾಕ್ಟ್ ಬರುವ ಸಂಭವ ಹೆಚ್ಚು. ಕಂಗಳಿಗೆ ಸನ್‌ ಬರ್ನ್‌ಆಗುವುದರಿಂದ ಫೋಟೋ ಕೆರಟೈಸಿಸ್‌ ಎಂಬ ಕಾಯಿಲೆ ಹೆಚ್ಚುತ್ತದೆ. ಅಷ್ಟು ಮಾತ್ರವಲ್ಲ, ಕ್ಯಾನ್ಸರ್‌ಗೂ ಇದು ಕಾರಣ ಆಗಬಹುದು.

ಸೂರ್ಯನ ಈ ಅಪಾಯಕಾರಿ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಹೆಚ್ಚು ಜಾಗರೂಕತೆ ವಹಿಸಬೇಕಾಗುತ್ತದೆ. ಹೀಗಾಗಿ ಕಂಗಳಿಗೂ ಸನ್‌ಸ್ಕ್ರೀನ್‌ ಬೇಕಾಗುತ್ತದೆ ಎಂಬುದರತ್ತ ಯಾರೂ ಹೆಚ್ಚು ನಿಗಾ ವಹಿಸುವುದಿಲ್ಲ. ನಾವು ಸನ್‌ಗ್ಲಾಸಸ್‌ ಕೊಳ್ಳಲು ಹೋದಾಗ ಅದು ಕೇವಲ ಫ್ಯಾಷನ್‌ ದೃಷ್ಟಿಯಿಂದ ಗ್ಲಾಮರಸ್‌ ಆ್ಯಕ್ಸೆಸರೀಸ್‌ ಆಗಿರುವ ಬದಲು ಕಂಗಳ ರಕ್ಷಾಕವಚ ಹೌದು ಎಂಬ ಮುನ್ನೆಚ್ಚರಿಕೆಯಿಂದಲೇ ಕೊಳ್ಳಬೇಕು.

ಕಂಗಳಿಗೂ ಬೇಕು ಸನ್ಸ್ಕ್ರೀನ್

ಸೂರ್ಯನ ಅತಿನೇರಳೆ ಕಿರಣಗಳು ಕೇವಲ ಚರ್ಮಕ್ಕೆ ಮಾತ್ರವಲ್ಲದೆ ನಮ್ಮ ಕಂಗಳಿಗೂ ಹೆಚ್ಚಿನ ಹಾನಿ ಉಂಟುಮಾಡುತ್ತವೆ. ದೀರ್ಘಾವಧಿಯವರೆಗೆ ಇವಕ್ಕೆ ಕಣ್ಣುಗಳನ್ನೊಡ್ಡಿದರೆ ಶಾಶ್ವತ ಹಾನಿಯೂ ಆಗಬಹುದು. ಯುವಿ ಅಲ್ಟ್ರಾವೈಲೆಟ್‌ ಕಿರಣಗಳು ಕಣ್ಣಿನ ರೆಟಿನಾ ಹಾಗೂ ಕಾರ್ನಿಯಾಗೆ ಸಾಕಷ್ಟು ಹಾನಿ ಮಾಡುತ್ತವೆ. ಆದರೆ ನಮ್ಮ ದೇಶದಲ್ಲಿ ಜನ ಚರ್ಮದ ಹಾನಿ ತಪ್ಪಿಸಲು ಸನ್‌ಸ್ಕ್ರೀನ್‌ ಬಳಸುತ್ತಾರೆಯೇ ಹೊರತು, ಕಂಗಳ ರಕ್ಷಣೆಯತ್ತ ಕಿಂಚಿತ್ತೂ ಗಮನಹರಿಸುವುದಿಲ್ಲ. ಅಷ್ಟು ಮಾತ್ರವಲ್ಲ, ಬಿಸಿಲಲ್ಲಿ ಹೋಗುವವರು, ಫ್ಯಾಷನ್‌ ಹೆಸರಿನಲ್ಲಿ ತಾವು ಧರಿಸಿರುವ ತಂಪು ಕನ್ನಡಕ, ಈ ರೀತಿ ಬಿಸಿಲಿನ ವಿರುದ್ಧ ಎಷ್ಟು ಮಾತ್ರ ರಕ್ಷಣೆ ಕೊಡುತ್ತದೋ ಇಲ್ಲವೋ ಎಂದೂ ಯೋಚಿಸುವುದಿಲ್ಲ.

ಸನ್ಗ್ಲಾಸಸ್ಖರೀದಿಸು ಮುನ್ನ

ಜನರ ಮನದಲ್ಲಿ ಬೇರೂರಿರುವ ಮತ್ತೊಂದು ಭ್ರಮೆ ಎಂದರೆ ಸನ್‌ಗ್ಲಾಸಸ್‌ ಕೇವಲ ಬೇಸಿಗೆಯಲ್ಲಿ ಮಾತ್ರ ಧರಿಸುವ ಆ್ಯಕ್ಸೆಸರೀಸ್ ಎಂಬುದು. ಹಾಗೆಂದು ಚಳಿಗಾಲದಲ್ಲಿ ಚುರುಗುಡುವ ಬಿಸಿಲಿರುವಾಗ ಇದನ್ನು ಧರಿಸಬಾರದು ಅಂತೇನಿಲ್ಲ. ಅಲ್ಟ್ರಾ ವೈಲೆಟ್ ಕಿರಣಗಳು ಪ್ರತಿ ಋತುವಿನಲ್ಲೂ ಅಷ್ಟೇ ಅಪಾಯಕಾರಿ. ಹೀಗಾಗಿ ನಾವು ಈ ಭ್ರಮೆಯನ್ನು ಬಿಟ್ಟು, ತಂಪು ಕನ್ನಡಕವನ್ನು ನಮ್ಮ ಫ್ರೆಂಡ್‌ ಎಂದು ಭಾವಿಸಬೇಕು. ಹೀಗಾಗಿ ಇದನ್ನು ಖರೀದಿಸುವಾಗ ನಮ್ಮ ಕಂಗಳ ಆರೋಗ್ಯಕ್ಕೆ ಇದು ಎಷ್ಟು ಲಾಭಕರ ಎಂದು ಯೋಚಿಸಬೇಕು, ಆಗ ಮಾತ್ರ ನಮ್ಮ ಹಣ ವ್ಯರ್ಥ ಆಗದು. ಇಂಥ ಕನ್ನಡಕ ಮುಖ್ಯವಾಗಿ ಸೂರ್ಯನ ಅತಿನೇರಳೆ ಕಿರಣಗಳಿಂದ ಕಂಗಳನ್ನು ರಕ್ಷಿಸಬಲ್ಲದೋ ಇಲ್ಲವೋ ಖಾತ್ರಿಪಡಿಸಿಕೊಳ್ಳಬೇಕು.

ಮಾಲ್ ಜಿಮ್ ಕಂಪನಿ ಅಪಾಯಕಾರಿ ಅಲ್ಟ್ರಾ ವೈಲೆಟ್‌ ಕಿರಣಗಳಿಂದ ಸುರಕ್ಷೆ ಒದಗಿಸುವ ಸನ್‌ಗ್ಲಾಸಸ್‌ ತಯಾರಿಸುತ್ತದೆ. ಈ ಕಂಪನಿಯ ಪೇಟೆಂಟೆಡ್‌ 9 ಪದರಗಳ ಪೋಲರೈಸ್ಡ್ ಪ್ಲಸ್‌-2 ಟೆಕ್ನಿಕ್‌, ಅಲ್ಟ್ರಾವೈಲೆಟ್‌ ಕಿರಣಗಳಿಂದ ಶೇ.100 ಹಾಗೂ ಅದರ ಕಾಂತಿಯ ವಿರುದ್ಧ ಶೇ.99.9ರಷ್ಟು ರಕ್ಷಣೆ ಒದಗಿಸುತ್ತದಂತೆ. ಈ ಕಂಪನಿ ತನ್ನ ಲೆನ್ಸ್ ನ್ನು ಇನ್ನಷ್ಟು ಉತ್ತಮ ಗೊಳಿಸಲು ಭೂಮಿಯ 3 ಅಪರೂಪದ ಅಂಶಗಳು ಹಾಗೂ ಇತರ ಘಟಕಗಳನ್ನು ಬೆರೆಸುವ ಏಕಮಾತ್ರವಾದುದು ಎಂಬ ಹೆಗ್ಗಳಿಕೆ ಹೊಂದಿದೆ.

ಮಾಲ್ ಜಿಮ್ ನ ಸನ್‌ಗ್ಲಾಸಸ್‌ ಪ್ರಿಸ್‌ಕ್ರಿಪ್ಶನ್‌ ರೂಪದಲ್ಲಿಯೂ ಲಭ್ಯವಿದೆ. ಕಂಗಳ ಕಾಂತಿಯ ಸಮಸ್ಯೆಯುಳ್ಳವರು ಸಹ ಇದನ್ನು ಬಳಸಬಹುದು ಎಂಬುದಕ್ಕಾಗಿ ಹೀಗೆ ನೀಡಿದ್ದಾರೆ. ಇದನ್ನು ಧರಿಸಿ ಹೊರಗೆ ಹೊರಟರು ತಮ್ಮ ಕಂಗಳ ಕಾಂತಿ ಸುಧಾರಿಸಿರುವುದು ಮಾತ್ರವಲ್ಲದೆ, ಅಲ್ಟ್ರಾವೈಲೆಟ್‌ ಕಿರಣಗಳ ವಿರುದ್ಧ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬಹುದು.

ಆದ್ದರಿಂದ ಇನ್ನು ತಡಮಾಡಬೇಡಿ. ನಿಮ್ಮಿಷ್ಟದ ಪ್ರಕಾರ ಸನ್‌ಗ್ಲಾಸಸ್‌ ಆರಿಸಿ, ಆದರೆ ಅದು ಕಂಗಳ ಆರೋಗ್ಯಕ್ಕೆ ಪೂರಕವಾಗಿರಲಿ.

ಜಿ. ರಾಧಿಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ