ಮನೆ ಎಂದರೆ ಎಲ್ಲರಿಗೂ ಸುಖ ನೆಮ್ಮದಿ ಶಾಂತಿಗಳನ್ನು ನೀಡುವ ಗೂಡು. ಇಲ್ಲಿ ಮಾನವ ಸಂಬಂಧಗಳು ನೆಲೆಯೂರಿರುತ್ತವೆ. ಆ ಸಂಬಂಧಗಳನ್ನು ಹಸುನುಗೊಳಿಸಲು, ಸಂಬಂಧಗಳು ನೆಲೆಸಲು ಇದೊಂದು ಬಾಂಧವ್ಯದ ನೆಲೆಗೂಡು. ಮನೆ ಎಂದರೆ ಬಹಳಷ್ಟು ಜನರ ಕನಸು, ಬಹಳಷ್ಟು ಜನರ ಜೀವನದ ಗುರಿ, ಬಹಳಷ್ಟು ಜನರ ಧ್ಯೇಯಗಳು, ಬಹಳಷ್ಟು ಮಂದಿಯ ಜೀವಮಾನದ ಸಾಧನೆಯೂ ಸಹ ಹೌದು. ಇಂತಹ ಪವಿತ್ರ ಸ್ಥಳದಲ್ಲಿ ನಾವೆಲ್ಲ ಕೂಡಿ ನಲಿದು ಕುಪ್ಪಳಿಸಿ ಕುಣಿದಾಡುತ್ತೇವೆ. ಮನೆಯನ್ನು ಸುಂದರವಾಗಿ ಅಲಂಕರಿಸಿ ನೋಡಿದಾಗ ಮನಕ್ಕೆ ಮುದ, ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಆರಾಮದಾಯಕ ಎನಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯೂ ಸಹ 20X20 ಸೈಟ್‌ನಲ್ಲಿ ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಡ್ಯೂಪ್ಲೆಕ್ಸ್ ಮನೆಗಳನ್ನು ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹವೇ ಸರಿ. ಆದರೆ ಇಂಥ ಮನೆಗಳಿಂದ ಒಬ್ಬ ಸಾಮಾನ್ಯ ಗೃಹಿಣಿ ಎದುರಿಸಬೇಕಾದ ಸಮಸ್ಯೆಗಳನ್ನು ನನ್ನ ಅನುಭವದಲ್ಲಿ ಹೇಳಬೇಕೆನಿಸಿದೆ. ಮುಂದೆ ಇಂತಹ ಮನೆ ಕಟ್ಟಲು ಇಚ್ಛಿಸುವವರು ಇದನ್ನೆಲ್ಲ ಯೋಚನೆ ಮಾಡಿ ಮುಂದಡಿ ಇಡಿ ಎಂಬುದು ನನ್ನ ಆಶಯ. ಆ ನಿಟ್ಟಿನಲ್ಲಿ ನಾವು ಎದುರಿಸಬೇಕಾದವರು ಎಂದರೆ ನಮ್ಮ ಮಕ್ಕಳು ಹಾಗೂ ಮನೆಯ ಕೆಲಸದವರು.

ಡ್ಯೂಪ್ಲೆಕ್ಸ್ ಹೌಸ್‌ನಲ್ಲಿ ಸರ್ವೇ ಸಾಮಾನ್ಯವಾಗಿ ಮಾಸ್ಟರ್‌ ಬೆಡ್‌ ರೂಮ್ ಅಂತ ಇದ್ದೇ ಇರುತ್ತದೆ. ಮಕ್ಕಳು ಚಿಕ್ಕವರಿದ್ದಾಗ ಎಲ್ಲರೂ ಆ ಒಂದೇ ಹಾಸಿಗೆಯಲ್ಲಿ ಮಲಗಿರುತ್ತೇವೆ. ಅಪ್ಪ ಮಕ್ಕಳು ಒಟ್ಟಿಗೇ ಬಾತ್‌ ಟಬ್‌ನಲ್ಲಿ ಸ್ನಾನ ಮಾಡುತ್ತಾರೆ. ಮೈಕೈ ಉಜ್ಜುತ್ತ ಸ್ನಾನ ಮಾಡಿಸ್ತಾರೆ. ಬಟ್ಟೆ ಬರೆ ಎಲ್ಲಾ ಅಚ್ಚುಕಟ್ಟು ಮಾಡಿಕೊಡ್ತೀವಿ. ಆಗೆಲ್ಲ ಮಕ್ಕಳನ್ನು ಸ್ಕೂಲಿಗೆ ಕಳುಹಿಸುವ ಭರದಲ್ಲಿ ನಾವುಗಳೂ ಸಹ ಬಹಳ ಆ್ಯಕ್ಟಿವ್ ‌ಆಗಿರ್ತೀವಿ. ಅದೇ ದೊಡ್ಡವರಾದರೆ, ಅಬ್ಬಬ್ಬಾ ಸಾಕುಸಾಕಾಗುತ್ತೆ. ಅವರ ಜೊತೆ ಜೊತೆಗೇ ನಾವು ಬೆಳೆದಿರ್ತೀವಿ. ನಮಗೂ ವಯಸ್ಸಾಗುತ್ತಾ ಬಂದಿರುತ್ತೆ. ಮೇಲಿನ ಬಾತ್‌ ರೂಮಿನಲ್ಲಿ ಸ್ನಾನ ಮಾಡುತ್ತಿರುತ್ತಾರೆ. ಅಲ್ಲಿಂದ ಜೋರಾಗಿ ಕೂಗಿ ಟವೆಲ್‌, ಕಾಚ ಅಂತಾರೆ. ಆ ಸಮಯವೇ ಬಹಳ ಹಾಟ್‌ ಸಮಯ. ಇತ್ತ ನಾವು ಅಡುಗೆಮನೆ, ದೇವರ ಮನೆಯಲ್ಲಿ ಬ್ಯುಸಿ. ಒಲೆ ಮೇಲೆ ಎಣ್ಣೆಯೋ ಬಿಸಿ ನೀರೋ ಇದ್ದರೆ ಎಷ್ಟು ಜೋಪಾನವಾಗಿರಬೇಕು. ಏಮಾರಿದರೆ ಒಗ್ಗರಣೆಯ ಎಣ್ಣೆ ಮೈಮೇಲೆ ಪ್ರೋಕ್ಷಣೆ ಆಗುತ್ತೆ. ಕರಿಯೋಕೆ ಏನಾದ್ರೂ ಇಟ್ಟಿದ್ರೆ ಅಂತೂ ಗೋವಿಂದ.... ತರಕಾರಿ ಹೆಚ್ಚುತ್ತಿದ್ದರೆ ಕೈ ಕೊಯ್ದುಕೊಳ್ಳೋದು, ಇಲ್ಲಾ ಕುಕ್ಕರ್‌ ಇಟ್ಟಿದ್ರೆ ಕೈ ಸುಟ್ಟುಕೊಳ್ಳೋದು, ಅಲ್ಲೆಲ್ಲೋ ಐರನ್‌ ಬಾಕ್ಸ್ ಇಟ್ಟಿದ್ದರೆ ಅದರ ಮೇಲೆ ನಿಗಾ, ಗಡಿಬಿಡಿಯಲ್ಲಿ ಕೈ ಜಾರಿದರೆ ಆಗುವ ಅನಾಹುತಗಳೋ ಹಲವಾರು.

ನಮ್ಮ ಊಹೆಗೂ ನಿಲುಕದ ಅಪಘಾತಗಳು, ಬೈದು ಕಿರುಚಿ ನಾವು ಆ ಕೆಲಸದ ಮಧ್ಯದಲ್ಲೂ ಅವರಿಗೆ ಆ `ಆ್ಯಕ್ಸೆಸರೀಸ್‌'ಗಳನ್ನು ಸರಬರಾಜು ಮಾಡಬೇಕು. ಇಲ್ಲದಿದ್ದರೆ ಎಲ್ಲಕ್ಕೂ ಅಮ್ಮನೇ ಹೊಣೆ. ಆ ಸಮಯದಲ್ಲಿ ಯಜಮಾನರ ಹೆಲ್ಪ್ ಕೇಳಿದರೆ? ಆಕಾಶ ಭೂಮಿ ಒಂದಾಗಿ ಹೋಗೋತರಹ ಕಿರುಚಾಡಿ ಕೂಗಾಡಿ ಇಡೀ ಅಟ್ಮಾಸ್ಛಿಯರ್‌ ಹಾಳು ಮಾಡಿರುತ್ತಾರೆ. ಲೋಕದ ಮಾತೇ ಅಷ್ಟೇ ತಾನೆ! `ಒಳ್ಳೆದೆಲ್ಲಾ ಅಪ್ಪಂದು, ಕೆಟ್ಟದ್ದೆಲ್ಲಾ ಅಮ್ಮಂದು!' ಸರಿ ಇದು ಒಂದು ಏಜ್‌ನಲ್ಲಿ. ಆದರೆ ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲಂತೂ ರಾಮರಾಮ! ದೊಡ್ಡರಾಗಿರುತ್ತಾರಲ್ಲಾ! ಅಂತ ನಾವು ಸುಮ್ಮನಿರೋದಕ್ಕೆ ಆಗೋಲ್ಲ. ನಮ್ಮ ಮಾತು ಕೇಳೋಲ್ಲ. ಎಷ್ಟೇ ಹೇಳಿದರೂ ಮೈಮೇಲೆ ಪ್ರಜ್ಞೆ ಇರೋಲ್ಲ. ಕೆಲಸ ಎಲ್ಲೋ, ಗಮನ ಇನ್ನೆಲ್ಲೋ! ಮೊಬೈಲ್‌, ಫ್ರೆಂಡ್ಸ್ ಮೇಲೆ ನಿಗಾ ಜಾಸ್ತಿ ಆಗುತ್ತೆ. ಎಲ್ಲ ಮರೀತಾರೆ. ಟಾಯ್ಲೆಟ್‌ ಬಾತ್‌ ರೂಮುಗಳಲ್ಲೂ ಮೊಬೈಲ್‌ಗಳನ್ನು ಕೊಂಡೊಯ್ಯುತ್ತಾರೆ. ನಾವು ಕೆಳಗಿನಿಂದ ಕಿರುಚಿದರೂ ಅವರುಗಳಿಗೆ ಕೇಳಿಸೋಲ್ಲ! ಫಾಲೋ ಅಪ್‌ ಮಾಡೋಕ್ಕೆ ಕಷ್ಟ ಆಗುತ್ತೆ. ಪ್ರಶ್ನಿಸಿದ್ರೆ ಹಾರಿಕೆ ಉತ್ತರ ನೀಡೋದ್ರಲ್ಲಿ ನಿಸ್ಸೀಮರು. ಇನ್ನು ಹೆಚ್ಚು ಮಾತಾಡಿಸಿದ್ರೆ ಬಾಯಿಗೆ ಬಂದಂತೆ ಮಾತನಾಡಿ ನಮ್ಮ ಬಾಯಿ ಮುಚ್ಚಿಸುತ್ತಾರೆ. ಆಗ ನಾವು ಓದಿದ, ಕೇಳಿದ ಲೇಖನಗಳ ವಿಷಯ ನಮ್ಮ ಮನಸ್ಸುಗಳಲ್ಲೇ ಚರ್ಚೆಗೊಳಪಟ್ಟು, ಕೊನೆಗೆ `ನಮ್ಮದೇ ತಪ್ಪು' ಎಂಬ ತೀರ್ಮಾನಕ್ಕೆ ನಾನು ಬರಬೇಕಾಗುತ್ತೆ. ಮೊಬೈಲ್ ‌ಕೊಡಿಸಲೇ ಬಾರದಿತ್ತು ಅನಿಸುತ್ತೆ! ಪ್ರಯೋಜನವೇನು? ಇಷ್ಟೆಲ್ಲದರ ಮಧ್ಯೆ ಮಕ್ಕಳು ಕೂಗಿಕೊಂಡಾಗ ಟವೆಲ್‌, ಅಂಡರ್‌ವೇರ್‌ ಕೊಡಲೇಬೇಕು. ಇಲ್ಲದಿದ್ರೆ ಅವರಿಗೂ ಸ್ಕೂಲ್ ಕಾಲೇಜುಗಳಿಗೆ ಲೇಟ್‌, ಇವರಿಗೂ ಆಫೀಸ್‌ಗೆ ಲೇಟ್‌. ಸ್ವಲ್ಪ ತಡವಾದ್ರೂ ತೊಂದರೇನೇ. ಸರಿ ಮತ್ತೆ ಅಲ್ಲೂ ಅಮ್ಮನಿಗೇ ಬೈಗಳು. ನಿನ್ನಿಂದ ಲೇಟಾಯ್ತು. ನನಗೆ ಪನಿಷ್‌ಮೆಂಟ್‌ ಕೊಟ್ಟರು. ಎಷ್ಟು ಅವಮಾನವಾಯಿತು ಗೊತ್ತಾ? ಎಂದು ನಿಂದಿಸಿ ಕೋಪಕ್ಕೆ ಅಂದಿನ ಡಬ್ಬಿ ಹಾಗೇ ವಾಪಸ್ಸು ಬರುತ್ತೆ. ಅವಳ ಪರಿಶ್ರಮ ಅಲ್ಲಿಗೆ ಅಂದಿಗೆ ಫೇಲ್ಯೂರ್‌! ಇನ್ನು ಮಕ್ಕಳ ಈ ತೊಳಲಾಟ ಪೇಚಾಟ ನೋಡಿ ತಂದೆ `ನಿನಗೇನು ಬೇಗ ಮಾಡೋಕ್ಕೇ? ನೋಡು ಮಕ್ಕಳು ಸಫರ್‌ ಮಾಡಿದ್ರು ನಿನ್ನಿಂದ,' ಎಂದಾಗಲಂತೂ ಮನಸ್ಸಿಗೆ ತುಂಬಾ ನೋವಾಗುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ