ವ್ಯರ್ಥ ಮಾತುಗಳಿಂದ ಕೆಲಸವಾಗುವುದಿಲ್ಲ
ಸ್ಮೃತಿ ಇರಾನಿಯವರು ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವಿರೋಧಗಳಿಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ನೀಡಿದ ಉತ್ತರ, ತರ್ಕಗಳು, ಕುತರ್ಕಗಳು, ಸತ್ಯ, ಅರ್ಧಸತ್ಯ ಮತ್ತು ಉತ್ತಮ ತಥ್ಯಗಳಿಂದ ಕೂಡಿದ್ದವು. ಆದರೆ ಒಪ್ಪಬೇಕಾದ ವಿಷಯವೆಂದರೆ ಟಿ.ವಿ. ಸ್ಕ್ರೀನ್ ಅವರಿಗೆ ಸಾಕಷ್ಟು ವಿಷಯಗಳನ್ನು ಕಲಿಸಿದೆ. ಈಗ ಅವರು ಓತಪ್ರೋತವಾಗಿ ಮಾತನಾಡುತ್ತಾರೆ. ಅವರ ಅಂಗ ಮುದ್ರೆಗಳಂತೂ ಅವರ ಬಾಯಿಗಿಂತ ತುಸು ಹೆಚ್ಚೇ ಮಾತಾಡುತ್ತವೆ. ಇಟಾಲಿಯನ್ ಭಾಷೆಯನ್ನು ಬರೀ ಬಾಯಿಯಿಂದ ಮಾತ್ರವಲ್ಲದೆ, ಕೈಗಳು, ಕಣ್ಣುಗಳೂ ಮತ್ತು ಶರೀರದಿಂದಲೂ ಮಾತನಾಡಲಾಗುತ್ತದೆ ಎನ್ನುತ್ತಾರೆ. ಯಾರಾದರೂ ಇಟಾಲಿಯನ್‌ರೊಂದಿಗೆ ಮಾತಾಡುವಾಗ ಅವರು ಕೈಗಳು, ಕಾಲುಗಳು, ಕುತ್ತಿಗೆ ಅಂದರೆ ಇಡೀ ಶರೀರೀ ಭಾಷೆಯಂತೆ ಚಲಿಸುತ್ತದೆ. ಇಟಾಲಿಯನ್ ಸೋನಿಯಾ ಗಾಂಧಿಯ ಪಾರ್ಟಿಯ ಪ್ರಶ್ನೆಗಳಿಗೆ ಉತ್ತರ ಕೊಡುವಲ್ಲಿ ಸ್ಮೃತಿ ಇರಾನಿ ಈ ಕಲೆಯನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡರು.
ಸ್ಮೃಮತಿ ಇರಾನಿ ಉತ್ಸಾಹದಿಂದ ಮಾತಾಡಿದರು. ಆದರೆ ವಿದ್ಯಾರ್ಥಿಗಳ ಸಂಘರ್ಷ ಮತ್ತು ದಲಿತರೊಂದಿಗೆ ಹೆಚ್ಚುತ್ತಿರುವ ದುರ್ವ್ಯವಹಾರ ಬರೀ ಮಾತುಗಳಿಂದ ದೂರಾಗುವುದಿಲ್ಲ. ಮನೆಯಲ್ಲಿ ಪಲ್ಯ ಏಕೆ ಸೀದುಹೋಯ್ತು, ಮಗ ಪರೀಕ್ಷೆಯಲ್ಲೇಕೆ ಫೇಲಾದ, ಮಗಳು ಏಕೆ ತಡವಾಗಿ ಮನೆಗೆ ಬಂದಳು ಇತ್ಯಾದಿಗಳಿಗೆ ಅರ್ಧ ಮುಕ್ಕಾಲು ಗಂಟೆಗಳ ವಾಕ್ ಪ್ರಹಾರ ಸಮಸ್ಯೆಗೆ ಪರಿಹಾರ ಕೊಡುವುದಿಲ್ಲ. ಸಮಸ್ಯೆಯಂತೂ ದೃಢವಾದ ಹೆಜ್ಜೆ ಇಡುವುದರಿಂದಲೇ ದೂರಾಗುತ್ತದೆ. ಮನೆಗಳಲ್ಲಿ ವಿವಾದಗಳನ್ನು ಬರೀ ಮಾತುಗಳಿಂದಲೇ ಪರಿಹರಿಸಲು ಪ್ರಯತ್ನಿಸುವುದರಿಂದ ಅವು ಪರಿಹಾರವಾಗುವುದಕ್ಕಿಂತ ಹೆಚ್ಚು ಪೋಷಿಸಲ್ಪಡುತ್ತದೆ.
ನಮ್ಮ ದೇಶದಲ್ಲಿ ದಲಿತರೊಂದಿಗಿನ ದುರ್ವರ್ತನೆ ಶತಮಾನಗಳಿಂದ ನಡೆಯುತ್ತಿದೆ. ಅವರೂ ಸಹ ಶತಮಾನಗಳಿಂದ ಇದು ನಮ್ಮ ವಿಧಿಯಲ್ಲಿ ಬರೆದಿದೆ, ಹಿಂದಿನ ಜನ್ಮದ ಕರ್ಮಫಲ ಎಂದು ಯೋಚಿಸುತ್ತಿದ್ದರು. ಹೀಗೆಯೇ ಮಹಿಳೆಯರೂ ಯೋಚಿಸುತ್ತಿದ್ದರು. ಹೆಚ್ಚಿನ ಮಹಿಳೆಯರು ಶತಮಾನಗಳವರೆಗೆ ಸಾಮಾಜಿಕ ದುರ್ವರ್ತನೆಗೆ ತುತ್ತಾಗಿದ್ದರು. ವಿಧವೆಯರಾಗುವುದು, ಬಂಜೆಯರಾಗುವುದು, ಬರೀ ಹೆಣ್ಣುಮಕ್ಕಳಿಗೆ ಜನ್ಮ ನೀಡುವುದು, ಗಂಡ ಬೇರೆ ಹೆಣ್ಣುಗಳ ಬಳಿ ಹೋಗುವುದು, ಗಂಡ ಮತ್ತು ಮಕ್ಕಳು ಹಾಳಾಗುವುದು ಅವರು ಬಡವರು, ಮೂಡನಂಬಿಕೆ ಇರುವವರು, ತಿರಸ್ಕೃತರೂ ಆಗಿದ್ದರೆ ತಪ್ಪು ಅವರದೇ ಎಂದು ಎಲ್ಲರ ದೋಷವನ್ನು ಮಹಿಳೆಯರ ಮೇಲೆ ಹೊರೆಸುತ್ತಾರೆ.
ಸ್ಮೃತಿ ಇರಾನಿ ಮಹಿಳೆಯರ ದುಃಖ ಅರ್ಥ ಮಾಡಿಕೊಳ್ಳುತ್ತಾ ಸಮಾಜದ ದೊಡ್ಡ ಭಾಗವಾದ ದಲಿತರು, ಶೂದ್ರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಹುದಿತ್ತು, ಅವರಿಗಾಗಿ ಏನಾದರೂ ಮಾಡಬಹುದಿತ್ತು. ಆದರೆ ಅವರು ಅದೇ ಸಾಮಾಜಿಕ ಅಂಧಾನುಕರಣೆ ಅನುಕರಿಸಿದರು. ಅದು ಸಮಸ್ಯೆಗೆ ಪರಿಹಾರವಾಗಿರದೆ ಸಮಸ್ಯೆಯ ಮೂಲವಾಗಿದೆ.
ಮಹಿಳೆಯರೊಂದಿಗೂ ಹೀಗೇ ಆಗುತ್ತದೆ. ಏಕೆಂದರೆ ದೌರ್ಜನ್ಯಕ್ಕೊಳಗಾದ ಪ್ರತಿ ಸೊಸೆಯೂ ತಾನು ಅತ್ತೆಯಾದ ಬಳಿಕ ತನ್ನ ಸೊಸೆಯ ಮೇಲೆ ಅದರ ಸೇಡು ತೀರಿಸಿಕೊಳ್ಳುತ್ತಾಳೆ. ಅದು `ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎಂಬಂತೆ ಮನೆ ಮನೆಯ ಕಥೆಯಾಗಿದೆ. ದಲಿತರು, ಶೂದ್ರರು ಮತ್ತು ಹಿಂದುಳಿದವರ ಬಗ್ಗೆ ಅನ್ಯಾಯಗಳು ಗಲ್ಲಿ ಗಲ್ಲಿಯ ಕಥೆಯಾಗಿವೆ.
ಸಮಾಜದ ನಾಯಕರು, ಧಾರ್ಮಿಕವಾದಿ ಮುಖಂಡರ ಯಶಸ್ಸೆಂದರೆ ಅವರು ಯಾವಾಗಲೂ ಸಂಸ್ಕೃತಿ, ಸಂಸ್ಕಾರಗಳು, ರೀತಿ ರಿವಾಜುಗಳು, ಧರ್ವೋಪದೇಶಗಳ ಬಗ್ಗೆ ಮಾತನಾಡಿ ಯಥಾಸ್ಥಿತಿ ಕಾಯ್ದುಕೊಳ್ಳುತ್ತಾರೆ. ಸಾಮಾಜಿಕ ತುಳಿತಕ್ಕೊಳಗಾಗಿದ್ದು, ಅನ್ಯಾಯವನ್ನು ಸಹಿಸುವವರು ಕಟಕಟೆಯಲ್ಲಿ ನಿಂತಿರುತ್ತಾರೆ. ಸ್ಮೃತಿ ಇರಾನಿಯವರು ನಟಿಸಿದ ಧಾರಾವಾಹಿಗಳಲ್ಲಿ ನಿರ್ದೋಷಿ ಮಹಿಳೆಯರು, ಹುಡುಗಿಯರು, ಸೊಸೆಯಂದಿರು, ಪತ್ನಿಯರಿಗೆ ಸಮಾಜದಲ್ಲಿ ಶೋಷಿತರಾದ ದಲಿತರಿಗೆ ಆದಂತೆಯೇ ಆಗುತ್ತದೆ. ಕೆಲವು ಧಾರಾವಾಹಿಗಳಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ವಿವಶರಾಗುತ್ತಾರೆ, ಕೆಲವು ಕಡೆ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ, ಕೆಲವು ಕಡೆ ಕೋಣೆಗಳಲ್ಲಿ ಬಂಧಿತರಾಗಿ ಇರಬೇಕಾಗುತ್ತದೆ, ಕೆಲವು ಕಡೆ ತಲೆಮರೆಸಿಕೊಂಡು ಮಥುರಾ, ಕಾಶಿಗೆ ಹೋಗಬೇಕಾಗುತ್ತದೆ.
ಶಿಕ್ಷಣ ಮಂತ್ರಿಯಾಗಿದ್ದಲ್ಲದೆ, ಮಹಿಳೆಯರ ರೀತಿ ಪೀಡಿಸಲ್ಪಟ್ಟ ಹಿಂದುಳಿದ ವರ್ಗಕ್ಕೆ ಏನೂ ಮಾಡದೆ ದೇಶಭಕ್ತಿಯ ಹೆಸರಿನಲ್ಲಿ ಧರ್ಮ ಭಕ್ತಿ ಅಥವಾ ದಾನಭಕ್ತಿಯ ಮರೆಯಲ್ಲಿ ಸಂದೇಶ ಕೊಡಲಾಗಿದೆ. ಹೇಗೆ ನಡೆಯುತ್ತಿದೆಯೋ ಹಾಗೇ ಮಾಡುವ. ಇಂದಿನ ಸಮಾಜ ಈ ವಂಚಿತ ವರ್ಗಗಳು ಮತ್ತು ಮಹಿಳೆಯರಿಗೆ ಕೊಂಚ ಜಮೀನು ಅಥವಾ ಕೊಂಚ ಸೂರು ಕೊಡಲೂ ಸಿದ್ಧವಿಲ್ಲ. ಒಂದು ವೇಳೆ ಮಹಿಳೆಯರಿಗೆ ರಾಮಾಯಣದ ಸೀತೆ ಆಗಿರಬೇಕೆಂದರೆ ಶೂದ್ರರು ಶಂಬೂಕರಾಗಿರಬೇಕು. ಸ್ಮೃತಿ ಇರಾನಿಯರ ಸರ್ಕಾರ ಎರಡೂ ವಿಷಯಗಳಲ್ಲಿ ಏನೂ ಮಾಡಲು ಸಿದ್ಧವಿಲ್ಲ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅವರು ಸರ್ಕಾರದ ಸಮರ್ಥನೆಯನ್ನು ಬಹಳ ಉತ್ಸಾಹದಿಂದ ಮಾಡಿದರು. ಆದರೆ ಅವರ ಸರ್ಕಾರ ಕಸದ ರಾಶಿಗೆ ಬೆಂಕಿ ಹಚ್ಚಲು ಸಿದ್ಧವಿಲ್ಲ.
ದೇಶವನ್ನು ಜಗಿಯುತ್ತಿರುವ ಪಾನ್ ಮಸಾಲ
ಪಾನ್ ಮಸಾಲಾ ಬಗ್ಗೆ ಪ್ರಚಾರ ಮಾಡುತ್ತಿರುವ ನಟರ ಹೆಂಡತಿಯರಿಗೆ ದೆಹಲಿ ಸರ್ಕಾರ ಪತ್ರ ಬರೆದಿದೆ. ಅದರಲ್ಲಿ ಶಾರೂಖ್ ಖಾನ್, ಅಜಯ್ ದೇವಗನ್, ಆರ್ಬಾಜ್ ಖಾನ್, ಗೋವಿಂದ, ಸೈಫ್ ಅಲಿಖಾನ್ ಮುಂತಾದವರು ಇದರಲ್ಲಿ ಸೇರಿದ್ದಾರೆ. ಈ ತಾರೆಯರು ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಹೇಗೆ ಪ್ರಚಾರ ಮಾಡುತ್ತಾರೆಂದರೆ, ಇವನ್ನು ತಿನ್ನುವವರು ಜಗತ್ತನ್ನೇ ಗೆದ್ದುಬಿಡುತ್ತಾರೆಂಬಂತೆ ಬಿಂಬಿಸುತ್ತಾರೆ.
ಈ ತೆರನಾದ ಜಾಹೀರಾತುಗಳಿಗೆ ಭಾರಿ ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ. ಈ ಜಾಹೀರಾತುಗಳ ನಿರ್ಮಾಣ ಅತ್ಯುತ್ತಮ ಗುಣಮಟ್ಟದ್ದಾಗಿರುತ್ತದೆ. ಏಕೆಂದರೆ ಪ್ರತಿಯೊಂದು ಬಗೆಯ ದುರ್ಗುಣಗಳಿಂದ ಕೂಡಿರುವ ಈ ಪಾನ್ ಮಸಾಲಾಗಳನ್ನು ಮಾರಲು ಯೋಗ್ಯವಾಗಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಸುಲಭ ವಿಧಾನವೆಂದರೆ, ಪಾತ್ರಗಳನ್ನು ಇನ್ನಷ್ಟು ಯಶಸ್ವಿ, ಅತಿಯಶಸ್ವಿ ಹಾಗೂ ಪರಮ ಯಶಸ್ವಿಗೊಳಿಸುವುದು ಮತ್ತು ನಟ ತಾನೂ ಕೂಡ ಪಾನ್ ಮಸಾಲಾ ಸೇವಿಸಿಬಿಡುತ್ತೇನೆ ಎಂದು ಹೇಳಿಬಿಡುವುದು.
ಕೋಟ್ಯಂತರ ರೂ.ಗಳ ಪಾನ್ ಮಸಾಲಾಗಳ ಜಾಹೀರಾತು ಪತ್ರಿಕೆಗಳಲ್ಲಿ, ಫಲಕಗಳಲ್ಲಿ ಸಿನಿಮಾ ಸ್ಕ್ರೀನ್‌ಗಳಲ್ಲಿ ಹಾಗೂ ಅಂಗಡಿಗಳ ಮುಂಭಾಗದಲ್ಲಿ ತುಂಬಿಹೋಗಿವೆ. ಏಕೆಂದರೆ ಜಾಹೀರಾತುಗಳಿಂದ ಭಾರಿ ಪ್ರಮಾಣದಲ್ಲಿ ಹಣ ದೊರೆಯುತ್ತದೆ. ಕೆಲವನ್ನು ಹೊರತುಪಡಿಸಿ (ಡೆಲ್ಲಿ ಪ್ರೆಸ್ ಇದರಲ್ಲಿ ಸೇರಿದೆ) ಉಳಿದವರೆಲ್ಲರೂ ಈ ಮುಖ್ಯ ಆದಾಯವನ್ನು ಬಿಡಲು ತಯಾರಿಲ್ಲ. ತಾರೆಯರಾದರೂ ಆ ಆದಾಯವನ್ನು ಏಕೆ ಬಿಡುತ್ತಾರೆ?
ಅವರ ಹೆಂಡತಿಯರಿಂದ ಇದನ್ನು ನಿರೀಕ್ಷೆ ಮಾಡುವುದು ನಿರರ್ಥಕವೇ ಸರಿ. ಏಕೆಂದರೆ ಸುಲಭವಾಗಿ ಹರಿದು ಬರುವ ಹಣವನ್ನು ಅವರು ಹಾಗೆಯೇ ಬಿಟ್ಟುಕೊಡುತ್ತಾರೆಯೇ?
ಅಂದಹಾಗೆ, ಮಹಿಳೆಯರು ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದು ಕೂಡ ಕಂಡುಬರುತ್ತಿದೆ. ಮದ್ಯದ ಕಂಪನಿಗಳು ಕೆಲವು ಸಿನಿಮಾಗಳ ಸೆಟ್‌ಗಳಿಗೆ ಟ್ರಕ್ ತುಂಬಾ ಮದ್ಯ ರವಾನಿಸುತ್ತಿವೆ. ಆ ಕಾರಣದಿಂದಲೇ ಪ್ರತಿಯೊಂದು ಸಿನಿಮಾಗಳಲ್ಲಿ ಸ್ತ್ರೀಯರು ಮದ್ಯದ ಗ್ಲಾಸ್ ಹಿಡಿಯುತ್ತಿರುವುದು ಕಂಡುಬರುತ್ತಿದೆ. ಇದರಲ್ಲಿ ಕೇವಲ ಅವಿವಾಹಿತರಷ್ಟೇ ಅಲ್ಲ, ಮಕ್ಕಳ ತಾಯಂದಿರು ಕೂಡ ಇದ್ದಾರೆ. ಸಿನಿಮಾದವರಿಗೆ ಅಮಲಿನ ಬಗ್ಗೆ ಯಾವುದೇ ಚಿಂತೆ, ಕಳವಳ ಖಂಡಿತ ಇಲ್ಲ.
ಇಂತಹ ಸ್ಥಿತಿಯಲ್ಲಿ ದೆಹಲಿ ಸರ್ಕಾರ ಸ್ಟಾರ್ ಪತ್ನಿಯರಿಗೆ ಪತ್ರ ಬರೆದು ಸರ್ಕಾರಿ ಖರ್ಚು ಮತ್ತು ಅಂಚೆ ವೆಚ್ಚವನ್ನು ವ್ಯರ್ಥಗೊಳಿಸಿದೆ ಎಂದು ಸ್ಪಷ್ಟವಾಗಿ ಹೇಳಬಹುದು. ಮೊದಲಿನ ಹಾಗೆ ಈಗ ಮಹಿಳೆಯರಿಗೆ ನಶೆ ಮಾಡುವುದು ಕೆಟ್ಟದೆಂದು ಅನಿಸುವುದಿಲ್ಲ. ಮದ್ಯಪಾನ ಧೂಮಪಾನ ಮಾಡದೇ ಇರುವುದು ಮೂರ್ಖತನದ ಸಂಕೇತ ಎಂದು ಅವರು ಭಾವಿಸುತ್ತಾರೆ.
ಒಂದು ನಗ್ನ ಸತ್ಯವೆಂದರೆ, ಇಂದು ಮಾಲಿನ್ಯದಿಂದ ಎಷ್ಟು ಸಾವುಗಳು ಸಂಭವಿಸುತ್ತಿವೆಯೋ, ಅದಕ್ಕೂ ಹೆಚ್ಚಿನ ಸಾಲಗಳು ಮದ್ಯ ಹಾಗೂ ಇತರೆ ನಶೆಗಳಿಂದ ಸಂಭವಿಸುತ್ತಿವೆ. ಇದರಲ್ಲಿ ರಿಸೀವಿಂಗ್ ಎಂಡ್‌ನಲ್ಲಿ ಮಹಿಳೆಯರೇ ಇರುತ್ತಾರೆ. ಏಕೆಂದರೆ ರೋಗ ಪುರುಷನದ್ದೇ ಆಗಿರಲಿ, ಮಹಿಳೆಯದ್ದೇ ಆಗಿರಲಿ ಕೆಲಸದ ಒತ್ತಡ ಮಹಿಳೆಯದ್ದೇ ಹೆಚ್ಚಾಗುತ್ತದೆ.
ದೆಹಲಿ ಸರ್ಕಾರ ಒಳ್ಳೆಯ ಕೆಲಸವನ್ನೇ ಮಾಡಿದೆ. ಆದರೆ ಒಳ್ಳೆಯ ಕೆಲಸ ಮಾಡುವವರನ್ನು ಇಲ್ಲಿ ತಲೆಕೆಟ್ಟವರು ಎಂದು ಭಾವಿಸಲಾಗುತ್ತದೆ. ಏಕೆಂದರೆ ರಾಜಕಾರಣಿಗಳಿಗೆ ಸಾಧುಸಂತರಿಗೆ, ಪೂಜಾರಿಗಳಿಗೆ ದಾನದಿಂದ ದೊರೆಯುವ ವಸ್ತುಗಳ ಮೋಜು ಪಡೆಯುವುದು ಬಹಳ ಮಜ ಎನಿಸುತ್ತದೆ.
ಉತ್ತಮ ಹೆಜ್ಜೆ
ಕರ್ನಾಟಕ ಸರ್ಕಾರ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಮತಿ ಕೊಡುವ ಬಗ್ಗೆ ಯೋಚನೆ ಮಾಡುತ್ತಿದೆ. ಐ.ಟಿ. ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಸದ್ಯಕ್ಕೆ ಅನುಮತಿ ಇದೆ. ಅಮೆರಿಕದ ಸೌಲಭ್ಯಕ್ಕಾಗಿ ರಾತ್ರಿಯೇ ಈ ಕೆಲಸ ಮಾಡಬೇಕು. ಏಕೆಂದರೆ ಬಹಳಷ್ಟು ಭಾರತದ ಕಂಪನಿಗಳು ಅಮೆರಿಕದ ಕಂಪನಿಗಳ ಕೆಲಸವನ್ನು ರಿಯಲ್ ಟೈಮ್ ನಲ್ಲಿ ಭಾರತದಲ್ಲಿ ಮಾಡಿಸುತ್ತವೆ. ಇದು ಅಮೆರಿಕದ ಕಂಪನಿಗಳಿಗೆ ಅತ್ಯಂತ ಅಗ್ಗವಾಗಿ ಪರಿಣಮಿಸುತ್ತದೆ. ಏಕೆಂದರೆ ಭಾರತದಲ್ಲಿ ಸಂಬಳ ಕಡಿಮೆ.
ಈಗ ಈ ಸೌಲಭ್ಯ ವೈದ್ಯಕೀಯ ಹಾಗೂ ಐಟಿ ಕ್ಷೇತ್ರಗಳ ಹೊರತಾಗಿ ಬೇರೆ ಕೆಲವು ಕ್ಷೇತ್ರಗಳಿಗೂ ಲಭಿಸಬಹುದು. ಇದೊಂದು ಒಳ್ಳೆಯ ನಡೆ. ಏಕೆಂದರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಅನೇಕ ಲಾಭಗಳಿವೆ. ಎಲ್ಲಕ್ಕೂ ದೊಡ್ಡ ಲಾಭವೆಂದರೆ, ಮಕ್ಕಳಿಗೆ ತಂದೆ ಅಥವಾ ತಾಯಿ ಇವರಲ್ಲಿ ಯಾರಾದರೊಬ್ಬರು ಸದಾ ಜೊತೆಗಿರುತ್ತಾರೆ. ತಾಯಿ ಹಗಲು ಹೊತ್ತು ಜೊತೆಗಿದ್ದರೆ, ರಾತ್ರಿ ತಂದೆ ಕಾಳಜಿ ವಹಿಸುತ್ತಾನೆ. ಮನೆಯಲ್ಲಿ ಗಳಿಸುವವರ ಸಂಖ್ಯೆ ಒಂದರಿಂದ ಎರಡಾಗುತ್ತದೆ.
ಗಂಡಹೆಂಡತಿ ಬೇರೆಬೇರೆ ಸಮಯದಲ್ಲಿ ಕೆಲಸ ಮಾಡುವುದರಿಂದ ಅವರ ಜಗಳಗಳು ಕಡಿಮೆಯಾಗುತ್ತವೆ. ಇಬ್ಬರೂ ಮನೆಗೆಲಸಗಳನ್ನು ಹಾಗೂ ಹೊರಗಿನ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ. ಅವರ ನಡುವಿನ ಅನುಬಂಧ ಕೂಡ ಹೆಚ್ಚುತ್ತದೆ. ಮಹಿಳೆಯರಿಗೆ ಸೌಲಭ್ಯಕ್ಕನುಗುಣವಾಗಿ ಹೊರಗೆ ಹೋಗುವ ಅವಕಾಶ ದೊರೆತರೆ, ಅವರು ನಿಶ್ಚಿಂತರಾಗಿ ಕೆಲಸದಲ್ಲಿ ತೊಡಗಬಹುದು. ಹಗಲು ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಅರ್ಧದಷ್ಟು ಜನ ಮಕ್ಕಳು, ಅತ್ತೆ, ನಾದಿನಿ ಹಾಗೂ ಅಕ್ಕಪಕ್ಕದವರ ಜೊತೆ ಮೊಬೈಲ್‌ನಲ್ಲಿ ಮಾತನಾಡುವುದರಲ್ಲಿ ಕಳೆಯುತ್ತಾರೆ. ಸರ್ಕಾರಿ ನೌಕರಿಗಳಲ್ಲಂತೂ ಇದು ನಡೆಯುತ್ತದೆ. ಆದರೆ ಖಾಸಗಿ ವಲಯದಲ್ಲಿ ಸಾಕಷ್ಟು ತೊಂದರೆಗಳು ಉದ್ಭವಿಸುತ್ತವೆ.
ಬಹಳಷ್ಟು ಜನ ಮಹಿಳೆಯರು ಹೊರಗಡೆ ಇದ್ದರೆ, ಅವರಿಗೆ ರಾತ್ರಿ ಭಯಾನಕ ಅನಿಸುವುದಿಲ್ಲ ಹಾಗೂ ಹೊರಗೆ ಹೆಚ್ಚು ಸುರಕ್ಷಿತ ಎನಿಸತೊಡಗುತ್ತದೆ. ಕಳ್ಳರಿಗೂ ತಮ್ಮ ಕರಾಮತ್ತು ತೋರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಹಗಲು ರಾತ್ರಿ ಇಬ್ಬರಲ್ಲಿ ಯಾರಾದರೊಬ್ಬರೂ ಮನೆಯಲ್ಲಿ ಇದ್ದೇ ಇರುತ್ತಾರೆ.
ಇಂದಿನ ದಿನಗಳಲ್ಲಿ ಮನೆಗೆಲಸದವರು ಸಿಗುವುದೇ ಕಷ್ಟ. ಅಂಥ ಸ್ಥಿತಿಯಲ್ಲಿ ಮನೆಗೆಲಸಗಳನ್ನು ಗಂಡಹೆಂಡತಿ ಪರಸ್ಪರ ನಿಭಾಯಿಸುವುದರಿಂದ ಯಾವುದೇ ಕೊರತೆ ಅನಿಸದು.
ಮಹಿಳೆಯರಿಗೆ ಒಂದು ಹಾನಿಯಂತೂ ಇದ್ದೇ ಇದೆ. ಅದೇನೆಂದರೆ, ಇತರರ ಜೊತೆ ಹೆಚ್ಚು ಸಂಬಂಧ ಬೆಳೆಯುತ್ತವೆ. ರಾತ್ರಿಯ ಸಮಾಗಮದ ಖುಷಿಯೇ ಬೇರೆ. ಆಫೀಸು ಹಾಗೂ ಕಾರ್ಖಾನೆಗಳಲ್ಲಿ ಅಂತಹದೊಂದು ಕಾರ್ನರ್ ಸಿಕ್ಕೇ ಸಿಗುತ್ತದೆ. ಅದು ಒಳ್ಳೆಯದೊ ಕೆಟ್ಟದೊ ಆಮೇಲೆ ತಿಳಿಯುತ್ತದೆ.