ಹೆಚ್ಚುತ್ತಿರುವ ವಯಸ್ಸನ್ನು ತಡೆಯುವುದು ನಮ್ಮ ಕೈಯಲ್ಲಿಲ್ಲ. ಆದರೆ ಹೆಚ್ಚುತ್ತಿರುವ ವಯಸ್ಸಿನ ಗುರುತುಗಳನ್ನು ಹಿಂದೆ ಬಿಟ್ಟು ಯಂಗ್ ಆಗಿ ಸ್ಮಾರ್ಟಾಗಿ ಕಾಣುವುದು ಖಂಡಿತಾ ನಮ್ಮ ಕೈಯಲ್ಲಿದೆ. ಯಾವುದೇ ಮಹಿಳೆಯ ಸೌಂದರ್ಯದ ಮೊದಲ ಮಾನದಂಡ ಕೂದಲಾಗಿದೆ. ಅದರಿಂದ ಮಹಿಳೆಯ ಸೌಂದರ್ಯಕ್ಕೆ ಕಾಂತಿ ಬರುತ್ತದೆ. ಹೀಗಿರುವಾಗ ಕಪ್ಪು ಕೂದಲಿನ ಮಧ್ಯೆ ಹೊಳೆಯುವ ಬಿಳಿ ಕೂದಲಿಗೆ ಕಲರಿಂಗ್ ಅಥವಾ ಹೇರ್ ಕಟಿಂಗ್‌ನಿಂದ ಹೇಗೆ ಸ್ಮಾರ್ಟ್ ಮತ್ತು ಫಾಸ್ಟ್ ಫಾರ್ವರ್ಡ್ ಲುಕ್ ಕೊಡಬಹುದೆಂಬುದನ್ನು ಹೇರ್ ಎಕ್ಸ್ ಪರ್ಟ್ಸ್ ನೀಡುವ ಸಲಹೆಗಳಿಂದ ತಿಳಿಯೋಣ. ತಜ್ಞರ ಪ್ರಕಾರ, ಕಲರಿಂಗ್ ಮತ್ತು ಕಟಿಂಗ್‌ನ ವಿಧಾನಗಳನ್ನು ಬಳಸಿಕೊಂಡು ಯಾವುದೇ ಮಹಿಳೆ ಫ್ಯಾಷನೆಬಲ್ ಹಾಗೂ ಸ್ಮಾರ್ಟ್ ಆಗಿ ಕಾಣಿಸಬಹುದು.
ಹೇರ್ ಕಲರಿಂಗ್ ಮತ್ತು ಪ್ರಿವೇಟಿಂಗ್ : ಹೇರ್ ಕಲರಿಂಗ್ ಮಾಡಿಸುವ ಮೊದಲು ಕೂದಲು ವರ್ಜಿನ್ ಆಗಿದೆಯೋ ಅಥವಾ ಕಲರ್ ಅಥವಾ ಹೆನ್ನಾ ಹಚ್ಚಿದೆಯೋ ಎಂದು ತಿಳಿದುಕೊಳ್ಳಬೇಕು. ಏಕೆಂದರೆ ಇದೇ ಆಧಾರದ ಮೇಲೆ ಕಲರ್‌ನ್ನು ಆರಿಸಲಾಗುತ್ತದೆ. ಕೂದಲಿಗೆ ಹೆನ್ನಾ, ಸೀಗೇಕಾಯಿ, ಶ್ಯಾಂಪೂ, ಅಂಟವಾಳಕಾಯಿ ಅಥವಾ ಯಾವುದೇ ಬಣ್ಣ ಮುಂತಾದ ಉತ್ಪನ್ನವನ್ನು ಉಪಯೋಗಿಸಿರದ ಕೂದಲನ್ನು ವರ್ಜಿನ್ ಹೇರ್ ಎನ್ನುತ್ತಾರೆ. ಒಂದುವೇಳೆ ಕೂದಲಿಗೆ ಹೆನ್ನಾ ಉಪಯೋಗಿಸಿದ್ದರೆ ಅಂಥವರು ಮೊದಲು ತಮ್ಮ ಕೂದಲನ್ನು ಪ್ರಿವೇಟ್ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಅದಕ್ಕಾಗಿ ಕೂದಲಿಗೆ ಬ್ಲಾಂಡರ್ ಹಚ್ಚಿ. ಬ್ಲಾಂಡರ್‌ನ್ನು ಕೂದಲಿನ ಥಿಕ್‌ನೆಸ್‌ಗೆ ತಕ್ಕಂತೆ ಹಚ್ಚಿ. 20-30 ವಾಲ್ಯೂಮ್ನ್ನು 35 ರಿಂದ 40 ನಿಮಿಷಗಳರೆಗೆ ಕೂದಲಿಗೆ ಹಚ್ಚಿ. ಅದರಿಂದ ಕೂದಲಿನ ಒಳಗೆ ಕಲರ್ ಚೆನ್ನಾಗಿ ಬೆರೆತುಕೊಳ್ಳುತ್ತದೆ. ಹೆನ್ನಾ ಹಚ್ಚಿದ ಕೂದಲಿಗೆ ಮೊದಲ ಬಾರಿ 20 ವಾಲ್ಯೂಮ್ ಹಚ್ಚಿ. 2 ದಿನಗಳ ಬಳಿಕ ಮತ್ತೊಮ್ಮೆ ಹಚ್ಚಿ. ಅದರಿಂದ ಕೂದಲು ಪ್ರಿವೇಟ್ ಆಗುತ್ತದೆ. ಕೂದಲನ್ನು ಪ್ರಿವೇಟ್ ಮಾಡಿದ ನಂತರ ಶ್ಯಾಂಪೂ ಮತ್ತು ಕಂಡೀಶನರ್ ಅಗತ್ಯವಾಗಿ ಹಚ್ಚಿ. ಅನೇಕ ಬಾರಿ ಚಳಿಗಾಲದಲ್ಲಿ ಹೆಚ್ಚು ಡ್ರೈನೆಸ್‌ನಿಂದಾಗಿ ಕಲರ್‌ನಲ್ಲಿರುವ ಹೈಡ್ರೋಜನ್‌ಮತ್ತು ಅಮೋನಿಯಾ `ಇಚಿಂಗ್’ ಉಂಟು ಮಾಡುತ್ತದೆ. ಆದ್ದರಿಂದ 50% ಡೆವೆಲಪರ್ ಮೇಲೆ ನೀರು ಹೊಯ್ಯಿರಿ. ಅದರಿಂದ ಕಲರ್ 30ರ ಬದಲು 25 ವಾಶ್‌ವರೆಗೆ ನಡೆಯುತ್ತದೆ. ಆದರೆ ಹೀಗೆ ಮಾಡುವುದರಿಂದ ಕೂದಲಿಗೆ ಹಾನಿಯಾಗುವುದಿಲ್ಲ.
ಕಲರ್ ಹಚ್ಚುವಾಗ ಕ್ರೌನ್‌ನ ಅರ್ಧ ಇಂಚಿನ ಭಾಗ ಬಿಟ್ಟು ಕಲರ್ ಹಚ್ಚಿ. ಕಲರ್‌ನ್ನು ಯಾವಾಗಲೂ ಜಿಗ್‌ಜ್ಯಾಗ್ ಸ್ಟೈಲ್‌ನಲ್ಲೇ ಹಚ್ಚಿ. ವಾಲ್ಯೂಮ್ ಹೆಚ್ಚಿಸಲು ಕೂದಲಿನಲ್ಲಿ ಬೌನ್ಸ್ ಕೊಡುವ ಶ್ಯಾಂಪೂ ಉಪಯೋಗಿಸಿ. ಪ್ರಿವೇಟ್ ಮಾಡುವಾಗ ಏರ್‌ಕಂಡೀಶನರ್‌ಗೆ ನೇರವಾಗಿ ಎದುರು ಕೂರಬೇಡಿ. ಇಲ್ಲದಿದ್ದರೆ ಅದು ಕೆಮಿಕಲ್‌ನ ಹೀಟ್ ಜನರೇಟ್ ಮಾಡುವುದನ್ನು ನಿಲ್ಲಿಸಿಬಿಡುತ್ತದೆ.
ಕಲರ್‌ನ ಆಯ್ಕೆ : ಕೂದಲನ್ನು ಯಾವಾಗಲೂ ನ್ಯಾಚುರಲ್ ಬೇಸ್ ಲೆವೆಲ್ ಆಧಾರದಲ್ಲಿ ಕಲರ್ ಮಾಡಲಾಗುತ್ತದೆ. ನ್ಯಾಚುರಲ್ ಬೇಸ್‌ನಲ್ಲಿ 1 ರಿಂದ 10 ಲೆವೆಲ್ ಇರುತ್ತವೆ. ಅವು ಕಲರ್‌ನ ವೈಟ್‌ನೆಸ್ ಮತ್ತು ಡಾರ್ಕ್‌ನೆಸ್‌ನ ಡಿಗ್ರಿ ಬಗ್ಗೆ ಹೇಳುತ್ತಲೇ ನೀವು ಎಷ್ಟು ಕಡಿಮೆ ನಂಬರ್‌ನ ಶೇಡ್ ಉಪಯೋಗಿಸುತ್ತೀರೋ ಅಷ್ಟೇ ಹೆಚ್ಚು ಬಿಳಿ ಕೂದಲಿನ ಕವರ್ ಆಗುತ್ತದೆ. ಎಷ್ಟು ಹೆಚ್ಚು ನಂಬರ್‌ನ ಶೇಡ್ ಇರುತ್ತದೋ ಅಷ್ಟೇ ಬಿಳಿ ಕೂದಲಿನ ಕವರೇಜ್ ಕಡಿಮೆಯಾಗುತ್ತದೆ. ಯಾವಾಗಲೂ ಕಲರ್ ಮತ್ತು ಡೆವೆಲಪರ್‌ನ್ನು ಸಮ ಪ್ರಮಾಣದಲ್ಲಿ ಸೇರಿಸಿ ಉಪಯೋಗಿಸಿ.
ಯಾರದ್ದಾದರೂ ಕೂದಲು ಬಿಳಿ ಅಂದರೆ ಗ್ರೇ ಆಗಿದ್ದರೆ ಅವರಿಗೆ ಪ್ರಿವೇಟ್ ಮಾಡು ಅಗತ್ಯವಿಲ್ಲ. ಕಲರ್ ಮಾಡುವಾಗ ಯಾವಾಗಲೂ ಮಿಕ್ಸಿಂಗ್ ರೇಶಿಯೋ ಬಗ್ಗೆ ಗಮನ ಇಟ್ಟುಕೊಳ್ಳಿ. ಏಕೆಂದರೆ ಹೆಚ್ಚು ಡೆವೆಲಪರ್ ಹಾಕುವುದರಿಂದ ಕೂದಲಿಗೆ ಅಧಿಕ ಹಾನಿಯುಂಟಾಗುತ್ತದೆ. ಆದ್ದರಿಂದ ಕಲರ್ ಯಾವಾಗಲೂ 20 ವ್ಯಾಲ್ಯೂಮ್ ಇರುವುದನ್ನು ಉಪಯೋಗಿಸಿ. ಡೆವೆಲಪರ್ ಹೆಚ್ಚಾಗಿದ್ದರೆ ಕಲರ್ ಲೈಟ್ ಆಗುತ್ತದೆ. ಒಂದುವೇಳೆ ಕೂದಲನ್ನು ಬೇಗನೆ ಪ್ರಿವೇಟ್ ಮಾಡಲು ಬಯಸಿದರೆ ಹೆಚ್ಚು ವಾಲ್ಯೂಮ್ ಹಾಕಿ. ಪ್ರಿವೇಟ್ ಮಾಡಿದ ನಂತರ ಕೂದಲಿನ ಮೇಲೆ ಯಾವುದೇ ಕಲರ್ ಹಚ್ಚಲು ಸುಲಭವಾಗುತ್ತದೆ. ಹೀಗೆ ಮಾಡುವುದೂ ಅಗತ್ಯವೇ ಆಗಿದೆ. 20 ವಾಲ್ಯೂಮ್ ನಲ್ಲಿ ನಿಮಗೆ ಇಷ್ಟಬಂದ ಕಲರ್ ಮಿಕ್ಸ್ ಮಾಡಿ 25-30 ನಿಮಿಷಗಳವರೆಗೆ ಬಿಡಿ. ಬಿಳಿಯ ಬಣ್ಣಕ್ಕೆ ಬ್ಲಾಂಡ್ ಕಲರ್‌ಗಳಲ್ಲದೆ ಕಾಪರ್, ರೆಡ್ ಕಲರ್‌ನ ಹೈಲೈಟಿಂಗ್ ಒಪ್ಪುತ್ತದೆ. ಆದರೆ ಶ್ಯಾಮಲವರ್ಣದವರಿಗೆ ಡೀಪ್ ಜೋನ್ ಹೈಲೈಟಿಂಗ್ ಅಂದರೆ ಪರ್ಪಲ್, ರೆಡ್ ಮತ್ತು ರೆಡ್ ಫ್ಯಾಷನ್‌ನಿಂದ ಹೈಲೈಟಿಂಗ್ ಸೂಟ್ ಮಾಡುತ್ತದೆ. ಒಂದುವೇಳೆ ನೀವು ಕೂದಲಿಗೆ ಚಂಕ್ಸ್ ಮಾಡಿಸಲು ಇಚ್ಛಿಸಿದರೆ ಹೈಲೈಟ್ ಮಾಡಬೇಕೆಂದಿರುವ ಕೂದಲಿನ ಮೇಲೆ ಮಾಡಿಸಿ. ಗರ್ಲಿ ಲುಕ್‌ಗಾಗಿ ರೆಡ್ ಚಂಕ್ಸ್ ಮಾಡಿಸಬಹುದು.
ಹೇರ್ ಕಟಿಂಗ್ : ಯಾವುದೇ ರೀತಿಯ ಕಟಿಂಗ್‌ಗೆ ಮೊದಲು ಗೈಡ್ ಲೈನ್ ಪತ್ತೆ ಮಾಡಿ. ಗೈಡ್ ಲೈನ್ ಆರಿಸಿಕೊಂಡ ಮೇಲೆ ಹೇರ್ ಕಟ್ ಬ್ಯಾಲೆನ್ಸ್ಡ್ ಮತ್ತು ಫಿನಿಶ್ಡ್ ಲುಕ್ಸ್ ಕೊಡುತ್ತದೆ. ಒಂದು ವೇಳೆ ಕೂದಲಿನ ಲೆಂತ್ ಕಡಿಮೆ ಮಾಡಿಕೊಳ್ಳಲು ಇಚ್ಛಿಸದಿದ್ದರೆ ಯಾವಾಗಲೂ ಕುತ್ತಿಗೆಯ ಕೆಳಗೆ 3 ಇಂಚು ಬಿಟ್ಟು ಕಟಿಂಗ್ ಮಾಡಿ. ಲೆಂಗ್ ಲೆಂತನ್ನು ಕಡಿಮೆ ಮಾಡಲು ಬಯಸದೆ ಟ್ರೆಂಡಿ ಹೇರ್ ಕಟ್ ಬಯಸಿದರೆ ಫ್ರಂಟ್‌ನಿಂದ ಕಟ್ ಮಾಡಿ. ಫ್ಲಿಕ್ಸ್ ಸ್ಟೈಲ್ ಕೊಟ್ಟು ಕೂದಲಿಗೆ ಸ್ಟೈಲಿಶ್ ಲುಕ್ ಕೊಡಲಾಗುತ್ತದೆ. ಟ್ರೆಂಡಿ ಹೇರ್‌ಕಟ್‌ಗೆ ಹಿಂದಿನಿಂದ ಕೂದಲಿನ ಕೊನೆಯ ಲೆಂತ್‌ನಲ್ಲಿ ಕೂದಲನ್ನು ಸ್ಟ್ರೇಟ್ ಮಾಡಿ. ಅದರಿಂದ ನಿಮಗೆ ಕಟಿಂಗ್‌ಗೆ ಗೈಡ್‌ಲೈನ್‌ಕೂಡ ಸಿಗುತ್ತದೆ. ನಂತರ 90 ಡಿಗ್ರಿ ವರ್ಟಿಕಲ್ ಕೂದಲನ್ನು ಹಿಡಿದುಕೊಳ್ಳಿ. ನಂತರ ಟ್ವಿಸ್ಟ್ ಮಾಡಿ ಹಾರಿಜಾಂಟಲ್ ದಿಕ್ಕಿನಲ್ಲಿ ಸ್ಟ್ರೇಟ್ ಕಟ್ ಮಾಡಿ. ಹೀಗೆ ಮಾಡುವುದರಿಂದ ಬೌನ್ಸಿ ಕೂದಲಲ್ಲಿ ಸ್ಟೆಪ್ ಕಟಿಂಗ್‌ನ ಲುಕ್ ಬರುತ್ತದೆ. ಒಂದುವೇಳೆ ಕೂದಲಿನಲ್ಲಿ ವಾಲ್ಯೂಮ್ ಕಡಿಮೆ ಮಾಡಲು ಇಚ್ಛಿಸಿದರೆ ಡಿಗ್ರಿ ಹೆಚ್ಚಿಸುತ್ತಿರಿ. ಡಯಾಗ್ನ್ ಟು ವರ್ಟಿಕಲ್ ಮತ್ತು ಸಬ್‌ಸೆಕ್ಷನ್ ಮಾಡುತ್ತಾ ಕಟಿಂಗ್ ಮಾಡಿ. ಕ್ರೌನ್ ಪೀಸ್‌ನ್ನು ಜಿಗ್‌ಜ್ಯಾಗ್ ಮಾಡಿದ ನಂತರ ಹಾರಿಜಾಂಟಲ್ ಟ್ವಿಸ್ಟ್ ಮಾಡಿ, ಫ್ರಂಟ್‌ನಲ್ಲಿ ತಂದು ಬ್ಯಾಲೆನ್ಸ್ ಮಾಡಲು ಕೂದಲನ್ನು ಕತ್ತರಿಸಿ.
ಆ್ಯಪಲ್ ಹೇರ್ ಕಟ್ : ಕೂದಲು ಯಾವ ದಿಕ್ಕಿನಲ್ಲಿ ಬೀಳುತ್ತಿದೆಯೋ ಬೀಳಲು ಬಿಡಿ. ಕೆಳಗಿನ ಭಾಗ ಸಂಪೂರ್ಣವಾಗಿ ಸಮಾನವಾಗಿರಬೇಕು. ನಂತರ ಎಲ್ಲ ಕೂದಲನ್ನು `0′ ಡಿಗ್ರಿಯಲ್ಲಿ ಬೀಳಿಸಿ ಲೆಂತ್ ವೈಸ್ ಕತ್ತರಿಸಿ. ಸೈಡ್‌ನಿಂದ ಚೌಕಾಕಾರದ ಬದಲು ರೌಂಡ್ ಶೇಪ್‌ನಲ್ಲಿ ಕತ್ತರಿಸಿ. ಈ ಕಟ್ ಕರ್ಲಿ ಹೇರ್ ಬದಲು ಫ್ಲ್ಯಾಟ್ ಕೂದಲಿನಲ್ಲಿ ಚೆನ್ನಾಗಿ ಒಪ್ಪುತ್ತದೆ. ಮುಖ ದೊಡ್ಡದಾಗಿದ್ದರೆ ಸಣ್ಣದಾಗಿ ಕಾಣಿಸಲು ಬೌನ್ಸ್ ಒದಗಿಸುವ ಕಟ್‌ಮಾಡಿಸಿ.
– ಲಲಿತಾ ಗೋಪಾಲ್