ಮಾನ್‌ಸೂನ್‌ ಶುರುವಾದ ಕೂಡಲೇ ಯಾರಿಗೇ ಆಗಲೀ, ಮಳೆಯನ್ನು ಮನಸಾರೆ ಎಂಜಾಯ್‌ ಮಾಡಲು ಆಸೆಯಾಗುತ್ತದೆ. ಆದರೆ ಅದಕ್ಕಾಗಿ ಮನಸ್ಸು ಸಂತಸದಿಂದಿರುವುದು ಅಗತ್ಯ. ಮಳೆಯನ್ನು ನೀವು ಹೇಗೆ ಎಂಜಾಯ್‌ ಮಾಡಬಹುದೆಂದು ಫ್ಯಾಷನ್ ಡಿಸೈನರ್‌ ಪಿ. ರಕ್ಷಿತಾ ತಿಳಿಸಿಕೊಡುತ್ತಿದ್ದಾರೆ.

ಭಯ ಬೇಡ

ಮಳೆಯನ್ನು ಎಂಜಾಯ್‌ ಮಾಡುವಾಗ ಒಂದುವೇಳೆ ನಮ್ಮ ಬಟ್ಟೆ ಒದ್ದೆಯಾದರೆ ಎಂದು ಭಯಪಟ್ಟರೆ ನಾವು ಎಂದೂ ಮಳೆಯನ್ನು ಎಂಜಾಯ್‌ ಮಾಡಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ನಾವು ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಗರೂಕರಾಗಿದ್ದು, ನಮ್ಮ ಫ್ಯಾಷನ್‌ ಮೋಹವನ್ನು ಸದೃಢವಾಗಿಟ್ಟುಕೊಂಡು ಮಳೆಯನ್ನು ಎಂಜಾಯ್‌ ಮಾಡಬಹುದು.

ಬೇಸಿಗೆ ಹಾಗೂ ಚಳಿಗಾಲದಲ್ಲಿ ದಿನನಿತ್ಯ ತೊಡಲು ಮಂದ ಬಟ್ಟೆ ಧರಿಸಬಹುದು. ಆದರೆ ಮಳೆಗಾಲದಲ್ಲಿ ಗಾಢ ಬಣ್ಣದ ಬಟ್ಟೆ ಧರಿಸುವುದು ಉತ್ತಮ. ಏಕೆಂದರೆ ಗಾಢ ಬಣ್ಣದ ಬಟ್ಟೆ ಮಳೆಗಾಲದಲ್ಲಿ ಹಾಳಾದರೂ ಕೊಳೆ ಕಾಣುವುದಿಲ್ಲ. ಆದ್ದರಿಂದ ಮಳೆಗಾಲದಲ್ಲಿ ಬಣ್ಣಗಳನ್ನು ಆರಿಸುವಾಗ ಡಾರ್ಕ್‌ ಕಲರ್ಸ್‌ ಆರಿಸಿಕೊಳ್ಳಿ. ನೀವು ಫ್ಲೋರಲ್ ಗ್ರೀನ್‌, ಪೇಸ್ಟ್‌ ಬ್ಲೂ, ಫ್ಲೋರಲ್ ಆರೆಂಜ್‌, ಫ್ಲೋರಲ್ ಯೆಲ್ಲೋ, ಡಾರ್ಕ್‌ ಗ್ರೀನ್‌ ಮತ್ತು ಡಾರ್ಕ್‌ ಬ್ಲ್ಯಾಕ್‌ ಕಲರ್‌ಗಳನ್ನು ಆರಿಸಿಕೊಳ್ಳಬಹುದು. ಈ ಬಣ್ಣಗಳನ್ನು ಧರಿಸುವುದರಿಂದ ಮಳೆಗಾಲದಲ್ಲಿ ನೀವು ಖುಷಿಯಾಗಿರಬಹುದು. ನಿಮ್ಮ ಮೂಡ್‌ ಸಹಾ ಚೆನ್ನಾಗಿರುತ್ತದೆ.

ಸಲ್ವಾರ್‌ ಕಮೀಜ್‌, ಚೂಡಿದಾರ್‌ ಅಥವಾ ಲೆಗಿಂಗ್ಸ್ ಧರಿಸುವಾಗಲೂ ಬ್ರೈಟ್‌ ಕಲರ್ಸ್‌ನ್ನೇ ಆರಿಸಿ. ಅದರಿಂದ ಮಳೆಯಲ್ಲಿ ಬಾಟಮ್ ಹಾಳಾದರೂ ಬೇಗ ಕಂಡುಬರುವುದಿಲ್ಲ. ನೀವು ಡಾರ್ಕ್‌ ಪಿಂಕ್‌, ಡಾರ್ಕ್‌ ರೆಡ್‌ ಮತ್ತು ಡಾರ್ಕ್‌ ಚಾಕಲೇಟ್‌ನಂತಹ ಕಲರ್‌ಗಳನ್ನು ಬಳಸಬಹುದು. ಇವು ರೊಮ್ಯಾಂಟಿಕ್‌ ಆಗಿಯೂ, ನೋಡಲು ಸುಂದರವಾಗಿಯೂ ಇರುತ್ತದೆ. ಆಫೀಸ್‌ವೇರ್‌ಗೆ ಸಲ್ವಾರ್‌ ಕಮೀಜ್‌ ಮೇಲೆ ಒಳ್ಳೆಯ ಮ್ಯಾಚಿಂಗ್‌ ಕೂಡ ಮಾಡಬಹುದು. ಅಂದರೆ ಟಾಪ್‌ ಲೈಟ್‌ ಕಲರ್‌ನದ್ದು ತೆಗೆದುಕೊಂಡು ಬಾಟಮ್ ಬ್ರೈಟ್‌ ಕಲರ್‌ನದ್ದು ಇರಲಿ. ಆಫೀಸ್‌ವೇರ್‌ಗಾಗಿ ನೀವು ಸಲ್ವಾರ್‌ ಕಮೀಜ್‌, ಸೀರೆ ಮತ್ತು ಜೀನ್ಸ್ ನೊಂದಿಗೆ ಒಂದು ಎಕ್ಸ್ ಟ್ರಾ ಸ್ಟೋಲ್ ‌ಕೂಡ ತೆಗೆದುಕೊಳ್ಳಬಹುದು. ಈ ಸ್ಟೋಲ್‌ನ್ನು ನೀವು ಫ್ಯಾಷನ್‌ ರೂಪದಲ್ಲಿ ಹಾಗೂ ಎಂದಾದರೂ ಮಳೆಯಲ್ಲಿ ನೆಂದಾಗ ಅಪ್ಪರ್‌ ಬಾಡಿ ಕವರ್‌ ಮಾಡಲು ಉಪಯೋಗಿಸಬಹುದು. ಕಾಲೇಜ್‌ ಹುಡುಗಿಯರೂ ಸಹ ಸ್ಕರ್ಟ್‌ ಟಾಪ್ ಅಥವಾ ಜೀನ್ಸ್ ನೊಂದಿಗೆ ಸ್ಟೋಲ್ ‌ಧರಿಸಬಹುದು. ಜೀನ್ಸ್ ಆರಿಸುವಾಗ ಯಾವಾಗಲೂ ಲೈಟ್‌ ವೇಟ್‌ ಜೀನ್ಸ್ ಆರಿಸಿದರೆ ಮಳೆಯಲ್ಲಿ ನೆಂದ ನಂತರ ಅದು ಬೇಗನೆ ಒಣಗುತ್ತದೆ.

ಹಗುರವಾದ ಹತ್ತಿ ಬಟ್ಟೆಯ ಆಯ್ಕೆ

ಮಳೆಗಾಲದಲ್ಲಿ ಲೈಟ್‌ ವೇಟ್‌ ಕಾಟನ್‌ ಅಂದರೆ ಹಗುರವಾದ ಹತ್ತಿಯ ಬಟ್ಟೆಯನ್ನು ಧರಿಸುವುದೂ ಸಹ ಒಳ್ಳೆಯ ಆಯ್ಕೆ. ನೀವು ಮಳೆಗಾಲದಲ್ಲಿ ಪೇಸ್ಟಲ್ ಶೇಡ್ಸ್ ಆರಿಸಿಕೊಳ್ಳಬಹುದು. ಬ್ರೈಟ್‌ ಕಲರ್‌ನ ಟಾಪ್‌ ಮತ್ತು ಕುರ್ತಿಗಳು ಮತ್ತೆ ಫ್ಯಾಷನ್‌ನಲ್ಲಿವೆ. ಹುಡುಗಿಯರಿಗೆ ಕೇಪ್ರೀಜ್‌ ಮತ್ತು ಹುಡುಗರಿಗೆ ಬರ್ಮುಡಾ ಮಾನ್‌ಸೂನ್‌ ಸೀಝನ್‌ನ ಆಲ್ ಟೈಂ ಫೇವರಿಟ್‌ ಆಗಿವೆ. ಈ ಬಟ್ಟೆಗಳು ಬೇಗನೆ ಒಣಗುತ್ತವೆ ಎಂಬ ದೃಷ್ಟಿಯಿಂದಲೇ ಆರಿಸಿಕೊಂಡರೆ ಒಳ್ಳೆಯದು. ಅದಕ್ಕಾಗಿ ಶಿಫಾನ್‌, ಕ್ರೇಫ್‌, ಪಾಲಿ ಅಥವಾ ನೈಲಾನ್‌ನಂತಹ ಸಿಂಥೆಟಿಕ್‌ ಉಡುಪುಗಳು ಯಾವಾಗಲೂ ಒಳ್ಳೆಯವು ಎಂದು ಸಾಬೀತಾಗಿದೆ.

ಒಂದು ವೇಳೆ ಆಫೀಸ್‌ನಲ್ಲಿ ಸೀರೆ ಉಡುವುದು ಕಂಪಲ್ಸರಿಯಾದರೆ ನೀವು ಸಿಂಥೆಟಿಕ್‌ ಸೀರೆ ಧರಿಸಿ. ಆದರೆ ಪೆಟಿಕೋಟ್‌ ಕಾಟನ್‌ದ್ದೇ ಧರಿಸಿ. ಏಕೆಂದರೆ ಸಿಂಥೆಟಿಕ್‌ ಪೆಟಿಕೋಟ್‌ ಮಳೆಯಲ್ಲಿ ಒದ್ದೆಯಾದರೆ, ಅದರೊಂದಿಗೆ ನಡೆಯುವುದು ಬಹಳ ಕಷ್ಟ. ಆದರೆ ಕಾಟನ್‌ ಪೆಟಿಕೋಟ್‌ನೊಂದಿಗೆ ನಾವು ಸುಲಭವಾಗಿ ನಡೆಯಬಹುದು.

ಮಾನ್‌ಸೂನ್‌ನಲ್ಲಿ ಗಾಳಿಯಲ್ಲಿ ಬಹಳ ಆರ್ದ್ರತೆ ಇರುತ್ತದೆ. ಈ ಆರ್ದ್ರತೆ ಕಾಟನ್‌ ಉಡುಪುಗಳಿಂದ ಮಾತ್ರ ಕಡಿಮೆಯಾಗುತ್ತದೆ. ಹೀಗಾಗಿ ಈ ಹಾಮಾನದಲ್ಲಿ ಕಾಟನ್‌ ಉಡುಪುಗಳು ಒಳ್ಳೆಯ ಆಯ್ಕೆಯಾಗಿವೆ. ಮಳೆಗಾಲದಲ್ಲಿ ಕಾಟನ್‌ ಉತ್ತಮ. ಮಳೆಗಾಲದಲ್ಲಿ ಮಾರುಕಟ್ಟೆಯಲ್ಲಿ ವಿಶೇಷವಾಗಿ ಮಳೆಗಾಗಿ ಲೈಟ್‌ ಕಾಟನ್‌ನ ಅನೇಕ ಆಯ್ಕೆಗಳು ಲಭ್ಯವಿವೆ.

ಡೆನಿಮ್ ಜೀನ್ಸ್ ಕಡಿಮೆ ಉಪಯೋಗಿಸಿ

ಮಳೆಗಾಲದಲ್ಲಿ ಡೆನಿಮ್ ಉಡುಪುಗಳನ್ನು ಧರಿಸಬೇಡಿ. ಏಕೆಂದರೆ ಈ ಬಟ್ಟೆಗಳನ್ನು ಒಣಗಿಸಲು ಸಮಯ ಹಿಡಿಯುತ್ತದೆ. ಅದರಿಂದ ಕೊಂಚ ದುರ್ವಾಸನೆ ಬರುತ್ತದೆ. ಮಳೆಗಾಲದಲ್ಲಿ ಸಿಂಥೆಟಿಕ್‌, ಪಾಲಿಯೆಸ್ಟರ್‌, ಟೆರಿಕಾಟ್‌, ನೈಲಾನ್‌, ರೆಯಾನ್ ಇತ್ಯಾದಿ ಬಟ್ಟೆಗಳನ್ನು ಉಪಯೋಗಿಸಬಹುದು. ಜೀನ್ಸ್ ಮತ್ತು ಡೆನಿಮ್ ಬಟ್ಟೆಗಳನ್ನು ಧರಿಸಬೇಕೆಂದಿದ್ದರೆ ತ್ರೀಫೋರ್ಥ್‌ ಅಥವಾ ಕೇಪ್ರೀಜ್‌ ಉಪಯೋಗಿಸಿ. ಮಳೆಗಾಲದಲ್ಲಿ ಡಾರ್ಕ್‌ ಬ್ರೌನ್‌, ಮೆರೂನ್‌, ಮೆಹಂದಿ ಕಲರ್‌ ಇತ್ಯಾದಿ ಬಣ್ಣಗಳನ್ನು ಹೆಚ್ಚು ಹೆಚ್ಚು ಉಪಯೋಗಿಸಿ.

ಮಳೆಗಾಲದಲ್ಲಿ ಯಾವುದಾದರೂ ಫಂಕ್ಷನ್‌ ಅಥವಾ ಮದುವೆ ಇತ್ಯಾದಿಗಳಿಗೆ ನೀವು ಸೀರೆ ಉಡಲು ಬಯಸಿದ್ದರೆ ಫ್ಲೋರಲ್ ಪ್ರಿಂಟ್‌ ಉಪಯೋಗಿಸಿದರೆ ಒಳ್ಳೆಯದು.

ಜ್ಯೂವೆಲರಿ ಕೂಡ ಲೈಟ್‌ ವೇಟ್‌ ಆಗಿದ್ದು ಬಣ್ಣ ಹೋಗದೇ ಇರುವಂಥದ್ದಾಗಿರಲಿ. ಜೊತೆಗೆ ಬಟ್ಟೆಗಳ ಬಣ್ಣ ಹೋಗಬಾರದು. ಈ ವಿಷಯವನ್ನು ಗಮನಿಸಿ. ಬಟ್ಟೆಗಳ ಜೊತೆಗೆ ಮಳೆಗಾಲದಲ್ಲಿ ಮೇಕಪ್‌ ಮತ್ತು ಫುಟ್‌ವೇರ್‌ ಬಗ್ಗೆ ಗಮನ ಕೊಡುವುದು ಅಷ್ಟೇ ಅಗತ್ಯ.

ಜಿ. ಪ್ರೇಮಲತಾ

ಈಗ ರೇನ್‌ ವೇರ್‌ ಕೂಡ ಫ್ಯಾಷನೆಬಲ್ ಮಳೆಗಾಲವಂತೂ ಬಹಳ ಆಕರ್ಷಣೀಯ. ಆದರೆ ನೀವು ಮಳೆ ನೀರಿನಲ್ಲಿ ತೊಯ್ದು ಹೋದರೆ ಕಾಯಿಲೆ ಉಂಟಾಗುವ ಅಪಾಯ ಇರುತ್ತದೆ. ಹೀಗಿರುವಾಗ ಮನೆಯಿಂದ ಹೊರಗೆ ಹೋಗಬೇಕಾದರೆ ಮಳೆಯಿಂದ ರಕ್ಷಿಸಿಕೊಳ್ಳುವ ಅತ್ಯಂತ ಸರಳ ಉಪಾಯವೆದರೆ ರೇನ್‌ ವೇರ್‌.ಫ್ಯಾಷನ್‌ನ ಈ ಸುತ್ತಿನಲ್ಲಿ ಈಗ ರೇನ್‌ ವೇರ್‌ ಕೂಡ ಫ್ಯಾಷನೆಬಲ್ ಆಗಿದೆ. ನಿಮ್ಮ ಅಗತ್ಯ ಮತ್ತು ಇಷ್ಟದಂತೆ ಬೇರೆ ಬೇರೆ ಬಣ್ಣ, ಡಿಸೈನ್‌ ಮತ್ತು ಪ್ಯಾಟರ್ನ್‌ಗಳಲ್ಲಿ ಸುಂದರವಾದ ರೇನ್‌ ವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಮಾನ್‌ಸೂನ್‌ನಲ್ಲಿ ಫ್ಯಾಷನೆಬಲ್ ರೇನ್‌ ವೇರ್‌ಗಳನ್ನು ನಿಮ್ಮ ವಾರ್ಡ್‌ರೋಬ್‌ನ ಭಾಗವನ್ನಾಗಿ ಮಾಡಿಕೊಳ್ಳಿ ಮತ್ತು ಸ್ಮಾರ್ಟ್‌ ಆಗಿ ಮಳೆಯ ಆನಂದ ಸವಿಯಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ