ಪಾರ್ಟಿಗಳಲ್ಲಿ ಡ್ಯಾನ್ಸ್ ನ ಪ್ರದರ್ಶನ ಒಂದು ಭವ್ಯ ಮನರಂಜನೆ. ಇದು ಸಂತಸ ಅಭಿವ್ಯಕ್ತಿಗೊಳಿಸಲು ಉತ್ತಮ ವೇದಿಕೆ. ಯಾವುದೇ ಪಾರ್ಟಿ ಸಂಪೂರ್ಣ ಕಳೆಗಟ್ಟಲು ಅದಕ್ಕೆ ಮಸ್ತಿ ಬೆರೆತ ಡ್ಯಾನ್ಸ ಟಚ್‌ ಅತ್ಯಗತ್ಯ. ಇತ್ತೀಚೆಗೆ ಎಲ್ಲರೂ ಬಾಲಿವುಡ್‌ತಾರೆಯರಂತೆ ಡ್ಯಾನ್ಸ್ ಪಾರ್ಟಿಗಳಲ್ಲಿ ಮೆರುಗು ತುಂಬಿಸಲು ಯತ್ನಿಸುತ್ತಾರೆ. ಅದು ಬರ್ಥ್‌ಡೇ, ಮ್ಯಾರೇಜ್‌ ಆ್ಯನಿವರ್ಸರಿ, ಬ್ಯಾಚಲರ್‌ ಅಥವಾ ಇನ್ನಾವುದೇ ಬಗೆಯ ಪಾರ್ಟಿ ಆಗಿರಬಹುದು. ನಿಮ್ಮ ಪಾರ್ಟಿವೇರ್‌ ಡ್ಯಾನ್ಸ್ಗೆ ತಕ್ಕಂತೆ ಕಂಫರ್ಟೆಬಲ್ ಆಗಿರಬೇಕಾದುದು ಅನಿವಾರ್ಯ.

ನೀವು ಸಹ ಈ ರೀತಿ ಡ್ಯಾನ್ಸಿಂಗ್‌ ದೀವಾ ಆಗಿ, ಪಾರ್ಟಿ ಡ್ಯಾನ್ಸ್ ನ ಕೇಂದ್ರಬಿಂದು ಆಗಬಯಸಿದರೆ ಫ್ಯಾಷನ್‌ಸ್ಟೈಲ್‌ನ ಈ ಫಂಡಾಗಳನ್ನು ಅನುಸರಿಸಿ ಡ್ಯಾನ್ಸಿಂಗ್‌ ಕ್ವೀನ್‌ ಆಗಬಹುದು.

ಬ್ಯಾಚಲರ್ಡ್ಯಾನ್ಸ್ ಪಾರ್ಟಿ : ಮದುವೆಯ ಚಿರಬಂಧನದಲ್ಲಿ ಬೆಸೆಯುವ ಮೊದಲು, ಫ್ರೆಂಡ್ಸ್ ಜೊತೆ ಮೋಜುಮಸ್ತಿ ಮಾಡುವುದಕ್ಕಾಗಿ ನಡೆಸಲಿರುವ ಡ್ಯಾನ್ಸ್ ಪಾರ್ಟಿಯಲ್ಲಿ, ನೀವು ಧರಿಸಲಿರುವ ಪಾರ್ಟಿ ಡ್ರೆಸ್‌ ನಿಮ್ಮನ್ನು ಅತ್ಯಂತ ಸ್ಟೈಲಿಶ್‌ ಆಗಿ ಪ್ರಸ್ತುತಪಡಿಸಿ, ಕಂಫರ್ಟೆಬಲ್ ಆಗಿಯೂ ಇರಿಸಬೇಕು. ಇದು ಮುಖ್ಯವಾಗಿ ಬ್ಯಾಚುಲರ್‌ ಪಾರ್ಟಿ ಆದ್ದರಿಂದ, ನೀವಿಲ್ಲಿ ವೆಸ್ಟರ್ನ್‌ ಸ್ಟೈಲ್ ‌ಟ್ರೈ ಮಾಡಬಹುದು. ವೆಸ್ಟರ್ನ್‌ ವೇರ್‌ನಲ್ಲಿ ನೀವು ಯಾವುದೇ ಬ್ರೈಟ್‌ ಕಲರ್‌ನ ಫಿಶ್‌ಕಟ್‌ ಗೌನ್‌ನ್ನು ಸುಲಭವಾಗಿ ಕ್ಯಾರಿ ಮಾಡಬಹುದು. ಆದರೆ ಈ ಡ್ರೆಸ್‌ ಜೊತೆ ಜ್ಯೂವೆಲರಿ ಆದಷ್ಟೂ ಕಡಿಮೆ ಇರಲಿ. ಕೇವಲ ಸ್ಟೇಟ್‌ಮೆಂಟ್‌ ಇಯರ್‌ರಿಂಗ್ಸ್ ಹಾಗೂ ಒಂದು ಕೈಗೆ ಹ್ಯಾಂಡ್‌ ಕಪ್‌ ಧರಿಸಿ. ನೀವು ಗ್ಲಾಮರಸ್‌ ಲುಕ್‌ ಬಯಸಿದರೆ, ಸೈಡ್‌ ಸ್ಟಿಚ್‌ವುಳ್ಳ ಗೌನ್‌ ಅಥವಾ ಮ್ಯೂಲೆಟ್‌ ಡ್ರೆಸ್ ಧರಿಸಿ. ಹೇರ್‌ಸ್ಟೈಲ್‌ಗಾಗಿ ಫಿಶ್‌ ಟೇಲ್ ‌ಅಥವಾ ಮೆಸಿ ಬನ್‌ ಹಾಕಿಕೊಳ್ಳಿ. ನೀವು ನಂಬಲಾರಿರಿ, ಈ ಲುಕ್ಸ್ ಜೊತೆ ನೀವು ಡ್ಯಾನ್ಸ್ ನಲ್ಲಿ ಹಾಕುವ ಸ್ಟೆಪ್ಸ್ ನಿಮ್ಮನ್ನು ಎಲ್ಲಿಗೋ ಕೊಂಡೊಯ್ಯುತ್ತದೆ.

ಎಂಗೇಜ್ಮೆಂಟ್ಪಾರ್ಟಿ : ಬಿಗ್‌ ಫ್ಯಾಟ್‌ ಅಥವಾ ರಿಚ್‌ ಇಂಡಿಯನ್‌ ವೆಡ್ಡಿಂಗ್ಸ್ ನಲ್ಲಿ ಲಗ್ನಪತ್ರಿಕೆ ಅಥವಾ ಎಂಗೇಜ್‌ಮೆಂಟ್ ಪಾರ್ಟಿ ಒಂದು ಮುಖ್ಯ ಆಕರ್ಷಣೆಯಾಗಿದೆ. ಇಲ್ಲಿ ವಧೂವರರು ತಮ್ಮ ಸ್ನೇಹಿತರು, ಬಂಧು ಬಾಂಧವರೊಡನೆ ಬೆರೆಯುತ್ತಾರೆ, ಹೊಸ ಪರಿಚಯ ಬೆಳೆಯುತ್ತದೆ. ಇದರಲ್ಲಿ ಹಾಡು, ಕುಣಿತ, ಜೋಕ್ಸ್, ಸುಗ್ರಾಸ ಭೋಜನ, ಮೋಜುಮಸ್ತಿಗಳೊಡನೆ ಪಾರ್ಟಿ ಭರ್ಜರಿಯಾಗಿ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ನೀವು ಇಂಡಿಯನ್‌ ಡ್ರೆಸ್‌ ಧರಿಸ ಬಯಸಿದರೆ ನಿಮ್ಮ ಬಳಿ ನೂರಾರು ಆಯ್ಕೆಗಳಿವೆ. ಟ್ರೆಡಿಷನ್‌ ಲುಕ್ಸ್ ಗಾಗಿ ಎಂಬ್ರಾಯಿಡರ್ಡ್‌ ರೇಷ್ಮೆ ಸೀರೆ, ಲಂಗಾ ದಾವಣಿ, ಇದಕ್ಕೆ ಗ್ಲಾಮರಸ್‌ ಟಚ್‌ ನೀಡಲು ಸೀಕ್ವೆನ್ಡ್ ಬ್ಲೌಸ್‌, ಪಂಜಾಬಿ ಸೂಟ್‌ಗೆ ನಿಯಾನ್‌ ಕಲರ್‌ ದುಪಟ್ಟಾ, ಅನಾರ್ಕಲಿ ಡ್ರೆಸ್‌….. ಇತ್ಯಾದಿಗಳೊಂದಿಗೆ ಬೋಲ್ಡ್ ಜ್ಯೂವೆಲರಿಯಲ್ಲಿ ಬೀಡೆಡ್‌ ನೆಕ್‌ಲೇಸ್‌, ಡ್ರಾಪ್‌ ಇಯರ್‌ ರಿಂಗ್ಸ್ ಮತ್ತು ಹೈಹೀಲ್ ಸ್ಯಾಂಡಲ್ಸ್ ಧರಿಸಿ. ಇದರ ಬದಲು ಇಂಡೋ ವೆಸ್ಟರ್ನ್‌ ಅಥವಾ ಫ್ಯೂಷನ್‌ ಲುಕ್‌ ಬಯಸಿದರೆ ಶಿಮರಿ ಸೀರೆಯ ಜೊತೆ ಹಾಲ್ಟರ್‌ ನೆಕ್‌ ಸ್ಲೀವ್ ಲೆಸ್ ಬ್ಲೌಸ್‌ ಮತ್ತು ಭಾರಿ ಜ್ಯೂವೆಲರಿ ಬದಲು ಫ್ಯಾಷನ್‌ ಜ್ಯೂವೆಲರಿ ಧರಿಸಿ. ನೆಕ್‌ಪೀಸ್‌ ಬದಲಿಗೆ ಕಿವಿಗಳಿಗೆ ಡ್ಯಾಂಗ್ಲರ್ಸ್‌ ಧರಿಸಿ.

ನವವಧುವಿನ ಗೆಳತಿಯರ ಡ್ಯಾನ್ಸಿಂಗ್

ದೀವಾ ಆಗಬಯಸಿದರೆ, ನೀವು ಈ ಸಂದರ್ಭದಲ್ಲಿ ಎಂಬ್ರಾಯಿಡರಿಯುಳ್ಳ ನೆಟ್‌ನ ಫ್ಲೋರ್‌ ಲೆಂಥ್‌ ಅನಾರ್ಕಲಿ ಟ್ರೈ ಮಾಡಬಹುದು. ಈ ಡ್ರೆಸ್‌ನ್ನು ಕಾಂಪ್ಲಿಮೆಂಟ್‌ಗೊಳಿಸಲು ನೀವು ಮ್ಯಾಚಿಂಗ್‌ ಸ್ಟೇಟ್‌ಮೆಂಟ್‌ ಜ್ಯೂವೆಲರಿ ಧರಿಸಿ.

ಲೇಡೀಸ್ಸಂಗೀತ್ಪಾರ್ಟಿ : ಲೇಡೀಸ್‌ ಸಂಗೀತ್‌ ಪಾರ್ಟಿಯಲ್ಲಿ ಡ್ಯಾನ್ಸ್ ಇಲ್ಲದಿದ್ದರೆ ಹೇಗೆ? ಇಂಥ ಪಾರ್ಟಿಗಾಗಿ ಕೆಲವರು ಕೊರಿಯೋಗ್ರಾಫರ್‌ ಮತ್ತು ಫ್ಯಾಷನ್‌ ಡಿಸೈನರ್‌ಗಳನ್ನು ಹೈಯರ್‌ ಮಾಡುತ್ತಾರೆ. ಅಕಸ್ಮಾತ್‌ ಹೀಗೆ ಮಾಡಲು ಸಾಧ್ಯವಾಗದಿದ್ದರೆ, ನೀವೇ ನಿಮ್ಮ ಕೊರಿಯೋಗ್ರಾಫರ್‌ ಆಗಿ, ನಿಮ್ಮ ಡ್ಯಾನ್ಸ್ ಗೆ ಅನುವಾಗುವಂಥ ಕಂಫರ್ಟೆಬಲ್ ಡ್ರೆಸ್‌ ಧರಿಸಿ.

ನೀವು ಯಾವುದೇ ಭಾಷೆಯ ನೃತ್ಯ ಪ್ರಧಾನ ಸಾಂಪ್ರದಾಯಿಕ ಚಿತ್ರಗೀತೆ ಆರಿಸಿ, ಅದಕ್ಕೆ ಸ್ಟೆಪ್ಸ್ ಹಾಕಬೇಕೆಂದಿದ್ದರೆ, ವಾಲ್ಯೂಂವುಳ್ಳ ಬ್ರೈಟ್‌ಕಲರ್ಡ್‌ ಲಹಂಗಾ ಧರಿಸಿ. ಜೊತೆಗೆ ಆ್ಯಂಟಿಕ್‌ ಜ್ಯೂವೆಲರಿ ಇರಲಿ. ಬೈತಲೆ ಬೊಟ್ಟು, ಓಲೆಗಳನ್ನು ಮರೆಯಬೇಡಿ. ಐ ಮೇಕಪ್‌ ವೈಬ್ರೇಟ್‌ ಮಾಡಿ. ಉಗುರಿಗೆ ಲಹಂಗಾಗೆ ಹೊಂದುವ ಮ್ಯಾಚಿಂಗ್‌ ನೇಲ್ ‌ಆರ್ಟ್‌ ಮಾಡಿಸಿ.

ಹೇರ್‌ಡೂನಲ್ಲಿ ವರ್ಕ್ಸ್‌, ಫ್ರಂಟ್‌ ಪ್ಲೇಟ್‌, ಸೈಡ್‌ ಪ್ಲೇಟ್‌ ಇತ್ಯಾದಿ ಯಾವುದಾದರೂ ಆರಿಸಿ. ಅವನ್ನು ಸ್ವರೋಸ್ಕಿ ಸಹಿತ ಹೇರ್ ಆ್ಯಕ್ಸೆಸರೀಸ್‌ನಲ್ಲಿ  ಅಲಂಕರಿಸಿ. ನಿಮ್ಮ ಮೂಡ್‌ನ್ನು ಅಪ್‌ ಲಿಫ್ಟ್ ಮಾಡುವಂಥ ಲಹಂಗಾ ಬಣ್ಣವನ್ನೇ ಆರಿಸಿ, ಆಗ ಈ ಸಂದರ್ಭವನ್ನು ನೀವು ಚೆನ್ನಾಗಿ ಎಂಜಾಯ್‌ ಮಾಡಬಹುದು.

ಕೌಂಟಿ ಹಾಗೂ ಕಾಕ್ಟೇಲ್ ಪಾರ್ಟಿ : ಕೌಂಟಿ ಅಥವಾ ಕಂಟಿನ್ಯುಯೇಷನ್‌ ಪಾರ್ಟಿ ಎಂದರೆ, ಶಾಲೆಯ ಫೇರ್ವೆಲ್ ‌ನಂತರ ನಡೆಯುವ ಪಾರ್ಟಿ. ಇದರಲ್ಲಿ ಎಲ್ಲಾ ಸಹಪಾಠಿಗಳೂ ಬೆರೆತು ಬೊಂಬಾಟ್‌ ಪಾರ್ಟಿ ನಡೆಸುತ್ತಾರೆ. ಇಂಥ ಪಾರ್ಟಿಗೆ ನೀವು ಶಾರ್ಟ್‌ ವೆಸ್ಟರ್ನ್‌ ಲುಕ್ಸ್ ಬಯಸಿದರೆ, ಪೇಪ್ಲಮ್ ಡ್ರೆಸ್‌ ನಿಮಗೆ ಗ್ಲಾಮರಸ್‌ಸೆಕ್ಸೀ ಲುಕ್‌ ಕೊಡುತ್ತದೆ. ಜೊತೆಗೆ ನೀವು ಬ್ಲ್ಯಾಕ್‌ ಪೀಪ್‌ ಟೋ ಹೀಲ್ಸ್ ಧರಿಸಿ. ನೀವು ರೆಡ್‌ಕಾರ್ಪೆಟ್‌ ಲುಕ್‌ ಬಯಸಿದರೆ, ಅದರಲ್ಲೂ ಲಾಂಗ್‌ಎಲಿಗೆಂಟ್‌ ಡ್ರೆಸ್‌ ಬೇಕೆಂದರೆ, ಒನ್ ಶೋಲ್ಡರ್‌ ಫ್ಲೋರ್‌ ಲೆಂಥ್‌ ಸೆಕ್ಸೀ ಡ್ರೆಸ್‌ ಧರಿಸಬಹುದು. ಇದರಲ್ಲಿ ನೀವು ಲೆಂಥ್‌ ಸ್ಲಿಟ್‌ ಇರಲಿ. ಸ್ಲಿಟ್‌ನ ಕಾರಣ ಡ್ಯಾನ್ಸ್ನಲ್ಲಿ ನಿಮ್ಮ ಮೂಮೆಂಟ್ಸ್ ಸುಲಭ ಹಾಗೂ ಡ್ರೆಸ್‌ ಹಿತಕರ ಎನಿಸುತ್ತದೆ. ಫುಟ್‌ವೇರ್‌ ಇರಲಿ. ನಿಮ್ಮ ಡ್ರೆಸ್‌ ಸ್ಲೀವ್ಸ್ ಅಥವಾ ಬ್ಯಾಕ್‌ಲೆಸ್ ಆಗಿದ್ದರೆ, ನೀವು ನೆಕ್‌ ಹಾಗೂ ಬಾಹುಗಳ ಬಳಿ ಗ್ಲಿಟರ್‌ ಟ್ಯಾಟೂ ಮಾಡಿಸಬಹುದು. ಮೇಕಪ್‌ನಲ್ಲಿ ಕಂಗಳು ಅಥವಾ ತುಟಿಗಳಲ್ಲಿ ಯಾವುದಾದರೊಂದನ್ನು ಹೈಲೈಟ್‌ ಮಾಡಿ.

ಕಾಕ್‌ಟೇಲ್ ‌ಪಾರ್ಟಿಗಳಲ್ಲೂ ಹಾಡು ಕುಣಿತ, ಮೋಜುಮಸ್ತಿ ಇದ್ದೇ ಇರುತ್ತದೆ. ಇದರಲ್ಲಿ ನೀವು ಶೈನಿ ಶಾರ್ಟ್‌ ಸ್ಕರ್ಟ್‌ ಜೊತೆ ಸ್ಟೈಲಿಶ್‌ ಕ್ರಾಪ್‌ ಟಾಪ್‌ ಧರಿಸಬಹುದು. ಎಲ್ ಬಿಡಿ ಅಥವಾ ಲಿಟಿಲ್ ‌ಬ್ಲ್ಯಾಕ್‌ ಡ್ರೆಸ್‌ ಸಹ ಆರಿಸಬಹುದು. ಇದರ ಬದಲು ಸೆಲೆಬ್ರಿಟಿ ಲುಕ್ಸ್ ಬೇಕೆನಿಸಿದರೆ, ರೆಡ್‌ಯೋ ನೆಕ್‌ ಡ್ರೆಸ್‌ ಧರಿಸಿ. ಇದನ್ನು ಟ್ರೆಂಡಿ ಬ್ರೇಸ್‌ಲೆಟ್‌ ಮತ್ತು  ಫ್ಯಾಷನಲ್ ಜ್ಯೂವೆಲರಿ ಜೊತೆ ಶೇರ್‌ಮಾಡಿ, ರೆಡ್‌ ಲಿಪ್‌ಸ್ಟಿಕ್‌ ತೀಡಿರಿ. ರೆಡ್‌ ಲಿಪ್‌ಸ್ಟಿಕ್‌ ನಿಮಗೆ ಕಂಪ್ಲೀಟ್‌ ಲುಕ್‌ ಕೊಡುತ್ತದೆ. ಹೇರ್‌ಸ್ಟೈಲ್‌ನಲ್ಲಿ ಹೈ ಬನ್‌ ಅಥವಾ ವೇವಿ ಲುಕ್‌ ನೀಡಬಹುದು.

ಯಂಗ್‌ ಗರ್ಲ್ಸ್ ಹಾಟ್‌ಫೆಮಿನಿನ್‌ ಡ್ರೆಸ್‌ ಧರಿಸಬಹುದು. ಪಾರ್ಟಿ ಕ್ಲಬ್‌ನಲ್ಲಿದ್ದರೆ, ಶಾರ್ಟ್‌ ಡ್ರೆಸೆಸ್‌ ನಿಮ್ಮನ್ನು ಫ್ಯಾಷನೆಬಲ್ ಸೆಕ್ಸಿಯಾಗಿ ತೋರಿಸುತ್ತದೆ. ನೀವು ಸ್ಲಿಮ್ ಆಗಿದ್ದು, ಡ್ಯಾನ್ಸ್ ಫ್ಲೋರ್‌ನಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡುವ ಟ್ಯಾಲೆಂಟ್‌ ಹೊಂದಿದ್ದರೆ, ಆಫ್‌ ಶೋಲ್ಡರ್‌ ಡ್ರೆಸ್‌, ಇಯರ್‌ ರಿಂಗ್ಸ್  ಬ್ರೇಸ್‌ಲೆಟ್‌ ಜೊತೆ ಧರಿಸಬಹುದು. ನೀವು ತುಸು ದಪ್ಪ ಎನಿಸಿದರೆ, ವೀ ಲೇಯರ್ಡ್‌ ಡ್ರೆಸ್‌ ಧರಿಸಿ. ಲೇಯರ್ಡ್‌ ಡ್ರೆಸ್‌ ದಪ್ಪ ವ್ಯಕ್ತಿಗಳ ಫ್ಯಾಟ್‌ ಅಡಗಿಸಿದರೆ, ತೆಳ್ಳಗಿನವರಿಗೆ ವಾಲ್ಯೂಂ ಹೆಚ್ಚಿಸುತ್ತದೆ. ಅಂದರೆ ಈ ಡ್ರೆಸ್‌ ಮುಖ್ಯವಾಗಿ ಸ್ಲಿಮ್ ಹೆಲ್ದಿ ಇರುವ ಎರಡೂ ತರಹದ ಮಹಿಳೆಯರಿಗೆ ಚೆನ್ನಾಗಿ ಒಪ್ಪುತ್ತದೆ.

– ಲಲಿತಾ ಗೋಪಾಲ್

ಡ್ರೆಸ್ಆರಿಸುವ ಮುನ್ನ……

ನೀವು ಮೂವ್ ‌ಮಾಡಲು ಆಗುವುದೇ ಇಲ್ಲ ಎಂಬಂಥ ಟೈಟ್‌ ಡ್ರೆಸ್‌ ಬೇಡ.

ನಿಮ್ಮ ಬಾಡಿಯ ಬೆಸ್ಟ್ ಪಾರ್ಟ್‌ನ್ನು ಎನ್‌ಹ್ಯಾನ್ಸ್ ಮಾಡುವಂಥ ಡ್ರೆಸ್‌ನ್ನೇ ಆರಿಸಿ.

ಯಂಗ್‌ ಗರ್ಲ್ಸ್ ಬಾಡಿ ಕಾನ್‌ ಡ್ರೆಸೆಸ್‌ ಧರಿಸಬಹುದು. ಇದು ನಿಮ್ಮ ಕರ್ವ್ಸ್ ನ್ನು ಹೈಲೈಟ್‌ ಮಾಡುತ್ತದೆ. ಇಂಥವನ್ನು ಧರಿಸಿದರೆ ನೀವು ಕರೀನಾ, ಪ್ರಿಯಾಂಕಾರಿಗಿಂತಲೂ ಹೆಚ್ಚು ಮಿಂಚಬಹುದು.

ನಿಮ್ಮ ವಯಸ್ಸು, ಟೇಸ್ಟ್, ಪರ್ಸನಾಲ್ಟಿಗಳನ್ನು ಗಮನದಲ್ಲಿರಿಸಿಕೊಂಡೇ ಡ್ರೆಸ್‌ ಆರಿಸಬೇಕು.

ಡ್ರೆಸ್‌ ತುಂಬಾ ಭಾರವಾಗಿರಬಾರದು, ಆಗ ಡ್ಯಾನ್ಸ್ ಫ್ಲೋರ್‌ನಲ್ಲಿ ನೀವು ಹಾಯಾಗಿ ಡ್ಯಾನ್ಸ್ ಮಾಡಬಹುದು. ಡ್ಯಾನ್ಸ್ ಗೆ ಬುಗುರಿಯಂತೆ ಹೇಗೆ ಬೇಕಾದರೂ ತಿರುಗಬಹುದು.

ಬಾಡಿ ಹಗಿಂಗ್‌ ಡ್ರೆಸೆಸ್‌ ಜೊತೆ ಶೇಪ್‌ ವೇರ್‌ ಅಗತ್ಯ ಧರಿಸಿರಿ.

ತುಂಬಾ ಥಳುಕು ಬಳುಕಿನ ಡ್ರೆಸ್‌ ಧರಿಸಬೇಡಿ. ಡ್ಯಾನ್ಸ್ ಪಾರ್ಟಿ ಮೊದಲೇ ಈ ಡ್ರೆಸ್‌ ಧರಿಸಿ ನೋಡಿ. ಎಲ್ಲ ವಿಧದಲ್ಲಿಯೂ ಸರಿ ಇದೆಯೇ ಎಂದು ಪರೀಕ್ಷಿಸಿ. ಫ್ಯಾಷನ್‌ ಶೋಗಳಲ್ಲಿ ನಡೆಯುವಂತೆ ನೀವು ಸಹ ವಾರ್ಡ್‌ರೋಬ್‌ ಮಾಲ್ ಫಂಕ್ಷನ್‌ನ ಶಿಕಾರಿಗೆ ಗುರಿ ಆಗಬಾರದು.

ಕ್ಯಾಶ್ಯುಯೆಲ್‌ಸ್ಮಾರ್ಟ್‌ ಲುಕ್ಸ್ ಗಾಗಿ, ಶಾರ್ಟ್‌ ಡ್ರೆಸೆಸ್‌ ಜೊತೆ ಮ್ಯಾಚಿಂಗ್‌ ಸ್ನೀಕರ್ಸ್‌ ಧರಿಸಿ. ಇದು ನಿಮಗೆ ಸುಖಕರವಾಗಿ ಡ್ಯಾನ್ಸ್ ಮಾಡುವ ಸದವಕಾಶ ನೀಡುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ