ಡೇಲಿವೇರ್‌ನಲ್ಲಿ ಯಾವುದೇ ರೀತಿಯ ಔಟ್‌ಫಿಟ್ ಧರಿಸಲಿ, ಆದರೆ ಫೆಸ್ಟಿವಲ್, ಮ್ಯಾರೇಜ್ ಅಥವಾ ಪಾರ್ಟಿಗಳಲ್ಲಿ ಮಹಿಳೆಯರು ಇಂಡಿಯನ್ ಡ್ರೆಸ್‌ಗಳನ್ನೇ ಇಷ್ಟಪಡುತ್ತಾರೆ. ಇಂಡಿಯನ್ ಡ್ರೆಸ್ ಅಂದರೆ ಓನ್ಲಿ ಸೀರೆಗಳು.
ಬ್ರೊಕೇಡ್ ಸೀರೆಗಳ ವಿಶೇಷತೆ
ಇಂದು ಬ್ರೊಕೇಡ್ ಸೀರೆಗಳಿಗೆ ಬಹಳ ಡಿಮ್ಯಾಂಡ್ ಇದೆ. ಕೋಲ್ಕತಾದ ಸೀರೆ ವ್ಯಾಪಾರಿ ಸುಭಾಷ್ ಹೀಗೆ ಹೇಳುತ್ತಾರೆ, ಈ ಬಾರಿ ಆ ಸೀರೆಗಳ ಗದ್ದಲ ಹೆಚ್ಚಾಗಿದೆ. ಅದಕ್ಕೆ ಕಾರಣ ಅವುಗಳ ಗುಡ್ ಮತ್ತು ರಾಯಲ್ ಲುಕ್. ಈಗ ಫೆಸ್ಟವಲ್ ಸೀಸನ್ ಇಲ್ಲದಿದ್ದರೂ ಮ್ಯಾರೇಜ್ ಪಾರ್ಟಿಗಳು ಮತ್ತು ನ್ಯೂ ಬ್ರೈಡ್‌ಗಳಿಗೆ ಬ್ರೊಕೇಡ್ ಸೀರೆಗಳು ಇಷ್ಟವಾಗುತ್ತವೆ.
ಸೀರೆಗಳನ್ನು ಇಷ್ಟಪಡುವ ಮೀನಾಕ್ಷಿ ಹೀಗೆ ಹೇಳುತ್ತಾರೆ. ಮೊಘಲರ ಕಾಲಕ್ಕೆ ಹಿಂದೆ ಬ್ರೊಕೇಡ್ ಸೀರೆಗಳಲ್ಲಿ ಇದೇ ಮೆಟೀರಿಯಲ್ ಉಪಯೋಗಿಸಲಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣ ಸಿಲ್ವರ್, ಗೋಲ್ಡನ್ ಮತ್ತು ಕಾಟನ್ ಫ್ಯಾಬ್ರಿಕ್ಸ್. ಈ ಕಾರಣದಿಂದಲೇ ಮಹಿಳೆಯರು ಬ್ರೊಕೇಡ್ ಸೀರೆಯನ್ನು ಹೆಚ್ಚು ಇಷ್ಟಪಡುತ್ತಾರೆ.
ಬಾರ್ಡರ್ನಿಂದ ಸೀರೆಯ ಸೌಂದರ್ಯ
ಒಂದು ವೇಳೆ ಸೀರೆಯಲ್ಲಿ ಸುಂದರ ಬಾರ್ಡರ್ ಇದ್ದರೆ ಇನ್ನು ಹೇಳುವುದೇನಿದೆ? ಮಹಿಳೆಯರು ಅವನ್ನು ಸ್ಟೈಲ್ ಮತ್ತು ಕೇರ್‌ನೊಂದಿಗೆ ಕ್ಯಾರಿ ಮಾಡಿದರೆ ಸೀರೆಯ ಸುಂದರ ಬಾರ್ಡರ್ ಅವರ ಲುಕ್‌ನ್ನು ರಿಚ್, ರಾಯಲ್ ಮತ್ತು ಹೈ ಮಾಡುತ್ತದೆ. ಡಿಸೈನರ್‌ಗಳ ಮೂಲಕ ಬಾರ್ಡರ್‌ನ್ನು ಸುಂದರವಾಗಿ ಮಾಡಲು ಸತತ ಪ್ರಯತ್ನಿಸಲಾಗುತ್ತದೆ. ಅದರಿಂದ ಈ ಸೀರೆಗಳ ಡಿಮ್ಯಾಂಡ್ ದಿನದಿನಕ್ಕೂ ಹೆಚ್ಚುತ್ತಿದೆ. ಡಿಸೈನರ್ ಬಾಡರ್ರ್‌ನ ಕ್ವಾಲಿಟಿ, ಡ್ಯೂರಿಬಿಲಿಟಿ ಮತ್ತು ಫಾಸ್ಟ್ ಕಲರ್ ಇತ್ಯಾದಿಗಳಿಗೆ ವಿಶೇಷ ಗಮನ ನೀಡಲಾಗುತ್ತದೆ. ಅದರಿಂದ ಅದರ ಕ್ವಾಲಿಟಿ ಮೆಂಟೇನ್ ಆಗುತ್ತದೆ. ಇದಲ್ಲದೆ ವಿವಿಧ ಪ್ರಕಾರದ ಪ್ಯಾರಾಮೀಟರ್‌ಗಳಾದ ಶೇಡ್ಸ್, ಶೇಪ್, ಥಿಕ್‌ನೆಸ್ ಕೂಡ ಬ್ರೊಕೇಡ್ ಸೀರೆಗಳ ವಿಶೇಷ ಗುರುತಾಗಿವೆ.
ಜಾರ್ಜೆಟ್ ಸಿಲ್ಕ್ ಫ್ಯಾಬ್ರಿಕ್ಸ್ ಸಿಲ್ಕ್ ಬ್ರೊಕೇಡ್‌ಗಾಗಿ ಸೀರೆಗಳನ್ನು ಸ್ಯಾಟನ್ ಮತ್ತು ಲೂಮ್ ನಿಂದ ನೇಯ್ಗೆ ಮಾಡಿಸಲಾಗುತ್ತದೆ. ನೇಯುವಾಗ ಕಲರ್‌ಫುಲ್ ಥ್ರೆಡ್ ಉಪಯೋಗಿಸುತ್ತಾರೆ. ಈ ವಿಶೇಷ ಸೀರೆಗಳನ್ನು ಫೆಸ್ಟಿವಲ್ ಅಲ್ಲದೆ ಮ್ಯಾರೇಜ್ ಮತ್ತು ಇತರ ಸಂದರ್ಭಗಳಲ್ಲೂ ಆಯ್ದುಕೊಳ್ಳಬಹುದು.
ಸಿಲ್ಕ್ ಜಾರ್ಜೆಟ್ ಬ್ರೊಕೇಡ್ ಸೀರೆಗಳು ತಮ್ಮ ಸ್ಮೂಥ್‌ನೆಸ್, ಸಾಫ್ಟ್ ನೆಸ್ ಮತ್ತು ಶೈನಿ ಲುಕ್‌ನಿಂದಾಗಿ ಜನಪ್ರಿಯವಾಗಿದ್ದು ಡಿಮ್ಯಾಂಡ್‌ನಲ್ಲಿವೆ.
ಇತರ ಔಟ್‌ಫಿಟ್ಸ್ ಸೀರೆಗಳಲ್ಲದೆ ಇಂದು ಬ್ರೊಕೇಡ್ ಬ್ಲೌಸ್, ಸಲ್ವಾರ್ ಸೂಟ್ ಮತ್ತು ಲಹಂಗಾ ಕೂಡ ಯುವತಿಯರು ಮತ್ತು ಮಹಿಳೆಯರನ್ನು ಆಕರ್ಷಿಸುತ್ತಿವೆ. ಅದಕ್ಕೆ ಕಾರಣ ಅವುಗಳ ಡ್ಯೂರೆಬಿಲಿಟಿ, ಥಿಕ್‌ನೆಸ್ ಮತ್ತು ಬ್ರೈಟ್‌ನೆಸ್. ಇತರ ವೆರೈಟಿಗಳಲ್ಲಿ ಕಾಂಚಿಪುರಂ ಬ್ರೋಕೆಡ್ ಸೀರೆ ಅಥವಾ ಬನಾರಸ್ ಬ್ರೊಕೇಡ್ ಸೀರೆಯನ್ನು ನೀವು ಕ್ಯಾರಿ ಮಾಡಬಹುದು.
ಇತರ ಪ್ರಾಡಕ್ಟ್ಸ್ ಬ್ರೊಕೇಡ್ ಫ್ಯಾಬ್ರಿಕ್, ಯುವತಿಯರು ಮತ್ತು ಮಹಿಳೆಯರಿಗೆ ಬಹಳ ಇಷ್ಟವಾಗುತ್ತಿದೆ. ಇದು ಎಲ್ಲರಿಗೂ ಇಷ್ಟವಾಗಿದ್ದು ಬಹಳ ಡಿಮ್ಯಾಂಡ್ ಇವರು ಕಾರಣ ಸೀರೆಗಳಲ್ಲದೆ ಬ್ರೊಕೇಡ್ ಫ್ಯಾಬ್ರಿಕ್‌ನ ಚಪ್ಪಲಿಗಳು, ಬ್ಯಾಗ್ಸ್, ಹ್ಯಾಂಗಿಂಗ್ ಒಡವೆಗಳೂ ಇವೆ. ನೀವು ಅವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಬಹುದು.
– ಸವಿತಾ ಭಾಸ್ಕರ್
ಸಂರಕ್ಷಣೆ
ಈ ಸುಂದರ ಸೀರೆಗಳನ್ನು ಧರಿಸುವಾಗ ಈ ವಿಶೇಷ ವಿಷಯಗಳನ್ನು ಗಮನಿಸಿ :
ಸೀರೆ ಧರಿಸುವಾಗ ಸೆರಗನ್ನು ಓಪನ್ ಆಗಿ ಕ್ಯಾರಿ ಮಾಡಿ.
ಇದರ ಸೌಂದರ್ಯ ಇದರ ಬಾರ್ಡರ್‌ನಲ್ಲಿದೆ. ಆದ್ದರಿಂದ ಸೀರೆಯನ್ನು ಕ್ಯಾರಿ ಮಾಡುವಾಗ ಬಾರ್ಡರ್ ಸ್ಟ್ರೇಟ್ ಆಗಿರಲಿ. ಅದನ್ನು ಗಮನಿಸಿಕೊಳ್ಳಿ.
ಬ್ರೊಕೇಡ್ ಸೀರೆಗಳೊಂದಿಗೆ ಬ್ರೊಕೇಡ್ ಬ್ಲೌಸ್ ಕೂಡ ಉಪಯೋಗಿಸಬಹುದು. ನೀವು ಇಷ್ಟಪಟ್ಟರೆ ಹಾಫ್ ಸ್ಲೀವ್ ನೆಟ್ ಅಥವಾ ಜಾರ್ಜೆಟ್ ಬ್ಲೌಸ್ ಕೂಡ ಕ್ಯಾರಿ ಮಾಡಬಹುದು.
ಪಾರ್ಟಿ ಇತ್ಯಾದಿಗಳಿಂದ ಬಂದ ನಂತರ ಸ್ವಲ್ಪ ಹೊತ್ತು ಸೀರೆಯನ್ನು ತೆರೆದೇ ಇಟ್ಟು ನಂತರ ಮಡಚಿ ಇಡಿ.