ಬದಲಾಗುತ್ತಿರುವ ಸಮಯ ಹಾಗೂ ಫ್ಯಾಷನ್ನಿನ ಬೇಡಿಕೆಗೆ ತಕ್ಕಂತೆ ಬ್ಲೌಸ್‌ನಲ್ಲಿ ಹಲವು ಬದಲಾವಣೆಗಳು ಈಗ ಮಾತ್ರವಲ್ಲ, ಬದಲಿಗೆ ಹಳೆಯ ಕಾಲದ ಡಿಸೈನರ್‌ಗಳೂ ಸಹ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದಾರೆ.
ಬಾಲಿವುಡ್ ತಾರೆಯರಿಗೆ ಹೆಚ್ಚಿನ ಗ್ಲಾಮರಸ್ ಲುಕ್ಸ್ ನೀಡುವುದರಲ್ಲಿ ಫ್ಯಾಷನ್ ಡಿಸೈನರ್‌ಗಳ ಪಾತ್ರ ಬಲು ದೊಡ್ಡದು. ಕಾಸ್ಟ್ಯೂಮ್ ಡಿಸೈನರ್ ಭಾನು ಅಥೈಯ್ಯ 1955ರಲ್ಲಿ ರಾಜ್‌ಕಪೂರ್‌ರ `ಶ್ರೀ 420' ಚಿತ್ರಕ್ಕಾಗಿ ಖಳನಾಯಕಿ ನಾದಿರಾಗಾಗಿ ಸೆಕ್ಸೀ ಚೋಲಿ ತಯಾರಿಸಿ, ಸಂಪ್ರದಾಯಸ್ಥ ಸಮಾಜದಲ್ಲಿ ಗಲಿಬಿಲಿ ಎಬ್ಬಿಸಿದ್ದರು. ಆದರೆ ಅದಾದ ಮೇಲೆ ಅಂದಿನ ಕಾಲದ ತರುಣಿಯರು ಅಂಥ ಡಿಸೈನರ್‌ಗಳ ಬಳಿ ಅದಕ್ಕಾಗಿ ಭಾರಿ ಬೇಡಿಕೆ ಮುಂದಿಟ್ಟರಂತೆ!
`ಹಂ ಆಪ್ ಕೆ ಹೈ ಕೌನ್' ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಧರಿಸಿದ್ದ ಬ್ಯಾಕ್ ಲೆಸ್ ಸೆಕ್ಸಿ ಬ್ಲೌಸ್‌ನ್ನು ಯಾರಾದರೂ ಮರೆಯಲು ಸಾಧ್ಯವೇ? ಇದನ್ನು ಪ್ರತಿಯೋಬ್ಬ ಯುವತಿಯೂ ಅನುಕರಿಸತೊಡಗಿದಳು. ಸಾಮಾನ್ಯವಾಗಿ ಸಿನಿಮಾ ನಟಿಯರು ಧರಿಸುವ ಇಂಥ ಡ್ರೆಸೆಸ್ ಹೆಚ್ಚು ಚರ್ಚೆಯಲ್ಲಿ ಉಳಿಯುತ್ತದೆ. ಅದರಲ್ಲೂ ಡಿಸೈನರ್ ಸೀರೆ ಮತ್ತು ರವಿಕೆ.
ಬ್ಲೌಸ್‌ನ ಬೋಲ್ಡ್ ಟ್ರೆಂಡಿ ಲುಕ್ : ಇಂದಿನ ಫ್ಯಾಷನ್ ಅಗತ್ಯಗಳನ್ನು ಗಮನಿಸಿ, ಬ್ಲೌಸ್‌ನ್ನು ಟ್ರೆಂಡಿಗೊಳಿಸಲು ಇತ್ತೀಚೆಗೆ ಲಾಂಗ್ ಸ್ಲೀವ್ಸ್, ಲೋ ಬ್ಯಾಕ್ ಬ್ಲೌಸ್‌ಗಳು ಸಾಕಷ್ಟು ಟ್ರೆಂಡ್‌ನಲ್ಲಿವೆ. ಬ್ರೈಟ್ ಕಲರ್ಸ್‌ಟ್ರಾನ್ಸ್ ಪರೆಂಟ್ ಫ್ಯಾಬ್ರಿಕ್‌ನ ಟಚ್ ಇವಕ್ಕೆ ಡಿಫರೆಂಟ್ ಸ್ಟ್ಸೈಲ್ ನೀಡುತ್ತವೆ. ನ್ಯೂಡ್ ಕಲರ್ ನೆಟ್ (ಸ್ಕಿನ್ ಕಲರ್)ನ ಫುಲ್ ಸ್ಲೀವ್ಸ್ ಮೇಲೆ ಜರ್ಕನ್ ವರ್ಕ್, ಸ್ವರೋಸ್ಕಿ ಕಸೂತಿಗಳು ಎದ್ದು ಕಾಣಿಸುತ್ತವೆ. ಆದ್ದರಿಂದ ಇವನ್ನು ಟ್ರೆಂಡಿಗೊಳಿಸಲು ಬ್ಲೌಸ್‌ನ ಕಲರ್‌ನ್ನು ಕಾಂಟ್ರಾಸ್ಟ್ ಆಗಿ ಇಡಬೇಕು. ಏಕೆಂದರೆ ಈಗೆಲ್ಲ ಮ್ಯಾಚಿಂಗ್ ಸೀರೆ ಬ್ಲೌಸ್ ಫ್ಯಾಷನ್ ಚಾಲ್ತಿಯಲ್ಲಿವಲ್ಲ.
ಇಂದಿನ ಕಾಲೇಜು ಕಿಶೋರಿಯರಲ್ಲಿ ಕಾಲರ್ ಸ್ಟೈಲ್ ಬ್ಲೌಸ್ ಹೆಚ್ಚು ಟ್ರೆಂಡ್‌ನಲ್ಲಿದೆ. ಪ್ಲೇನ್ ಸೀರೆಯೊಂದಿಗೆ ಬ್ರೊಕೇಡ್, ರಾ ಸಿಲ್ಕ್ ಬ್ಲೌಸ್ ಸಾಕಷ್ಟು ಟ್ರೆಂಡಿ ಎನಿಸುತ್ತದೆ.
ಬ್ಯಾಕ್‌ಲೆಸ್‌ನಲ್ಲಿ ಗ್ಲಾಮರಸ್ ಟಚ್ : ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳಿಗೆ ಜವಳಿ ಆಯ್ಕೆ ಎಂದರೆ ಮೊದಲು ಹೊಳೆಯುವುದು ರೇಷ್ಮೆ ಸೀರೆ! ಈಗಂತೂ ಹಿಂದಿ ಮಾತ್ರವಲ್ಲದೆ, ಎಲ್ಲಾ ಭಾಷೆಗಳ ಚಿತ್ರನಟಿಯರೂ ಇವುಗಳ ಬ್ಲೌಸ್‌ಗೆ ಗ್ಲಾಮರಸ್ ಟಚ್ ನೀಡಿ, ಈ ಉಡುಗೆಗಳನ್ನು ಬಹಳ ಜನಪ್ರಿಯಗೊಳಿಸಿದ್ದಾರೆ.
ಪ್ಲೇನ್ ಸೀರೆಯ ಜೊತೆ ಮಾಡರ್ನ್ ಕಾಲರ್‌ವುಳ್ಳ ಬ್ಲೌಸ್ ಬೆಸ್ಟ್ ಆಪ್ಶನ್ ಎನಿಸುತ್ತದೆ. ಲಕ್ಷುರಿ ಲುಕ್ ಬಯಸಿದರೆ, ಜರಿ ವರ್ಕ್‌ನ ಹಾಲ್ಟರ್ ನೆಕ್ ಅಥವಾ ಸ್ಲೀವ್ ಲೆಸ್ ಬ್ಲೌಸ್ ಅಥವಾ ವೆಲ್ವೆಟ್ ಬ್ಲೌಸ್ ಹಗುರ ಸೀರೆಯ ಜೊತೆ ಟ್ರೆಂಡ್ ಎನಿಸುತ್ತದೆ. ನೀವು ಟ್ರೆಡಿಷನ್ ಲುಕ್‌ಜೊತೆ ಸೆಕ್ಸಿ ಲುಕ್ ಸಹ ಬಯಸಿದರೆ, ನೆಟ್ ಸ್ಲೀವ್ಸ್ ನ ವೆಲ್ವೆಟ್ ಯೆಲ್ಲೋ ಬ್ಲೌಸ್ ಧರಿಸಿ, ಇದರಲ್ಲಿ ವೈಟ್ ಸಿಮರೀ ಬಾರ್ಡರ್ ಇದ್ದರೆ ಇನ್ನಷ್ಟು ಸೊಗಸು!
ಕೋರ್ಸೆಟ್ ಬ್ಲೌಸ್ : ಈ ಬ್ಲೌಸ್ ಇತ್ತೀಚೆಗಷ್ಟೆ ಜನಪ್ರಿಯಗೊಳ್ಳುತ್ತಿದೆ. ಪ್ಲೇಟೆಡ್ ಕೋರ್ಸೆಟ್ ಬ್ಲೌಸ್ ಎಲ್ಲಾ ಬಾಡಿಗಳಿಗೂ ಸೂಟ್ ಆಗುತ್ತದೆ. ಇದರ ಮುಖ್ಯ ವೈಶಿಷ್ಟ್ಯ ಎಂದರೆ, ಇದು ಬಾಡಿಯ ಎಕ್ಸ್ ಟ್ರಾ ಫ್ಯಾಟ್‌ನ್ನು ಬಚ್ಚಿಡುತ್ತದೆ.