ಬನಾರಸ್‌ (ಕಾಶಿ) ಹಾಗೂ ಟಿಬೆಟ್‌ ಬಲು ದೂರ ಅನಿಸಿದರೂ, ಬನಾರಸಿ ಸಿಲ್ಕ್ ಬಿಸ್‌ನೆಸ್‌ ಈ ಅಂತರವನ್ನು ಎಷ್ಟೋ ತಗ್ಗಿಸಿದೆ. ಬೌದ್ಧ ಗುರು ದಲೈಲಾಮಾರಿಗೂ ಬನಾರಸಿ ಸಿಲ್ಕ್ ಬಗ್ಗೆ ವಿಶೇಷ ಮೆಚ್ಚುಗೆ ಹಾಗೂ ಇಲ್ಲಿ ತಯಾರಾಗುವ ಬ್ರೊಕೇಡ್‌ ಸಿಲ್ಕ್ ಸೀರೆಗಳು ಟಿಬೆಟ್‌ನವರಿಗೆ ಬಲು ಪ್ರಿಯ! 1959ಕ್ಕೆ ಮೊದಲು ಟಿಬೆಟ್‌  ಮೇಲೆ ಚೀನೀಯರ ಆಕ್ರಮಣ ಆಗಿರಲಿಲ್ಲ. ಆಗ ಟಿಬೆಟ್‌ನಲ್ಲಿ ಎಲ್ಲೆಲ್ಲೂ ಬ್ರೊಕೇಡ್‌ ಸೀರೆಗಳ ವ್ಯಾಪಾರ ಜೋರಾಗಿತ್ತು, ಬಿಸ್‌ನೆಸ್‌ಗೆ ಮುಖ್ಯ ಆಧಾರವಾಗಿತ್ತು, ಈಗಲೂ ಸಹ ದೊಡ್ಡ ಪ್ರಮಾಣದಲ್ಲಿ ಬನಾರಸ್‌ನಿಂದ ಸಿಲ್ಕ್ ಟಿಬೆಟ್‌ಗೆ ರಫ್ತಾಗುತ್ತದೆ. ರೇಷ್ಮೆಯ ಎಳೆಗಳ ಹೆಣಿಗೆ ಹಾಗೂ ಜರಿ ಬೆರೆಸಿ ತಯಾರಿಸಲಾಗುವ ಡಿಸೈನರ್‌ ಸೀರೆಗಳಿಗೆ `ಬನಾರಸ್‌ ಸೀರೆ'ಗಳೆಂಬ ಬ್ರ್ಯಾಂಡ್‌ ಇದೆ. ಮುಖ್ಯವಾಗಿ ಈ ಸೀರೆಗಳು ಉ.ಪ್ರ.ದ ಚಂದೇರಿ, ಬನಾರಸ್‌, ಜಾನ್‌ಪುರ್‌, ಆಜ್ಮಾಗ್‌, ಮಿರ್ಜಾಪುರ, ಭದೋಹಿ, ಮುಬಾರಕ್‌ಪುರ್‌, ಖೈರಾಬಾದ್‌ ಮುಂತಾದೆಡೆವುಗಳಲ್ಲಿ ತಯಾರಾಗುತ್ತವೆ. ಬನಾರಸಿ ಸೀರೆಗಳು ಈ ಏರಿಯಾದಲ್ಲಿ ವಾಸಿಸುವವರ ಆದಾಯಕ್ಕೆ ಮೂಲಾಧಾರವಾಗಿದೆ. ಆದರೆ ಇವೆಲ್ಲ ಬನಾರಸಿ ಸೀರೆಗಳೆಂದೇ ಹೆಸರಾಗಿವೆ. ಬಲು ಆಸೆಯಿಂದ ದೂರದ ಊರುಗಳಿಂದ ಜನ ಇಲ್ಲಿಗೆ ಬನಾರಸಿ ಸೀರೆಗಳನ್ನು ಕೊಳ್ಳಲೆಂದು ಬರುತ್ತಾರೆ. ಇದರ ವ್ಯವಹಾರ ಬಲು ಪುರಾತನವಾದುದು. ಮೊಘಲರ ಕಾಲದಿಂದಲೇ ಇವು ಪ್ರಸಿದ್ಧಿಗೆ ಬಂದಿದ್ದವು.

ಬನಾರಸ್‌ನ ಪೀಲಿ ಕೋಠಿ ಎಂಬಲ್ಲಿ 250 ವರ್ಷಗಳಿಂದ ಬನಾರಸಿ ಸೀರೆಗಳ ತಯಾರಿಕೆಯ ಇತಿಹಾಸವಿದೆ. 1886ರಲ್ಲಿ ಬ್ರಿಟಿಷ್‌ಸರ್ಕಾರದಿಂದ ಸಿಲ್ಕ್ ಎಂಪೋರಿಯಂನಲ್ಲಿ ಕೆಲಸ ಮಾಡುವ ಇಲ್ಲಿನ ಕಾರ್ಮಿಕರಿಗೆ ರಾಜಕುಮಾರ ಆಲ್ಬರ್ಟ್‌ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿದ್ದನಂತೆ. ಈ ಸೀರೆಗಳನ್ನು ಹಿಂದೆಲ್ಲ `ಕಡುವಾ' ಹೆಸರಿನಿಂದ ಕರೆಯುತ್ತಿದ್ದರು. ಆಗ ಇನ್ನು ತನ್‌ಛುಯಿ, ಡಮ್ವಾರ್‌ ಮತ್ತು ಶಿಫಾನ್‌ ರೂಪದಲ್ಲಿ ತಯಾರಿಸಲಾಗುತ್ತಿತ್ತು. ಜಾಮ್ವಾರ್‌ ಡಿಸೈನ್‌ ಕಾಶ್ಮೀರದ ಶಾಲ್‌ನಿಂದ ಪ್ರಭಾವಿತಗೊಂಡಿತ್ತು. ಈ ಸೀರೆಗಳಲ್ಲಿ ಬನಾರಸ್‌ನ ಸ್ಪೆಷಲ್ ಟಚ್‌ಪ್ಯಾಟರ್ನ್‌ ಎದ್ದು ತೋರತೊಡಗಿದಾಗ, ಇವನ್ನು ಬನಾರಸಿ ಸೀರೆಗಳೆಂದೇ ಗುರುತಿಸತೊಡಗಿದರು.

ಒಂದು ಬನಾರಸಿ ಸೀರೆ ತಯಾರಿಸಲು ಸುಮಾರು 4,200ರ ಮೌಲ್ಯದ ಕಚ್ಚಾ ಮಾಲು ಖರ್ಚಾಗುತ್ತದೆ. ಬನಾರಸಿ ಸೀರೆ ತಯಾರಿಸುವ ಮೊದಲೇ ಅದರ ಡಿಸೈನ್‌ ತಯಾರಾಗುತ್ತದೆ. ನಂತರ ಕೈಮಗ್ಗಗಳಿಂದ ಈ ಡಿಸೈನಿನ ನಮೂನೆ ತಯಾರಾಗುತ್ತದೆ. ಬನಾರಸಿ ಸೀರೆಯ ಬೆಲೆ 5 ಸಾವಿರದಿಂದ ಆರಂಭಗೊಂಡು ಲಕ್ಷಾಂತರ ರೂ. ದಾಟುತ್ತದೆ. ಬದಲಾದ ಸ್ವರೂಪ ಆರಂಭದಲ್ಲಿ ಬನಾರಸಿ ಸೀರೆಗಳಲ್ಲಿ ಶುದ್ಧ ಚಿನ್ನ ಮತ್ತು ಬೆಳ್ಳಿಯಿಂದ ತಯಾರಿಸಲಾದ ಎಳೆಗಳನ್ನು ಬಳಸಲಾಗುತ್ತಿತ್ತು. ಇದನ್ನೇ ಜರಿ ಎನ್ನುತ್ತಾರೆ. ಜರಿ ದುಬಾರಿ ಆಗತೊಡಗಿದಂತೆ ಶುದ್ಧ ಚಿನ್ನಬೆಳ್ಳಿಯ ಜಾಗದಲ್ಲಿ ನಕಲಿ ಜರಿಯ ಬಳಕೆ ಆಗತೊಡಗಿತು. ಇದು ಅಪ್ಪಟ ಜರಿಗಿಂತ ಖಂಡಿತಾ ಅಗ್ಗ. ನಕಲಿ ಜರಿ ಹಾಗೂ ರೇಷ್ಮೆ ಎಳೆಗಳು ಈಗ ಚೀನಾದಿಂದ ಆಮದಾಗುತ್ತದೆ. ಕೈಮಗ್ಗಗಳು ಹೋಗಿ ಆ ಜಾಗದಲ್ಲಿ ಚೈನೀಸ್‌ ಲೂಮ್ಸ್ ಬಂದಿವೆ. ಬನಾರಸಿ ಸೀರೆಯಲ್ಲಿ ಬೇರೆ ಬೇರೆ ಡಿಸೈನ್‌ಗಳ ನಮೂನೆ ತಯಾರಿಸಲಾಗುತ್ತದೆ. ಈ ನಮೂನೆಗಳನ್ನೇ ಮೋಫಿಫ್‌ ಎನ್ನುತ್ತಾರೆ. ಬನಾರಸಿ ಸೀರೆಗಳ ಈ ಮೋಫಿಫ್‌ ಬಲು ಪ್ರಸಿದ್ಧ. ಇವನ್ನು ಬೇಲ್‌, ಬುಟ್ಟಾ, ಬೂಟಿ, ಕೋನಿಯಾ, ಬಾಲ್‌, ಆಂಚ್‌, ಜಂಗ್ಲಾ, ರಲರ್‌ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಮೊದಲು ಬನಾರಸಿ ಸೀರೆಗಳು ನಕ್ಷೆ, ಜಾಲಾಗಳಿಂದ ತಯಾರಾಗುತ್ತಿತ್ತು. ಅದಾದ ಮೇಲೆ ಡಾಬಿ ಮತ್ತು ಜೆಕಾರ್ಡ್‌ ಬಳಕೆಯಾಗತೊಡಗಿತು. ಈಗ ಇದು ಪವರ್‌ ಲೂಮ್ ರೂಪದಲ್ಲಿ ವಿಕಾಸಗೊಂಡಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ