ಕಲರ್‌ ಫುಲ್ ಟಾಪ್‌ಗೆ ಬ್ಲ್ಯಾಕ್‌ ಜ್ಯಾಕೆಟ್‌ ಮತ್ತು ಸ್ಟೈಲಿಶ್‌ ಸ್ಕರ್ಟ್‌ನ ಮೋಡಿ ಗಮನಸೆಳೆಯುತ್ತದೆ. ಕೂದಲಿಗೊಂದು ಕೃತಕ ಗುಲಾಬಿ ಹಾಗೂ ಕೈಗಳಲ್ಲಿ ಕ್ಯೂಟ್‌ ಅಂಬ್ರೆಲಾ ಹಿಡಿದ ಈ ಷೋಡಶಿ ಮಂದಹಾಸ ಬೀರುತ್ತಾ ಮಳೆಯನ್ನು ಸ್ವಾಗತಿಸುತ್ತಿದ್ದಾಳೆ.

ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಜೊತೆ ಫ್ಲೇರ್ಸ್ ವುಳ್ಳ ಹಾಟ್‌ ರೆಡ್‌ ಸ್ಟೈಲಿಶ್‌ ಔಟ್‌ಫಿಟ್‌, ಇವಳ ಕಾಮನಬಿಲ್ಲಿನ ಛತ್ರಿ ಹಾಗೂ ಗಾಗಲ್ಸ್ ಜೊತೆ ಸುಪರ್ಬ್‌ ಎನಿಸಿದೆ.

ನೂಡಲ್ಸ್ ಸ್ಚ್ರೈಪ್ಸ್ ವೈಟ್‌ ಮಿಡಿಯಲ್ಲಿ ಈ ಷೋಡಶಿಯ ಸೌಂದರ್ಯ ಎದ್ದು ಕಾಣುತ್ತಿದೆ. ಬಿಳಿಯುಡೆಗೆಯ ಜೊತೆ ಕಾಮನಬಿಲ್ಲಿನ ಕಾಂಟ್ರಾಸ್ಟ್ ಛತ್ರಿ ಉತ್ತಮ ಕಾಂಬಿನೇಷನ್‌.

ಸಾದಾ ಯೆಲ್ಲೋ ಮಿಡಿ ಮೇಲೆ ಪರ್ಲ್ ಬೀಡ್ಸ್ ಡಿಸೈನಿನ ಜೊತೆ ಯೆಲ್ಲೋ ಇಯರ್‌ ರಿಂಗ್ಸ್ ಧರಿಸಿ ಮೋಹಕ ಮುಗುಳ್ನಗೆ ಬೀರುತ್ತಿರುವ ಈ ಬೆಡಗಿಯ ಸೊಬಗಿಗೆ ಮರುಳಾಗದವರಾರು?

ಸ್ಲೀವ್ ಲೆ‌ಸ್‌ ಸ್ಮಾರ್ಟ್‌ ಡ್ರೆಸ್‌ ಜೊತೆ ಕಲರ್ಡ್‌ ಫಂಕಿ ಜ್ಯೂವೆಲರಿಯ ಕಾಂಬಿನೇಷನ್‌, ಆಧುನಿಕ ಮೇಕಪ್‌ ಹಾಗೂ ಹೇರ್‌ಸ್ಟೈಲ್‌, ಇವಳು ಪಾರ್ಟಿಗೆ ಹೊರಡಲು ಸಜ್ಜಾಗಿದ್ದಾಳೆ ಎಂದು ಸಾರುತ್ತಿವೆ  ಸೀಕ್ವೆನ್ಸ್ ವರ್ಕ್‌, ಬೀಡ್ಸ್ ಸ್ಟೋನ್ಸ್ ನಿಂದ ಸುಸಜ್ಜಿತ ಈ ಗಾರ್ಜಿಯಸ್‌ ಒನ್‌ಪೀಸ್‌ ಡ್ರೆಸ್‌, ಈಕೆಗೆ ರಾಜಕುಮಾರಿಯ ಕಳೆ ತಂದುಕೊಟ್ಟಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ