ಕ್ರಿಯೇಟಿವ್ ಲೈಫ್‌ ಸ್ಟೈಲ್‌ನ ಡಿಸೈನರ್‌ ರಿತು ಜಾನಿ ಹೇಳುತ್ತಾರೆ, ಜೀನ್ಸ್ ಸುಮಾರು 1800ರ ಹೊತ್ತಿಗೆ ಫ್ಯಾಷನ್‌ಗೆ ಬಂದಿತ್ತಂತೆ. ಆಗೆಲ್ಲ ಕಾರ್ಗೋ ಜೀನ್ಸ್ ಹೆಚ್ಚು ಬೇಡಿಕೆಯಲ್ಲಿತ್ತು. ಇದನ್ನು ಕಾರ್ಖಾನೆಯ ಕಾರ್ಮಿಕರು ತಮ್ಮ ಒರಟು ಕೆಲಸಕ್ಕೆ ಸಹಕಾರಿ ಎಂದು ಹೆಚ್ಚಾಗಿ ಧರಿಸುತ್ತಿದ್ದರಂತೆ. ನಿಧಾನವಾಗಿ ಇದು ಯುವಜನತೆಯ ಅಚ್ಚುಮೆಚ್ಚಿನ ಫ್ಯಾಷನ್‌ ಆಗಿ 20ನೇ ಶತಮಾನದಲ್ಲಿ ವಿರಾಟ ಸ್ವರೂಪ ಪಡೆಯಿತು. ಇಂದು ಜೀನ್ಲ್ ರಹಿತ ವಾರ್ಡ್‌ರೋಬೇ ಇಲ್ಲ ಎಂಬಂತಾಗಿದೆ.

ಇದರ ವೈವಿಧ್ಯತೆಗಳ ಬಗ್ಗೆ ಹೇಳಬೇಕೆಂದರೆ, ಸುಮಾರು 20 ಬಗೆಯ ವಾಶ್ಡ್ ಸ್ಟೈಲ್ ‌ಇಂದು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದರ ಟೆಕ್ಸ್ ಚರ್‌ ಸಹ ಬಹು ವೆರೈಟಿಗಳಲ್ಲಿ ಲಭ್ಯ. ಮಾನ್‌ಸೂನ್‌ನ್ನು ಗಮನದಲ್ಲಿರಿಸಿಕೊಂಡೇ ಡೆನಿವ್‌ನ ಹಲವು ಡ್ರೆಸೆಸ್‌ ಮಾರುಕಟ್ಟೆಗೆ ಬಂದಿವೆ, ಇದು ಎಷ್ಟೋ ಹಗುರ ಕೂಡ. ನೆನೆದರೂ ಸಹ ಬೇಗನೇ ಒಣಗುತ್ತದೆ.

ಡೆನಿಮ್ ಎಲ್ಲರ ಆಕರ್ಷಣೆಯ ಮುಖ್ಯ ಕೇಂದ್ರ. ಹೈ ವೆಯ್ಸ್ಟ್ ಡೆನಿಮ್ ನ್ನು ಅಚ್ಚ ಬಿಳಿಯ ಟೀಶರ್ಟ್‌ ಜೊತೆ ಧರಿಸಿದರೆ, ಕ್ಯಾಶ್ಯುಯಲ್ ಜೊತೆ ಸ್ಮಾರ್ಟ್‌ ಲುಕ್ಸ್ ಗ್ಯಾರಂಟಿ.

ಕಂಟೆಂಪರರಿ ಡೆನಿಮ್ ಬಾಟಮ್ ನಲ್ಲಿ ಮುಖ್ಯವಾದವು ಎಂದರೆ ಪ್ಯಾಂಟ್ಸ್, ಪ್ಲಾಜೋ ಪ್ಯಾಂಟ್ಸ್, ಕೇಪ್ರೀಸ್‌ ಇತ್ಯಾದಿ. ಇದು ಮಳೆಗಾಲದಲ್ಲೂ ಹೆಚ್ಚು ಪ್ರಯೋಜನಕಾರಿ. ಇದರ ಪ್ಯಾಂಟ್ಸ್ ನ್ನು ಯಾವುದೇ ಟಾಪ್‌ ಜೊತೆ ಆಕರ್ಷಕವಾಗಿ ಧರಿಸಬಹುದು.

ಕ್ಲಾಸಿಕ್‌ ಡೆನಿಮ್ ಶರ್ಟ್‌ನ್ನು ನೀವು ಯಾವುದೇ ಬಗೆಯ ಸ್ಕರ್ಟ್‌/ಪ್ಯಾಂಟ್‌ ಜೊತೆ ಧರಿಸಬಹುದು.

ಈಗ ಡೆನಿಮ್ ಜ್ಯಾಕೆಟ್ಸ್ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ. ಭಾರತೀಯ ಮಹಿಳೆಯನ್ನು ಗಮನದಲ್ಲಿರಿಸಿಕೊಂಡೇ ಇದನ್ನು ವಿಶೇಷವಾಗಿ ರೂಪಿಸಲಾಗಿದೆ. ಈ ಜ್ಯಾಕೆಟ್‌ನ್ನು ಯಾವುದೇ ಡ್ರೆಸ್‌ ಜೊತೆ ಹಾಯಾಗಿ ಬಳಸಬಹುದು.

ಇತ್ತೀಚೆಗೆ ಅನೇಕ ಬಗೆಯ ಡೆನಿಮ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಎಷ್ಟೋ ದೊಡ್ಡ ಕಂಪನಿಗಳು ಡೆನಿಮ್ ನ ಆಕರ್ಷಕ ಟ್ಯೂನಿಕ್‌ ಶರ್ಟ್ಸ್, ಜ್ಯಾಕೆಟ್ಸ್ ಇತ್ಯಾದಿ ತಯಾರಿಸುತ್ತಿವೆ. ಡೆನಿಮ್ ನ ಈ ಉಡುಪುಗಳು ಬಾಕಿ ಡೆನಿಮ್ ಫ್ಯಾಬ್ರಿಕ್ಸ್ ಗಿಂತ ತೀರಾ ವಿಭಿನ್ನ. ಇವನ್ನು ವಾಟರ್‌ ರೆಸಿಸ್ಟೆಂಟ್‌ ಡೆನಿಮ್ ಎನ್ನುತ್ತಾರೆ. ಈ ಫ್ಯಾಬ್ರಿಕ್ಸ್ ತಯಾರಿಸಿದ ನಂತರ ಟ್ರೀಟ್‌ಮೆಂಟ್ ಮೂಲಕ ಇದರ ಮೇಲೆ ವಿಭಿನ್ನ ವಿಧಾನದಲ್ಲಿ ಮೇಣದ ಕೋಟಿಂಗ್‌ ಮಾಡಲಾಗುತ್ತದೆ. ಈ ಡೆನಿಮ್ ನೀರನ್ನು ಹೀರದು, ಬದಲಿಗೆ ಮಳೆ ನೀರು ಇದರ ಮೇಲೆ ಬಿದ್ದು ಜಾರಿಹೋಗುತ್ತದೆ. ಸಾಮಾನ್ಯವಾಗಿ ಯುವಜನ ಬೈಕ್‌ ಓಡಿಸುವಾಗ ಇದನ್ನೇ ಧರಿಸ ಬಯಸುತ್ತಾರೆ. ಇದನ್ನು ಸುಲಭವಾಗಿ ಒಗೆಯಲೂಬಹುದು. ಜೊತೆಗೆ ಇಸ್ತ್ರಿ ಮಾಡುವುದರಿಂದ ಇದರ ನೀರು ನಿರೋಧಕ ಸಾಮರ್ಥ್ಯ ಮತ್ತಷ್ಟು ಹೆಚ್ಚುತ್ತದೆ. ಮಾಮೂಲಿ ಜೀನ್ಸ್ ಗಿಂತ ಇದು ದುಬಾರಿ. ಹೀಗಾಗಿ ಇದು ಅಗ್ಗ ಅಲ್ಲ ಎಂದು ಗೊಣಗುತ್ತಾರೆ.

ಡಿಸೈನರ್‌ ರಿತೇಶ್‌ ಹೇಳುತ್ತಾರೆ, ಹಿಂದೆಲ್ಲ ಡೆನಿಮ್ ಎಂದರೆ ಹಾರ್ಡ್‌ ಫ್ಯಾಬ್ರಿಕ್‌ ಮಾತ್ರ ಎಂದಿದ್ದ ಪರಿಕಲ್ಪನೆ ಈಗ ಬದಲಾಗಿದೆ. ಇತ್ತೀಚೆಗೆ ಸಾಫ್ಟ್ ಡೆನಿಮ್ ಸುಲಭ ಲಭ್ಯ. ಈಗೆಲ್ಲ ಅದರ ಮೇಲೂ ಎಂಬ್ರಾಯಿಡರಿ ಮಾಡಿ ಅದಕ್ಕೆ ಹೊಸ ಲುಕ್ಸ್ ಒದಗಿಸುತ್ತಾರೆ. ಕಾಟನ್‌ ಮತ್ತು ಮಖಮಲ್‌ನಂಥ ಫ್ಯಾಬ್ರಿಕ್‌ ಜೊತೆ ಡೆನಿಮ್ ಬೆರೆಸಿ ಡಿಸೈನರ್ಸ್‌ ಡ್ರೆಸೆಸ್‌ ರೂಪಿಸುತ್ತಾರೆ. ಇದನ್ನು ಹೊತ್ತುಕೊಂಡು ಹೋಗುವುದು ಸಹ ಸುಲಭ. ಡೆನಿಮ್ ನ್ನು ಚೋಲಿಯಾಗಿ ಬಳಸಿ ಗ್ಲಾಮರಸ್‌ ಲುಕ್ಸ್ ನೀಡಬಹುದು. ಇಷ್ಟು ಮಾತ್ರವಲ್ಲ, ಡಿಸೈನರ್ಸ್‌ ಲೆಗ್ಗಿಂಗ್ಸ್ ಜೊತೆ ಡೆನಿಮ್ ಬೆರೆಸಿ, ಜಾಗಿಂಗ್‌ ರೇಂಜ್‌ ಸಹ ಪ್ರಸ್ತುತಪಡಿಸಿದ್ದಾರೆ, ಅದು ಇಂದಿನ ಆಧುನಿಕ ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ