ಮನೆ ಸ್ವಚ್ಛವಾಗಿದ್ದರೆ ಅದರಿಂದ ಖುಷಿ ಹೊರಹೊಮ್ಮುತ್ತಿರುತ್ತದೆ. ಏಕೆಂದರೆ ಮನೆಯ ಸ್ವಚ್ಛತೆಯ ನೇರ ಸಂಬಂಧ ಅಲ್ಲಿ ವಾಸಿಸುವವರ ಆರೋಗ್ಯದ ಜೊತೆ ನಂಟು ಹೊಂದಿರುತ್ತದೆ.

ಕೆಲವರು ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸುತ್ತಾರೆ. ಮನೆಯು ಸುಂದರವಾಗಿರುವುದಕ್ಕಿಂತ ಅದು ಹೈಜಿನಿಕ್‌ಆಗಿರುವುದು ಮುಖ್ಯ. ಮನೆ ಹೈಜಿನಿಕ್‌ ಆಗಿರಲು ಅಂದರೆ ಕೀಟಾಣುಮುಕ್ತಗೊಳಿಸಲು ನೀವು ದಿನವಿಡೀ ಮನೆಯ ಸ್ವಚ್ಛತೆಯಲ್ಲಿ ನಿರತರಾಗಿರಬೇಕು ಎಂದೇನಿಲ್ಲ. ಮನೆಯ ಯಾವ ಯಾವ ಮೂಲೆಯಲ್ಲಿ ಕೀಟಾಣುಗಳು ಇರುವ ಸಾಧ್ಯತೆ ಇರುತ್ತದೋ ಅಲ್ಲಿ ಸ್ವಚ್ಛತೆಯ ಬಗ್ಗೆ ಸ್ವಲ್ಪ ಹೆಚ್ಚಿನ ಗಮನಕೊಟ್ಟರೆ ಸಾಕು.

ಇಂಡಿಯನ್‌ ಮೆಡಿಕಲ್ ಅಕಾಡೆಮಿ ಮುಖಾಂತರ ದೇಶಾದ್ಯಂತ 1400 ಮನೆಗಳಲ್ಲಿ ನಡೆಸಿದ ಒಂದು ಸಮೀಕ್ಷೆಯ ಮುಖಾಂತರ ನೈರ್ಮಲ್ಯವೆಂಬಂತೆ ಕಂಡುಬರುವ ಮನೆಗಳಲ್ಲಿಯೇ ಸಾಮಾನ್ಯವಾಗಿ ಸೋಂಕು ಕಂಡುಬರುತ್ತದೆ. ಗ್ಲೋಬಲ್ ಹೈಜೀನ್‌ ಕೌನ್ಸಿಲ್ ಮುಖಾಂತರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಅಡುಗೆಮನೆಯಲ್ಲಿ  ಬಳಸುವ ಟವೆಲ್‌ಗಳು, ಚಾಕು, ಚಾಪಿಂಗ್‌ಬೋರ್ಡ್‌, ಸಿಂಕ್‌, ನಲ್ಲಿ, ಡಸ್ಟ್ ಬಿನ್‌, ಬಾಗಿಲುಗಳ ಹ್ಯಾಂಡ್‌, ಕಿಚನ್‌ ಕೌಂಟರ್‌, ಮೈಕ್ರೋವೇವ್‌, ಪಾತ್ರೆಗಳ ಸ್ಟ್ಯಾಂಡ್ ಮುಂತಾದವುಗಳ ಮೇಲೆ ಕೀಟಾಣುಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ಸಾಧ್ಯತೆ ಇರುತ್ತದೆ. ಇವುಗಳ ಸ್ವಚ್ಛತೆಯ ಬಗ್ಗೆ ನೀವು ತೋರಿದ ನಿರ್ಲಕ್ಷ್ಯ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಹುದು.

ರೋಗಾಣು ಮುಕ್ತ ಅಡುಗೆಮನೆ

ಅರಿಜೋನಾ ವಿಶ್ವವಿದ್ಯಾಲಯದ ಮೈಕ್ರೊಬಯಾಲಜಿ ಪ್ರೊಫೆಸರ್‌ ಡಾ. ಚುಕ್‌ಗೆರ್ಬಾ ಅವರ ಪ್ರಕಾರ, ಮನೆಯ ಸ್ವಚ್ಛತೆಯ ವಿಷಯ ಬಂದಾಗ ಟಾಯ್ಲೆಟ್‌ ಸೀಟ್‌ ಒಂದನ್ನೇ ನಾವು ಹೆಚ್ಚು ಸ್ವಚ್ಛ ಮಾಡಲು ಪ್ರಯತ್ನ ಮಾಡುತ್ತೇವೆ. ಆದರೆ ಅಡುಗೆಮನೆಯ ಸ್ವಚ್ಛತೆಯ ಬಗ್ಗೆ ಗಮನ ಕೊಡಲು ಹೋಗುವುದಿಲ್ಲ. ಆದರೆ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳಿರುತ್ತವೆ.

ಅಡುಗೆಮನೆ ಸ್ವಚ್ಛವಾಗಿಡುವುದು ಹೇಗೆ?

ಅಡುಗೆಮನೆಯ ಟವೆಲ್ ‌ನಿಮ್ಮ ಕೈಗಳನ್ನು ಸ್ವಚ್ಛಗೊಳಿಸುತ್ತದೆ. ಆದರೆ ಅದರಲ್ಲಿ ರೋಗಾಣುಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಅದನ್ನು ಪ್ರತಿ ಎರಡು ದಿನಕ್ಕೊಮ್ಮೆ ಬದಲಿಸಿ.

ಅಡುಗೆಮನೆಯಲ್ಲಿ ಮುಸುರೆ ಪಾತ್ರೆಗಳು ಹೆಚ್ಚು ಹೊತ್ತು ಇರದಂತೆ ನೋಡಿಕೊಳ್ಳಿ. ಅದರಲ್ಲಿ ಉಳಿದಿರುವ ಆಹಾರ ಕಣಗಳಲ್ಲಿ ಬ್ಯಾಕ್ಟೀರಿಯಾಗಳು ಉದ್ಭವಿಸುವ ಸಾಧ್ಯತೆ ಇರುತ್ತದೆ.

ಅಡುಗೆಮನೆಯಲ್ಲಿ ತರಕಾರಿ ಮತ್ತಿತರ ವಸ್ತುಗಳನ್ನು ಕತ್ತರಿಸಿದ ಬಳಿಕ ಚಾಪಿಂಗ್‌ ಬೋರ್ಡ್‌ನ್ನು ಪ್ರತಿದಿನ ಸ್ವಚ್ಛಗೊಳಿಸಿ.

ನಲ್ಲಿಯ ನಾಲ್ಕೂ ಬದಿ, ಸಿಂಕ್‌ ಹಾಗೂ ಪೈಪ್‌ಗುಂಟ ಹೆಚ್ಚಿನ ತೇವಾಂಶ ಇರುತ್ತದೆ. ಅಲ್ಲಿ ನಿಯಮಿತವಾಗಿ ಕೀಟನಾಶಕ ದ್ರಾವಣವನ್ನು ಸಿಂಪಡಿಸಿ. ಏಕೆಂದರೆ ತೇವಾಂಶ ಇರುವ ಜಾಗದಲ್ಲಿ ಬಹುಬೇಗ ಬ್ಯಾಕ್ಟೀರಿಯಾಗಳು ಉದ್ಭವಿಸುತ್ತವೆ.

ಫ್ರಿಜ್‌ನಲ್ಲಿ ಮಾಂಸ, ಡೇರಿ ಪ್ರಾಡಕ್ಟ್ಸ್ ಮತ್ತು ಸಮುದ್ರ ಆಹಾರಗಳನ್ನು ಇತರೆ ಪದಾರ್ಥಗಳಿಂದ ದೂರ ಇಡಿ. ಮಾಂಸ ಹಾಗೂ ತರಿಕಾರಿಗಳನ್ನು ಮುಟ್ಟಿದ ಬಳಿಕ ಚೆನ್ನಾಗಿ ಕೈ ತೊಳೆದುಕೊಳ್ಳಿ.

ಮಿಕ್ಸರ್‌ಗ್ರೈಂಡರ್‌, ಮೈಕ್ರೋವೇವ್ ಮತ್ತು ಸ್ವಿಚ್‌ಬೋರ್ಡ್‌ಗಳನ್ನು  ಸ್ವಚ್ಛವಾಗಿಡಿ.

ಅಡುಗೆಮನೆಯ ಫ್ಲೋರ್‌ಗಳನ್ನು ಡಿಸ್‌ಇನ್‌ಫೆಕ್ಟೆಂಟ್‌ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ.

ಅಡುಗೆಮನೆಗೆ ಪ್ರತ್ಯೇಕವಾದ ಡಸ್ಟ್ ಬಿನ್‌ ಇಡಿ. ಇದರಲ್ಲಿ ಯಾವಾಗಲೂ ಪಾಲಿಥಿನ್‌ ಬ್ಯಾಗ್‌ ಹಾಕಿ. ಇದರಿಂದ ಕಸ ಹೊರಗೆ ಎಸೆಯಲು ಸುಲಭವಾಗುತ್ತದೆ. ಮುಚ್ಚಳವಿರುವ ಡಸ್ಟ್ ಬಿನ್‌ನ್ನೇ ಬಳಸಿ.

ನೀವು ಉದ್ಯೋಗಸ್ಥ ಮಹಿಳೆಯಾಗಿದ್ದು, ಪ್ರತಿದಿನ ಸ್ವಚ್ಛ ಮಾಡಲೂ ಆಗದಿದ್ದರೆ, ತಿಂಗಳಿಗೊಮ್ಮೆಯಾದರೂ ಪೆಸ್ಟ್ ಕಂಟ್ರೋಲ್ ಮಾಡಿಸಿ.

ಬಾಥ್ರೂಮಿನ ಸ್ವಚ್ಛತೆ

ಬಾಥ್‌ರೂಮ್ ಮನೆಯ ಎಂತಹ ಒಂದು ಪ್ರಮುಖ ಭಾಗವೆಂದರೆ, ಅದನ್ನು ಮನೆಯ ಪ್ರತಿಯೊಬ್ಬ ಸದಸ್ಯರೂ ಬಳಸುತ್ತಾರೆ. ಇಂತಹದರಲ್ಲಿ ಅದನ್ನು ಪ್ರತಿದಿನ ಸ್ವಚ್ಛಗೊಳಿಸುವುದು ಅವಶ್ಯ.

ಬಾಥ್‌ರೂಮಿನಲ್ಲಿ ಸಾಕಷ್ಟು ಸ್ವಚ್ಛತೆ ಇರದೇ ಇರುವುದರಿಂದ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ. ಕಲೆರಹಿತ, ಹೊಳಪುಳ್ಳ ಟೈಲ್ಸ್ ನಿಂದ ಬಾಥ್‌ರೂಮ್ ಸ್ವಚ್ಛವಾಗಿ ಕಾಣುತ್ತವೆ. ಆದರೆ ನೀವು ಮೈಕ್ರೋಸ್ಕೋಪ್‌ನಿಂದ ನೋಡಿದಾಗ ಅಲ್ಲಿ ಅಗಾಧ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಹೀಗಾಗಿ ಬಾಥ್‌ ರೂಮ್ ನ್ನು ಹೀಗೆ ಸ್ವಚ್ಛವಾಗಿಡಿ :

ಕುಟುಂಬದ ಪ್ರತಿಯೊಬ್ಬ ಸದಸ್ಯರೂ ತಮ್ಮದೇ ಆದ ಒಂದು ಪ್ರತ್ಯೇಕ ಟವೆಲ್ ಇಟ್ಟುಕೊಳ್ಳಬೇಕು. ಏಕೆಂದರೆ ಎಲ್ಲರೂ ಒಂದೇ ಟವೆಲ್ ಬಳಸುವುದರಿಂದ ಚರ್ಮರೋಗಕ್ಕೆ ಕಾರಣವಾಗಬಹುದು.

ಟೂಥ್‌ ಬ್ರಶ್‌ ಕೂಡ ಪ್ರತಿಯೊಬ್ಬರಿಗೆ ಬೇರೆ ಬೇರೆಯದ್ದೇ ಇರಬೇಕು. ಇಲ್ಲದ್ದಿದಲ್ಲಿ ಒಬ್ಬರ ಬಾಯಲ್ಲಿನ ಗಾಯ ಇನ್ನೊಬ್ಬರ ಸೋಂಕಿಗೆ ಕಾರಣವಾಗಬಹುದು. ಟೂತ್‌ ಬ್ರಶ್‌ ಮೇಲ್ಭಾಗದಲ್ಲಿ ಕವರ್‌ ಹಾಕಿಡಿ. ಜಿರಲೆಗಳು ಬ್ರಶ್‌ಗಳ ಎಳೆಗಳ ಮೇಲೆ ಓಡಾಡಿ ರೋಗಾಣುಗಳನ್ನು ಹರಡಬಹುದು.

ಬಾಥ್‌ ರೂಮ್ ಒದ್ದೆಯಾಗಿರಲು ಅವಕಾಶ ಕೊಡಬೇಡಿ. ತೇವಾಂಶದ ವಾತಾವರಣದಲ್ಲಿ ರೋಗಾಣುಗಳು ಬಹುಬೇಗ ಪಸರಿಸುತ್ತವೆ.

ಒದ್ದೆ ಬಟ್ಟೆಗಳನ್ನು ಹಾಗೆಯೇ ಮುಕ್ತವಾಗಿ ಇಡಬೇಡಿ. ಏಕೆಂದರೆ ಅದರಲ್ಲಿ ಬಹುಬೇಗ ಬ್ಯಾಕ್ಟೀರಿಯಾಗಳು ಪಸರಿಸಬಹುದು.

ಸೋಪ್‌ ಬಾಕ್ಸ್ ನ್ನು ಕೂಡ ನಿಯಮಿತವಾಗಿ ಸ್ವಚ್ಛಗೊಳಿಸಿ. ಅದರ ಮೂಲೆಯ ಭಾಗದಲ್ಲಿ ರೋಗಾಣುಗಳು ಜಮೆಗೊಳ್ಳುತ್ತವೆ.

ಟಾಯ್ಲೆಟ್ಹೈಜೀನ್

ಹೆಚ್ಚಿನ ಜನರು ತಮ್ಮ ಲಿವಿಂಗ್‌ರೂಮ್ ನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಟಾಯ್ಲೆಟ್‌ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಕೊಡುವುದಿಲ್ಲ. ಆದರೆ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಟಾಯ್ಲೆಟ್‌ ಸ್ವಚ್ಛವಾಗಿರುವುದು ಕೂಡ ಅಷ್ಟೇ ಅತ್ಯವಶ್ಯಕ. ಏಕೆಂದರೆ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಅದನ್ನು ಬಳಸುವುದರಿಂದ ಅದು ಮೇಲಿಂದ ಮೇಲೆ ಗಲೀಜಾಗುತ್ತಿರುತ್ತದೆ ಮತ್ತು ಟಾಯ್ಲೆಟ್‌ ಸೀಟ್‌ ಮೇಲೆ ರೋಗಾಣುಗಳು ಬಹುಬೇಗ ಪಸರಿಸುತ್ತವೆ. ಹೀಗಾಗಿ ಟಾಯ್ಲೆಟ್‌ನ್ನು ಹೀಗೆ ಸ್ವಚ್ಛಗೊಳಿಸುತ್ತಿರಿ.

ಟಾಯ್ಲೆಟ್‌ನ್ನು ರೋಗಾಣು ಮುಕ್ತಗೊಳಿಸಲು ಮಾರ್ಕೆಟ್‌ನಲ್ಲಿ ಲಭ್ಯವಿರುವ ಟಾಯ್ಲೆಟ್‌ ಕ್ಲೀನರ್‌ನ್ನು ಬಳಸಿ.

ಟಾಯ್ಲೆಟ್‌ ಕ್ಲೀನರ್‌ನ್ನು ಟಾಯ್ಲೆಟ್‌ ಸೀಟ್‌ನ ಮೇಲ್ಭಾಗದಲ್ಲಿ ಹಾಗೂ ಒಳಭಾಗದಲ್ಲಿ ಚೆನ್ನಾಗಿ ಸುರಿದು ಅರ್ಧ ಗಂಟೆ ಹಾಗೆಯೇ ಬಿಡಿ. ಬಳಿಕ ನೀರು ಹಾಕಿ, ಬ್ರಶ್‌ ಮಾಡಿ ಚೆನ್ನಾಗಿ ಸ್ವಚ್ಛಗೊಳಿಸಿ.

ಟಾಯ್ಲೆಟ್‌ನ್ನು ಸ್ವಚ್ಛಗೊಳಿಸಲು ಅಲ್ಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸುವಂತಹ ಒಳ್ಳೆಯ ಗುಣಮಟ್ಟದ ಕ್ಲೀನರನ್ನೇ ಬಳಸಿ.

ಟಾಯ್ಲೆಟ್‌ನ್ನು ಸ್ವಚ್ಛ ಹಾಗೂ ದುರ್ವಾಸವೆ ಮುಕ್ತಗೊಳಿಸಲು ಟ್ಯಾಂಕ್‌ನಲ್ಲಿ ಟಾಯ್ಲೆಟ್‌ ಬೌಲ್ ಟ್ಯಾಬ್ಲೆಟ್ಸ್ ಹಾಕಿ. ಟಾಯ್ಲೆಟ್‌ನ್ನು ಶುಷ್ಕವಾಗಿಡಿ. ಅದು ಒದ್ದೆಯಾಗಿದ್ದರೆ ರೋಗಾಣುಗಳು ಬಹುಬೇಗ ಪಸರಿಸುವ ಸಾಧ್ಯತೆ ಇರುತ್ತದೆ.

ಟಾಯ್ಲೆಟ್‌ನ ಹೊರಭಾಗದಲ್ಲಿ ಕಾಮನ್‌ ಬಾಥ್‌ ರೂಮ್ ಸ್ಲಿಪರ್ಸ್ ಇಡಿ. ಏಕೆಂದರೆ ಟಾಯ್ಲೆಟ್‌ನ ರೋಗಾಣುಗಳು ಮನೆಯ ಇತರೆಡೆ ಪ್ರವೇಶಿಸದಿರಲಿ.

ಬೆಡ್ರೂಮ್

ಬೆಡ್‌ ರೂಮಿನಲ್ಲಿ ರೋಗಾಣುಗಳು ಎಲ್ಲಿರುತ್ತಿ? ಅದರ ವಿಶೇಷ ಸ್ವಚ್ಛತೆಯ ಅವಶ್ಯಕತೆಯಾದರೂ ಏನಿದೆ ಎಂದು ಅನೇಕರು ಪ್ರಶ್ನಿಸುತ್ತಾರೆ. ಹೀಗೆ ಯೋಚಿಸುವುದೇ ತಪ್ಪು. ಅಂದಹಾಗೆ ಬೆಡ್‌ ರೂಮಿನಲ್ಲಿ ಕಾರ್ಪೆಟ್‌, ಕುಶನ್‌ ಕವರ್‌, ಪರದೆಗಳ ಮೇಲೂ ಬ್ಯಾಕ್ಟೀರಿಯಾಗಳು ಜಮೆಗೊಂಡಿರುತ್ತವೆ. ಅಷ್ಟೇ ಅಲ್ಲ, ನೀವು ಬಳಸುವ ಲ್ಯಾಪ್‌ ಟಾಪ್‌, ಟಿ.ವಿ. ರಿವೋಟ್‌ ಮೇಲೂ ಬ್ಯಾಕ್ಟೀರಿಯಾಗಳಿರುತ್ತವೆ. ಅವು ನಮ್ಮ ದೇಹದ ಸಂಪರ್ಕಕ್ಕೆ ಬರುತ್ತವೆ. ಶೆಲ್ಫ್ ನಲ್ಲಿ ಇಟ್ಟ ಪುಸ್ತಕಗಳು, ಶೋಪೀಸ್‌ಗಳು ರೋಗಾಣುಗಳ ಆಶ್ರಯ ತಾಣಗಳಾಗಬಹುದು. ಅವನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಾ ಇರಿ. ಇಲ್ಲದಿದ್ದರೆ ಮನೆಯ ಇತರೆ ಸದಸ್ಯರು ಅಲರ್ಜಿಗೆ ತುತ್ತಾಗಬಹುದು. ಕಾರ್ಪೆಟ್‌, ಬೆಡ್‌ಶೀಟ್ಸ್, ಪರದೆ ಮುಂತಾದವುಗಳನ್ನು ವ್ಯಾಕ್ಯೂಮ್ ಕ್ಲೀನರ್‌ನ ಸಹಾಯದಿಂದ ಚೆನ್ನಾಗಿ ಸ್ವಚ್ಛಗೊಳಿಸಿ.

ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ನಿಮ್ಮ ಮನೆಯಲ್ಲಿ ಯಾವುದಾದರೂ ಸಾಕುಪ್ರಾಣಿಯಿದ್ದರೆ ನೀವು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ನಾಯಿ, ಬೆಕ್ಕು, ಮೊಲ ಇವುಗಳ ಕೂದಲಿನಿಂದ ಮಕ್ಕಳಿಗೇ ಅಲ್ಲ, ದೊಡ್ಡವರಿಗೂ ಅಲರ್ಜಿ ಉಂಟಾಗಬಹುದು. ಹೀಗಾಗಿ ಅವನ್ನು ಸದಾ ಸ್ವಚ್ಛವಾಗಿಡಿ.  ಅವುಗಳಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು. ಅವು ಊಟತಿಂಡಿ ಹಾಗೂ ವಾಸಸ್ಥಳದ ವ್ಯವಸ್ಥೆಯನ್ನು ಮನೆಯ ಒಂದು ಪ್ರತ್ಯೇಕ ಭಾಗದಲ್ಲಿ ಮಾಡಿ. ಸಾಕುಪ್ರಾಣಿಗಳಿಗೆ ಅಲರ್ಜಿ ವ್ಯಾಕ್ಸಿನೇಶನ್‌ ಹಾಕಿಸಿ. ಸಾಕುಪ್ರಾಣಿಗಳು ಜರ್ಮ್ಸ್ ಹಾಗೂ ಇನ್‌ಫೆಕ್ಶನ್‌ನ ಅಪಾಯವನ್ನು ಹೆಚ್ಚಿಸುತ್ತವೆ.

–  ಜಿ. ವಸುಂಧರಾ 

ಹೋಮ್ ಹೈಜೀನ್‌ ಮತ್ತು ಆರೋಗ್ಯ ಮನೆಯ ಸ್ವಚ್ಛತೆ ಅಲ್ಲಿ ವಾಸಿಸುವವರ ಆರೋಗ್ಯದ ಜೊತೆ ನಿಕಟ ಸಂಬಂಧ ಹೊಂದಿದೆ. ನೈರ್ಮಲ್ಯದ ಕೊರತೆ ಮನೆಯನ್ನು ಗಲೀಜಾಗಿ ಬಿಂಬಿಸುವುದರ ಜೊತೆಜೊತೆಗೆ ಅನೇಕ ಘಾತಕ ರೋಗಗಳಿಗೂ ಆಹ್ವಾನ ನೀಡುತ್ತದೆ. ಏಷ್ಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್ ನ ಸೀನಿಯರ್‌ ರೆಸ್ಪಿರೇಟರಿ ಅಂಡ್‌ ಇನ್ಛೆಕ್ಸಿಯಸ್‌ ಡಿಸೀಸ್‌ನ ಸೀನಿಯರ್‌ ಕನ್ಸಲ್ಟಂಟ್‌ ಡಾ. ಮಾನ್‌ಮನಚಂದಾ ಅವರ ಪ್ರಕಾರ, ಅಡುಗೆಮನೆಯಲ್ಲಿ ಸ್ವಚ್ಛತೆಯ ಅಭಾವದಿಂದ ಡಯೇರಿಯಾ ಮತ್ತು ಗ್ಯಾಸ್ಟ್ರೊ ಇಂಟೆಸ್ಟಿನೈಲ್ ‌ರೋಗ ಉಂಟಾಗುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಯಾವುದಾದರೂ ಸೋಂಕು ಉಂಟಾದರೆ, ಅದರಿಂದ ಹೊರಬರಲು ಸಾಕಷ್ಟು ಸಮಯ ತಗಲುತ್ತದೆ. ಕೊಳಕಾದ ಟಾಯ್ಲೆಟ್‌ ಸೀಟ್‌ನಿಂದ ಬ್ಯಾಕ್ಟೀರಿಯಾಗಳು ಬಹುಬೇಗ ಪಸರಿಸುತ್ತವೆ. ಅದರಿಂದ ಕಾಲರಾ, ಟೈಫಾಯಿಡ್‌, ಚರ್ಮ ಸೋಂಕು, ಯುಟಿಐ ಉಂಟಾಗುವ ಸಾಧ್ಯತೆ ಇರುತ್ತದೆ. ಮಕ್ಕಳು ಇದರಿಂದ ಬಹುಬೇಗ ಪ್ರಭಾವಿತರಾಗುತ್ತಾರೆ. ಇದರ ಹೊರತಾಗಿ ಕಾರ್ಪೆಟ್‌, ಪರದೆಗಳ ಮೇಲೆ ಜಮೆಗೊಂಡ ಧೂಳಿನಿಂದ ಆಸ್ತಮಾ, ತ್ವಚೆ ಅಲರ್ಜಿ, ಕಣ್ಣಿನ ಅಲರ್ಜಿ ಮುಂತಾದ ತೊಂದರೆಗಳು ಉಂಟಾಗಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ