ಟೀನೇಜರ್ಸ್, ಶಾಪಿಂಗ್ ಬಗ್ಗೆ ಕ್ರೇಝಿ ಆಗಿರುತ್ತಾರೆ. ಈ ವಯಸ್ಸಿನಲ್ಲಿ ಅವರಿಗೆ ಹೊಸ ಹೊಸ ಸ್ಟೈಲಿಶ್ ಬಟ್ಟೆಗಳನ್ನು ಧರಿಸಲು ಆಸೆಯಾಗುತ್ತದೆ. ಆದರೆ ತಮಗೆ ಯಾವುದು ಒಪ್ಪುತ್ತದೆ. ಯಾವುದನ್ನು ಧರಿಸಬೇಕು, ಯಾವುದನ್ನು ಧರಿಸಬಾರದು ಎಂದು ತಿಳಿದಿರುವುದಿಲ್ಲ. ಅವರು ಆಗಾಗ್ಗೆ ಸಿನಿಮಾಗಳಲ್ಲಿ ಹೀರೋ ಹೀರೋಯಿನ್‌ಗಳ ಬಟ್ಟೆಗಳನ್ನು ನೋಡಿ ಅಥವಾ ತಮ್ಮ ಫ್ರೆಂಡ್ಸ್ ಗಳ ಉಡುಪುಗಳನ್ನು ಕಂಡು ಅಂತಹುದೇ ಉಡುಪುಗಳನ್ನು ಕೊಳ್ಳಲು ಉತ್ಸುಕರಾಗುತ್ತರೆ. ಹೀಗಿರುವಾಗ ನೀವು ಅವರೊಂದಿಗೆ ಶಾಪಿಂಗ್‌ಗೆ ಹೋಗಿ ಮತ್ತು ಅವರ ಪರ್ಸನಾಲಿಟಿಗೆ ತಕ್ಕಂತೆ ಶಾಪಿಂಗ್ ಮಾಡಿ. ಅದರಿಂದ ಅವರು ಕುರೂಪವಾಗಿ ಕಾಣದೆ ಫ್ಯಾಷನೆಬಲ್ ಮತ್ತು ಸ್ಮಾರ್ಟ್ ಆಗಿ ಕಾಣುತ್ತಾರೆ.
ಬನ್ನಿ, ಟೀನೇಜರ್ ಶಾಪಿಂಗ್ ಹೇಗಿರಬೇಕೆಂದು ತಿಳಿಯೋಣ :
ಸಿನಿಮಾ ಉಡುಪುಗಳನ್ನು ಕೊಡಿಸಬೇಡಿ : ಅನೇಕ ಬಾರಿ ತಾಯಂದಿರು ಸ್ವತಃ ಯಾವುದೋ ಹೀರೋಯಿನ್ ಧರಿಸಿದ್ದ ಡ್ರೆಸ್‌ನಂತಹದೇ ಡ್ರೆಸ್ ಧರಿಸಲು ಇಚ್ಛಿಸುತ್ತಾರೆ. ಜೊತೆಗೆ ತಮ್ಮ ಮಕ್ಕಳಿಗೂ ಅಂತಹುದೇ ವಿಲಕ್ಷಣ, ಗ್ಲಾಮರಸ್ ಡ್ರೆಸ್ ತೊಡಿಸುತ್ತಾರೆ. ನಿಧಾನವಾಗಿ ಅದರ ಪ್ರಭಾವ ಮಕ್ಕಳ ಮೇಲೆ ಬೀಳುತ್ತದೆ. ಮುಂದೆ ಅವರು ಸಿನಿಮಾಗಳನ್ನು ನೋಡಿ ಬಟ್ಟೆ ಹೊಲಿಸಿಕೊಳ್ಳುತ್ತಾರೆ. ಆಗ ತಾಯಂದಿರಿಗೆ ಅದು ಸರಿಹೋಗುವುದಿಲ್ಲ. ಆದ್ದರಿಂದ ಮುಂದೆ ನೀವು ಪಶ್ಚಾತ್ತಾಪ ಪಡುವಂತಹ ಕೆಲಸ ಮಾಡಬೇಡಿ.
ಬಹಳ ಟೈಟ್ ಬಟ್ಟೆ ಕೊಡಿಸಬೇಡಿ : ಬೆಳೆಯುವ ಮಕ್ಕಳ ಬಟ್ಟೆಗಳು ಬಹಳ ಬೇಗನೆ ಚಿಕ್ಕದಾಗುತ್ತವೆ. ಆದರೂ ಅಮ್ಮಂದಿರು ಅನೇಕ ಬಾರಿ ಮಕ್ಕಳಿಗೆ ಟೈಟ್ ಫಿಟಿಂಗ್ ಈಗ ಫ್ಯಾಷನ್ ಎಂದು ಯೋಚಿಸಿ ಬಿಗಿಯಾದ ಬಟ್ಟೆಗಳನ್ನು ಕೊಡಿಸುತ್ತಾರೆ. ಹಾಗೆ ಮಾಡುವಾಗ ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಟೈಟ್ ಬಟ್ಟೆಗಳಿಂದ ಶರೀರದ ಮೇಲೆ ರಾಶೆಸ್, ಉಸಿರಾಟಕ್ಕೆ ಅಡ್ಡಿ, ವಾಕರಿಕೆಯಂತಹ ಅನೇಕ ಸಮಸ್ಯೆಗಳು ಉಂಟಾಗುತ್ತವೆ.
ಸ್ಲೋಗನ್ ಟೀಶರ್ಟ್ ಖರೀದಿಸಿದಾಗ : ಮಾರುಕಟ್ಟೆಯಲ್ಲಿ ಸಿಗುವ ಬಹಳಷ್ಟು ಟೀಶರ್ಟ್‌ಗಳ ಮೇಲೆ ಅನೇಕ ರೀತಿಯ ಕೆಟ್ಟ ಮೆಸೇಜ್‌ಗಳು ಮುದ್ರಿತವಾಗಿರುತ್ತವೆ. ಜನ ಏನೂ ಯೋಚಿಸದೆ ಅವನ್ನು ಖರೀದಿಸಿಬಿಡುತ್ತಾರೆ. ಅದು ಸರಿಯಲ್ಲ. ಯಾವಾಗಲೂ ನಿಮ್ಮ ಮಕ್ಕಳ ಟೀಶರ್ಟ್‌ಗಳನ್ನು ಚೆನ್ನಾಗಿ ಯೋಚಿಸಿ ಖರೀದಿಸಿ. ಇಲ್ಲದಿದ್ದರೆ ಆ ಕೆಟ್ಟ ವಿಷಯಗಳನ್ನು ಸರಿಯೆಂದುಕೊಳ್ಳುತ್ತಾರೆ. ಮೆಸೇಜ್‌ನ್ನು ಅರ್ಥ ಮಾಡಿಕೊಳ್ಳದೆ ಟೀಶರ್ಟ್‌ಗಳನ್ನು ಖರೀದಿಸುತ್ತಾರೆ. ಅದನ್ನು ಕಂಡು ಅವರ ಫ್ರೆಂಡ್ಸ್ ಸರ್ಕಲ್‌ನಲ್ಲಿ ಚುಡಾಯಿಸುತ್ತಾರೆ. ಅದಕ್ಕೆ ಜವಾಬ್ದಾರಿ ನಿಮ್ಮ ಮಕ್ಕಳಲ್ಲ, ಬದಲಿಗೆ ನೀವೇ ಆಗಿರುತ್ತೀರಿ.
ಫಿಗರ್ಗೆ ತಕ್ಕಂತೆ ಬಟ್ಟೆ ಕೊಡಿಸಿ : ನಿಮ್ಮ ಮಗ ಅಥವಾ ಮಗಳು ಹೆಚ್ಚು ಆರೋಗ್ಯವಂತರಾಗಿದ್ದು ದಪ್ಪಗಿದ್ದರೆ ಅವರಿಗೆ ಕೊಂಚ ಸಡಿಲವಾದ ಬಟ್ಟೆಗಳನ್ನು ಕೊಡಿಸಬೇಕು. ಆಗ ಕೆಟ್ಟದಾಗಿ ಕಾಣುವ ಬೊಜ್ಜು ಕಾಣುವುದಿಲ್ಲ. ಒಂದು ವೇಳೆ ಮಗಳ ಫಿಗರ್ ಚೆನ್ನಾಗಿದ್ದರೆ ಅದಕ್ಕೆ ತಕ್ಕಂತೆ ಕೊಂಚ ಫಿಟಿಂಗ್ ಇರುವ ಅಥವಾ ಕಟ್ ಸ್ಲೀವ್ಸ್ ಇತ್ಯಾದಿ ಬಟ್ಟೆ ಕೊಡಿಸಬಹುದು.
ಹೈಹೀಲ್ಸ್ ಬೇಡ : ಟೀನೇಜ್ ಹುಡುಗಿಯರು ಹಿರಿಯರನ್ನು ನೋಡಿ ತಾವು ಹೈಹೀಲ್ಸ್ ಧರಿಸುತ್ತೇವೆಂದು ಹಠ ಹಿಡಿಯುತ್ತಾರೆ. ನಿಮ್ಮ ಮಗಳೂ ಹಾಗೇ ಹಠ ಹಿಡಿದರೆ ಅವಳಿಗೆ ಹೈಹೀಲ್ಸ್ ಧರಿಸಲು ಅವಕಾಶ ನೀಡಬೇಡಿ. ಏಕೆಂದರೆ ಅದರಿಂದ ಹಿಮ್ಮಡಿ ಹಾಗೂ ಸೊಂಟಕ್ಕೆ ಸಂಬಂಧಿಸಿದ ಹಲವಾರು ತೊಂದರೆಗಳು ಆವರಿಸುತ್ತವೆ. ನಿಮ್ಮ ಕರ್ತವ್ಯವೇನೆಂದರೆ ಮುಂದೆ ನಿಮಗೇ ತೊಂದರೆ ಅನುಭವಿಸಬೇಕಾಗುವೆತೆ ಫ್ಯಾಷನೆಬಲ್ ಆಗಬೇಡಿ. ಹೈಹೀಲ್‌ನಿಂದಾಗಿ ಶರೀರದ ಒತ್ತಡ ಸತತವಾಗಿ ಪಾದಗಳ ಮೇಲೆ ಬೀಳುತ್ತಿದ್ದರೆ ಉಗುರುಗಳ ಬಗ್ಗೆಯೂ ಚಿಂತೆಯಾಗುತ್ತದೆ. ಉಗುರುಗಳು ಕಠಿಣವಾಗಿ ದಪ್ಪಗಾಗುತ್ತವೆ. ಅವುಗಳಲ್ಲಿ ದುರ್ವಾಸನೆ ಬರುವ ಫಂಗಸ್ ಇರುವುದರಿಂದ ಅಪಾಯಕಾರಿಯಾಗಿದೆ. ಆದರೆ ಪಾರ್ಟಿ ಇತ್ಯಾದಿಗಳಲ್ಲಿ ಧರಿಸಲು ಫ್ಲ್ಯಾಟ್‌ಫಾರಂ ಹೀಲ್ ಮತ್ತು ಡೇಲಿವೇರ್‌ಗಾಗಿ ಫ್ಲ್ಯಾಟ್ ಸ್ಲಿಪರ್ ಅಥವಾ ಶೂಸ್ ಇತ್ಯಾದಿ ಕೊಡಿಸಿ. ಅದರಿಂದ ಅವರ ಕಾಲುಗಳು ಸರಿಯಾಗಿರುತ್ತವೆ. ಈಗ ಫ್ಲ್ಯಾಟ್ ಚಪ್ಪಲಿಗಳಲ್ಲೂ ಸಾಕಷ್ಟು ವೆರೈಟಿಗಳಿದ್ದು ಅವನ್ನು ಧರಿಸಿದಾಗ ಸ್ಟೈಲಿಶ್ ಆಗಿ ಕಾಣಿಸಬಹುದು.
ಬಟ್ಟೆ ಪರ್ಸನಾಲಿಟಿಗೆ ತಕ್ಕ ಹಾಗಿರಲಿ
ಬಟ್ಟೆಗಳನ್ನು ಆರಿಸುವಾಗ ಅವುಗಳ ಬಣ್ಣದ ಮೇಲೂ ಗಮನ ಕೊಡಬೇಕು. ಬಣ್ಣ ಪರ್ಸನಾಲಿಟಿಗೆ ಸೂಟ್ ಆಗುವಂತಿರಬೇಕು. ಮಕ್ಕಳು ಶ್ಯಾಮಲ ವರ್ಣದವರಾಗಿದ್ದರೆ ಗಾಢ ಬಣ್ಣಗಳಿಂದ ದೂರವಿರಿ. ಹಾಗೆಯೇ ಮಕ್ಕಳು ಉದ್ದವಾಗಿದ್ದರೆ ಗುಂಡನೆಯ ಗೆರೆಗಳುಳ್ಳ ಮತ್ತು ಕುಳ್ಳಗಿರುವವರಿಗೆ ಉದ್ದನೆಯ ಗೆರೆಗಳುಳ್ಳ ಬಟ್ಟೆಗಳನ್ನೇ ಖರೀದಿಸಿ.
ಹೊಳೆಯುವ ಬಟ್ಟೆಗಳು ಬೇಡ : ಮಕ್ಕಳಲ್ಲಿ ಹೆಚ್ಚು ಕತ್ತರಿಸಿದಂತಹ ಮತ್ತು ಮೈ ಕಾಣಿಸುವಂತಹ ಬಟ್ಟೆಗಳನ್ನು ಧರಿಸುವ ಅಭ್ಯಾಸ ಮಾಡಿಸಬೇಡಿ. ಏಕೆಂದರೆ ಮಗು ಚಿಕ್ಕದಾದ್ದರಿಂದ ನಿಮಗೆ ಚೆನ್ನಾಗಿದೆ ಅನ್ನಿಸುತ್ತೆ. ಆದರೆ ಮುಂದೆ ಅದು ದೊಡ್ಡದಾಗಿ ಅಂತಹುದೇ ಬಟ್ಟೆ ಧರಿಸಿದಾಗ, ಅದು ನಿಮಗೂ ಹಾಗೂ ಬೇರೆಯವರಿಗೂ ಸರಿ ಅನ್ನಿಸುವುದಿಲ್ಲ.
ಟೈಟ್ ಪ್ಯಾಂಟ್ : ನಿಮ್ಮ ಮಗಳಿಗೆ ಪ್ಯಾಂಟ್ ಕೊಡಿಸಲು ಕರೆದುಕೊಂಡು ಹೋದಾಗ ಅವಳಿಗೆ ಟೈಟ್ ಪ್ಯಾಂಟ್ ಕೊಡಿಸಬೇಡಿ. ಏಕಂದರೆ ಅದನ್ನು ರೆಗ್ಯುಲರ್ ಆಗಿ ಧರಿಸುವುದರಿಂದ ತೊಡೆಗಳಲ್ಲಿ ಮರಗಟ್ಟುತ್ತದೆ. ಅದನ್ನು ಮೆಡಿಕಲ್ ಭಾಷೆಯಲ್ಲಿ ಟೈಟ್ ಪ್ಯಾಂಟ್ ಸಿಂಡ್ರೋಮ್ ಎಂದು ಕರೆಯುತ್ತಾರೆ. ಕೆಲವೊಮ್ಮೆ ಈ ಸಮಸ್ಯೆ ಎಷ್ಟು ಹೆಚ್ಚಾಗುತ್ತದೆ ಎಂದರೆ, ನ್ಯೂರಾಲಜಿಸ್ಟ್ ಬಳಿ ಹೋಗಬೇಕಾಗುತ್ತದೆ.
ಆ ಡ್ರೆಸ್ ಟ್ರೆಂಡ್ನಲ್ಲಿರಲಿ : ಡ್ರೆಸ್ ಸೆಲೆಕ್ಟ್ ಮಾಡುವಾಗ ಫ್ಯಾಷನ್ ಟ್ರೆಂಡ್ ಬಗ್ಗೆ ವಿಶೇಷ ಗಮನ ಕೊಡಿ. ನೀವು ಮಾಡರ್ನ್ ಅಥವಾ ಬಹಳ ಓಲ್ಡ್ ಫ್ಯಾಷನ್ ಆರಿಸಿಕೊಳ್ಳಿ. ಆದರೆ ಅವುಗಳಲ್ಲಿ ಸಮತೋಲನ ಸಾಧಿಸಿ ಬಟ್ಟೆ ಖರೀದಿಸಿ.
ಇಯರ್ ರಿಂಗ್ಸ್ : ಹೆವಿ ಮತ್ತು ದೊಡ್ಡ ಇಯರ್ ರಿಂಗ್ಸ್ ನ ಆಸೆ ಸಾಮಾನ್ಯವಾಗಿ ಟೀನೇಜರ್ಸ್ಗೆ ಇರುತ್ತವೆ. ಆದರೆ ಹೆಚ್ಚು ಹೊತ್ತು ಧರಿಸಿದ್ದರೆ ಅವರ ಕಿವಿಗಳು ಜೋತಾಡುತ್ತವೆ. ನೋವು ಕೂಡ ಉಂಟಾಗುತ್ತದೆ. ಇಂತಹ ಇಯರ್ ರಿಂಗ್ಸ್ ಹೆಚ್ಚು ಧರಿಸುವುದರಿಂದ ಕಿವಿಯ ರಂಧ್ರಗಳು ದೊಡ್ಡದಾಗುತ್ತವೆ. ಎಂತಹ ಲೈಟ್ ವೇಟ್ ಇಯರ್ರಿಂಗ್ಸ್ ಖರೀದಿಸಬೇಕೆಂದರೆ ನೋಡಲು ಹೆವಿ ಅನ್ನಿಸಬೇಕು. ಇದಲ್ಲದೆ, ನಾರ್ಮಲ್ ಡೇಸ್ಗೆ ಪರ್ಲ್ ಮತ್ತು ಪ್ಲಾಸ್ಟಿಕ್ನ ಇಯರ್ ರಿಂಗ್ಸ್ ಕೊಳ್ಳಿ. ಹೆವಿ ಇಯರ್ರಿಂಗ್ಸ್ ನ್ನು ಪಾರ್ಟಿಗಳಿಗೆ ಅಥವಾ ವಿಶೇಷ ಸಂದರ್ಭಗಳಿಗಾಗಿ ಎತ್ತಿಡಿ.
ಹ್ಯಾಂಡ್ ಬ್ಯಾಗ್ ಹೇಗಿರಬೇಕು? : ಹೆಚ್ಚು ಭಾರವಾದ ಹ್ಯಾಂಡ್ ಬ್ಯಾಗ್ ಭುಜಗಳು, ಸೊಂಟ ಮತ್ತು ಬೆನ್ನು ಮೂಳೆಯ ಮೇಲೆ ಒತ್ತಡ ಹಾಕುತ್ತವೆ. ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಟೀನೇಜ್ ಹುಡುಗಿಯರ ಹ್ಯಾಂಡ್ ಬ್ಯಾಗ್ ಹೆಚ್ಚು ಭಾರವಿರುವ ಬದಲು ಸ್ಟೈಲಿಶ್ ಆಗಿರಬೇಕು. ಅವರ ಡ್ರೆಸ್ಗೆ ಮ್ಯಾಚ್ ಆಗುವಂತಹ ಹ್ಯಾಂಡ್ ಬ್ಯಾಗ್ ಕೊಡಿಸಿ. ಸಾಧ್ಯವಾದರೆ ಅವರಿಗೆ ಹ್ಯಾಂಡ್ ಪರ್ಸ್ ಕೊಳ್ಳುವ ಅಭ್ಯಾಸ ಮಾಡಿಸಿ. ಆಗ ಭುಜಗಳ ಮೇಲೆ ಒತ್ತಡ ಕಡಿಮೆಯಾಗುತ್ತದೆ.
– ಗೌರಿ ಮನೋಹರಿ
ಇನ್ನರ್ವೇರ್ ಶಾಪಿಂಗ್ ಮಾಡಬೇಕಾದಾಗ ಟೀನೇಜ್ನಲ್ಲಿ ದೈಹಿಕ ವಿಕಾಸ ಬಹಳ ವೇಗವಾಗಿ ಆಗುವುದರಿಂದ ಮತ್ತು ಮಾಂಸಖಂಡಗಳ ಬೆಳವಣಿಗೆಯಿಂದ ಆ ವಯಸ್ಸಿನಲ್ಲಿ ನಿಮ್ಮ ಮಗಳಿಗೆ ಸರಿಯಾದ ಅಳತೆಯ ಬ್ರಾ ಕೊಡಿಸಿ. ನೀವು ಮೊದಲ ಬಾರಿ ಲಿಂಜರಿ ಖರೀದಿಸಲು ಹೋಗುತ್ತಿದ್ದರೆ ಯಾರಾದರೂ ಲಿಂಜರಿ ಕನ್ಸಲ್ಟೆಂಟ್ ಬಳಿ ಅಗತ್ಯವಾಗಿ ಮಾತನಾಡಿ.
ಶಾಪಿಂಗ್‌ಗೆ ಮಹಿಳಾ ಸ್ಟಾಫ್ ಇರುವ ಶಾಪ್ನ್ನೇ ಆರಿಸಿಕೊಳ್ಳಿ.
15 ರಿಂದ 16 ವರ್ಷಗಳಾದಾಗ ಬ್ರೆಸ್ಟ್ ಗೆ ಆಸರೆಯ ಅಗತ್ಯವಿದೆ. ಆದ್ದರಿಂದ ಆರಂಭದಲ್ಲಿ ಟೀನೇಜ್ ಹುಡುಗಿಯರು ಬಾಡಿ ಫಿಟಿಂಗ್ ಸ್ಪಗೆಟಿ ಧರಿಸಬೇಕು ಮತ್ತು ನಿಧಾನವಾಗಿ ಸ್ಪೋರ್ಟ್ಸ್ ಬ್ರಾವರೆಗೆ ಬರಬೇಕು. ಇದು ಬ್ರೆಸ್ಟ್ ನ್ನು ಮೇಲೆತ್ತುವುದಿಲ್ಲ. ಆದರೆ ಸ್ಪೋರ್ಸ್ಸ್ ಸಿಸ್ಟಂನ ಕೆಲಸ ಮಾಡುತ್ತದೆ.
ಟೀನೇಜ್ನಲ್ಲಿ ಬ್ರೆಸ್ಟ್ ವಿಕಾಸಗೊಳ್ಳಲು ಶುರುವಾದಾಗ ಸಾಫ್ಟ್ ಕಪ್ಬ್ರಾ ಆರಿಸಿಕೊಳ್ಳಬೇಕು.
ನಿಮ್ಮ ಮಗಳಿಗೆ ಕಾಟನ್ ಬ್ರಾ ಕೊಡಿಸಿ.
ಈ ಏಜ್ನವರಿಗೆ ಅಂಡರ್ವೇರ್ ಬ್ರಾ ಖರೀದಿಸಬೇಡಿ. ಏಕೆಂದರೆ ಅದು ವಿಕಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಮಗಳಿಗೆ ಹೆಚ್ಚು ಬಿಗಿಯಾದ, ನೈಲಾನ್ ಅಥವಾ ಸಿಂಥೆಟಿಕ್ ಬ್ರಾ ಕೊಡಿಸಬೇಡಿ. ಏಕೆಂದರೆ ಇದು ಬೆವರನ್ನು ಹೀರಿಕೊಳ್ಳುವುದಿಲ್ಲ. ಅದರಿಂದ ಬ್ರೆಸ್ಟ್ ನ ಟಿಶ್ಶೂಗಳು ಇನ್ನಷ್ಟು ಬಿಸಿಯಾಗುತ್ತವೆ.
ಫ್ಯಾನ್ಸಿ ಬ್ರಾಗಳನ್ನು ನೋಡಿದ ಕೂಡಲೇ ಖರೀದಿಸಬೇಡಿ. ಅದನ್ನು ಖರೀದಿಸುವಾಗ ಅದರ ಲೇಸ್ಗಳು, ಕಸೂತಿ ಇತ್ಯಾದಿ ಮೈಗೆ ಚುಚ್ಚುತ್ತದೆಯೇ ಎಂದು ಗಮನಿಸಿ. ಸಿಂಥೆಟಿಕ್ ಫ್ಯಾಬ್ರಿಕ್ ನಿಮ್ಮ ಮಗಳಿಗೆ ಅಲರ್ಜಿಯೇ ಎಂಬುದನ್ನೂ ಗಮನಿಸಿ.
ಬ್ರಾ ಖರೀದಿಸುವಾಗ ಅದರ ಹುಕ್ ಬಗ್ಗೆಯೂ ಗಮನಿಸಿ. ಮೆಟಲ್ ಹುಕ್ ಆಗಿದ್ದರೆ ಬಾಗುವ ಚುಚ್ಚುವ ಸಾಧ್ಯತೆಗಳಿರುತ್ತವೆ.
ಬ್ರಾದ ಸ್ಟ್ರಾಪ್ಸ್ ಕೂಡ ನೈಲಾನ್ ಬದಲು, ಕಾಟನ್ನದು ಉತ್ತಮ. ಅದರಿಂದ ತ್ವಚೆಯಲ್ಲಿ ಅಲರ್ಜಿ ಕಡಿಮೆಯಾಗುತ್ತದೆ.
ಪ್ಯಾಂಟಿ ಆರಿಸುವಾಗ ಕಾಟನ್ನದೇ ಆರಿಸಿ. ಏಕೆಂದರೆ, ಕಾಟನ್ ಬೆವರನ್ನು ಬೇಗನೆ ಹೀರಿಕೊಳ್ಳುತ್ತದೆ. ಅದರಿಂದ ರಾಶೆಸನ್ನ ಸಮಸ್ಯೆಯೂ ಕಡಿಮೆಯಾಗುತ್ತದೆ.