ಅಡ್ಡಿಗಳಿಂದ ಹೊರಬರಲು ಚಡಪಡಿಕೆ : ಮುಸ್ಲಿಂ ದೇಶ ಮಲೇಷಿಯಾದಲ್ಲಿ ಫ್ಯಾಷನ್‌ ಶೋ ನಡೆಸಿದೆ! ಅಂತೂ ಬಿಗಿಪಟ್ಟಿನ ಧೋರಣೆ ತುಸು ಸಡಿಲಿಸಿದೆ. ಕೌಲಾಲಂಪುರ್‌ನಲ್ಲಿ ಕಳೆದ ದಿನಗಳಲ್ಲಿ ನಡೆದ ರಾಂಪ್‌ ಶೋನಲ್ಲಿ ಗ್ಲಾಮರಸ್‌ ವೆಸ್ಟರ್ನ್‌ ಡ್ರೆಸೆಸ್‌ನಲ್ಲಿ ಫ್ಯಾಷನ್‌ ಶೋ ನಡೆದದ್ದು ಹೀಗೆ.

ಭ್ರಷ್ಟಾಚಾರಕ್ಕೆ ಜಯವಾಗಲಿ! : ಭ್ರಷ್ಟಾಚಾರವನ್ನು ಸಂಪೂರ್ಣ ನಿರ್ನಾಮ ಮಾಡುವುದು ಸುಲಭವಲ್ಲ. ಯೂರೋಪಿನ ದೇಶ ಯೂಕ್ರೇನ್‌ನಲ್ಲಿ ಆ್ಯಂಟಿ ಕರಪ್ಶನ್‌ ಬ್ಯೂರೋ ಈ ಕುರಿತು ವಿಚಾರಣೆ ಶುರು ಮಾಡಿದಾಗ ಜನರಲ್ ಪ್ರಾಸಿಕ್ಯೂಟರ್‌ಗಳಿಗೆ ಕೆಂಡಾಮಂಡಲ ಸಿಟ್ಟು ಕೆರಳಿತು. ಈ ಮಂದಿ ಆಪಾದಿತರ ವಿರುದ್ಧದ ಸರಕಾರಿ ವಕೀಲರಾಗಿರುತ್ತಾರೆ. ವಿಶ್ವವಿಡೀ ಹಣ ಕಮಾಯಿಸುತ್ತಾ, ಆಪಾದಿತರನ್ನು ಬಿಡಿಸುವ ಹುನ್ನಾರ ನಡೆಸುತ್ತಾರೆ. ಇವರುಗಳು ಆ್ಯಂಟಿ ಕರಪ್ಶನ್‌ ಬ್ಯೂರೋಗೆ ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಿ, ಅದರ ವಿರುದ್ಧವೇ ಹೀಗೆ ಸಂಪು ಹೂಡಿದ್ದಾರೆ!

ಹಣ ಕಟ್ಟಿ ಜೇಲ್ ಸೇರಿ! : ಇದೇನಿದು….? ಹ್ಞೂಂ, ಜೇಲಿನ ಕೋಣೆ ದಿನ ಒಂದಕ್ಕೆ ಕೇವಲ 40 ಡಾಲರ್‌ ದರದಲ್ಲಿ! ಬ್ರೇಕ್‌ಫಾಸ್ಟ್ ಫ್ರೀ ಆದರೆ ಊಟದ ಖರ್ಚು ಬೇರೆ. ಅಸಲಿಗೆ ಇದು ಹಳೆಯ ಜೇಲಿನ ಬಿಲ್ಡಿಂಗ್‌ ಆಗಿದ್ದು, ಈಗಿದನ್ನು ಯೂಥ್‌ ಹಾಸ್ಟೆಲ್ ‌ಆಗಿ ಬದಲಾಯಿಸಲಾಗಿದೆ….. ಆದರೆ ಬಲು ಕನಿಷ್ಠ ಬದಲಾವಣೆಗಳೊಂದಿಗೆ. ಈಗ ಅಲ್ಲಿ ತಂಗುವವರಿಗೆ ಜೇಲಿನ ಅನುಭವ ಆಗಲಿ ಅಂತ.

ಹಾಗಾದರೂ ಆಟ ಜೀಂತವಾಗಿರಲಿ : ಆದಿವಾಸಿಗಳ ಆಟಗಳೆಲ್ಲ ಈಗ ಆಧುನಿಕ ವಿಶ್ವದಲ್ಲಿ ಮಾಯವಾಗಿವೆ. ಫುಟ್‌ಬಾಲ್‌, ಕ್ರಿಕೆಟ್‌, ಟೆನಿಸ್‌ ಇತ್ಯಾದಿ ಅದರ ಜಾಗ ಪಡೆದಿವೆ. ದ. ಅಮೆರಿಕಾದ ಗ್ವಾಟೆಮಾಲಾದಲ್ಲಿ ಮಾಯನ್‌ರ ಸಭ್ಯತೆಯ ಆಟ ಚಾಜ್‌ಚಾಯ್‌ ಅನ್ನು ಪುನಃ ಜೀವಂತವಾಗಿರಿಸಲು ಈ ಆಟಗಾರ ಹೀಗೆ ಅದನ್ನು ಪ್ರದರ್ಶಿಸುತ್ತಿದ್ದಾನೆ. ಮುಂದೆ ನಮ್ಮ ಗಿಲ್ಲಿದಾಂಡು ಆಟವನ್ನು ಸಹ ಹೀಗೇ ಉಳಿಸಿಕೊಳ್ಳಬೇಕಾಗುತ್ತದೇನೋ?

ಬೀಚ್ನಲ್ಲಿ ಮಜಾ ಉಡಾಯಿಸಿ ಇನ್ನು ಕೆಲವೇ ದಿನ : ಇನ್ನೇನು ಚಳಿಗಾಲದ ದಿನಗಳು ಇಣುಕುತ್ತಿವೆ. ಯೂರೋಪ್‌ನ ದೇಶದ ಬೀಚ್‌ಗಳು ಇನ್ನು ಮುಂದೆ ಖಾಲಿ ಖಾಲಿ ಆಗಲಿವೆ. ಈ ಬೀಚ್‌ ಫ್ರಾನ್ಸ್ ನದು, ಚಳಿಗಾಲದ ಹಿಮದ ಕೊರೆತದಿಂದಾಗಿ ಇಲ್ಲಿ ಬಿಕಿನಿ ದರ್ಶನ ಇನ್ನು ದುರ್ಲಭ ಬಿಡಿ.

ಬೆಳಕಿನ ಕಿರಣಗಳಿಂದಲೂ ನೃತ್ಯ! :  ಈ ಕಲೆ ಈಗ ಹೆಚ್ಚು ಬೆಳೆಯುತ್ತಿದೆ. ಫ್ರಾನ್ಸ್ ನಲ್ಲಿ ನಡೆದ ಸ್ಪರ್ಧೆಯಲ್ಲಂತೂ, ಲೈಟ್‌ನ ಮೂಮೆಂಟ್‌ನ ಚಮತ್ಕಾರ ಪ್ರೇಕ್ಷಕರನ್ನು ದಂಗುಬಡಿಸಿತ್ತು! ಬೆಳಕಿನ ಕಿರಣಗಳಿಂದ ಪ್ರೇಕ್ಷಕರನ್ನು ಆಕರ್ಷಿಸುವುದು ಸುಲಭವಲ್ಲ, ಹಾಗೇ ಯಶಸ್ವಿಯಾಗುವುದೂ ಸುಲಭವಲ್ಲ.

ಧರ್ಮದ ಬಲಿಪಶುಗಳೆಂದರೆ ಹೆಂಗಸರು :  ಧರ್ಮ ಯಾವುದೇ ಇರಲಿ ಆದರೆ ಹತ್ಯೆ, ಆತಂಕ, ದೊಂಬಿ ಗಲಭೆಗಳಿಗೆ ಬಲಿಪಶುಗಳಾಗುವವರು ಮಾತ್ರ ಹೆಂಗಸರು. ಧರ್ಮವನ್ನು ಅತಿ ಹೆಚ್ಚು ಬೆಂಬಲಿಸುವ ಹೆಂಗಸರೇ ಧರ್ಮದ ಬಲಿಪಶುಗಳಾಗಿ ಹೀಗೆ ಗೋಳಾಡುತ್ತಾರೆ. ಯಹೂದಿ ಇಸ್ರೇಲ್ ಸೈನಿಕರಿಂದ ಹತ್ಯೆಗೀಡಾದ ಇಸ್ಲಾಮಿ ಪ್ಯಾಲೆಸ್ಟೀನ್‌ ರೆಫ್ಯೂಜಿಗಳ ಬಂಧು ಬಾಂಧವರಾದ ಈ ಹೆಂಗಸರ ಗೋಳು ಹೇಳತೀರದು. 1947ರಿಂದ ಇಸ್ರೇಲ್ ಪ್ಯಾಲೆಸ್ಟೀನ್‌ ಹೋರಾಟ ನಿರಂತರ ನಡೆಯುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ