ಬಾಡಿಗೆ ಗರ್ಭದ ಮೇಲೆ ಕಾನೂನಿನ ಪಹರೆ

ಬಾಡಿಗೆ ಗರ್ಭ (ಸರೋಗೆಸಿ)ದ ಮೇಲೆ ಕಾನೂನು ತನ್ನ ಕ್ರಮ ಹೇರಿ ಸರ್ಕಾರ ಹೆಂಗಸರ ದೇಹದ ಮೇಲೆ ಅವರಿಗೇ ಹಕ್ಕಿಲ್ಲ ಎಂಬಂತೆ ಮತ್ತೊಮ್ಮೆ ಸಾಬೀತುಪಡಿಸಿದೆ. ಗರ್ಭಪಾತದ ಮೇಲೆ ನಿಯಂತ್ರಣ, ಅಲ್ಟ್ರಾಸೌಂಡ್‌ ಮೇಲೆ ಕಂಟ್ರೋಲ್, ದೇಹ ಪ್ರದರ್ಶನವನ್ನು ಅಶ್ಲೀಲತೆ ಎನ್ನುವುದು ಇತ್ಯಾದಿ ಹೆಂಗಸರ ವೈಯಕ್ತಿಕ ಹಕ್ಕಿಗೆ ಚ್ಯುತಿ ತರುತ್ತವೆ. ಯಾವುದೇ ಸಮಾಜ ಹಾಗೂ ಸರ್ಕಾರಕ್ಕೆ ಮೂಲಭೂತವಾಗಿ ಈ ತರಹದ ಕಾನೂನು ಕ್ರಮವನ್ನು ಒಂದು ಜೆಂಡರ್‌ ಮೇಲೆ ಹೇರುವಂಥ ಹಕ್ಕಿಲ್ಲ.

ಅದೇ ಗಂಡಸರ ವಿಷಯದಲ್ಲಿ ಇಂಥ ಎಷ್ಟು ಕಾನೂನು ಕ್ರಮ ಹೇರಲಾಗಿದೆ ಎಂದು ಎಣಿಸಿ ನೋಡೋಣ.....? ವೇಗವಾಗಿ ಓಡುವುದರ ಕುರಿತಾಗಿ ಸರ್ಕಾರ ಗಂಡಸರ ಮೇಲೆ ಒತ್ತಡ ಹೇರಿದೆಯೇ? ಮನ ಬಂದಾಗ ಸಿಕ್ಸ್ ಪ್ಯಾಕ್‌ ಮಾಡಿಕೊಳ್ಳಬಾರದೆಂದು ಅವರ ಬಗ್ಗೆ ಕ್ರಮವಿದೆಯೇ? ಸಣ್ಣ ಚಡ್ಡಿ ಧರಿಸಿ ಗಂಡಸರು ಎಲ್ಲಾದರೂ ಸುತ್ತಾಡಬಹುದಂತೆ, ಆದರೆ ಹೆಂಗಸರು ಹಾಗೆ ಮಾಡುವಂತಿಲ್ಲ!

ತಮ್ಮ ಗರ್ಭವನ್ನು ಬಾಡಿಗೆ ಕೊಡುವುದರಿಂದ ಹೆಂಗಸರ ಆರೋಗ್ಯ ಕೆಡುತ್ತದೆ, ಹಾಗಾಗಿ ಈ ಕ್ರಮ ಎಂದು ಕಾನೂನು ಹೇಳಬಹುದು. ಹಾಗಾಗಿಯೇ ಅದನ್ನು ವ್ಯಾಪಾರಕ್ಕಿಡಬೇಡಿ ಎನ್ನುವ ನೆಪದಲ್ಲಿ ಅವರ ಆದಾಯಕ್ಕೆ ಅಂಕುಶ ಹಾಕಲಾಗಿದೆ.

ಹೆಂಗಸು ತನ್ನ ಜೀವಿತಾವಧಿಯಲ್ಲಿ ಸುಸೂತ್ರವಾಗಿ 10-12 ಮಕ್ಕಳನ್ನು ಹೆರಬಹುದು. ಆಕೆಗೆ ಸಕಲ ಸೌಲಭ್ಯ ಸಿಕ್ಕಿದರೆ ತನ್ನ ಗರ್ಭದಲ್ಲಿ ಪರರ ಭ್ರೂಣ ಬೆಳೆಸಿದರೆ ತಪ್ಪೇನು? ಇದರಲ್ಲಿ ಬಲವಂತದ ಪ್ರಶ್ನೆ ಇಲ್ಲವಷ್ಟೆ. ನಾವು ಕಟ್ಟಿದ ಮನೆಯನ್ನು ನಾವು ಯಾರಿಗಾದರೂ ಬಾಡಿಗೆಗೆ ಕೊಡಬಹುದು ತಾನೇ?

ಇದೊಂದು ರೀತಿ ಟೆಸ್ಟ್ ಟ್ಯೂಬ್‌ ಬೇಬಿ ಕೇಸ್‌ನಂತೆ. ಇದರಲ್ಲಿ ಗಂಡಸಿನ ವೀರ್ಯವನ್ನು ಹೆಂಗಸಿನ ಎಗ್‌ ಜೊತೆ ಹೊರಗಿನ ಲ್ಯಾಬ್‌ನಲ್ಲಿ ಫರ್ಟಿಲೈಸ್‌ ಮಾಡಿದಂತೆ ಹಾಗೂ 3ನೇಯವಳ ಗರ್ಭದಲ್ಲಿ ಅದನ್ನು ಬೆಳೆಸಲಾಗುತ್ತದೆ. ಹೀಗೆ ಸರೋಗೇಟ್‌ ಮದರ್ ಆಗುವವಳಿಗೆ ಆ ಮಗು ಯಾರದು ಅಂತ ತಿಳಿಯುವ ಸಂಭವ ಇರುವುದಿಲ್ಲ.

ಹೌದು, ಈ ತರಹದ ಕೆಲಸ ಈಗಾಗಲೇ ದಂಧೆಯ ರೂಪ ಪಡೆದುಕೊಂಡಿದೆ, ಆದರೆ ಇಂಥದೇ ಎಷ್ಟೋ ಕೆಲಸಗಳು ದಂಧೆಗಳಾಗಿವೆಯಷ್ಟೆ? ಧರ್ಮಾಂಧರು ಭಗವಂತನಿಗೆ ಎಲ್ಲ ಗೊತ್ತು ಎನ್ನುತ್ತಾರೆ, ಆದರೆ ಬೀದಿ ಬೀದಿಗಳಲ್ಲಿ ಧರ್ಮದ ದಂಧೆ ನಡೆಸುವ ಅಂಗಡಿಗಳಿಗೇನೂ ಬರವಿಲ್ಲ, ಇನ್ನಷ್ಟು ಮತ್ತಷ್ಟು ಗ್ರಾಹಕರು ಬರಬೇಕೆಂದು ಇವು ನಗಾರಿ ಬಾರಿಸುತ್ತಿರುತ್ತವೆ.

ನ್ಯಾಯ ಕೊಡಿಸುವುದು ಕೋರ್ಟ್‌, ಸಮಾಜದ ಕೆಲಸ. ಆದರೆ ವಕಾಲತ್ತಿನ ದಂಧೆಯಂತೂ ತಾರಕಕ್ಕೇರಿದೆ. ಸಾವು ಸಂಭವಿಸಿದಾಗ ಸಂಸ್ಕಾರದ ದಂಧೆಯೂ ಜೋರಾಗಿರುತ್ತದೆ. ಅಮೆರಿಕಾದಲ್ಲಂತೂ ಈಗ ಕಾಫಿನ್‌ ತಯಾರಿಸುವವರ ದಂಧೆ ಮುಳುಗುತ್ತಿದೆ ಎಂದು ಅಳುತ್ತಿದ್ದಾರೆ, ಏಕೆಂದರೆ ಜನ ಅಲ್ಲೀಗ ಹೆಣಗಳನ್ನು ನೇರ ಸುಡುತ್ತಿದ್ದಾರೆ. ಇವನ್ನು ಕ್ರಿಮೇಟ್‌ ಮಾಡಲೆಂದೇ ರಾಶಿ ರಾಶಿ ಚಿತಾಗಾರಗಳು ದಂಧೆ ಆರಂಭಿಸಿವೆ. ಕೆಲವೊಂದು ಪ್ರಕರಣಗಳಲ್ಲಿ, ವಿದ್ಯುತ್‌ ಉಳಿಸುವ ಲೋಭದಲ್ಲಿ ಅರೆ ಸುಟ್ಟ ಶವಗಳನ್ನು ಹಾಗೇ ಬಿಸಾಡಲಾಗುತ್ತದಂತೆ!

ಇವು ಯಾವುದರ ಮೇಲೂ ಕಾನೂನಿನ ಕ್ರಮ ಜರುಗಿಸದೆ, ಹೆಣ್ಣಿನ ಖಾಸಗಿ ವಿಷಯವಾದ ಗರ್ಭದ ಮೇಲೇಕೆ ಕಾನೂನಿಗೆ ಮಾರಿಕಣ್ಣು....? ಇದು ನಿಜಕ್ಕೂ ಅನೈತಿಕ! ಎಷ್ಟು ಮಟ್ಟಕ್ಕೆ ಎಂದರೆ.... ನಾಳೆ ತಾಯಿ ಆದವಳು ತನ್ನ ಮಗುವನ್ನು ನೋಡಿಕೊಳ್ಳಲು ಆಯಾಳನ್ನು ನೇಮಿಸಿಕೊಳ್ಳುವಂತಿಲ್ಲ ಎಂಬ ಕಾನೂನು ಜಾರಿಗೆ ಬಂದರೂ ಆಶ್ಚರ್ಯವಿಲ್ಲ. ಹೆತ್ತ ತಾಯಿಯೇ ಅದನ್ನು ಸಾಕಬೇಕು, ಬಾಡಿಗೆಗೆ ಪರರ ವಶಕ್ಕೆ ಒಪ್ಪಿಸುವಂತಿಲ್ಲ ಎಂಬಂತೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ