ಸ್ವಪ್ನಾ ತನ್ನ ಗೆಳತಿ ಜ್ಯೋತಿಯ ಮದುವೆಗೆ ಗಂಡನ ಜೊತೆ ಹೋಗಿದ್ದಳು. ಅಲ್ಲಿ ಜ್ಯೋತಿ ತನ್ನ ತಂಗಿ ಆರತಿಯನ್ನು ಸ್ವಪ್ನಾಳಿಗೆ ಪರಿಚಯಿಸಿದಳು. ಆಗ ಅವಳು, “ಹಲೋ ಸ್ವಪ್ನಕ್ಕಾ…. ನಮಸ್ತೆ ಅಂಕಲ್, ಅಕ್ಕಾ…. ನಿನ್ನ ಜೊತೆ ಭಾವ ಬರಲಿಲ್ವಾ?” ಎಂದು ಕೇಳಿದಳು.

“ಏ ಆರತಿ….. ಇವರೇ ಸ್ವಪ್ನಾಳ ಪತಿ. ಇವರು ಅಂಕಲ್ ಅಲ್ಲ, ಭಾವ,” ಎಂದು ಜ್ಯೋತಿ ತಿದ್ದಿದಳು.

ಅದನ್ನು ಕೇಳಿಸಿಕೊಂಡ ಆರತಿ, “ಸಾರಿ ಸ್ವಪ್ನಕ್ಕಾ…. ನಂಗೆ ಗುರುತು ಸಿಗಲಿಲ್ಲ,” ಎಂದು ಬೇರೆ ಅತಿಥಿಗಳನ್ನು ವಿಚಾರಿಸಲು ಹೋದಳು. ಅದಾದ ಮೇಲೆ ಈ ದಂಪತಿಗಳು ಒಲ್ಲದ ಮನದಿಂದಲೇ ಮದುವೆ ಅಟೆಂಡ್‌ ಮಾಡಿ ಮನೆಗೆ ಹೊರಟರು. ಸ್ವಪ್ನಾಳಿಗಂತೂ ಆರತಿಯ ಮಾತುಗಳೇ ಮತ್ತೆ ಮತ್ತೆ ಇರಿಯುತ್ತಿದ್ದವು.

ಇಂದಿನ ಧಾವಂತದ ಜೀವನದಲ್ಲಿ ಗಂಡಸರು ತಮ್ಮ ನಿರ್ಲಕ್ಷ್ಯದಿಂದಾಗಿ ಇಂಥ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ಮದುವೆ ಅಥವಾ ಫೆಸ್ಟಿವಸ್ ‌ಸೀಸನ್‌ ಇರಲಿ, ಮಹಿಳೆಯರಂತೂ ಸರ್ವಾಲಂಕೃತರಾಗಿ ಹೊರಟುಬಿಡುತ್ತಾರೆ. ಪಾಪ, ಗಂಡಸರು ಯಾವುದೋ ಪ್ಯಾಂಟ್‌ ಶರ್ಟ್‌ ಧರಿಸಿ ತಮ್ಮನ್ನು ಯಾರು ಕೇಳುತ್ತಾರೆ ಎಂಬಂತೆ ಇರುತ್ತಾರೆ. ಹೀಗಿರುವಾಗ ಮಾಡರ್ನ್ ಆರತಿಯರು `ಅಂಕಲ್’ ಅಂದರೆ, ಗಂಡಂದಿರಿಗಿಂತ ಹೆಚ್ಚಾಗಿ ಅವರ ಹೆಂಡತಿಯರಿಗೆ ಅವಮಾನ ಅನಿಸುತ್ತದೆ. ಆದ್ದರಿಂದ ಗಂಡಸರು ತಾವಾಗಿ ಅಪಹಾಸ್ಯಕ್ಕೆ ಈಡಾಗುವ ಇಂಥ ಸಂದರ್ಭಗಳನ್ನು ತಂದುಕೊಳ್ಳಬಾರದು.

ಆಕರ್ಷಣೆ : ಇಬ್ಬರಿಗೂ ಅಗತ್ಯ ಸೌಂದರ್ಯ ಮತ್ತು ಆಕರ್ಷಣೆ ಎರಡನ್ನೂ ಮೊದಲಿನಿಂದಲೂ ಹೆಣ್ಣಿಗೆ ಅನ್ವಯಿಸಿಯೇ ಹೇಳುತ್ತಾರೆ. ಆದರೆ ವಾಸ್ತವ ಎಂದರೆ, ಯಾವ ರೀತಿ ಗಂಡಸರು ಸುಂದರವಾದ ಹೆಂಗಸರನ್ನು ಬಯಸುತ್ತಾರೋ, ಅದೇ ರೀತಿ ಹೆಂಗಸರೂ ಸಹ ತಮ್ಮ ಗಂಡಂದಿರು ಬೇರೆಯವರಿಗಿಂತ ಕಡಿಮೆ ಅಲ್ಲ ಎಂಬಂತೆ ಇರಬೇಕೆಂದು ಬಯಸುತ್ತಾರೆ. ಹೀಗಾಗಿಯೇ ಲಭ್ಯವಿರುವ ಸಮಯದಲ್ಲಿ ಪ್ರತಿ ಸಣ್ಣಪುಟ್ಟ ನಗರಗಳಲ್ಲಿ ಇರುವಂಥ ಯೂನಿಸೆಕ್ಸ್ ಸೆಲೂನ್‌ಗೆ ಹೋಗಿ ಸಂಗಾತಿಗಳಿಬ್ಬರೂ ಸೌಂದರ್ಯ ಸಂವರ್ಧನೆಗೆ ಪ್ರಯತ್ನಿಸಬಹುದು. ಹೀಗಾದರೂ ಕೆಲವರು ತಮ್ಮ ಪಟ್ಟು ಬಿಟ್ಟುಕೊಡದೆ, ಯಾರೇನಾದರೂ ಅಂದುಕೊಳ್ಳಲಿ ಎಂದು ಒಡ್ಡೊಡ್ಡರಾಗಿಯೇ ಇದ್ದುಬಿಡುತ್ತಾರೆ. ಅಂಥವರು ಸಹಜವಾಗಿ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ.

ಸಕಾರಾತ್ಮಕ ವಿಚಾರಧಾರೆ

ಪತಿಯನ್ನು ಸೌಂದರ್ಯದತ್ತ ಜಾಗರೂಕರಾಗಿಸಲು ಸದಾ ಸಕಾರಾತ್ಮಕ ವಿಚಾರಧಾರೆ ಬೆಳೆಸಿಕೊಳ್ಳಿ. ಅವರು ನಿಮ್ಮನ್ನು ಸದಾ ಸುಂದರವಾಗಿ ಅಲಂಕರಿಸಿಕೊಂಡು ಇರಬೇಕೆಂದು ಬಯಸುವಂತೆ ನೀವು ಸಹ ಅವರು ಹ್ಯಾಂಡ್‌ಸಮ್ ಆಗಿರಬೇಕೆಂದು ಬಯಸುತ್ತೀರಿ ಎಂದು ತಿಳಿಯಪಡಿಸಿ. ಅವರು `ಬೇಡ’ ಎಂದರೆ `ಬೇಕು’ ಎಂಬಂತೆ ಬದಲಾಯಿಸಿ.

ರಿಲ್ಯಾಕ್ಸ್ ಥೆರಪಿ

ಕೆಲಸದ ಒತ್ತಡ, ಟೆನ್ಶನ್‌ ಇತ್ಯಾದಿಗಳಿಂದ ದೇಹ ಮತ್ತು ಬುದ್ಧಿಗೆ ಸುಸ್ತು ಎನಿಸುತ್ತದೆ. ಹೀಗಾಗಿ ಬಾಡಿ ಮೈಂಡ್‌ ಎರಡನ್ನೂ ರಿಲ್ಯಾಕ್ಸ್ ಗೊಳಿಸಲು ಯಾವುದಾದರೂ ಉತ್ತಮ ಸ್ಪಾ ಸೆಂಟರ್‌ಗೆ ಹೋಗಿ ನೀವಿಬ್ಬರೂ ಬಾಡಿ ಸ್ಪಾ, ಸೋನಾ, ಪೂಲ್‌, ಸ್ಟೀಂ ರೂಂನಂಥ ಸೌಲಭ್ಯಗಳ ಲಾಭ ಪಡೆಯಿರಿ. ಇದರಿಂದ ಇಬ್ಬರಿಗೂ ಬಾಡಿ ರಿಲ್ಯಾಕ್ಸ್ ಆದ ಅನುಭವದ ಜೊತೆಗೆ ನವ ಸ್ಛೂರ್ತಿ ಹಾಗೂ ತಾಜಾತನ ತುಂಬಿಕೊಳ್ಳುತ್ತದೆ. ಈ ಪಾಸಿಟಿವ್ ‌ಬದಲಾವಣೆಯ ನಂತರ ಅವರು ಮುಂದಿನ ತಮ್ಮ ಕಾಯಕಲ್ಪಕ್ಕಾಗಿ ಹಿಂಜರಿಯಲಾರರು.

ನೀವೇ ಅವರನ್ನು ಒಪ್ಪಿಸಿ

ನಿಮ್ಮ ಪತಿ ತಮ್ಮ ಗೆಟಪ್‌ ಬದಲಿಸುವ ಮುನ್ನ ನೀವು ಅದಕ್ಕಾಗಿ ಏನೆಲ್ಲ ತಯಾರಿ ಮಾಡಿಕೊಳ್ಳಬೇಕಾಗುತ್ತದೆ ಎಂಬುದು ಮುಖ್ಯ. ಅಂದರೆ, ಅವರ ಡ್ರೆಸಿಂಗ್‌ ಸ್ಟೈಲ್‌ನಲ್ಲಿ ಚೇಂಜ್‌ ತರುವುದು ಇತ್ಯಾದಿ. ಅವರ ಇಷ್ಟಾನಿಷ್ಟಗಳನ್ನು ಗಮನದಲ್ಲಿರಿಸಿಕೊಂಡು ನೀವು ಮುಂದುವರಿಯಿರಿ. ಇದಕ್ಕಾಗಿ ನೀವು ಡ್ರೆಸ್‌ ಡಿಸೈನರ್‌ರ ಸಹಾಯ ಪಡೆಯಬಹುದು.

ಬಾಡಿ ಎಕ್ಸ್ ಫೋಲಿಯೇಶನ್

ಪರಿಸರ ಮಾಲಿನ್ಯದ ಕಾರಣ ಗಂಡಸರಲ್ಲಿ ಟ್ಯಾನಿಂಗ್‌ ಮತ್ತು ಡೆಡ್‌ ಸ್ಕಿನ್‌ ಸಮಸ್ಯೆ ಬಲು ಕಾಮನ್‌. ಚರ್ಮದಿಂದ ಡೆಡ್‌ ಸೆಲ್ಸ್ ನ ಪದರ ತೊಲಗಿಸಲು ಎಕ್ಸ್ ಫೋಲಿಯೇಶನ್‌ ಬಲು ಉತ್ತಮ ಉಪಾಯವಾಗಿದೆ. ಹಾಗೆ ನೋಡಿದರೆ ಎಕ್ಸ್ ಫೋಪಾಲಿಯೇಶನ್‌ ಟ್ರೀಟ್‌ಮೆಂಟ್‌ ಸೆಲೂನ್‌ಗಳಲ್ಲೇ ಲಭ್ಯ. ನೀವು ಬಯಸಿದರೆ ಮನೆಯಲ್ಲೂ ಸಹ ನಿಮ್ಮ ಪತಿರಾಯರಿಗೆ ನಿಯಮಿತವಾಗಿ ಸ್ಕ್ರಬಿಂಗ್ ಮಾಡಬಹುದು. ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್‌ಗಳ ಬಾಡಿ ಸ್ಕ್ರಬ್‌ ಲಭ್ಯ. ನೀವು ನಿಮ್ಮ ಆಯ್ಕೆಯ ಪ್ರಕಾರ ಅದರಲ್ಲಿ ಆರಿಸಿ.

ಫೇಶಿಯಲ್

ಮಹಿಳೆಯರ ಸಂವೇದಾಶೀಲ ತ್ವಚೆಗೆ ಹೋಲಿಸಿದರೆ ಗಂಡಸರ ತ್ವಚೆ ನಯ ನಾಜೂಕಿಲ್ಲದೆ ಒರಟಾಗಿ ಇರುತ್ತದೆ ಎಂಬುದು ಸಹಜ. ಜೊತೆಗೆ ಬ್ಲ್ಯಾಕ್‌ ಪೋರ್ಸ್‌, ಬ್ಲ್ಯಾಕ್‌ ಹೆಡ್ಸ್, ಟ್ಯಾನಿಂಗ್‌ ಇತ್ಯಾದಿಗಳು ತುಂಬಿರುತ್ತವೆ. ಹೀಗಾಗಿ ಅವರ ತ್ವಚೆಗೆ ಹೊಂದವಂತೆ ಪ್ರಾಡಕ್ಟ್ಸ್ ಮತ್ತು ಸರ್ವೀಸಸ್‌ ಲಭ್ಯ. ಫೇಶಿಯಲ್ ಮೂಲಕ ಗಂಡಸರ ಸ್ಕಿನ್‌ಗೆ ಹೆಲ್ದಿ ಗ್ಲೋಯಿಂಗ್‌ ಎಫೆಕ್ಟ್ ನೀಡಬಹುದು.

ಗಂಡಸರ ಸ್ಕಿನ್‌ ಅನುಸಾರ, ಕೆಲವು ವಿಶಿಷ್ಟ ಫೇಶಿಯಲ್ಸ್ ಎಂದರೆ :

ರೇಡಿಯನ್ಸ್ ಬೂಸ್ಟ್ ಫೇಶಿಯಲ್ : ಇದನ್ನು ಮಿನಿ ಫೇಶಿಯಲ್ ಎಂದೂ ಹೇಳುತ್ತಾರೆ. ನಿಮ್ಮ ಬಿಝಿ ಶೆಡ್ಯೂಲ್ ‌ಮಧ್ಯೆ ಸಮಯಾಭಾವ ಇದ್ದಾಗ, ರೇಡಿಯನ್ಸ್ ಬೂಸ್ಟ್ ಫೇಶಿಯಲ್ ಉತ್ತಮ ಆಪ್ಶನ್‌ ಎನಿಸುತ್ತದೆ. ಇದರಲ್ಲಿ ಕ್ಲೆನ್ಸಿಂಗ್‌ ಎಕ್ಸ್ ಫೋಲಿಯೇಶನ್‌, ಸ್ಟೀಂ, ಬೂಸ್ಟಿಂಗ್‌ ಮಾಸ್ಕ್, ಟೋನಿಂಗ್‌, ಮಾಯಿಶ್ಚರೈಸಿಂಗ್‌, ಶೋಲ್ಡರ್‌ ಮಸಾಜ್‌ ಇತ್ಯಾದಿ ಮಾಡಲಾಗುತ್ತದೆ. ಇದಕ್ಕೆ 30-35 ನಿಮಿಷ ಹಾಗೂ 2-10 ಸಾವಿರ ಆಗುತ್ತದೆ.

ರೀಜನ್ರೇಟಿಂಗ್ಫೇಶಿಯಲ್ : ಈ ಫೇಶಿಯಲ್ ಎಲ್ಲಾ ಬಗೆಯ ಚರ್ಮದವರಿಗೂ ಅನ್ವಯವಾಗುತ್ತದೆ. ನೀವು ಪ್ಯಾಚೆಸ್‌ನ್ನು ಲೈಟ್‌ ಗೊಳಿಸಲು ಬಯಸಿದರೆ ಈ ಫೇಶಿಯಲ್ ಬಳಸಿ. ಇದು ಸನ್‌ ಡ್ಯಾಮೇಜ್‌ ಪಿಗ್ಮೆಂಟೇಶನ್‌ ಪ್ಯಾಚೆಸ್‌ಗೂ ಸಹ ಸಕ್ರಿಯವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಡ್ಯುಯೆಲ್ ಕ್ಲೆನ್ಸಿಂಗ್‌, ಸ್ಟೀಂ ಎಕ್ಸ್ ಫೋಲಿಯೇಶನ್‌, ಪ್ರೆಶರ್‌ ಪಾಯಿಂಟ್‌ ಮಸಾಜ್‌, ಟ್ಯಾನ್ ರಿಮೂವಿಂಗ್‌ ಪ್ಯಾಕ್‌, ಶೋಲ್ಡರ್‌ ಮಸಾಜ್‌, ಸನ್‌ ಪ್ರೊಟೆಕ್ಷನ್‌ವುಳ್ಳ ಮಾಯಿಶ್ಚರೈಸರ್‌ ಬಳಸಬೇಕು. ಇದಕ್ಕೆ ತಗಲುವ ಸಮಯ 1 ಗಂಟೆ ಕಾಲ ಹಾಗೂ 5-25 ಸಾವಿರ. ಸೂರ್ಯನ ಹಾನಿಕಾರಕ ಪ್ರಭಾವಕ್ಕೆ ಒಳಗಾದ ಚರ್ಮಕ್ಕೆ ಈ ಫೇಶಿಯಲ್ ಬಲು ಪರಿಣಾಮಕಾರಿ.

ಡರ್ಮಾಲಾಜಿಕ್ಫೇಶಿಯಲ್ : ತೀರ ಒಣಗಿದ, ಶುಷ್ಕ, ಡೀ ಹೈಡ್ರೇಟೆಡ್‌ ತ್ವಚೆಗೆ ಈ ಡರ್ಮಾಲಾಜಿಕ್‌ ಫೇಶಿಯಲ್ ಬಿಲ್‌ಕುಲ್ ಬೆಸ್ಟ್. ಇದರಲ್ಲಿ ಮೈಲ್ಡ್ ಕ್ಲೆನ್ಸಿಂಗ್‌, ಸ್ಟೀಂ ಎಕ್ಸ್ ಫೋಲಿಯೇಶನ್‌, ಶೋಲ್ಡರ್‌ ಮಸಾಜ್‌, ಫೇಶಿಯಲ್ ಪ್ರೆಶರ್‌ ಪಾಯಿಂಟ್‌ ಮಸಾಜ್‌, ಹೈಡ್ರೇಟಿಂಗ್‌ ಮಾಸ್ಕ್, ಸೀರಂ  ಸ್ಕಾಲ್ಪ್ ಮಸಾಜ್‌ ಬರುತ್ತದೆ. ಇದಕ್ಕೆ 1 ಗಂಟೆ ಕಾಲ ಹಾಗೂ 5-25 ಸಾವಿರ ಬೇಕು.

ಆ್ಯಂಟಿ ಏಜಿಂಗ್ಟ್ರೀಟ್ಮೆಂಟ್

ಇದರ ಕುರಿತಾಗಿ ಹೇಳಬೇಕೆಂದರೆ ಸ್ಕಿನ್‌ ಪೀಲ್‌, ಲೇಸರ್‌ ಸ್ಕಿನ್‌ ರೀಸರ್ಫೇಸಿಂಗ್‌, ಬೋಟಾಕ್ಸ್ ಟ್ರೀಟ್‌ಮೆಂಟ್‌, ಕಾಸ್ಮೆಟಿಕ್ ಸರ್ಜರಿ ಇತ್ಯಾದಿ ಗಂಡಸರಿಗ ಸಮಾನ ರೂಪದಲ್ಲಿ ಅನ್ವಯಿಸುತ್ತದೆ. ಆದರೆ ಇದು ಮೇಲಿನ ಚಿಕಿತ್ಸೆಗಳಿಗಿಂತ ದುಬಾರಿ, ನುರಿತ ತಜ್ಞರ ಬಳಿಯೇ ಮಾಡಿಸಬೇಕು.

ಹೇರ್ಕಟ್ಹೇರ್ಸ್ಟೈಲಿಂಗ್

ಕಳೆದ ಕೆಲವು ವರ್ಷಗಳಿಂದ ಗಂಡಸರಲ್ಲಿ ಹೇರ್‌ ಕಟ್‌ಹೇರ್‌ ಸ್ಟೈಲಿಂಗ್‌ ಕುರಿತಾಗಿ ಸಾಕಷ್ಟು ಬದಲಾವಣೆ ಗಮನಿಸಬಹುದಾಗಿದೆ. ಸೂಪರ್‌, ಉಪ್ಪಿ-2 ಚಿತ್ರಗಳಿಂದ ಉಪೇಂದ್ರ ಹೇರ್‌ ಸ್ಟೈಲ್ ‌ಬದಲಾಯಿಸಿದಂತೆ, ಆಮಿರ್‌ ಖಾನ್‌ ತಾರೆ ಜಮೀನ್‌ ಪರ್‌, ಗಜನಿ ಚಿತ್ರಗಳಲ್ಲಿ, ಸಲ್ಮಾನ್‌ ಖಾನ್‌ ವೀರ್‌ ಚಿತ್ರದಲ್ಲಿ, ಹೃತಿಕ್‌ ರೋಶನ್‌ ಜೋಧಾ ಅಕ್ಬರ್‌ನಲ್ಲಿ ಬಾಂಗ್‌ ಬಾಂಗ್‌ ಲುಕ್ಸ್, ಹನಿ ಸಿಂಗ್‌ಸ್ಟೈಲಿಶ್‌ ಲುಕ್ಸ್ ಕ್ರೇಝ್ನ್ನು ಹೆಚ್ಚಿಸಿದರೆಂದೇ ಹೇಳಬೇಕು. ಇವುಗಳಲ್ಲಿ ಬೌನ್ಸ್ ಹೇರ್‌, ಆ್ಯಂಗ್ಯುಲರ್‌ ಫ್ರಿಂಜ್‌, ಡೀಪ್‌ ಹೇರ್‌ ಕಟ್ ಪ್ರಮುಖ.

ಹೇರ್ಸ್ಟೈಲಿಂಗ್ಪ್ರಾಡಕ್ಟ್ಸ್

ಕೂದಲಿಗೆ ವಾಲ್ಯೂಂ ಹಾಗೂ ಸೆಲೆಕ್ಟಿವ್ ‌ಸ್ಟೈಲ್ ‌ನೀಡಲು ಮಾರ್ಕೆಟ್‌ನಲ್ಲಿ ಹಲವು ಬಗೆಯ ಪ್ರಾಡಕ್ಟ್ಸ್ ಲಭ್ಯವಿವೆ. ಇನ್ನು ನೀವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಆರಾಮವಾಗಿ ಮಾಡಿಸಬಹುದು.

ಪಾಲಿಶ್ಸ್ಪ್ರೇ : ಕೂದಲಿನ ಹೊಳಪು ಹೆಚ್ಚಿಸಲು ಇದನ್ನು ಬಳಸುತ್ತಾರೆ.

ಜೆಲ್ ಕ್ರೀಂ : ಕೂದಲಿನಲ್ಲಿ ವೆಟ್‌ ಲುಕ್ಸ್ ಗಾಗಿ ಜೆಲ್ ‌ಮತ್ತು ಕೂದಲನ್ನು ದಟ್ಟವಾಗಿಸಲು ಕ್ರೀಂ ಬಳಸಲಾಗುತ್ತದೆ.

ಸಾಮಾನ್ಯವಾಗಿ ಗಂಡಸರ ಕೈಕಾಲು ಶುಷ್ಕ ನಿರ್ಜೀವ ಹಾಗೂ ಒರಟೊರಟಾಗಿರುತ್ತದೆ. ನಂತರ ಅವರು ಎಷ್ಟೇ ಒಳ್ಳೆಯ ಡ್ರೆಸ್‌ಧರಿಸಿದರೂ, ಅವರ ಕೈಕಾಲುಗಳು ಅವರ ಒರಟು ಪ್ರಕೃತಿಯನ್ನು ಎತ್ತಿ ತೋರಿಸುತ್ತದೆ. ಹೀಗಾಗಿ ಯಾವುದೇ ನೇಲ್ ‌ಸೆಲೂನ್‌ ಗೆ ಹೋಗಿ ಕ್ಯುಟಿಕಲ್ಸ್ ತೆಗೆಸಿಬಿಡಿ. ನಂತರ ಉಗುರನ್ನು ಟ್ರಿಮ್ ಮಾಡಿಸಿ ನಿಮ್ಮ ಕೈಕಾಲುಗಳ ಸೌಂದರ್ಯ ಹೆಚ್ಚಿಸಿ. ಎಷ್ಟೋ ಗಂಡಸರಿಗೆ ಉಗುರು ಬಲು ಹಾರ್ಡ್‌ ಆಗಿರುತ್ತದೆ. ಒಳಗೊಳಗೇ ಇದು ನೋವು ಸಹ ಕೊಡುತ್ತದೆ. ಹೀಗಾಗಿ ನೇಲ್ ‌ಸಾಫ್ಟ್ ನರ್‌ಬಳಸಿ, ಉಗುರನ್ನು ಸಾಫ್ಟ್ ಗೊಳಿಸಿ, ನಂತರ ಕತ್ತರಿಸಬೇಕು. ಇಷ್ಟು ಮಾತ್ರವಲ್ಲದೆ ಜೆಲ್, ಆಯಿಲ್‌, ಸ್ಪಾ ವ್ಯಾಕ್ಸ್ ಮೆನಿಕ್ಯೂರ್‌ಪೆಡಿಕ್ಯೂರ್‌ ಸಹ ಮಾಡಿಸಬಹುದು.

ಹೇರ್ರಿಮೂವರ್

ಇಲ್ಲಿ ಹೇರ್‌ ರಿಮೂವರ್ ‌ಅಂದರೆ ಬಿಕಿನಿ, ಅಂಡರ್‌ ಆರ್ಮ್ಸ್, ಲೆಗ್ಸ್ ವ್ಯಾಕ್ಸಿಂಗ್‌ ಕುರಿತಾಗಿ ಅಲ್ಲ. ಬದಲಿಗೆ ದೇಹದ ಇನ್ನಿತರ ಭಾಗಗಳಲ್ಲಿ ಕೂದಲು ಹೆಚ್ಚಾಗಿ ಅದರ ಕಡೆ ನಮ್ಮ ಗಮನ ಹೋಗಿರುವುದಿಲ್ಲ. ಆದರೆ ನಮ್ಮನ್ನು ಗಮನಿಸುವ ಬೇರೆ ಜನ ಅದನ್ನೆಲ್ಲ ನೋಟ್‌ ಮಾಡಿರುತ್ತಾರೆ. ಕಿವಿಗಳ ಮೇಲ್ಭಾಗದ ಕೂದಲು, ಮೂಗಿನ ಹೊಳ್ಳೆಗಳಲ್ಲಿನ ಅಧಿಕ ಕೂದಲು, ಬದಿಯದು, ಹೇರ್‌ ಕಟ್ ನಂತರ ಕುತ್ತಿಗೆಯ ಸುತ್ತಮುತ್ತ ಬೆಳೆದ ಕೂದಲು, ಕಂಕುಳಿನ ದಟ್ಟ ಕೂದಲು…. ಇದರಿಂದ ದುರ್ವಾಸನೆಯ ಬೆವರು ಹೆಚ್ಚುತ್ತದೆ. ಶರ್ಟ್‌ನ ಆ ಭಾಗಕ್ಕೆ ವೆಟ್‌ ಪ್ಯಾಚೆಸ್‌ ಹಿಡಿಯುತ್ತದೆ. ಹೆಚ್ಚು ಬೆವರುವವರು ಅಗತ್ಯವಾಗಿ ಸ್ಲೀವ್ ಲೆ‌ಸ್‌ ಬನಿಯನ್‌ ಧರಿಸಬಾರದು,  ಅದರಲ್ಲೂ ಅಚ್ಚ ಬಿಳುಪಿನ. ಹೀಗಾಗಿ ಇಂಥ ಕೂದಲನ್ನು ನೀಟಾಗಿ ಟ್ರಿಮ್ ಮಾಡಿ, ಆಫ್ಟರ್‌ ಶೇವ್ ಲೋಶನ್‌ ಹಚ್ಚುವುದರಿಂದ, ಜೋಡಿಯಾಗಿ ಹೊರಟಾಗ ಇಬ್ಬರೂ ಸೂಪರ್‌ ಆಗಿ ಕಾಣಿಸುವಿರಿ.

ಅವರ ಇಷ್ಟಾನಿಷ್ಟಗಳನ್ನು ಕಡೆಗಣಿಸದಿರಿ

ನೀವು ಅವರ ಪರ್ಸನಾಲ್ಟಿ ಇಂಪ್ರೂವ್ ‌ಮಾಡಲು ಬಯಸುತ್ತಿದ್ದೀರಿ, ಸರಿ. ಆದರೆ ಗೊತ್ತಿದ್ದೋ ಇಲ್ಲದೋ ಪ್ರತಿ ವಿಷಯದಲ್ಲೂ ಅವರ ಆಯ್ಕೆಗಳನ್ನು ಎಂದೂ ಕಡೆಗಣಿಸಬಾರದು ಎಂದು ನೆನಪಿಡಿ. ಮುಖ್ಯವಾಗಿ ಅವರ ಡ್ರೆಸಿಂಗ್‌ ಸೆನ್ಸ್ ಕುರಿತಾಗಿ. ಹೆಂಗಸರು ಮತ್ತು ಗಂಡಸರ ಡ್ರೆಸಿಂಗ್‌ ಸೆನ್ಸ್ ಖಂಡಿತಾ ಬೇರೆ ಬೇರೆ ಆಗಿರುತ್ತದೆ. ಹೀಗಾಗಿ ನಿಮ್ಮ ಇಷ್ಟಾನಿಷ್ಟಗಳ್ನು ಅವರ ಮೇಲೆ ಹೇರುವ ಬದಲು, ಅಂಗಡಿಗೆ ಹೋದಾಗ ಅಲ್ಲಿನ ಸೇಲ್ಸ್ ಬಾಯ್‌/ಗರ್ಲ್ಸ್ ಸಹಾಯ ಪಡೆಯಿರಿ. ಹಾಗೆ ಮಾಡುವುದರಿಂದ ನಿಮ್ಮ ಪತಿಗೆ ಕೇವಲ ನಿಮ್ಮೊಬ್ಬರ ಆಯ್ಕೆಗಳನ್ನೇ ಅವರ ಮೇಲೆ ಹೇರುತ್ತಿದ್ದೀರಿ ಎನಿಸುವುದಿಲ್ಲ.

ಈ ಫೆಸ್ಟಿವಲ್ ‌ಸೀಸನ್‌ನಲ್ಲಿ ನಿಮ್ಮ ಅಲಂಕಾರದ ಜೊತೆಜೊತೆಯಲ್ಲೇ ನಿಮ್ಮ ಪತಿರಾಯರ ಗೆಟಪ್‌ನ್ನೂ ಚೇಂಜ್‌ ಮಾಡಿ, ಅವರು ಹಿಂದಿಗಿಂತ ಹ್ಯಾಂಡ್‌ ಸಮ್ ಆಗಿದ್ದಾರೆ ಎನ್ನುವಂತೆ ಎಲ್ಲರಿಂದ ಹೊಗಳಿಕೆ ಪಡೆಯುವಿರಿ, ಈ ಹಬ್ಬದ ಸೀಸನ್‌ನಲ್ಲಿ ಅದು ನಿಮಗೆ ಆಪ್ಯಾಯಮಾನ ಎನಿಸುತ್ತದೆ.

ಪ್ರೀತಿ ಜೈನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ