ನೊರೆಯಲ್ಲೇ ಡ್ಯಾನ್ಸ್ ಮಜಾ : ಪಕ್ಕದಲ್ಲಿ ಯಾರಿದ್ದಾರೆ, ಹೇಗಿದ್ದಾರೆ, ಒಮ್ಮೆ ಕಾಣಿಸಿದರೆ ಮತ್ತೊಮ್ಮೆ ಇಲ್ಲ… ಪಾರ್ಟ್‌ನರ್ಸ್ ಸಹ ಬದಲಾಗಬಹುದು! ಯೂರೋಪಿನ ಮಿಸ್ಕ್ ನಗರದಲ್ಲಿ ನಡೆದ ಈ ಮ್ಯೂಸಿಕಲ್ ಫೆಸ್ಟಿವಲ್ ಯಾವ ಊರ ಹಬ್ಬಕ್ಕೂ ಕಡಿಮೆ ಇರಲಿಲ್ಲ!
ಹೇಗಿದೆ ಈ ಮೋಡಿ! : ಚೀನೀಯರ ಮೊಬೈಲ್ ಮಾತ್ರವಲ್ಲ, ಈಗ ಅವರ ಹಾಡುಗಳೂ ಸಹ ವಿಶ್ವಪ್ರಸಿದ್ಧ! ಸುಸಾನ್ ಹು ಆಂಗ್‌ಎಂಬ ಈ ಗಾಯಕಿ ಮಾಡಿರುವ ಮೋಡಿಗೆ ಇಡೀ ವಿಶ್ವವೇ ಬೆರಗಾಗಿದೆ.
ಮೂರ್ತಿ ಚಿಕ್ಕದಾದರೇನು…..? : ಲೇಯಾ ಫೆರಾಂಡ್ ಎಂಬ ಈ ಸುಂದರಿ ಇದೀಗ ಮಿಸ್ ತಾಹಿತಿ ಎನಿಸಿದ್ದಾಳೆ. ಪೆಸಿಫಿಕ್ ಮಹಾಸಾಗರದ ಮಧ್ಯೆ ತಾಹಿತಿ ಸಣ್ಣ ದ್ವೀಪ ದೇಶ. ದೇಶ ಚಿಕ್ಕದಾದರೇನು…. ಕೀರ್ತಿ ಬಲು ದೊಡ್ಡದು!
ಬದಲಾವಣೆ ಅತ್ಯಗತ್ಯ : ಕೆಲವು ವರ್ಷಗಳ ಹಿಂದಿನವರೆಗೂ ತಮಿಳರು ಸಿಂಹಳೀಯರ ಮಾರಾಮಾರಿಯಲ್ಲಿ ಮುಳುಗಿಹೋಗಿತ್ತು. ಆದರೆ ಈಗ ಇದು ಸಿಂಗಪೂರ್‌ಗೇ ಸಡ್ಡು ಹೊಡೆಯುವಂತಿದೆ. ಭಾರತ ಇನ್ನೂ ಪ್ರಾಚೀನ ಸಂಪ್ರದಾಯಗಳಿಗೆ ಜೋತುಬಿದ್ದಿದ್ದರೆ ಶ್ರೀಲಂಕಾ ಇಂಥ ಫ್ಯಾಷನ್ ಶೋಗಳಿಂದ ಯೂರೋಪನ್ನೇ ಮುಗ್ಗರಿಸುತ್ತಿದೆ. ಇಂಥ ಬಿಂದಾಸ್ ರಾಂಪ್ ಶೋಗಳಿಗೆ ತಲೆದೂಗದವರುಂಟೆ?
ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ ! : ಯಾರು ಬೆಕ್ಕನ್ನು ಸಾಕುತ್ತಾರೋ ಅವರುಗಳೂ ಹಾಗೆಯೇ ಆಗುತ್ತಾರಂತೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಬೆಕ್ಕುಗಳಿಗೆಂದೇ ನಡೆಯುವ ಒಂದು ಪ್ರದರ್ಶನದಲ್ಲಿ ಕ್ಯಾಟ್ ವಾಕ್ ಮಾಡಲು ಬಂದಿದ್ದ ಈ 2 ಕಾಲುಗಳ ಬೆಕ್ಕುಗಳ ಗಲಾಟೆ ಹೇಳತೀರದು. ಈ ಪುಸ್ಸಿ ಕ್ಯಾಟ್‌ಗಳಿಗೆ ಮುಗಿಬಿದ್ದ ಟಾಮ್ ಕ್ಯಾಟ್‌ಗಳ ಪಾಡು… ನಾಯಿಪಾಡೇ ಸರಿ!
ಓಲ್ಡ್ ಈಸ್ ಗೋಲ್ಡ್ ! : ಪ್ಯಾರಿಸ್ ಹತ್ತಿರವಿರುವ ಒಂದು ಅತಿ ಪ್ರಾಚೀನ ಬಂಗಲೆಯಲ್ಲಿ, 300 ವರ್ಷಗಳ ಹಿಂದಿನ ಅದೇ ಪರಿಸರ ಮತ್ತೆ ಅನಾವರಣಗೊಂಡಿದೆ. ವಾರ್ಷಿಕ `ಗ್ರ್ಯಾಂಡ್ ಸಿಕ್ ಡೇ’ ನಂದು ಜನ ಪೀರಿಯಡ್ ಕಾಸ್ಟ್ಯೂಮ್ಸ್ ಧರಿಸಿ ಇಡೀ ದಿನ ಕಳೆಯುತ್ತಾರೆ.
ಪ್ರಾಣಘಾತಕ ಆಟಗಳಿಗೆ ಮನಸೋತವರು : ಸ್ಪೇನ್ ದೇಶದ ನಗರ ಸ್ಯಾನ್‌ಫರ್ಮಿನ್‌ನಲ್ಲಿ ಪ್ರತಿ ವರ್ಷ ಬುಲ್ ರನ್ ಇರುತ್ತದೆ. ಇವುಗಳ ಮುಂದೆ ಯುವ ಜನತೆ ಹುಚ್ಚೆದ್ದು ಓಡುತ್ತಿರುತ್ತಾರೆ. ಗೂಳಿಗಳು ಬಂದು ತಮ್ಮನ್ನು ತಿವಿಯಬಾರದು ಅಥವಾ ಪಕ್ಕದವರಿಗೆ ಡಿಕ್ಕಿ ಹೊಡೆದು ವುತಾ ಬೀಳಬಾರದು ಎಂಬುದಕ್ಕಾಗಿ ಎಚ್ಚರ ವಹಿಸಿದರೂ ಅನಾಹುತ ತಪ್ಪದು.
ಇದಲ್ಲವೇ ಜೀವಿಸುವ ಪರಿ! : ಡೆನ್ ಮಾರ್ಕ್‌ನ ಒಂದು ಫೆಸ್ಟಿವಲ್ ನಲ್ಲಿ ಎಷ್ಟೋ ರಾತ್ರಿಗಳನ್ನು ಮೋಜುಮಸ್ತಿಯಲ್ಲಿ ಕಳೆಯಲೆಂದು ಹೋಟೆಲ್‌ಗಳ ಬದಲು, ಬಯಲು ಹುಲ್ಲುಗಾವಲಲ್ಲಿ ಹೀಗೆ ಟೆಂಟ್ ಹಾಕಿಕೊಂಡು ಜನ ಹಾಯಾಗಿ ಕಾಲ ಕಳೆಯುತ್ತಾರೆ. ಇಡೀ ನಗರವೇ ಇಲ್ಲಿಗೆ ಬಂದಿರುತ್ತದೆ, ಕೇವಲ ರಂಗುರಂಗಿನ ಪ್ರಪಂಚ, ಮೋಜುಮಸ್ತಿ, ಕೋಲಾಹಲದ ಮ್ಯೂಸಿಕಲ್ ಡ್ಯಾನ್ಸ್ ತುಂಬಿರುತ್ತದೆ. ಸ್ವರ್ಗ ಧರೆಗಿಳಿಯುವುದು ಅಂದರೆ ಇದೇ ಅಲ್ಲವೇ?