ಕಾಲಕ್ಕೆ ತಕ್ಕಂತೆ ಫ್ಯಾಷನ್ ಕೂಡ ಬದಲಾಗುತ್ತಾ ಇರುತ್ತದೆ. ಪ್ರತಿಯೊಬ್ಬರೂ ಅದಕ್ಕೆ ತಕ್ಕಂತೆ ತಮ್ಮನ್ನು ತಾವು ಅಪ್‌ಡೇಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಯಾವ ಡ್ರೆಸ್‌ನಲ್ಲಿ ನೀವು ಕಂಫರ್ಟಬಲ್ ಎಂದು ಅನುಭೂತಿ ಮಾಡಿಕೊಳ್ಳುತ್ತೀರೊ, ಅಂಥದೇ ಡ್ರೆಸ್‌ನ್ನು ಧರಿಸಿ. ಆದರೂ ಸದ್ಯ ಏನು ಚಾಲ್ತಿಯಲ್ಲಿದೆ ಎಂದು ತಿಳಿದುಕೊಳ್ಳುವುದು ಅತ್ಯವಶ್ಯಕ. ಭವಿಷ್ಯದಲ್ಲಿ ವಾರ್ಡ್ ರೋಬ್ ಸೆಕ್ಸಿ ಲುಕ್ ಜೊತೆ ಜೊತೆಗೆ ಸೊಫಿಸ್ಟಿಕೇಟೆಡ್ ಲುಕ್ಸ್ ನ್ನು ಪ್ರೆಸೆಂಟ್ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಉದ್ಯೋಗಸ್ಥ ಮಹಿಳೆ ತನ್ನ ಉದ್ಯೋಗಕ್ಕೆ ಅನುಗುಣವಾದ ಡ್ರೆಸ್ ಧರಿಸುವುದು ಅನಿವಾರ್ಯವಾಗುತ್ತದೆ. ಇದೇ ಕಾರಣದಿಂದಾಗಿ ಫೆಮಿನೈನ್ ಟಚ್ ಜೊತೆಗೆ ಸೀಥ್ರೂ ಬೋಲ್ಡ್ ಡ್ರೆಸೆಸ್ ಕೂಡ ಫ್ಯಾಷನ್‌ನಲ್ಲಿ ಇವೆ.
ಟ್ರಾನ್ಸ್ ಪರೆಂಟ್ ಲುಕ್
ಫ್ಯಾಷನ್ ಜಗತ್ತಿನ ದೀರ್ಘಕಾಲಿಕ ಭಾಗವಾಗಿ ಉಳಿಯುತ್ತದೆ. ಎಥ್ನಿಕ್ ಲುಕ್ ಕಡಿಮೆಯಾಗುತ್ತದೆ ಮತ್ತು ವೇಷಭೂಷಣಗಳ ಡಿಸೈನಿಂಗ್‌ನ ಮಟ್ಟ ಕೂಡ ಕಡಿಮೆಯಾಗುತ್ತದೆ. ಧರಿಸಲು ಆರಾಮದಾಯಕ ಮತ್ತು ಬೆಲೆ ಕೈಗೆಟುಕುವಂತಿರುವ ಡ್ರೆಸ್‌ಗಳು ಯಾರಿಗಾದರೂ ಇಷ್ಟವಾಗುತ್ತವೆ.
ಇತ್ತೀಚೆಗೆ ಯುವತಿಯರು ಫಿಟೆಡ್ ಸಿಲ್ ಹುಟ್ಸ್ ಇಷ್ಟಪಡುತ್ತಾರೆ. ಏಕೆಂದರೆ ಒಂದು ಪರ್ಫೆಕ್ಟ್ ಫಿಗರ್‌ಗೆ ಅಂಥ ಬೇಕೇಬೇಕು. ಸಿಲ್ ಹುಟ್ಸ್ ಸಾಮಾನ್ಯವಾಗಿ ವೆಸ್ಟರ್ನ್ ಆಗಿರುತ್ತವೆ. ಆದರೆ ಟ್ರೆಡಿಶನಲ್ ಪ್ರಿಂಟ್, ಕಟ್ ವರ್ಕ್, ಸೀಕ್ವೆನ್ಸ್ ಮತ್ತು ಬೀಡ್ಸ್ ಸುರಿಮಳೆ ಆಗಿರುವುದು ಕಂಡುಬರಲಿದೆ. ಕ್ಲೌನ್ ಪ್ಯಾಂಟ್, ಬ್ಯಾಟ್ ವಿಂಗ್ ಸ್ಲೀವ್ಸ್, ಮಿನಿ ಸ್ಕರ್ಟ್ ಶಾರ್ಟ್ ಪ್ಯಾಂಟ್, ಟ್ಯೂನಿಕ್ ಕಫ್ತಾನ್, ಗೌನ್, ರಫ್ಡ್ ಸ್ಕರ್ಟ್ ಜೊತೆ ಜೊತೆಗೆ ಜ್ಯಾಕೆಟ್ ಕೂಡ ಎಲ್ಲರ ಗಮನ ಸೆಳೆಯುತ್ತದೆ.
ನ್ಯಾರೊ ಟ್ರೌಸರ್, ವೆಲ್ವೆಟ್ ಪ್ಯಾಂಟ್, ಫ್ಲೇಯರ್ಡ್ ಡ್ರೆಸೆಸ್, ಫ್ಲೀಟೆಡ್ ಸ್ಕರ್ಟ್, ಪಫ್ಡ್ ಸ್ಲೀವ್ಸ್, ಬಾಂಬರ್ ಜಾಕೆಟ್, ಲೋ ಸೈಜ್ ಮತ್ತು ಹೈ ವೇಸ್ಟ್ ಟ್ರೌಸರ್ ಪ್ರತಿಯೊಂದು ಬಗೆಯ ಮಹಿಳೆಯರಿಗೂ ಇಷ್ಟವಾಗುತ್ತದೆ.
ಕ್ಯಾಶುವಲ್ ವೇರ್‌ನಲ್ಲಿ ವಾಲ್ಯೂಮ್ ಅಥವಾ ಸುತ್ತಳತೆ ಅಥವಾ ಸಡಿಲ ಬಟ್ಟೆಗಳು ಹೆಚ್ಚು ಚಾಲ್ತಿಯಲ್ಲಿರುತ್ತವೆ. ಬಾಹುಗಳು, ಕಾಲರ್, ಸ್ಕರ್ಟ್ ಮತ್ತು ಜ್ಯಾಕೆಟ್‌ನಲ್ಲಿ ನೋಡಲು ಸಿಗುತ್ತವೆ. ಪಲ್ಲರ್ ಬೆಲೂನ್ ಸ್ಲೀವ್ ಮತ್ತು ಶಾರ್ಟ್ ಪಲರ್ ಬೆಲ್ ಸ್ಲೀವ್ಸ್ ಸ್ಕರ್ಟ್ ಚಾಲ್ತಿಯಲ್ಲಿರುತ್ತವೆ. ಹೈ ವೇಸ್ಟ್ ಸ್ಕರ್ಟ್ ಸಾಕಷ್ಟು ವರ್ಷಗಳ ತನಕ ಟೀನ್ ಏಜರ್‌ಗಳ ನಡುವೆ ಹಾಟ್ ಟ್ರೆಂಡ್‌ನ ಹಾಗೆ ಪ್ರತ್ಯಕ್ಷವಾಗುತ್ತದೆ. ಅದನ್ನು ಶಾರ್ಟ್, ಸಾಟಿನ್ ಟಾಪ್ ಹಾಗೂ ಕ್ರೌವ್ ನೆಕ್ ಸ್ವೆಟರ್‌ನ ಜೊತೆಗೆ ಧರಿಸಬಹುದು.
ಇವು ಕ್ಲಾಸಿಕ್, ಸ್ಟ್ರೇಟ್ ಪೆನ್ಸಿಲ್ ಕಟ್‌ನಲ್ಲೂ ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ಅದರಲ್ಲಿ ಹಿಂಭಾಗದಲ್ಲಿ ಸ್ಲಿಟ್ ಕೂಡ ಇರುತ್ತದೆ. ಜೊತೆಗೆ ಫಿಟಿಂಗ್ ಇರುವ ಸ್ಟ್ರ್ಯಾಪ್ ಲೆಸ್ ಬ್ಲೌಸ್ ಕೂಡ ಇಷ್ಟವಾಗುತ್ತವೆ. ಅದರ ಮೇಲೆ ಚಳಿಗಾಲದಲ್ಲಿ ಬೆಚ್ಚಗಿನ ಸ್ಟೋಲ್ ಮತ್ತು ಬೇಸಿಗೆಯಲ್ಲಿ ಕಾಟನ್‌ನ ಸ್ಟೋಲ್ ಹಾಕಿಕೊಳ್ಳಬಹುದು.
ಫ್ಯಾಷನ್ ಡಿಸೈನರ್ ವಿಜಯ್ ಪ್ರಕಾರ, “ಪಾಶ್ಚಿಮಾತ್ಯ ಉಡುಪುಗಳು ಆಲ್ ಟೈಮ್ ಫೇವರಿಟ್ ಆಗಿವೆ. ಅವೆಂದೂ ಔಟ್ ಡೇಟೆಡ್ ಆಗುವುದಿಲ್ಲ. ಲಾಂಗ್ ಗೌನ್‌ನ ಫ್ಯಾಷನ್ ಹಾಗೆಯೇ ಇರುತ್ತದೆ. ಬಾಡಿ ಹ್ಯಾಂಗಿಂಗ್ ಡ್ರೆಸ್‌ಗಳು ಇಷ್ಟವಾಗುತ್ತಲೇ ಇರುತ್ತವೆ.”
ಟೈಟ್ಸ್ ಚಾಲ್ತಿಯಲ್ಲಿ
70ರ ದಶಕದ ಸಿನಿಮಾಗಳನ್ನೊಮ್ಮೆ ನೆನಪಿಸಿಕೊಳ್ಳಿ. ಆಗ ಮುಮ್ತಾಜ್, ಶರ್ಮಿಳಾ ಟ್ಯಾಗೋರ್, ತನುಜಾ, ಹೇಮಾಮಾಲಿನಿ ಮುಂತಾದ ನಾಯಕಿಯರು ಮೊಣಕಾಲಿನಿಂದ ಸ್ವಲ್ಪ ಕೆಳಭಾಗದಲ್ಲಿ ಟೈಟ್ ಫಿಟಿಂಗ್‌ನ ಲೆಗಿಂಗ್ಸ್ ಧರಿಸಿ ತಮ್ಮ ಬೆಡಗು ಬಿನ್ನಾಣ ಪ್ರದರ್ಶಿಸುತ್ತಿದ್ದರು. ಮೊಣಕಾಲು ಹಾಗೂ ಹಿಮ್ಮಡಿ ತನಕದ ಈ ಲೆಗಿಂಗ್ಸ್ ರೆಟ್ರೊ ಲುಕ್‌ನೊಂದಿಗೆ ಪುನಃ ಫ್ಯಾಷನ್‌ಗೆ ಬರುತ್ತಿದೆ. ಜೀನ್ಸ್ ನ ಬದಲಿಗೆ ಲೆಗಿಂಗ್ಸ್ ಪುನಃ ಫ್ಯಾಷನ್‌ಗೆ ಬಂದಿರುವುದೇ ಇದಕ್ಕೆ ಸಾಕ್ಷಿ. ಅಂದಹಾಗೆ ಇವು ಜೀನ್ಸ ನ ಸ್ಥಾನವನ್ನು ಅತಿಕ್ರಮಿಸುವುದಿಲ್ಲ. ಏಕೆಂದರೆ ಇವುಗಳ ಲುಕ್ ನಮ್ಮದೇ ಪೋಷಾಕುಗಳ ರೀತಿಯಲ್ಲಿದೆ ಹಾಗೂ ಇದು ನಮ್ಮ ಯುವತಿಯರಿಗೆ ಸಾಕಷ್ಟು ಹಿಡಿಸುತ್ತಿದೆ. ಅವು ಧರಿಸಲು ಆರಾಮದಾಯಕ ಅಷ್ಟೇ ಅಲ್ಲ, ಇವುಗಳ ಫಿಟಿಂಗ್‌ನಿಂದ ದೇಹದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
ಸ್ಟ್ರಕ್ಚರ್ಡ್ ಟೈಟ್ಸ್ ಲುಕ್‌ನ ಜೊತೆಗೆ ಸ್ಟೈಲ್ ಸ್ಟೇಟ್‌ಮೆಂಟ್ ಕೂಡ ಮಾಡುತ್ತವೆ. ಹೀಗಾಗಿ ಅವು ಟೀನ್ ಏಜರ್ಸ್ ಮತ್ತು ಉದ್ಯೋಗಸ್ಥ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗುತ್ತ ಹೊರಟಿವೆ. ಏಕೆಂದರೆ ಇವು ಆರಾಮದಾಯಕವಾಗಿರುವುದರ ಜೊತೆ ಜೊತೆಗೆ ಇನ್ನು ಕುರ್ತಾ ಅಥವಾ ಶಾರ್ಟ್ ಡ್ರೆಸ್ ಜೊತೆಗೆ ಕೂಡ ಧರಿಸಬಹುದು. ಟೈಟ್ಸ್ ನ ಜೊತೆ ಜೊತೆಗೆ ಮುಂಬರುವ ದಿನಗಳಲ್ಲಿ ಜೆಗಿಂಗ್ಸ್ ನ ಫ್ಯಾಷನ್ ಕೂಡ ಇರಲಿದೆ. ಇವು ಒಂದು ರೀತಿಯಲ್ಲಿ ಲೆಗಿಂಗ್ಸ್ ನ ಒಂದು ರೂಪವೇ ಆಗಿದೆ. ಆದರೆ ಇವುಗಳ ಫ್ಯಾಬ್ರಿಕ್ ಜೀನ್ಸ್ ನದ್ದಾಗಿರುತ್ತದೆ. ಕಟ್ ಮತ್ತು ಶೇಪ್ ಲೆಗಿಂಗ್ಸ್ ನದ್ದಾಗಿರುತ್ತದೆ.
ರೆಟ್ರೊ ಲುಕ್ಸ್ ನ ವಾಪಸಾತಿ
ಡಿಸೈನರ್ ಅಂಜನಾ ಭಾರ್ಗವ್ ಪ್ರಕಾರ, 60-70ರ ದಶಕದ ರೆಟ್ರೊ ಲುಕ್ಸ್ ಪುನಃ ವಾಪಸ್ಸಾಗಿದೆ. ಇದು ದೀರ್ಘಕಾಲದ ತನಕ ಉಳಿಯಬಲ್ಲದು. ವೇಷಭೂಷಣದಿಂದ ಹಿಡಿದು ಹೇರ್ ಮತ್ತು ಎಕ್ಸ್ ಸರೀಸ್‌ವರೆಗೆ ರೆಟ್ರೊ ಮೂಡ್ ನೋಡಲು ಸಿಗುತ್ತದೆ.
ಪಾರಂಪರಿಕ ಡ್ರೆಸ್‌ಗಳಿಗೆ ಹೋಲಿಸಿದಲ್ಲಿ ಪಾಶ್ಚಿಮಾತ್ಯ ಡ್ರೆಸೆಸ್‌ಗಳ ಟ್ರೆಂಡ್ ಜೋರಾಗಿ ಇರುತ್ತದೆ. ದಬ್ಕಾ, ಸ್ವರೋಸ್ಕಿಗಳ ಪ್ರಭಾವ ಕಡಿಮೆಯಾಗುವುದು. ಇವುಗಳ ಬದಲು ಥ್ರೆಡ್ ವರ್ಕ್, ಟೋನ್ ಆನ್ ಟೋನ್ ಹಾಗೂ ಸರ್ಫೇಸ್ ಟೆಕ್ಸ್ ಚರಿಂಗ್‌ಮುಂತಾದ ಬಳಕೆಯಾಗುವವು. ಖಾಕಿಯ ಫ್ಯಾಷನ್ ಕೂಡ ಜೋರಾಗುತ್ತಿದೆ. ಪರಿಸರ ಸ್ನೇಹಿ ಆಗಿರುವುದರಿಂದ ಹಾಗೂ ಒಂದು ಸ್ಲೈಟ್ ಸ್ಟೇಟ್‌ಮೆಂಟ್ ಆಗಿಯೂ ಕೂಡ. ಇದರಲ್ಲಿ ಸಫಾರಿ, ಟ್ರೈಬಲ್ ಸ್ಟೈಲ್ ಖಾಯಂ ಆಗಿರುತ್ತದೆ. ನ್ಯೂಟ್ರಲ್ ಕಲರ್ಸ್‌ನಲ್ಲಿ ಖಾಕಿ ಡ್ರೆಸೆಸ್ ಪ್ರತಿಯೊಂದು ವಯಸ್ಸಿನ ಮಹಿಳೆಯರ ವಾರ್ಡ್‌ರೋಬ್‌ನಲ್ಲಿ ಕಾಣಸಿಗುತ್ತವೆ?
ಫೇಡೆಡ್ ಡೆನಿಮ್ ಜೀನ್ಸ್ ಪ್ರತಿಯೊಂದು ಸೀಜನ್‌ನಲ್ಲಿ ಟ್ರೆಂಡ್‌ನಲ್ಲಿ ಇರುತ್ತವೆ. ಬರಲಿರುವ ದಿನಗಳಲ್ಲೂ ಇವು ಮೆಚ್ಚುಗೆಗೆ ಪಾತ್ರವಾಗುತ್ತವೆ. ಇವುಗಳೊಂದಿಗೆ ಸ್ಲಿವ್ ಟೀ ಶರ್ಟ್ ಮತ್ತು ವೇಸ್ಟ್ ಕೋಟ್ ಬಹಳ ಚೆನ್ನಾಗಿ ಹೊಂದುತ್ತದೆ. ಚಳಿಗಾಲದಲ್ಲಿ ಜೀನ್ಸ್ ಜೊತೆಗೆ ಲೆದರ್‌ನ ಜಾಕೇಟ್‌ಗೆ ಬೇಡಿಕೆ ಇರುತ್ತದೆ. ಚಳಿಗಾಲದಲ್ಲಿ ಕಂದು ಬಣ್ಣ ಹಾಗೂ ದೊಡ್ಡ ದೊಡ್ಡ ಪ್ರಿಂಟ್‌ಗಳು ಚಾಲ್ತಿಯಲ್ಲಿರುತ್ತವೆ. ಶೋಲ್ಡರ್ ಪ್ಯಾಡ್ಸ್ ಪ್ರತಿಯೊಂದು ಬಗೆಯ ಔಟ್‌ಫಿಟ್ಸ್ ನಲ್ಲಿ ಉಪಯೋಗವಾಗುವ ಕಾರಣದಿಂದ ಚಾಲ್ತಿಯಲ್ಲಿರುತ್ತವೆ. ಕುರ್ತಾದಲ್ಲೂ ಕೂಡ. ಸಿಂಗಲ್ ಶೋಲ್ಡರ್ ಡ್ರೆಸೆಸ್‌ನಿಂದ ಹಿಡಿದು ಟಾಪ್ಸ್ ಹಾಗೂ ಬಿಕಿನಿ ತನಕ ಎಸಿಮೆಟ್ರಿಕ್ ಶೋಲ್ಡರ್ ಲೈನ್ಸ್ ನಲ್ಲೂ ಚಾಲ್ತಿಯಲ್ಲಿರುತ್ತವೆ.
ಡಿಸೈನರ್ ಜ್ಯೋತಿ ಅವರ ಪ್ರಕಾರ, ಪ್ರೆಟ್‌ನ ಟೆಂಡ್ ಮುಂದಿನ ದಶಕದವರೆಗೂ ಹಾಗೆಯೇ ಇರುತ್ತದೆ. ಪ್ರೆಟ್ ಲೈನ್‌ನ್ನು ಯುವತಿಯರು ಅಷ್ಟೇ ಅಲ್ಲ, ಉದ್ಯೋಗಸ್ಥ ಮಹಿಳೆಯರು ಕೂಡ ಬಹಳ ಇಷ್ಟಪಡುತ್ತಾರೆ. ಏಕೆಂದರೆ ಇವುಗಳಲ್ಲಿ ವೇರೆಬಿಲಿಟಿ ಇರುತ್ತದೆ ಮತ್ತು ಇವು ಅಷ್ಟೊಂದು ದುಬಾರಿಯೂ ಆಗಿರುವುದಿಲ್ಲ.
ಮಿಕ್ಸ್ ಅಂಡ್ ಮ್ಯಾಚ್ ಟ್ರೆಂಡ್ ಫ್ಯೂಷನ್
ಕಾಲ ಮುಗಿಯುತ್ತಾ ಹೊರಟಿದೆ. ಆದರೆ ಮಿಕ್ಸ್ ಅಂಡ್ ಮ್ಯಾಚ್‌ನ ಟ್ರೆಂಡ್ ಮಾತ್ರ ಬರಲಿರುವ ವರ್ಷಗಳಲ್ಲಿ ಎಂದೂ ಮುಗಿಯದ್ದು. ಏಕೆಂದರೆ ಈ ಒಂದೇ ತೆರನಾದ ಡ್ರೆಸ್ ಜೊತೆಗೆ ಬಹಳಷ್ಟು ಬಗೆಯ ಪ್ರಯೋಗಗಳನ್ನು ಮಾಡಬಹುದು. ಕುರ್ತಾ ಜೊತೆಗೆ ಪ್ರಿಂಟೆಡ್ ಲೆಗಿಂಗ್ ಅಥವಾ ಫ್ಯಾನ್ಸಿ ಪ್ಯಾಂಟ್ ಕೂಡ ಧರಿಸಬಹುದು. ಪ್ರಿಂಟೆಡ್ ಸಿಲ್ಕ್ ಪಟಿಯಾಲಾ ಟಾಪ್ ಜೊತೆಗೆ ಇನ್ನು ಧರಿಸಬಹುದು. ವೆಸ್ಟರ್ನ್ ವೇರ್‌ನಲ್ಲಿ ನೆಟ್ ಫ್ರಾಕ್ ಡ್ರೆಸೆಸ್ ಚಾಲ್ತಿಯಲ್ಲಿ ಉಳಿಯಲಿವೆ. ಹದಿಹರೆಯದವರು ಇನ್ನು ವಿಶೇಷವಾಗಿ ಇಷ್ಟಪಡುತ್ತಿದ್ದಾರೆ. ಇವುಗಳ ಒಳಭಾಗದಲ್ಲಿ ಲೈನಿಂಗ್ ಹಾಕಲಾಗಿರುತ್ತದೆ ಹಾಗೂ ಲೈಟ್ ಶೇಡ್‌ಗಳಲ್ಲಿ ಹೆಚ್ಚು ಸುಂದರವಾಗಿ ಕಾಣುತ್ತವೆ.
ಫ್ಯಾಷನ್ ಗುರು ಮನೀಷ್ ಮಲ್ಹೋತ್ರಾ ಹೇಳುವುದೇನೆಂದರೆ, “ಸ್ಟೈಲ್ ಯಾವಾಗಲೂ ಇದ್ದೇ ಇರುತ್ತವೆ. ಅದು ಕ್ಲೀನ್ ಲೈನ್ಸ್, ಇಂಡಿಯನ್ ಕಲರ್ಸ್, ಹೆರಿಟೇಜ್, ಕ್ರಾಫ್ಟ್ ವುಮೆನ್ ಶಿಪ್ ಮತ್ತು ಸುಂದರ ಫ್ಯಾಬ್ರಿಕ್ ಇತ್ಯಾದಿ……”
ಟ್ರೆಡಿಷನಲ್ ಟಚ್ ಫ್ಯಾಷನ್
ಡಿಸೈನರ್ ವಿನುತಾ ಪ್ರಕಾರ, ಟ್ರೆಡಿಶನಲ್ ಡ್ರೆಸೆಸ್ ಬಗ್ಗೆ ಹೇಳಬೇಕೆಂದರೆ, ಸೀರೆಗಳಲ್ಲಿ ವೀಲ್ ಮಾಡುವ ಟ್ರೆಂಡ್ ಖಾಯಂ ಆಗಿ ಉಳಿಯಲಿದೆ. ಆದರೆ ಎಂಬೆಲಿಶ್‌ಮೆಂಟ್ ಅಂದರೆ ಅಲಂಕಾರ ಹೆಚ್ಚಾಗಿ ಕಂಡುಬರದು. ಆದರೆ ಬ್ಲೌಸ್ ಎಂಬ್ರಾಯಿಡರಿ ಚಾಲ್ತಿಯಲ್ಲಿರುತ್ತದೆ. ಅದರಿಂದ ಸೀರೆಗಳಿಗೆ ಹೆವಿ ಲುಕ್ ಸಿಗುತ್ತದೆ ಮತ್ತು ಅದನ್ನು ಪ್ರತಿಯೊಂದು ಬಗೆಯ ಸಮಾರಂಭಕ್ಕೂ ಧರಿಸಬಹುದಾಗಿದೆ.
ಈ ನೇಯ್ಗೆ ಮಾಡಿದ ಸೀರೆಗಳು ಪ್ರಖರ ಮತ್ತು ಸೌಮ್ಯ ಎರಡೂ ಬಗೆಯ ಫ್ಯಾಷನ್‌ನಲ್ಲಿ ಇರುತ್ತವೆ. ಕೆಂಪು ಹಸಿರು ಬಣ್ಣದ ಜೊತೆಗೆ ಬೇಜ್, ಬ್ಲ್ಕಾಕ್ ಮತ್ತು ವೈಟ್ ಅಂತೂ ಪ್ರತಿಯೊಂದು ಬಗೆಯ ಪೋಷಾಕಿನಲ್ಲೂ ಇರುತ್ತದೆ.
“ಡ್ರೆಸ್ ಯಾವುದೇ ಇರಲಿ, ಆದರೆ ಆ್ಯಕ್ಸೆಸರೀಸ್ ಮೇಲೆ ಹೆಚ್ಚು ಫೋಕಸ್ ಆಗಿರುತ್ತದೆ. ಮುಂಬರುವ ದಶಕಗಳಲ್ಲಿ ಜಾರ್ಜೆಟ್ ಕಾಟನ್, ಲೈಕ್ರಾ, ಶಿಫಾನ್ ಹಾಗೂ ಸಿಲ್ಕ್ ನ ಟ್ರೆಂಡ್ ಹಾಗೆಯೇ ಇರುತ್ತದೆ. ನ್ಯಾಚುರಲ್ ಕಾಟನ್, ಸಿಲ್ಕ್ ಆರ್ಗ್ಯಾನಿಕ್ ಲೈನ್ಸ್ ನ ಫ್ಯಾಷನ್ ಜೋರಾಗುತ್ತ ಹೋಗುತ್ತಿದೆ. ಗೋಟಾ ಎಂಬ್ರಾಯಿಡರಿಯ ಹೊರತಾಗಿ ಸಾಕಷ್ಟು ಹೊಸ ತಂತ್ರಜ್ಞಾನ ನೋಡಲು ಸಿಗಲಿದೆ. ಉದಾಹರಣೆಗೆ ಆ್ಯಪ್ಲಿಕ್ ವರ್ಕ್. ಡಿಜಿಟಲ್ ಪ್ರಿಂಟೆಡ್ ಸೀಕ್ವೆನ್ಸ್ ಟೆಕ್ಸ್ ಚರ್‌ನ ವಿಶಿಷ್ಟ ಲುಕ್ಸ್ ಒದಗಿಸಲು ವೆದರ್ ಸೀಕ್ವೆನ್ಸ್ ನ ಪ್ರಯೋಗ ಕೂಡ ಮಾಡಲಾಗುತ್ತದೆ.
ಆ್ಯಕ್ಸೆಸರೀಸ್ ಟ್ರೆಂಡ್
ಆ್ಯಕ್ಸೆಸರೀಸ್‌ಗಳು ಫ್ಯಾಷನ್ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿವೆ. ಈ ಕಾರಣದಿಂದಾಗಿ ಡ್ರೆಸ್‌ನ ಜೊತೆಗೆ ಮಿಕ್ಸ್ ಅಂಡ್ ಮ್ಯಾಚ್ ಆಗಿಯೂ ಧರಿಸಬಹುದು. ಇವು ಪ್ರತಿಯೊಂದು ನಿಟ್ಟಿನಲ್ಲೂ ಚಾಲ್ತಿಯಲ್ಲಿರುತ್ತವೆ. ಸ್ಕಾರ್ಫ್, ಸ್ಟೋಲ್, ಟೆಕ್ಸ್ ಚರ್ ಬ್ಯಾಂಗ್ಸ್, ಬ್ಯಾಂಡ್ಸ್ ಹಾಗೂ ಕ್ಲಿಪ್ ಯುವತಿಯರಲ್ಲಿ ಹೆಚ್ಚು ಜನಪ್ರಿಯವಾಗಿರುತ್ತವೆ. ಫ್ಯಾಷನ್ ಡಿಸೈನರ್ ವಾರಿಜಾ ಬಜಾಜ್ ಪ್ರಕಾರ, ಟ್ರೌಸರ್ ಜೊತೆ ಫಂಕಿ ಬೆಲ್ಟ್ ಹಾಗೂ ರಿಬ್ಬನ್ ಬೆಲ್ಟ್ ಚಾಲ್ತಿಯಲ್ಲಿರುತ್ತದೆ. ಸ್ಕಾರ್ಫ್ ಕೂಡ ಫ್ಯಾಷನ್‌ನ ಒಂದು ಭಾಗವಾಗಿರುತ್ತವೆ.
ಸನ್ ಗ್ಲಾಸ್ ಬಗ್ಗೆ ಹೇಳಬೇಕೆಂದರೆ, ರೆಟ್ರೊ ಲುಕ್ಸ್ ನ ಕಾರಣದಿಂದ ದೊಡ್ಡ ದೊಡ್ಡ ಸನ್ ಗ್ಲಾಸ್ ಟ್ರೆಂಡ್‌ಗೆ ಬಂದಿವೆ.
ಜ್ಯೂವೆಲರಿ ಟ್ರೆಂಡ್
ಬರಲಿರುವ ದಶಕದಲ್ಲಿ ಜ್ಯೂವೆಲರಿ ಸ್ಟೇಟ್‌ಮೆಂಟ್‌ನ ಹಾಗೆ ಫ್ಯಾಷನ್‌ನ್ನು ಗ್ಲಾಮರಸ್ ಮಾಡುತ್ತದೆ. ಅದು ನೆಕ್ಲೇಸ್ ಆಗಿರಬಹುದು ಅಥವಾ ಬ್ಯಾಂಗ್ಸ್ ಇಲ್ಲಿ ಕಾಕ್ ಟೇಲರಿಂಗ್, ಎಥ್ನಿಕ್ ಬೀಡಿಂಗ್ ಅಥವಾ ಸ್ಟೋನ್ಸ್. ಇದರಿಂದಾಗಿ ಜ್ಯೂವೆಲರಿ ಬಿಗ್ ಹಾಗೂ ಬೋಲ್ಡ್ ಆಗಿರುತ್ತವೆ. ಥೀಮ್ ನಲ್ಲಿ ಜಾಮೆಟ್ರಿಕ್ ಶೇಪ್‌ನ್ನು ಇಷ್ಟಪಡಲಾಗುತ್ತದೆ ಮತ್ತು ಕಲರ್ ರಿಚ್ ಆಗಿರುತ್ತದೆ. ಕೇವಲ ಟ್ರೆಂಡ್‌ನಲ್ಲಿ ಈ ವ್ಯತ್ಯಾಸ ಆಗುತ್ತದೆ. ಅದರ ಜೊತೆಗೆ ಧರಿಸುವ ಪೇಷಾಕುಗಳ ಬಗ್ಗೆ ವಿಶೇಷ ಗಮನ ಕೊಟ್ಟರೆ ವ್ಯತ್ಯಾಸ ಅರಿವಿಗೆ ಬರುತ್ತದೆ.
– ಸುಮತಿ ಪ್ರಸಾದ್