ಪೀರಿಯಡ್ಸ್ ಸಮಯ ತಿಂಗಳಿನ ಅತ್ಯಂತ ಕಠಿಣ ದಿನಗಳಾಗಿರುತ್ತವೆ. ಆಗ ಶರೀರದಿಂದ ವಿಷಯುಕ್ತ ಪದಾರ್ಥಗಳು ಹೊರಬರುವುದರಿಂದ ಶರೀರದಲ್ಲಿ ಕೆಲವು ವಿಟಮಿನ್‌ಗಳು ಹಾಗೂ ಮಿನರಲ್ ಗಳ ಕೊರತೆಯುಂಟಾಗುತ್ತದೆ. ಅದರಿಂದಾಗಿ ಮಹಿಳೆಯರಲ್ಲಿ ಬಲಹೀನತೆ, ತಲೆ ಸುತ್ತುವುದು, ಹೊಟ್ಟೆ ಹಾಗೂ ಸೊಂಟದಲ್ಲಿ ನೋವು, ಕೈಕಾಲು ಜೋಮು ಹಿಡಿಯುವುದು, ಸ್ತನಗಳಲ್ಲಿ ಊತ, ಅಸಿಡಿಟಿ, ಮುಖದಲ್ಲಿ ಮೊಡವೆಗಳು ಮತ್ತು ಸುಸ್ತು ಅನುಭವವಾಗುತ್ತದೆ. ಕೆಲವು ಮಹಿಳೆಯರಲ್ಲಿ ಒತ್ತಡ, ಸಿಡಿಮಿಡಿ ಹಾಗೂ ಕೋಪ ಉಂಟಾಗುತ್ತದೆ. ಅವರು ಬಹಳ ಬೇಗ ಭಾವುಕರಾಗುತ್ತಾರೆ. ಅದನ್ನು ಪ್ರಿಮೆನ್‌ಸ್ಟ್ರುಯ್ ಟೆನ್ಶನ್(ಪಿಎಂಟಿ) ಎಂದು ಕರೆಯುತ್ತಾರೆ. ಟೀನೇಜರ್ಸ್‌ಗೆ ಪೀರಿಯಡ್ಸ್ ಸಾಕಷ್ಟು ಪೇನ್ ಫುಲ್ ಆಗಿುತ್ತದೆ. ಅವರು ನೋವಿನಿಂದ ಪಾರಾಗಲು ಅನೇಕ ರೀತಿಯ ಔಷಧಗಳನ್ನು ಸೇವಿಸುತ್ತಾರೆ. ಅವು ಹಾನಿಕಾರಕ ಹೌದು. ಆದರೆ ಆಹಾರದ ಬಗ್ಗೆ ಗಮನಕೊಟ್ಟು ಅಂದರೆ ಡಯೆಟ್‌ನ್ನು ಪೀರಿಯಡ್ಸ್ ಫ್ರೆಂಡ್ಲಿ ಮಾಡಿಕೊಂಡು ಆ ದಿನಗಳನ್ನು ಆರಾಮದಾಯಕವನ್ನಾಗಿ ಮಾಡಿಕೊಳ್ಳಬಹುದು.
ನ್ಯೂಟ್ರಿಕೇರ್ ಪ್ರೋಗ್ರಾಂನ ಸೀನಿಯರ್ ಡಯೆಟೀಶಿಯನ್ ಪ್ರಗತಿ ಮತ್ತು ಡಯೆಟ್ ಅಂಡ್ ವೆಲ್‌ನೆಸ್ ಕ್ಲಿನಿಕ್‌ನ ಡಯೆಟೀಶಿಯನ್‌ಸೋನಿಯಾ ಪೀರಿಯಡ್ಸ್ ದಿನಗಳಲ್ಲೂ, ನೀವು ಹ್ಯಾಪಿ ಹ್ಯಾಪಿಯಾಗಿರಲು ಯಾವ ರೀತಿಯ ಪ್ಲ್ಯಾನ್ ಮಾಡಬೇಕೆಂದು ತಿಳಿಸುತ್ತಾರೆ.
ಇವುಗಳನ್ನು ಪಥ್ಯದಲ್ಲಿಡಿ
ವೈಟ್ ಬ್ರೆಡ್, ಪಾಸ್ತಾ ಮತ್ತು ಸಕ್ಕರೆ ತಿನ್ನಬೇಡಿ.
ಬಿಸ್ಕೆಟ್, ಕೇಕ್, ಫ್ರೆಂಚ್ ಫ್ರೈ ಇತ್ಯಾದಿ ಬೇಕ್ಡ್ ಪದಾರ್ಥಗಳನ್ನು ತಿನ್ನಬೇಡಿ.
ಪೀರಿಯಡ್ಸ್ ದಿನಗಳಲ್ಲಿ ಎಂದೂ ಖಾಲಿ ಹೊಟ್ಟೆಯಲ್ಲಿ ಇರಬೇಡಿ. ಏಕೆಂದರೆ ಖಾಲಿ ಹೊಟ್ಟೆಯಲ್ಲಿದ್ದರೆ ಇನ್ನೂ ಹೆಚ್ಚು ಸಿಡಿಮಿಡಿಯುಂಟಾಗುತ್ತದೆ.
ಸಾಫ್ಟ್ ಡ್ರಿಂಕ್ಸ್ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ ಎಂದು ಕೆಲವು ಮಹಿಳೆಯರು ತಿಳಿದಿದ್ದಾರೆ. ಅದು ತಪ್ಪು.
ಹೆಚ್ಚು ಉಪ್ಪು ಹಾಗೂ ಸಕ್ಕರೆ ಸೇವಿಸಬೇಡಿ. ಅವು ಪೀರಿಯಡ್ಸ್ ಗೆ ಮೊದಲು ಹಾಗೂ ಪೀರಿಯಡ್ಸ್ ನಂತರ ನೋವು ಹೆಚ್ಚಿಸುತ್ತವೆ.
ಕೆಫೀನ್ ಸೇವಿಸಬೇಡಿ.
ಒಂದು ವೇಳೆ ಪೀರಿಯಡ್ಸ್ ಬರಲು ತೊಂದರೆಯಾಗಿದ್ದರೆ ಈ ಕೆಳಗಿನವನ್ನು ಸೇವಿಸಿ.
ಹೆಚ್ಚು ಚಾಕಲೇಟ್ ಪರಂಗಿ ಹಣ್ಣು ತಿನ್ನಿ. ಪೀರಿಯಡ್ಸ್ ಸುಲಭವಾಗುತ್ತದೆ.
ಒಂದು ವೇಳೆ ಪೀರಿಯಡ್ಸ್ ತಡವಾಗುತ್ತಿದ್ದರೆ ಬೆಲ್ಲ ತಿನ್ನಿ.
ಹಾಟ್ ವಾಟರ್ ಬ್ಯಾಗಿನಿಂದ ಹೊಟ್ಟೆಯ ಕೆಳ ಭಾಗಕ್ಕೆ ಸ್ವಲ್ಪ ಹೊತ್ತು ಬಿಸಿ ಕಾವು ಕೊಡಿ. ಹೀಗೆ ಮಾಡಿದರೆ ಪೀರಿಯಡ್ಸ್ ನ ದಿನಗಳಲ್ಲಿ ಆರಾಮವಾಗಿರುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಂಪನ್ನು ಸೇವಿಸಿದರೆ ಅದರಿಂದಲೂ ಪೀರಿಯಡ್ಸ್ ಸರಿಯಾದ ಸಮಯದಲ್ಲಿ, ಸುಲಭವಾಗಿ ಆಗುತ್ತದೆ. ಸೋಂಪನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿ.
ಗಮನದಲ್ಲಿಡಿ
ಒಮ್ಮೆಗೇ ಹೆಚ್ಚು ತಿನ್ನುವ ಬದಲು ಸಣ್ಣ ಪ್ರಮಾಣದಲ್ಲಿ 5-6 ಬಾರಿ ತಿನ್ನಿ. ಅದರಿಂದ ನಿಮಗೆ ಎನರ್ಜಿ ಸಿಗುತ್ತದೆ ಹಾಗೂ ನೀವು ಫಿಟ್ ಆಗಿರುತ್ತೀರಿ.
ಹೆಚ್ಚು ನೀರು ಕುಡಿಯಿರಿ. ಅದರಿಂದ ಶರೀರದಲ್ಲಿ ನೀರಿನ ಪ್ರಮಾಣ ಸಾಕಷ್ಟು ಇರುತ್ತದೆ. ಶರೀರ ಡೀಹೈಡ್ರೇಟ್ ಆಗುವುದಿಲ್ಲ. ಸಾಮಾನ್ಯವಾಗಿ ಮಹಿಳೆಯರು ಪೀರಿಯಡ್ಸ್ ದಿನಗಳಲ್ಲಿ ಪದೇಪದೇ ಬಾಥ್ ರೂಮಿಗೆ ಹೋಗಬೇಕಾಗುತ್ತದೆಂಬ ಭಯಕ್ಕೆ ಕಡಿಮೆ ನೀರು ಕುಡಿಯುತ್ತಾರೆ. ಅದು ತಪ್ಪು.
7-8 ಗಂಟೆಗಳ ಕಾಲ ಒಳ್ಳೆಯ ನಿದ್ರೆ ಮಾಡಿ.
ನಿಮಗಿಷ್ಟವಾದ ವಸ್ತುಗಳ ಬಗ್ಗೆ ಮನಸ್ಸು ಕೊಡಿ ಹಾಗೂ ಸಂತೋಷವಾಗಿರಿ.
ಇತರ ಎಚ್ಚರಿಕೆಗಳು
ಪೀರಿಯಡ್ಸ್ ದಿನಗಳಲ್ಲಿ ಆಹಾರವಲ್ಲದೆ ಸ್ವಚ್ಛತೆಯ ಕಡೆಗೂ ಗಮನ ಕೊಡುವುದು ಬಹಳ ಅಗತ್ಯ. ಏಕೆಂದರೆ ಯಾವುದೇ ರೀತಿಯ ಬ್ಯಾಕ್ಟೀರಿಯ್ ಇನ್‌ಫೆಕ್ಷನ್ ಆಗಬಾರದು. ದಿನಕ್ಕೆ ಕನಿಷ್ಠ 3 ಬಾರಿ ಅಗತ್ಯವಾಗಿ ಪ್ಯಾಡ್ ಬದಲಾಯಿಸಿ.
ಭಾರವಾದ ವಸ್ತುಗಳನ್ನು ಎತ್ತಬೇಡಿ.
ಹೆಚ್ಚು ಓಡಾಡುವ ಬದಲು ವಿಶ್ರಾಂತಿ ಪಡೆಯಿರಿ. ಪೀರಿಯಡ್ಸ್ ಸಮಯದಲ್ಲಿ ವೈಟ್ ಕಲರ್ ಬಟ್ಟೆ ಧರಿಸಬೇಡಿ.
ಪ್ಯಾಡ್ ತೆಗೆದುಕೊಂಡು ಹೋಗಿ. ಸ್ಟ್ರೆಸ್ ಹಾಗೂ ಧಾವಂತದ ಕಾರಣದಿಂದಾಗಿ ಪೀರಿಯಡ್ಸ್ ಸಮಯಕ್ಕೆ ಮುಂಚೆಯೇ ಆಗಿಬಿಡುತ್ತದೆ. ಆದ್ದರಿಂದ ನಿಮ್ಮೊಂದಿಗೆ ಹೆಚ್ಚುವರಿ ಪ್ಯಾಡ್‌ಗಳನ್ನು ಅಗತ್ಯವಾಗಿ ಒಯ್ಯಿರಿ.
ಅಕಸ್ಮಾತ್ ನೋವು ಹೆಚ್ಚಾಗಿದ್ದರೆ ಅದನ್ನು ಅಲಕ್ಷಿಸಬೇಡಿ. ಕೂಡಲೇ ವೈದ್ಯರಿಂದ ಚೆಕಪ್ ಮಾಡಿಸಿ.
ಏನನ್ನು ತಿನ್ನಬೇಕು?
ಡಯೆಟ್‌ನಲ್ಲಿ ಫೈಬರ್ ಫುಡ್ ಸೇರಿಸುವುದು ಬಹಳ ಅಗತ್ಯ. ಏಕೆಂದರೆ ಇದು ಶರೀರದಲ್ಲಿ ನೀರಿನ ಕೊರತೆಯನ್ನು ಪೂರೈಸುತ್ತದೆ. ನುಚ್ಚು, ಬಾದಾಮಿ, ಕಾಳು, ಕಿತ್ತಳೆಹಣ್ಣು, ಸೌತೆಕಾಯಿ, ಜೋಳ, ಕ್ಯಾರೆಟ್, ಆಲೂಗಡ್ಡೆ ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿ. ಇವು ಶರೀರದಲ್ಲಿ ಹಾರ್ಬೋಹೈಡ್ರೇಟ್, ಮಿನರಲ್ಸ್ ಮತ್ತು ವಿಟಮಿನ್‌ಗಳನ್ನು ಪೂರೈಸುತ್ತವೆ.
ಕ್ಯಾಲ್ಶಿಯಂಯುಕ್ತ ಆಹಾರ ತೆಗೆದುಕೊಳ್ಳಿ. ಕ್ಯಾಲ್ಶಿಯಂ ನರ್ವ್ಸ್ ಸಿಸ್ಟಂನ್ನು ಸರಿಯಾಗಿಡುತ್ತದೆ. ಜೊತೆಗೆ ಶರೀರದಲ್ಲಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಒಬ್ಬ ಮಹಿಳೆಯ ಶರೀರದಲ್ಲಿ ದಿನಕ್ಕೆ 1200 ಎಂ.ಜಿ. ಕ್ಯಾಲ್ಶಿಯಂ ಪೂರೈಕೆಯಾಗಬೇಕು.
ಹಾಲು ಕುಡಿಯುವುದರಿಂದ ಕ್ಯಾಲ್ಶಿಯಂ ಪೂರೈಕೆಯಾಗುತ್ತದೆಂದು ಮಹಿಳೆಯರಿಗೆ ಅನ್ನಿಸುತ್ತದೆ. ಆದರೆ ಬರೀ ಹಾಲು ಕುಡಿಯುವುದರಿಂದ ಶರೀರಕ್ಕೆ ಸಾಕಷ್ಟು ಕ್ಯಾಲ್ಶಿಯಂ ಪೂರೈಕೆಯಾಗುವುದಿಲ್ಲ. ಒಂದು ದಿನಕ್ಕೆ 20 ಕಪ್ ಹಾಲು ಕುಡಿಯುವುದರಿಂದ ಶರೀರದಲ್ಲಿ 1,200 ಎಂ.ಜಿ. ಕ್ಯಾಲ್ಶಿಯಂ ಸಿಗುತ್ತದೆ. ಆದರೆ ಅಷ್ಟು ಹಾಲು ಕುಡಿಯಲು ಆಗುವುದಿಲ್ಲ. ಹೀಗಾಗಿ ಡಯೆಟ್‌ನಲ್ಲಿ ಪನೀರ್, ಹಾಲು, ಮೊಸರು, ಬ್ರೋಕ್ಲಿ, ಬೀನ್ಸ್, ಬಾದಾಮಿ, ಹಸಿರು ಸೊಪ್ಪು, ತರಕಾರಿಗಳನ್ನು ಸೇರಿಸಿಕೊಳ್ಳಿ. ಇವೆಲ್ಲ ಮೂಳೆಗಳನ್ನು ಸದೃಢಗೊಳಿಸುತ್ತವೆ ಹಾಗೂ ಶರೀರಕ್ಕೆ ಎನರ್ಜಿ ಕೊಡುತ್ತವೆ.
ಐರನ್ ಸೇವಿಸಿ. ಏಕೆಂದರೆ ಪೀರಿಯಡ್ಸ್ ಸಂದರ್ಭದಲ್ಲಿ ಮಹಿಳೆಯರ ಶರೀರದಿಂದ ಸರಾಸರಿ 12 ಕಪ್ ರಕ್ತ ಹೊರಬರುತ್ತದೆ. ರಕ್ತದಲ್ಲಿ ಕಬ್ಬಿಣದ ಕೊರತೆಯಿಂದ ತಲೆ ನೋವು, ವಾಂತಿ, ವಾಕರಿಕೆ, ತಲೆ ತಿರುಗುವುದು ಇತ್ಯಾದಿ ತೊಂದರೆಗಳಾಗುತ್ತವೆ. ಆದ್ದರಿಂದ ಐರನ್ ಪೂರೈಕೆಗಾಗಿ ಪಾಲಕ್, ಕುಂಬಳ ಬೀಜ, ಬೀನ್ಸ್, ರೆಡ್ ಮೀಟ್ ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿ. ಇವು ರಕ್ತದಲ್ಲಿ ಐರನ್ ಪ್ರಮಾಣ ಹೆಚ್ಚಿಸುತ್ತವೆ. ಅದರಿಂದ ಅನಿಮಿಯಾ ಉಂಟಾಗುವ ಅಪಾಯ ಕಡಿಮೆಯಾಗುತ್ತದೆ.
ಆಹಾರದಲ್ಲಿ ಪ್ರೋಟೀನ್ ತೆಗೆದುಕೊಳ್ಳಿ. ಪ್ರೋಟೀನ್ ಪೀರಿಯಡ್ಸ್ ನಲ್ಲಿ ಶರೀರಕ್ಕೆ ಶಕ್ತಿ ಕೊಡುತ್ತದೆ. ಬೇಳೆ, ಹಾಲು, ಮೊಟ್ಟೆ, ಬೀನ್ಸ್, ಬಾದಾಮಿ, ಪನೀರ್‌ನಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ.
ವಿಟಮಿನ್ಸ್ ತೆಗೆದುಕೊಳ್ಳಲು ಮರೆಯದಿರಿ. ವಿಟಮಿನ್ `ಸಿ’ ಇರುವ ಆಹಾರ ಸೇವಿಸಿ. ನಿಂಬೆಹಣ್ಣು, ಹಸಿಮೆಣಸಿನಕಾಯಿ, ಮೊಳಕೆ ಕಟ್ಟಿದ ಕಾಳುಗಳನ್ನು ಸೇವಿಸಿ. ಪಿಎಂಎಸ್‌ನ್ನು ಕಡಿಮೆಗೊಳಿಸಲು ವಿಟಮಿನ್ `ಇ’ ಸೇವಿಸಿ.
ವಿಟಮಿನ್ `ಬಿ’ ಮೂಡನ್ನು ಸರಿಯಾಗಿಡುತ್ತದೆ. ಇದು ಆಲೂಗಡ್ಡೆ, ಬಾಳೆಹಣ್ಣು, ನುಚ್ಚು ಇತ್ಯಾದಿಗಳಲ್ಲಿ ಇರುತ್ತದೆ. ಹೆಚ್ಚಿನ ಜನ ಆಲೂಗಡ್ಡೆ ಮತ್ತು ಬಾಳೆಹಣ್ಣನ್ನು ಕೊಬ್ಬಿನ ಆಹಾರವೆಂದು ತಿಳಿದು ತಿನ್ನುವುದಿಲ್ಲ. ಆದರೆ ಅವು ವಿಟಮಿನ್ `ಬಿ’ಯ ಉತ್ತಮ ಸ್ರೋತವಾಗಿದ್ದು ಮೂಳೆಗಳನ್ನು ಗಟ್ಟಿಗೊಳಿಸುತ್ತವೆ. ವಿಟಮಿನ್ `ಸಿ’ ಮತ್ತು ಝಿಂಕ್ ಮಹಿಳೆಯರ ರಿಪ್ರೊಡಕ್ಟಿವ್ ಸಿಸ್ಟಂ ಸರಿಪಡಿಸುತ್ತದೆ. ಕುಂಬಳದ ಬೀಜಗಳಲ್ಲಿ ಝಿಂಕ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ.
ದಿನ 1 ಚಿಕ್ಕ ತುಂಡು ಚಾಕಲೇಟ್‌ನ್ನು ಅಗತ್ಯವಾಗಿ ತಿನ್ನಿ. ಚಾಕಲೇಟ್ ಶರೀರದಲ್ಲಿ ಸಿರೋಟೋನಿನ್ ಹಾರ್ಮೋನ್‌ನ್ನು ಹೆಚ್ಚಿಸುತ್ತದೆ. ಅದರಿಂದ ಮೂಡ್ ಚೆನ್ನಾಗಿರುತ್ತದೆ.
ಆಹಾರದಲ್ಲಿ ಮೆಗ್ನೀಶಿಯಂನ್ನು ಖಂಡಿತಾ ಸೇರಿಸಿಕೊಳ್ಳಿ. ಇದು ನಿಮ್ಮ ಆಹಾರದಲ್ಲಿ ದಿನ 360 ಎಂ.ಜಿ. ಇರಬೇಕು. ಪೀರಿಯಡ್ಸ್ ಶುರುವಾಗುವ 2 ದಿನ ಮುಂಚೆ ಅವನ್ನು ತೆಗೆದುಕೊಳ್ಳಬೇಕು.
ಪೀರಿಯಡ್ಸ್ ಸಂದರ್ಭದಲ್ಲಿ ಗರ್ಭಾಶಯ ಮುದುರಿಕೊಳ್ಳುತ್ತದೆ. ಅದರಿಂದಾಗಿ ಎಳೆತ, ನೋವಿನ ಜೊತೆಗೆ ತಲೆ ತಿರುಗುವಿಕೆಯೂ ಇರುತ್ತದೆ. ಹೀಗಾಗಿ ಆ ಸಂರ್ಭದಲ್ಲಿ ಮೀನಿನ ಆಹಾರ ಸೇವಿಸಿ.