ಜಾಗೀರ್ದಾರ್*
ರಂಗಸಂಪದ ತಂಡದಿಂದ “ಶರ್ಮಿಷ್ಠೆ “ಎಂಬ ನಾಟಕ ವೀಕ್ಷಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಸಿದ್ಧಾರಾಮಯ್ಯ ನವರಿಗೂ, ರಂಗ ಪ್ರೇಮಿಗಳಿಗೂ, ಪ್ರೇಕ್ಷಕ ಸಹೃದಯಿಗಳಿಗೂ, ನಾಟಕದ ಯಶಸ್ಸಿಗೆ ಶ್ರಮಿಸಿದ ರಂಗ ತಂಡದ ಎಲ್ಲಾ ನನ್ನ ಮಿತ್ರರಿಗೂ, ನಿರ್ದೇಶಕ ಶ್ರೀ ಚಿದಂಬರ ರಾವ್ ಜಂಬೆ ಯವರಿಗೂ ಮತ್ತು ನಾಟಕ ಕರ್ತೃ ಶ್ರೀ ಬೇಲೂರು ರಘು ನಂದನ ರವರಿಗೂ ಇಂದಿನ ನಾಟಕಕ್ಕೆ ಹೆಚ್ಚುವರಿಯಾಗಿ ಬಂದು
ನಿಂತು ತಂಡದ ಕೆಲಸಕ್ಕೆ ಕೈ ಜೋಡಿಸಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ನನ್ನ ಸಹೃದಯ ಸಪ್ರೇಮ ನಮನಗಳು ಎಂದು ಖ್ಯಾತ ನಟಿ ಉಮಾಶ್ರೀ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರಂಗಶಂಕರದಲ್ಲಿ ಶರ್ಮಿಷ್ಠೆ ನಾಟಕವನ್ನು ನೋಡಿ ಮೆಚ್ಚಿ ಕೊಂಡಾಡಿದ್ದಾರೆ ಉಮಾಶ್ರೀ ಆಪ್ತರು ಹಾಗೂ ರಂಗಭೂಮಿ ಗೆಳೆಯರು ಆಗಿರುವ ಸುಂದರ್ ರಾಜ್ ಪ್ರಮೀಳಾ ಜೊಷಾಯ್ ದಂಪತಿ ನಾಟಕ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಉಮಾಶ್ರೀಯನ್ನು ಸ್ಟೇಜ್ ಮೇಲೆ ನೋಡೋದೇ ಅದ್ಭುತ. ಅಲ್ಲಿಂದಲೇ ಕೈ ಬೀಸಿ ಮಾತನಾಡಿದ ಉಮಾಶ್ರೀ ಆನಂತರ ಮೇಕಪ್ ರೂಮಿನಲ್ಲಿ ಭೇಟಿಯಾದ ಕ್ಷಣವನ್ನು ಪ್ರಮೀಳಾ ಜೊಷಾಯ್ ಹಂಚಿಕೊಂಡಿದ್ದಾರೆ.