ಬಾಲಿವುಡ್​ ಸೂಪರ್ ಸ್ಟಾರ್ ಶಾರುಖ್​ ಖಾನ್, ವಿಕ್ರಾಂತ್ ಮ್ಯಾಸಿ ಹಾಗೂ ರಾಣಿ ಮುಖರ್ಜಿ ಅವರಿಗೆ 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಹಾಗೂ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು.

ಶಾರೂಖ್ ಖಾನ್ ಅವರ ಜವಾನ್ ಹಾಗೂ ವಿಕ್ರಾಂತ್ ಮ್ಯಾಸಿ ಅವರ 12th ಫೇಲ್ ಸಿನಿಮಾದಲ್ಲಿ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರು ಶ್ರೀಮತಿ ಚಟರ್ಜಿ vs ನಾರ್ವೆ ಸಿನಿಮಾದಲ್ಲಿ ಪವರ್​ಫುಲ್ ಆಗಿ ಕಾಣಿಸಿಕೊಂಡಿದ್ದನ್ನು ಪರಿಗಣಿಸಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

ಬಾಲಿವುಡ್​ ಸೂಪರ್ ಸ್ಟಾರ್ ಶಾರುಖ್ ಖಾನ್ ಕಳೆದ ಮೂರು ದಶಕಗಳಿಂದ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಅವರ ಜವಾನ್ ಸಿನಿಮಾದ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಒಲಿದಿದೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 1 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣ ಕಲೆಕ್ಷನ್ ಮಾಡಿತ್ತು.  

ವಿಕ್ರಾಂತ್ ಮ್ಯಾಸೆ ಅವರು ನಿಜ ಜೀವನದಲ್ಲಿ ನಡೆದ ಕಥೆಗೆ ಜೀವ ತುಂಬಿದ್ದರು. 12th ಫೇಲ್ ಸಿನಿಮಾ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನದ ಸತ್ಯ ಕಥೆ. ವಿಕ್ರಾಂತ್ ಮ್ಯಾಸೆ ತಮ್ಮ ಅಮೋಘ್ನ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದರು. ಈ ಸಿನಿಮಾಕ್ಕೆ ಕೇವಲ 20 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 69.64 ಕೋಟಿ ರೂ. ಬಾಚಿಕೊಂಡಿತ್ತು.

ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ರಾಣಿ ಮುಖರ್ಜಿ ಅವರು ನಿಜ ಜೀವನದ ಕಥೆ ಶ್ರೀಮತಿ ಚಟರ್ಜಿ vs ನಾರ್ವೆ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದರು. ಇದು 2011ರಲ್ಲಿ ನಾರ್ವೇಜಿಯನ್ ಅಧಿಕಾರಿಗಳು, ಭಾರತೀಯ ವಲಸೆ ದಂಪತಿಗಳಾದ ಸಾಗರಿಕಾ ಚಕ್ರವರ್ತಿ ಮತ್ತು ಅನುರೂಪ ಭಟ್ಟಾಚಾರ್ಯ ಅವರ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಇವರ ನಿಜ ಜೀವನಾಧಾರಿತ ಕಥೆಯಾಗಿದೆ.ಭಾರತೀಯ ಚಿತ್ರರಂಗಕ್ಕೆ ನೀಡುವ ಅಮೂಲ್ಯ ಕೊಡುಗೆ ಗುರುತಿಸಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವಿಸಲಾಯಿತು.

ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಪದ್ಮಭೂಷಣವನ್ನು ಮೋಹನ್ ಲಾಲ್ ಪಡೆದಿದ್ದಾರೆ. ಅವರಿಗೆ 2023ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಪ್ರಭ ಶಸ್ತಿ ಸ್ವೀಕರಿಸಿ ಮಾತನಾಡಿದ ಮೋಹನ್​ಲಾಲ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ತೆಗೆದುಕೊಂಡ ನನಗೆ ಜವಾಬ್ದಾರಿ ಹೆಚ್ಚಾಗಿದೆ. ಈ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗಕ್ಕೆ ಅರ್ಪಿಸುತ್ತೇನೆ ಎಂದು ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ