ಹೊಸ ವರ್ಷದ ಸಂಭ್ರಮಾಚರಣೆಯ ಪಾರ್ಟಿಯಲ್ಲಿ ಕಣ್ಣು ಕೋರೈಸುವ ದೀಪಗಳ ಕಾಂತಿಯ ನಡುವೆ ಏನೋ ಒಂದಿಷ್ಟು ಡ್ಯಾನ್ಸ್ ಮಾಡಿ, ಹಾಡಿ ಕುಣಿದು ಹೊಸ ವರ್ಷನ್ನು ಸ್ವಾಗತಿಸಿದರೆ ಮುಗಿಯಿತು ಎಂದು ಭಾವಿಸದಿರಿ. ನಿಮ್ಮ ಆಪ್ತ ಸಂಗಾತಿ ನಿಮ್ಮೊಂದಿಗೆ ಜೀವನವಿಡೀ ಕಳೆಯಬೇಕಾದವರು, ಈ ವರ್ಷವನ್ನು ಮರೆಯದೆ ನೆನಪಿರಿಸಿಕೊಳ್ಳುವಂತೆ ಕಿರುಕಾಣಿಕೆಗಳನ್ನು ನೀಡಿ ಅವರ ಹೃದಯ ಗೆದ್ದುಕೊಳ್ಳಿ. ಇದಕ್ಕಾಗಿ ಕೆಲವು ಸಲಹೆಗಳು :
ಪರ್ಸನಲೈಸ್ಡ್ ಕೋಸ್ಟರ್ ಯಾ ಮಗ್ : ನಿಮ್ಮಿಬ್ಬರಿಗೂ ಮೆಚ್ಚುಗೆಯಾಗುವ ಹೃದಯದಾಕಾರದ ಒಂದು ಕಾಫಿ ಮಗ್ ಖರೀದಿಸಿ. ಅದರ ಮೇಲೆ ನೂರಾರು ಪುಟ್ಟ ಕೆಂಪು ಹೃದಯಗಳ ಚಿತ್ತಾರ ಬರುವಂತೆ ಅಥವಾ ನಿಮ್ಮ ಮೆಚ್ಚಿನ ಪ್ರೇಮ ಸಂದೇಶ (ಲವ್ ಕೋಟ್) ಬಿಡಿಸಿರಿ. ಜೊತೆಗೆ ನಿಮ್ಮ ಪುಟ್ಟ ಫೋಟೋ ಕೂಡ ಮೂಡಿಸಿದ್ದರೆ ಇನ್ನೂ ಸೊಗಸು. ಪ್ರತಿ ದಿನ ಕಾಫಿ ಸೇವಿಸುವಾಗಲೂ ನಿಮ್ಮ ಫೋಟೋ ನೋಡುತ್ತಾ ರೊಮ್ಟಾಂಟಿಕ್ ಆಗಲು ಒಂದು ಸುವರ್ಣಾವಕಾಶ!
ಪರ್ಸನಲೈಸ್ಡ್ ವ್ಯಾಲೆಟ್ : ಒಂದು ಹೊಚ್ಚ ಹೊಸ ಲೆದರ್ ವ್ಯಾಲೆಟ್ ಖರೀದಿಸಿ, ಅದರ ಮೇಲೆ ನಿಮ್ಮ ಸಂಗಾತಿಯ ಹೆಸರು ಅಥವಾ ಮೆಚ್ಚಿನ ಮೆಸೇಜ್ ಮೂಡಿಬರುವಂತೆ ಮಾಡಿ. ಅದು ಆತನ ಅಮೂಲ್ಯ ನಿಧಿಯೇ ಆಗಿಬಿಡುತ್ತದೆ.
ನೀವು ಅವರಿಗೆ ಒಂದು ಪ್ಲ್ಯಾನರ್ ಯಾ ಡೇರಿ ಗಿಫ್ಟ್ ಮಾಡುವಂತಿದ್ದರೆ, ಅದರಲ್ಲಿ ಪ್ರತಿ ತಿಂಗಳ ಮೊದಲ ಪುಟದಲ್ಲಿ ಏನಾದರೂ ಪ್ರೇಮಮಯ ಮೆಸೇಜ್ ಪ್ರಕಟಗೊಳ್ಳುವಂತೆ ನೋಡಿಕೊಳ್ಳಿ.
ಆತನಿಗೆ ಖಯಾಲಿ ಇದ್ದರೆ, ಒಂದು ವೈನ್ ಯಾ ಶಾಂಪೇನ್ ಬಾಟಲ್ ನೀಡಿ. ಅದರ ಕುತ್ತಿಗೆಯಲ್ಲಿ ಒಂದು ರೆಡ್ ರಿಬ್ಬನ್ ಕಟ್ಟಿ, ನಿಮ್ಮ ಲವ್ ಮೆಸೇಜ್ ಎನ್‌ಗ್ರೇವ್ ಮಾಡಿ.
ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ : ನೀವು ಒಂದು ಐಪಾಡ್ ಅಥವಾ ಡಿಜಿಟಲ್ ಕ್ಯಾಮೆರಾ ಕೊಡಬೇಕೆಂದಿದ್ದರೆ, ಅದು ಅತಿ ಉತ್ಕೃಷ್ಟ ಗುಣಮಟ್ಟದ್ದಾಗಿರಲಿ. ಐಪಾಡ್‌ನಲ್ಲಿ ಧಾರಾಳವಾಗಿ ಮೆಮೋರಿ ಇರುವಂಥದ್ದನ್ನೇ ಆರಿಸಿ. ಆಗ ಅದಕ್ಕೆ ಬೇಕು ಬೇಕಾದಷ್ಟು ಹಾಡುಗಳು, ವಿಡಿಯೋ ದೃಶ್ಯಗಳು, ಆತನ ಇಷ್ಟದ ಗೇಮ್ಸ್ ಇತ್ಯಾದಿ ಭರ್ತಿ ಮಾಡಿ ಕೊಡಿ. ಕ್ಯಾಮೆರಾ ಹೈ ರೆಸಲ್ಯೂಷನ್‌ಹೊಂದಿದ್ದು ಉತ್ತಮ ಗುಣಮಟ್ಟದ ಇಮೇಜ್ ಕೊಡುವಂಥದ್ದಿರಲಿ.
ಶೇವಿಂಗ್ ಸೆಟ್, ಡಿಯೋ, ಪರ್ಫ್ಯೂಂ, ಕಾಸ್ಮೆಟಿಕ್ಸ್ ತುಂಬಿದ ಗ್ರೂಮಿಂಗ್ ಕಿಟ್ ನೀಡಿ. ಆತ ಅದನ್ನು ಬಳಸತೊಡಗಿದಂತೆ ಎಷ್ಟು ಸ್ಮಾರ್ಟ್ ಆಗುತ್ತಾನೆಂದು ಒಂದು ರೊಮ್ಯಾಂಟಿಕ್ ನೋಟ್ ಬರೆಯಿರಿ. ಪ್ರತಿ ದಿನ ಅದನ್ನು ಬಳಸುವಾಗ ಆತನ ಮುಖದಲ್ಲಿ ಮಂದಹಾಸ ಮಿನುಗದಿದ್ದರೆ ಕೇಳಿ.
ಒಂದು ಮಲ್ಟಿ ಪರ್ಪಸ್ ಹೆಡ್ ಫೋನ್ ಆರಿಸಿ. ಅದರಲ್ಲಿ ಸ್ಪೀಡೋಮೀಟರ್, ಸ್ಟಾಪ್ ವಾಚ್, ಹಾರ್ಟ್‌ರೇಟ್ ಮಾನೀಟರ್, ಮಲ್ಟಿಪ್ಲ ಟಾಸ್ಕ್ ಕಂಟ್ರೋಲ್ ಇತ್ಯಾದಿಗಳಿರಲಿ. ಇದು ಆತನಿಗೆ ಗ್ರೇಟ್ ಗಿಫ್ಟ್ ಆಗಲಿದೆ.
ಯಾವುದೇ ಬಗೆಯ ಉಡುಗೆ ವಸ್ತ್ರ, ಆ್ಯಕ್ಸೆಸರೀಸ್ ಕೊಳ್ಳುವುದಿದ್ದರೆ ನಿಮ್ಮೊಂದಿಗೆ ಆತನನ್ನು ಖಂಡಿತಾ ಕರೆದೊಯ್ಯಿರಿ. ಒಂದು ಗ್ರೇಸ್‌ಫುಲ್ ಟೀಶರ್ಟ್, ರೇಬಾನ್ ಸನ್‌ಗ್ಲಾಸಸ್, ಡಿಸೈನರ್ ವಾಚ್, ಚಿಂದಿ ಜೀನ್ಸ್, ಬ್ಯಾಗಿ ಪ್ಯಾಂಟ್ಸ್, ರೀಬಾಕ್ ಶೂಸ್…. ಹೀಗೆ ಯಾವುದಾದರೂ ಸರಿ, ನೀವು ಆತನನ್ನು ಎಷ್ಟು ಹಚ್ಚಿಕೊಂಡಿದ್ದೀರಿ ಎಂದು ತೋರಿಸಿಕೊಡಿ.
ಒಂದು ಸುಂದರ ಹೂಗುಚ್ಛ, ಬೊಕೆ, ಸ್ವಾದಿಷ್ಟ ಕೇಕ್ ಹಾಗೂ ಅದರಲ್ಲಿ ನಿಮ್ಮ ಕ್ಯೂಟ್ ಲವ್ ನೋಟ್ ಆತನಿಗೆಂದೂ ಇಷ್ಟವೇ!
ಅದರಲ್ಲಿ ಅವರಿಗಿಷ್ಟವಾದ ಫ್ಲೇವರ್ ಇರುವಂತೆ ಗಮನಿಸಿಕೊಳ್ಳಿ.
ಚಾಕಲೇಟ್‌ಗಿಂತ ಬೇರೆ ಉತ್ತಮ ಉಡುಗೊರೆ ಬೇಕೇ? ಆತನಿಗಿಷ್ಟವಾಗುವ ಗಿಫ್ಟ್ ಪ್ಯಾಕ್ ಆರಿಸಿ, ಉತ್ತಮ ಸಂದೇಶದೊಂದಿಗೆ ಅವನ ಹೃದಯ ಗೆದ್ದುಕೊಳ್ಳಿ.
ಮೇಲಿನ ಯಾವುದೇ ಉಡುಗೊರೆ ನಿಮ್ಮಿಬ್ಬರ ಬಾಂಧವ್ಯ ಮಧುರವಾಗಿಸಲು ಒಂದು ಸುವರ್ಣ ಸೇತುವೆ ಆಗಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಇನ್ನೇಕೆ ತಡ? ಟ್ರೈ ಮಾಡಿ ನೋಡಿ…. ಹ್ಯಾಪಿ ನ್ಯೂ ಇಯರ್!
– ಸ್ಮಿತಾ ಸುಹಾಸ್