ಮದುವೆಗೆ ಮುಂಚಿನಿಂದಲೂ ಎಚ್‌.ಆರ್‌. ಪರ್ಸನ್‌ ಆಗಿ ಕೆರಿಯರ್‌ ರೂಪಿಸಿಕೊಂಡು, ಹಲವಾರು ಎಂ.ಎನ್‌.ಸಿ. ಕಂಪನಿಗಳಲ್ಲಿ  ಪ್ರಮುಖ ಹುದ್ದೆಯಲ್ಲಿದ್ದು, ಕುಟುಂಬದ ಜವಾಬ್ದಾರಿಯನ್ನೂ ಅಷ್ಟೇ ಯಶಸ್ವಿಯಾಗಿ, ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತಾ, ತುಂಬು ಕುಟುಂಬದ ಆದರ್ಶ ಗೃಹಿಣಿಯಾಗಿರು ಎಂ.ಬಿ.ಎ. ಪದವೀಧರೆ ಬೆಂಗಳೂರಿನ ಅನಂತಲಕ್ಷ್ಮಿ ರಾಘವನ್‌, ಇಲ್ಲಿ ತಮ್ಮ 16ರ ಹರೆಯದ, ನ್ಯಾಷನಲ್ ಪಬ್ಲಿಕ್‌ ಸ್ಕೂಲ್‌ನಲ್ಲಿ 11ನೇ ತರಗತಿಯ ವಿಜ್ಞಾನದ ವಿದ್ಯಾರ್ಥಿಯಾಗಿ ಕಲಿಯುತ್ತಿರುವ ತಮ್ಮ ಮಗ ಅನಿರುದ್ಧ ರಾಘವನ್‌ ಬಗ್ಗೆ ಅವರ ವಾತ್ಸಲ್ಯಪೂರ್ಣ ಅನುಬಂಧ ಹಾಗೂ ಅವನ ವ್ಯಕ್ತಿತ್ವ ವಿಕಾಸದಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳೋಣವೇ.....?

ನಿಮ್ಮ ಮತ್ತು ನಿಮ್ಮ ಮಗನ ಬಾಂಧವ್ಯದ ಕುರಿತು ಹೇಳಿ.

ಏನೆಂದು ಹೇಳಲಿ.....? ನಿಜಕ್ಕೂ ನಮ್ಮ ಬಾಂಧವ್ಯ ತುಂಬಾ ಸ್ಪೆಷಲ್. ಮೊದಲಿನಿಂದಲೂ ತುಂಟತನ ರೂಢಿಸಿಕೊಂಡಿದ್ದ ಅವನಿಗೆ ಈಗಲೂ ನನ್ನೊಂದಿಗೆ ಅದೇ ಫ್ರೆಂಡ್‌ಶಿಪ್‌, ಮಸ್ತಿ ಎಲ್ಲ ಇದೆ. ಅದೇ ಸಮಯದಲ್ಲಿ ಅವನಿಗೆ ನನ್ನಲ್ಲಿ ಅಪಾರ ನಂಬಿಕೆ, ಶ್ರದ್ಧೆ, ಗೌರವಾದರಗಳೂ ತುಂಬಿವೆ. ಸದಾ ನನ್ನ ಹರ್ಷಭರಿತ ಮುಖ ನೋಡಿಯೇ ಅವನು ಶಾಲೆಗೆ ಹೊರಡುವುದು, ಯಾವುದೇ ಕೆಲಸ ಕೈಗೊಳ್ಳುವುದು. ಯಾವುದೇ ಸಂದರ್ಭದಲ್ಲಿ ನನ್ನ ಕಣ್ಣಲ್ಲಿ ಒಂದು ಹನಿ ನೀರು ಕಂಡರೂ ಬಹಳ ಕರಗಿಹೋಗುತ್ತಾನೆ. ತನ್ನ ಓದು, ಕಲಿಕೆಯಲ್ಲಿ ಬಹಳ ಉತ್ಸಾಹಿ. ಆಟೋಟ, ಪಠ್ಯೇತರ ಚಟುವಟಿಕೆಗಳಲ್ಲಿ, ವಾಲಂಟಿಯರ್‌ ಆಗಿ ಶಾಲೆಯ ಕೆಲಸಗಳಲ್ಲಿ ತೊಡಗಿಕೊಳ್ಳುವುದರಲ್ಲಿ ತುಂಬಾ ಹುಮ್ಮಸ್ಸು. ಅಪಾರ್ಟ್‌ಮೆಂಟ್‌ನಲ್ಲಿ ಎಲ್ಲರ ನಡುವೆ ಬಹಳ ಅಚ್ಚುಮೆಚ್ಚು. ಅವನ ಬಗ್ಗೆ ಅಕ್ಕಪಕ್ಕದವರು ತುಂಬು ಮನಸ್ಸಿನಿಂದ ಮೆಚ್ಚುಗೆಯ ಮಾತನಾಡಿದಾಗ ನಾನು ಅವನಿಗೆ ನೀಡಿದ ಸಂಸ್ಕಾರ ಸಾರ್ಥಕ ಎನಿಸುತ್ತದೆ.

ನಿಮ್ಮ ಮಗನ ಜೊತೆ ಯಾವುದಾದರೊಂದು ಮರೆಯಾಗದ ಸನ್ನಿವೇಶದ ಕುರಿತು ಹಂಚಿಕೊಳ್ಳಲು ಬಯಸುವಿರಾ?

ಅವನ ತಂದೆ ಖಾಸಗಿ ಏರ್‌ಟ್ರಾವೆಲ್ಸ್ ‌ನ ಸ್ವಂತ ಉದ್ದಿಮೆ ನಡೆಸುವ ಸದಾ ಬಿಝಿಯಾಗಿರುವ ಉದ್ಯಮಿ. ಹೀಗಾಗಿ ಅವರಿಂದ ಆಟೋಟ, ಡ್ರೈವಿಂಗ್‌ ಇತ್ಯಾದಿ ವಿಷಯಗಳ ಮಾರ್ಗದರ್ಶನ ಹಂಚಿಕೊಂಡು, ಹಿರಿಯರ ಸಲಹೆಯಂತೆ ತನ್ನ ನಿರ್ಧಾರ ಕೈಗೊಳ್ಳುತ್ತಾನೆ. ಒಂದು ಮುಖ್ಯ ವಿಷಯ ನಿಜಕ್ಕೂ ಮರೆಯಲಾಗದು. ಒಮ್ಮೆ ಅವನಿಗೆ ವೈರಲ್ ಫೀವರ್‌ ಇತ್ತು. 2 ದಿನ ಶಾಲೆಗೆ ಹೋಗದೆ ವಿಶ್ರಾಂತಿ ಪಡೆದಿದ್ದ. ಹೈಸ್ಕೂಲ್ ಓದು ನಮ್ಮ ನೆರೆಮನೆಯ ಹುಡುಗಿ ಮೇಲಿನ ಫ್ಲೋರ್‌ನಿಂದ ಇಳಿದು ಬರುತ್ತಿದ್ದಾಗ ಮೆಟ್ಟಿಲು ಜಾರಿ ಧೊಪ್ಪೆಂದು ಬಿದ್ದು, ಹಣೆಗೆ ಪೆಟ್ಟು ತಗುಲಿಸಿಕೊಂಡು ಪ್ರಜ್ಞೆ ಕಳೆದುಕೊಂಡಳು. ಹಾಲ್‌ನಲ್ಲೇ ಓದಿಕೊಳ್ಳುತ್ತಿದ್ದ ಅವನು ತಕ್ಷಣ ಧಾವಿಸಿ ಹೇಗೋ ಕಷ್ಟಪಟ್ಟು ಆ ಹುಡುಗಿಯನ್ನು ಎತ್ತಿಕೊಂಡು ಬಂದು ಸೋಫಾದಲ್ಲಿ ಮಲಗಿಸಿ, ತಲೆಗೆ ನೀರು ತಟ್ಟಿ ಶುಶ್ರೂಷೆ ಮಾಡಿ, ತಾನೇ ಡ್ರೈವ್ ‌ಮಾಡಿಕೊಂಡು ಹತ್ತಿರದ ನರ್ಸಿಂಗ್‌ ಹೋಮಿಗೆ ಕರೆದುಕೊಂಡು ಹೋಗಿ ಸೇರಿಸಿದ. ಅಲ್ಲಿಗೆ ಧಾವಿಸಿದ ಅವನ ಹೆತ್ತವರು ಇವನ ಆದರ್ಶ ಸೇವಾಭಾವದ ಬಗ್ಗೆ ಕೃತಜ್ಞತೆಯ ಮಾತು ಹೇಳಿದಾಗ ಮನಸ್ಸು ತುಂಬಿ ಬಂತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ