ಮೊದಲಿನಿಂದಲೂ ಉದ್ಯೊಗಸ್ಥ ವನಿತೆಯಾಗಿ, ಹ್ಯೂಮನ್‌ರಿಸೋರ್ಸ್‌ನಲ್ಲಿ ಸ್ನಾತಕೋತ್ತರ ಪದವೀಧರೆಯಾದ, ಪ್ರಸ್ತುತ ಚೆನ್ನೈನಲ್ಲಿ ವಾಸವಾಗಿರುವ ಅರುಣಾ ರಾವ್‌, ಇಲ್ಲಿ 13ರ ಹರೆಯದ 8ನೇ ತರಗತಿಯಲ್ಲಿ ಕಲಿಯುತ್ತಿರುವ ತಮ್ಮ ಮಗ ರೋಹನ್‌ಆದಿತ್ಯನ ಬಗ್ಗೆ, ಅವನ ವ್ಯಕ್ತಿತ್ವ ವಿಕಾಸದಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿ ತಿಳಿದುಕೊಳ್ಳೋಣವೇ.....?

ನಿಮ್ಮ ಮತ್ತು ನಿಮ್ಮ ಮಗನ ಬಾಂಧ್ಯದ ಕುರಿತು ಹೇಳಿ.

ತಾಯಿ ಮತ್ತು ಮಗನ ಬಾಂಧವ್ಯ ಅಂದ್ರೆ ನಿಜಕ್ಕೂ ವೆರಿ ಫ್ರೆಂಡ್ಲಿ. ನಮ್ಮದು ಒಟ್ಟು ಕುಟುಂಬ. ಮದುವೆಯಾದ ನಂತರ ನಾನು ಹೈದರಾಬಾದ್‌ನಲ್ಲಿ ಆರ್‌ಪಿಜಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೆ. ನಂತರ ರೋಹನ್‌ ಹುಟ್ಟಿದ 1 ವರ್ಷದ ನಂತರ ಮಗನ ಲಾಲನೆ ಪಾಲನೆಗಾಗಿಯೇ ನಾನು ಕೆಲಸಕ್ಕೆ ರಾಜೀನಾಮೆ ನೀಡಿ ತುಂಬು ಕುಟುಂಬದ ಗೃಹಿಣಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೀನಿ. ನನ್ನ 2ನೇ ಮಗನಿಗೀಗ 8 ವರ್ಷ, ಬಹಳ ತಂಟ. ರೋಹನ್‌ ಮೊದಲಿನಿಂದಲೂ ಗುಣದಲ್ಲಿ ಬಹಳ ಮೃದು ಸ್ವಭಾದವನು. ಯಾವತ್ತೂ ಯಾವುದಕ್ಕೂ ಹಠ ಮಾಡಿದವನಲ್ಲ, ಬಹಳ ವಿನಮ್ರ ಸ್ವಭಾವ. ಅಜ್ಜಿ ತಾತಾ, ಮನೆಯಲ್ಲಿ ನನ್ನ ಬಳಿ ಬಹಳ ಅಚ್ಚುಮೆಚ್ಚಿನವನಾಗಿ ನಡೆದುಕೊಳ್ಳುತ್ತಾನೆ. ಪತಿ ಚೆನ್ನೈನ ಒರ್ಯಾಕ್‌ ಸಾಫ್ಟ್ ವೇರ್‌ನಲ್ಲಿ ಸೇಲ್ಸ್ ಹೆಡ್‌ ಆಗಿದ್ದಾರೆ. ಸದಾ ಬಿಝಿ ಇರುತ್ತಾರಾದ್ದರಿಂದ ವಾರಾಂತ್ಯಗಳಲ್ಲಿ ಮಕ್ಕಳ ಬಳಿ ಹೆಚ್ಚು ಕಾಲ ಕಳೆಯುತ್ತಾರೆ. ಅವರಿಗೆ ಬೇಕಾದ ಆಟೋಟ, ಸೈಕ್ಲಿಂಗ್ ಇತ್ಯಾದಿಗಳಲ್ಲಿ ನೆರಾಗುತ್ತಾರೆ. ಮೊದಲಿನಿಂದಲೂ ರೋಹನ್‌ಗೆ ನಾನು ಮನೆಯಲ್ಲಿ, ಅವನ ವ್ಯಕ್ತಿತ್ವ ವಿಕಾಸಕ್ಕಾಗಿ ಎಲ್ಲಾ ವಿಧದಲ್ಲೂ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಅವನ ಆಟಪಾಠ, ಕಲಿಕೆ, ಪಠ್ಯೇತರ ಚಟುವಟಿಕೆಗಳು, ಹವ್ಯಾಸ, ಎಲ್ಲದರ ಕುರಿತಾಗಿಯೂ ಮುಕ್ತಾಗಿ ನನ್ನ ಬಳಿ ಚರ್ಚಸಿ ನಂತರ ನಿರ್ಧಾರ ತೆಗೆದಕೊಳ್ಳುತ್ತಾನೆ. ಓದಿನಲ್ಲಿ ಸದಾ ಟಾಪ್‌.

ನಿಮ್ಮ ಮಗನ ಜೊತೆ ಯಾವುದಾದರೂ ಒಂದು ಮರೆಯಾಗದ ಸನ್ನಿವೇಶದ ಕುರಿತು ಹಂಚಿಕೊಳ್ಳಲು ಬಯಸುವಿರಾ?

ಓ... ಬೇಕಾದಷ್ಟಿವೆ ಎನ್ನಬಹುದು. ನನ್ನ ಎರಡನೇ ಹೆರಿಗೆಯಲ್ಲಿ ನನಗೆ ನೋವು ಹೆಚ್ಚಾಗಿ ತಡೆಯಲಾರದೆ ಅಳತೊಡಗಿದಾಗ, ಅಮ್ಮ ಅಳಬೇಡ ಎಂದು ಎಷ್ಟೋ ಸಾಂತ್ವನದ ಮಾತುಗಳಾಡಿ ಧೈರ್ಯ ತುಂಬಿದ. ಆಗ ಇವರು ಮನೆಯಲ್ಲಿರಲಿಲ್ಲ. ಅಜ್ಜಿ ಜೊತೆ ಆಸ್ಪತ್ರೆಗೆ ಬಂದು, ಅಲ್ಲಿದ್ದ ದೇವರ ವಿಗ್ರಹದೆದುರು ಪ್ರಾರ್ಥನೆ ಮಾಡಿ, ಲೇಬರ್‌ ರೂಮಿಗೆ ಹೊರಡುತ್ತಿದ್ದ ನನ್ನ ಹಣೆಗೆ ವಿಭೂತಿ ಹಚ್ಚಿದ. ಅವನ ವಾತ್ಸಲ್ಯ, ಅಂತಃಕರಣಗಳಿಂದಲೇ ನನಗೆ ಸುಖ ಪ್ರಸವ ಆಯಿತೆನಿಸಿತು. ಹಾಗೆಯೇ ಇನ್ನೊಂದು ಘಟನೆ, ಅವನಿಗೆ ಹಾಡು ಎಂದರೆ ಬಹಳ ಇಷ್ಟ. ಹೊರಗೆ ಎಲ್ಲಾದರೂ ಪ್ರವಾಸಕ್ಕೆ ಬಂದಾಗ ಜೋರಾಗಿ ಹಾಡು ಹೇಳಿ ಎಲ್ಲರ ಪ್ರಶಂಸೆ, ಮೆಚ್ಚುಗೆ ಪಡೆಯುತ್ತಾನೆ. `ಅಮ್ಮ ನಾವೇಕೆ ಆರ್ಕೆಸ್ಟ್ರಾ ತರಹ ಮಾಡಬಾರದು?' ಎಂದು ನನಗೇ ಸಲಹೆ ನೀಡುತ್ತಾನೆ. ಅದನ್ನು ಹವ್ಯಾಸವಾಗಿ ಬೆಳೆಸಿಕೊಂಡು ಲಘು ಸಂಗೀತದಲ್ಲಿ ಪಳಗುತ್ತಿದ್ದಾನೆ. ಸ್ಟೋರ್ಟ್ಸ್ ಅವನ ಉಸಿರು. ಫುಟ್‌ಬಾಲ್‌, ಬ್ಯಾಸ್ಕೆಟ್‌ ಬಾಲ್‌ಜೊತೆಗೆ ಕ್ರಿಕೆಟ್‌ ಅವನಿಗೆ ಪ್ರಾಣ. ಚೆನ್ನೈ ಕ್ರಿಕೆಟ್‌ ಟೂರ್ನಮೆಂಟ್‌ ಅಂಡರ್‌ 14ನಲ್ಲಿ ಅವನು ಪ್ರಶಸ್ತಿ ಪಡೆದು ಬಂದ ಕ್ಷಣ ನಿಜಕ್ಕೂ ಮರೆಯಾಗದು! ಹಾಗೆಯೇ ದ. ಭಾರತದ ಮಟ್ಟದಲ್ಲಿ ಅಂತರ ಶಾಲಾ ಕ್ವಿಜ್‌ ಸ್ಪರ್ಧೆಗಳಲ್ಲಿ ವಿಜೇತನಾಗಿ ಬಂದಾಗಲೂ ಬಹಳ ಹೆಮ್ಮೆ  ಎನಿಸಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ