ಪ್ರೇಮಿಗಳು ಪರಸ್ಪರರಿಂದ ದೂರದಲ್ಲಿದ್ದರೆ ವ್ಯಾಲೆಂಟೈನ್‌ ಡೇನಂದು ನಿರಾಸೆ ಪಡಬೇಕೇ? ಖಂಡಿತ ಇಲ್ಲ. ಬಹಳ ದೂರದಲ್ಲಿದ್ದರೂ ಸಂಬಂಧಗಳಲ್ಲಿ ಕೊಂಚ ತಿಳಿವಳಿಕೆ, ಅಷ್ಟಿಷ್ಟು ಯೋಜನೆಯಿಂದ ವ್ಯಾಲೆಂಟೈನ್‌ ಡೇಯನ್ನು ಸಂಪೂರ್ಣ ಉತ್ಸಾಹದಿಂದ ಆಚರಿಸಬಹುದು. ಹೇಗೆಂದು ತಿಳಿಯೋಣ ಬನ್ನಿ.

ಫೋನ್‌ನಿಂದ ರೊಮ್ಯಾಂಟಿಕ್‌ ದಿನ ನಿಮ್ಮ ಪ್ರೇಮಿ ಅಥವಾ ಪ್ರೇಯಸಿಗೆ ಬೆಳಗ್ಗೆ `ಐ ಲವ್ ಯೂ' ಎಂದು ಕಾಲ್ ‌ಮಾಡಿ. ಅವರು ಆಶ್ಚರ್ಯಚಕಿತರಾಗುತ್ತಾರೆ. ನಿಮ್ಮ ಈ ಸಿಹಿಯಾದ ಫೋನ್‌ ಕಾಲ್ ‌ಅವರ ದಿನದ ಆರಂಭವನ್ನು ಸಿಹಿಯಾಗಿಸುತ್ತದೆ.

ಹೂ ಅಥವಾ ಗಿಫ್ಟ್ ಕಳಿಸಿಕೊಡಿ

ದೂರದಲ್ಲಿರುನ ನಿಮ್ಮನರಿಗೆ ಅನರಿಗಿಷ್ಟವಾದ ವಸ್ತುವನ್ನು ಬೇಕಾದ ದಿನದಂದು ಸಮಯಕ್ಕೆ ಸರಿಯಾಗಿ ಕಳಿಸಬಹುದು. ಆನ್‌ಲೈನ್‌ ಶಾಪಿಂಗ್‌ ಮೂಲಕ ನಿಮ್ಮ ಪ್ರೇಮಿ ಅಥವಾ ಪ್ರೇಯಸಿಗೆ ಕೆಂಪು ಗುಲಾಬಿ, ಅವರಿಗೆ ಇಷ್ಟವಾದ ಸೆಂಟ್‌, ಕೇಕ್‌ ಅಥವಾ ಬೇರಾವುದೇ ಉಡುಗೊರೆಯನ್ನು ಅವರ ಆಫೀಸ್‌ ಅಥವಾ ಬೇರೊಂದು ಊರಿನಲ್ಲಿರುವ ಅವರ ಮನೆ ವಿಳಾಸಕ್ಕೆ ಕಳಿಸಬಹುದು.

ಕೊಂಬೆಗಳು ಬಳುಕುತ್ತಿವೆ, ಹೂಗಳು ಗಾಳಿಯಿಂದ ತೊನೆದಾಡುತ್ತಿವೆ. ಸಂತಸದ ತೂಗುಯ್ಯಾಲೆಯಲ್ಲಿ ಪ್ರಕೃತಿ ತೂಗಾಡುತ್ತಿದೆ ಎಂಬಂತೆ ಒಟ್ಟಿನಲ್ಲಿ ನಿಮ್ಮ ಪ್ರೀತಿಯ ಉಡುಗೊರೆಯಿಂದ ಅವರ ಖುಷಿಗಾಗಿ ನೀವು ಹೊಸ ಹೊಸ ವಿಧಾನಗಳನ್ನೂ ಹುಡುಕುತ್ತೀರೆಂದು ಅವರಿಗೆ ತಿಳಿಯುತ್ತದೆ.

ಟೆಕ್ನಿಕಲ್ನಿಂದ ಅಂತರ ಅಳಿಸಿಹಾಕಿ

`ಕಾಯುತ್ತಾ ಕಾಯುತ್ತಾ ನಾನು ಬೇಸತ್ತು ಹೋದೆ. ಕೊನೆಗೂ ನೀನು ಬರಲೇ ಇಲ್ಲ,' ಎಂಬ ಸುಂದರ ಕವನವೊಂದಿದೆ. ಆದರೆ ಇಂದಿನ ಸನ್ನಿವೇಶದಲ್ಲಿ ಟೆಕ್ನಿಕಲ್ ಪ್ರತಿ ಅಂತರವನ್ನೂ ನಿವಾರಿಸಲು ವ್ಯವಸ್ಥೆ ಮಾಡಿದೆ. ಹೀಗಾಗಿಯೇ ಪ್ರಪಂಚವನ್ನು `ಗ್ಲೋಬಲ್ ವಿಲೇಜ್‌' ಎಂದು ಕರೆಯಲಾಗುತ್ತಿದೆ. ಹೀಗಿರುವಾಗ ನೀವು ಆಧುನಿಕ ಟೆಕ್ನಿಕಲ್‌ನ ಲಾಭ ಪಡೆಯಿರಿ ಮತ್ತು ನಿಮ್ಮ ಪ್ರಿಯರ ಸಾಮೀಪ್ಯ ವರ್ಚುಯಲಿ ಹೊಂದಿರಿ. ನಿಮಗೆ ಇಷ್ಟವಾದ ಡಿಶಿಸ್‌ ಉದಾರಣೆಗೆ ಇಟಾಲಿಯನ್‌, ಚೈನೀಸ್‌ ಅಥವಾ ಥಾಯ್ ಆಹಾರವನ್ನು ನೀವಿರುವ ಜಾಗಕ್ಕೆ ತರಿಸಿಕೊಳ್ಳಿ ಮತ್ತು ವೆಬ್‌ ಕ್ಯಾಮ್ ಅಥವಾ ಸ್ಕೈಪ್‌ ಮೂಲಕ ಒಟ್ಟಿಗೇ ಡಿನ್ನರ್‌ನ ಆನಂದ ಅನುಭವಿಸಿರಿ.

ಪ್ರೇಮಪತ್ರ

`ಪ್ರೇಮ' ಶಬ್ದದೊಂದಿಗೆ ಒಂದು ಶಬ್ದ ತಾನೇ ಸೇರಿಸಿಕೊಂಡಿದೆ, ಅದೇ ಪ್ರೇಮಪತ್ರ! ಕೈಗಳಿಂದ ಬರೆದ, ಭಾವನೆಗಳಿಂದ ತುಂಬಿದ ಪ್ರೇಮಪತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಅದು ಗ್ರೀಟಿಂಗ್‌ ಕಾರ್ಡ್‌ ಆಗಿರಬಹುದು. ಇಮೇಲ್ ‌ಮೂಲಕ ಕಳಿಸಿದ ಸಂದೇಶವಾಗಿರಬಹುದು ಅಥವಾ ಕಂಪ್ಯೂಟರ್‌ನಿಂದ ಮಾಡಿದ ಚಾಟಿಂಗ್‌ಗಳಾಗಿರಬಹುದು. ಈ ಕಂಪ್ಯೂಟರ್‌ ಯುಗ ನಮ್ಮನ್ನು ಪ್ರೇಮದ ಸುಂದರವಾದ ಅಲೆಗಳಿಂದ ದೂರಮಾಡಿಟ್ಟಿದೆ.

ಪ್ರೀತಿಯಿಂದ ಬರೆದ ಪ್ರೇಮಪತ್ರಗಳಲ್ಲಿರುವ ಭಾವನೆಗಳನ್ನು ಹೋಲಿಸಲು ಸಾಧ್ಯವಿಲ್ಲ. ನೀವು ನಿಮ್ಮ ಪ್ರೇಮಿಗೆ ನಿಮ್ಮ ಹೃದಯದ ಭಾವನೆಯ ಬಗ್ಗೆ ಒಂದು ಪ್ರೇಮಪತ್ರವನ್ನೇಕೆ ಬರೆಯಬಾರದು? ಅದೆಂತಹ ಮಾಧ್ಯಮವೆಂದರೆ ಅವರು ಅದನ್ನು ಸಂಭಾಳಿಸಿ ಇಟ್ಟುಕೊಳ್ಳುತ್ತಾರೆ ಮತ್ತು ಅವರ ಹೃದಯ ನಿಮ್ಮನ್ನು ನೆನೆದಾಗ ಈ ಪ್ರೇಮಪತ್ರವನ್ನು ಮತ್ತೊಮ್ಮೆ ಓದುತ್ತಾರೆ.

ಲವ್ ಕೊಲಾಜ್ ವಿನೂತನ ಐಡಿಯಾ

ಬೇರೆ ಬೇರೆ ಚಿತ್ರಗಳ ರಾಶಿಯನ್ನು ಸೊಟ್ಟಗೆ ವಕ್ರವಾಗಿ ಅಂಟಿಸಿ ಸುಂದರ ಕೊಲಾಜ್‌ ಮಾಡಬಹುದು. ಒಟ್ಟಿಗೆ ಕಳೆದ ಸುಂದರ ಕ್ಷಣಗಳ ನೆನಪುಗಳ ಚಿತ್ರಗಳ ಒಂದು ಸುಂದರ ಲವ್ ಕೊಲಾಜ್‌ ಮಾಡಿ. ಇದು ನಿಮ್ಮಿಬ್ಬರ ಸುವರ್ಣ ಕ್ಷಣಗಳನ್ನು ನೆನಪಿಗೆ ತರುತ್ತದೆಯಲ್ಲದೆ, ನಿಮ್ಮ ಪ್ರಿಯತಮ ಅಂತಹ ಅನುಪಮ ಉಡುಗೊರೆಯನ್ನು ಕಂಡು ನಿಮ್ಮನ್ನು ಪ್ರಶಂಸಿಸುತ್ತಾರೆ. ಇನ್ನೇಕೆ ತಡ? ಬಹಳ ದೂರದಲ್ಲಿದ್ದರೂ ಸಂಬಂಧಗಳಲ್ಲಿ ಅಂತರ ಬರದಿರಲಿ. ನೀವು ಸಹ ಮಿಕ್ಕೆಲ್ಲರಂತೆ ಪ್ರೀತಿಯಲ್ಲಿ ಬಂಧಿಗಳಾಗಿ ವ್ಯಾಯಲೆಂಟೈನ್‌ ಡೇ ಆಚರಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ