ನಿಮ್ಮನ್ನು ಡೇಟಿಂಗ್‌ಗೆ ಕರೆದೊಯ್ಯಲು ಯಾರೂ ಇಲ್ಲದಿದ್ದರೆ ನಿಮ್ಮೊಂದಿಗೇ ನೀವೇ ಡೇಟಿಂಗ್‌ ಮಾಡಿ. ನಿಮ್ಮ ವ್ಯಾಲೆಂಟೈನ್‌ನಿಂದ ನೀವು ನಿರೀಕ್ಷಿಸುವುದನ್ನು ನಿಮಗೇ ಮಾಡಿಕೊಳ್ಳಿ ವ್ಯಾಲೆಂಟೈನ್‌ ಡೇ ಹೂಗಳು, ಚಾಕಲೇಟ್‌ಗಳು, ಹೃದಯಗಳು ಮತ್ತು ಉಡುಗೊರೆಗಳನ್ನು ಕೊಡುವ ದಿನವೊಂದು ಮಾನ್ಯತೆ ನಡೆದಿದೆ. ಅದು ಪ್ರೀತಿಯನ್ನು ಆಚರಿಸುವುದಾಗಿದೆ. ಅದು ವರ್ಷದ ಅತ್ಯಂತ ರೊಮ್ಯಾಂಟಿಕ್‌ ದಿನವಾಗಿದ್ದು, ಕೆಲವರಿಗೆ ನಿರಾಶೆ ಉಂಟು ಮಾಡುತ್ತದೆ. ಒಂಟಿಯಾಗಿರುವವರಿಗೆ ಹಾಗೂ ಏನಾದರೊಂದು ಕಾರಣಕ್ಕಾಗಿ ತಮ್ಮ ಸಂಗಾತಿಯೊಂದಿಗೆ ಇರದವರಿಗೆ ಖಿನ್ನತೆ, ತಿರಸ್ಕಾರ ಹಾಗೂ ಒಂಟಿತನದ ಭಾವನೆಗಳು ಕಾಡುತ್ತವೆ. ಒಂಟಿ ಮಹಿಳೆಯರು ಅಥವಾ ಅವಿವಾಹಿತೆಯರು ಹಾರ್ಟ್‌ ಶೇಪ್‌ನ ಸಿಹಿ ಮಿಠಾಯಿಗಳು, ಸಂತೃಪ್ತ ದಂಪತಿಗಳು, ಹೂಗಳು ಇತ್ಯಾದಿ ವ್ಯಾಲೆಂಟೈನ್‌ ಡೇಯನ್ನು ಗುರುತಿಸುವ ವಸ್ತುಗಳನ್ನು ನೆನೆಸಿಕೊಂಡರೇನೇ ಸಂಕೋಚಪಟ್ಟುಕೊಳ್ಳುತ್ತಾರೆ.

ಆದರೆ, ವ್ಯಾಲೆಂಟೈನ್‌ ಡೇ ಜೋಡಿಗಳಿಗೆ ಮಾತ್ರ ಎಂದು ಯಾರು ಹೇಳಿದ್ದು? ಅದು ಪ್ರೀತಿಯ ಆಚರಣೆಯ ದಿನ. ಪ್ರೀತಿ ಜಾಗತಿಕವಾಗಿದೆ. ಅದು ನಮ್ಮೆಲ್ಲರಿಗೂ ಬೇಕು. ಏಕಾಂತವಾಗಿದ್ದರೆ ನಾವು ಒಬ್ಬರೇ ಎಂದೇನೂ ಅಲ್ಲ.

ಪಾಲ್ ಜೋಹಾನ್ಸ್ ಟಿಲಿಚ್‌ ಹೀಗೆ ಹೇಳುತ್ತಾರೆ, ಒಂಟಿತನ ಎಂಬ ಪದ ಒಂಟಿಯಾಗಿರುವುದರ ನೋವನ್ನು ವಿವರಿಸಲು ಬಳಸಲಾಗಿದೆ. ಹಾಗೆಯೇ `ಏಕಾಂತ' ಪದವನ್ನು ಒಂಟಿಯಾಗಿರುವುದನ್ನು ವೈಭವೀಕರಿಸಲು ಬಳಸಲಾಗುತ್ತದೆ. ನಾವು ಸಂಬಂಧ ಬೆಳೆಸಿರಲಿ, ಇಲ್ಲದಿರಲಿ ನಮ್ಮೊಂದಿಗೆ ಮಾತ್ರ ಕಳೆದ ಸಮಯ ಅಮೂಲ್ಯವಾಗಿರುತ್ತದೆ. ದಲೈ ಲಾಮಾ ಹೇಳುವಂತೆ, ``ನಿಮ್ಮನ್ನು ನೀವು ಪ್ರೀತಿಸದಿದ್ದರೆ ನೀವು ಬೇರೆಯವರನ್ನು ಪ್ರೀತಿಸಲು ಸಾಧ್ಯವಿಲ್ಲ. ನಿಮ್ಮ ಬಗ್ಗೆ ನಿಮಗೆ ಕರುಣೆ ಇಲ್ಲದಿದ್ದರೆ ನೀವು ಬೇರೆಯವರ ಬಗ್ಗೆ ಕರುಣೆ ಬೆಳೆಸಿಕೊಳ್ಳಲು ಸಾಧ್ಯವಿಲ್ಲ.''  ಆದ್ದರಿಂದ ಈ ಶುಭದಿನದಂದು ನಿಮ್ಮನ್ನು ಪ್ರೀತಿಸಿ. ನಂತರ ಎಲ್ಲ ಅಲ್ಲಿಂದ ಸುಂದರವಾಗಿ ಹರಿದುಬರುತ್ತವೆ. ಏಕಾಂತವನ್ನು ಆನಂದಿಸಿ. ಅದಕ್ಕೆ ನಾವು ಯತಿಗಳಾಗಲೀ, ಸನ್ಯಾಸಿಗಳಾಗಲೀ ಆಗಬೇಕಾಗಿಲ್ಲ. ನಾವು ನಾವಾಗಿದ್ದು ನಮ್ಮ ಅಸ್ತಿತ್ವ ಉಳಿಸಿಕೊಂಡರೆ ಸಾಕು. ದುರದೃಷ್ಟವಶಾತ್‌, ನಾವು ಬಹಳಷ್ಟು ಜನ ಏಕಾಂತವನ್ನು ಒಂಟಿತನ ಹಾಗೂ ಪ್ರತ್ಯೇಕವಾಗಿರುವುದು ಎಂದು ತಪ್ಪು ತಿಳಿದುಕೊಂಡಿದ್ದೇವೆ.

ಏಕಾಂತವೆಂದರೆ ನಾವು ಜೀವನವೆಲ್ಲಾ ಏಕಾಂಗಿಯಾಗಿದ್ದು ಸಮಾಜಕ್ಕೆ ವಿರುದ್ಧವಾಗಿರಬೇಕು ಎಂದೇನಲ್ಲ. ಬದಲಾಗಿ ನಮಗಾಗಿ ಕೊಂಚ ಸಮಯ ಮೀಸಲಿಡುವುದು. ಎಲ್ಲ ಸಮಯದಲ್ಲೂ ಬೇರೆಯವರೊಂದಿಗೆ ಇರಲೇಬೇಕೆಂದಿಲ್ಲ. ನಾವು ಒಂಟಿಯಾಗಿ ಹುಟ್ಟುತ್ತೇವೆ ಮತ್ತು ಒಂಟಿಯಾಗಿ ಸಾಯುತ್ತೇವೆ. ಹೀಗಾಗಿ ನಾವು ಎಲ್ಲ ಸಂದರ್ಭಗಳಲ್ಲೂ ನಾವೇ ನಮ್ಮ ಅತ್ಯುತ್ತಮ ಸಂಗಾತಿಗಳಾಗುತ್ತೇವೆ. ನಾವು ಬಯಸಿದರೆ ಮಾತ್ರ. ಏಕಾಂತದ ಬಗ್ಗೆ ಹೆನ್ರಿ ಡೇವಿಡ್‌ ತೋರಿಯೋ  ಹೀಗೆ ಹೇಳುತ್ತಾರೆ, ``ನಾನು ಏಕಾಂತದಂತಹ ಜೊತೆಗಾರನನ್ನು ಕಾಣಲೇ ಇಲ್ಲ. ನಾವು ವಿದೇಶಕ್ಕೆ ಹೊರಟಾಗ, ನಮ್ಮ ಚೇಂಬರ್‌ನಲ್ಲಿ ಇರುವುದಕ್ಕಿಂತಲೂ ಹೆಚ್ಚಾಗಿ ಒಂಟಿಯಾಗಿರುತ್ತೇವೆ.''

ಏಕಾಂತ ಅನಿವಾರ್ಯ. ಜನ ಆಗಾಗ್ಗೆ ಸ್ವಲ್ಪ ಸಮಯ ಅಥವಾ ಹೆಚ್ಚು ಸಮಯ ಏಕಾಂತ ಅನುಭವಿಸುತ್ತಾರೆ. ಈ ಪ್ರಪಂಚದಲ್ಲಿ ಸಂಬಂಧಗಳು ಕೆಲಕಾಲ ಮಾತ್ರ ನಿಲ್ಲುತ್ತವೆ ಎಂದು ಎಲ್ಲರಿಗೂ ಗೊತ್ತು. ನಾವೆಲ್ಲರೂ ಸ್ವಲ್ಪ ಕಾಲ ಯಾರಾದರೊಬ್ಬರ ಹೆಂಡತಿ, ತಾಯಿ, ಮಗು, ಗೆಳತಿ ಆಗಿರುತ್ತೇವೆ. ನಮಗೆ ನಮ್ಮೊಂದಿಗಿನ ಸಂಬಂಧ ಮಾತ್ರ ಶಾಶ್ವತವಾಗಿರುತ್ತದೆ. ಆದ್ದರಿಂದ ನಮ್ಮ ಭವ್ಯತೆಯನ್ನು ಕೊಂಡಾಡೋಣ. ನಮ್ಮ ಇರುವಿಕೆಯನ್ನು ಗೌರವಿಸಿ, ಪಾಲಿಸೋಣ. ನಮ್ಮನ್ನು ನಾವು ಪ್ರೀತಿಸುವುದನ್ನು ಆರಂಭಿಸಲು ವ್ಯಾಲೆಂಟೈನ್‌ ಡೇಗಿಂತ ಉತ್ತಮ ದಿನ ಯಾವುದಿದೆ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ