ವೋಟಿನ ಹೆಸರಿನಲ್ಲಿ ಇದೆಂತಹ ಪೆಟ್ಟು?

ಸಾಧು ಸಂತರ ಪ್ರವಚನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಜರಿರುತ್ತಾರೆ. ಪೂಜಾರಿಗಳು, ಪಾದ್ರಿಗಳು ಮತ್ತು ಮುಲ್ಲಾಗಳು ಧರ್ಮವೇ ಸರಿಯಾದ ಶಿಕ್ಷಣ ಕೊಡುತ್ತದೆ, ಒಳ್ಳೆಯ ವರ್ತನೆ ಕಲಿಸುತ್ತದೆ, ಶಾಂತಿ ತರುತ್ತದೆ ಎಂದೆಲ್ಲಾ ಹೇಳುತ್ತಾರೆ. ಆದರೆ ನಡೆಯುವುದೆಲ್ಲಾ ಅದಕ್ಕೆ ವಿರುದ್ಧವಾಗಿಯೇ! ಧರ್ಮದಿಂದಾಗಿ ಉಂಟಾಗುವಷ್ಟು ಕ್ಲೇಶ ಬೇರೆ ಇನ್ನಾದರಿಂದಲೂ ಆಗುವುದಿಲ್ಲ.

ಹೆಚ್ಚು ಸೀಟುಗಳನ್ನು ಗೆದ್ದ ನಂತರ ಸಂಪತ್ತನ್ನು ಎದುರಿಸಲು ನರೇಂದ್ರ ಮೋದಿ ಗಾಬರಿಯಾಗಿದ್ದಾರೆ. ಏಕೆಂದರೆ ತನ್ನನ್ನು ಸಾಧ್ವಿ ಎಂದು ಕರೆದುಕೊಳ್ಳುವ ಅವರ ಶಿಷ್ಯೆ ನಿರಂಜನ್‌ ಜ್ಯೋತಿ ಕಾವಿ ಉಡುಪು ಧರಿಸಿ ಭಜ್‌ಭಜ್‌ ಮಂಡಳಿ ವತಿಯಿಂದ ಉತ್ತರ ಪ್ರದೇಶದ ಒಂದು ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದು ಮಂತ್ರಿಯೂ ಆದರು. ಅವರು ಒಂದು ಚುನಾವಣಾ ಸಭೆಯಲ್ಲಿ ಅಸಭ್ಯ ಭಾಷೆಯನ್ನು ಉಪಯೋಗಿಸಿದರು. ಈ ಭಾಷೆಯಲ್ಲಿ  ಬೈಗುಳಗಳಿದ್ದವು, ಅಪಶಬ್ದಗಳಿದ್ದವು, ಇನ್ನೊಬ್ಬರನ್ನು ಕೀಳಾಗಿ ಕಾಣುವುದಿತ್ತು, ಧರ್ಮದ ಹೆಸರಿನಲ್ಲಿ  ಜನರನ್ನು ಪ್ರತ್ಯೇಕಿಸುವುದಾಗಿತ್ತು.

ಅವರು ದೆಹಲಿಯಲ್ಲಿ ಒಂದು ಚುನಾವಣಾ ಸಭೆಯಲ್ಲಿ ಮತದಾರರಿಗೆ ದೆಹಲಿಯಲ್ಲಿ ಮುಂದಿನ ವಿಧಾನಸಭೆ ರಾಮನ ಮಕ್ಕಳದು ಅಂದರೆ ರಾಮಭಕ್ತ ಭಾಜಪದರದ್ದೇ ಅಥವಾ ಹರಾಮಜಾದಾ ಅಂದರೆ ಅಕ್ರಮ ಸಂತಾನದರದ್ದೇ ನಿರ್ಧರಿಸಿ ಎಂದು ಹೇಳಿದರು. `ಹರಾಮಜಾದಾ’ ಶಬ್ದವನ್ನು ಕಾವಿಧಾರಿ ಹಿಂದೂಗಳ ಒಂದು ವರ್ಗದರು ಉಪಯೋಗಿಸುತ್ತಾರೆ. ಅದನ್ನು ಬರೆಯುವುದೂ ಅಪಮಾನಕಾರಿ ಎಂದು ತಿಳಿಯಲಾಗಿದೆ. ನಾವು ಹಿಂದೂಗಳು ಶತಮಾನಗಳಿಂದ ಯಾರ ಗುಲಾಮರಾಗಿದ್ದೆವೆಯೋ ಅವರಿಗೆ ಇಂದು ಬೈದು ಏನು ಸಾಧಿಸಬಹುದು? ಅದೇನೆಂದು ತಿಳಿಯದಿದ್ದರೂ ಈ ಪದ ಧರ್ಮಗಳ ನಡುವೆ ವೈಮನಸ್ಯ ಉಂಟು ಮಾಡುತ್ತದೆಯಲ್ಲದೆ ನಾಲಿಗೆಯ ಮೇಲೂ ನಲಿದಾಡುತ್ತಿರುತ್ತದೆ. ಜನ ಪರಸ್ಪರ ಇಂತಹ ಪದಗಳನ್ನು ಬಳಸುತ್ತಿರುತ್ತಾರೆ.

ಕಾವಿ ಉಡುಪು, ಕರಿ ನಿಲುವಂಗಿ ಅಥವಾ ಬಿಳಿ ಕುರ್ತಾ ಧರಿಸುವುದರಿಂದ ಜನರ ಕಪ್ಪು ಹೃದಯ ಪವಿತ್ರವಾಗುವುದಿಲ್ಲ. ಆದರೆ ನಮ್ಮ ಧರ್ಮಕ್ಕೆ ವೃತ್ತಿಪರ ಉಡುಪಿದೆ ಎಂದು ತಿಳಿಸುತ್ತದೆ. ಅದನ್ನು ಕಂಡು ಭಕ್ತರು ತಮ್ಮ ಕೈಗಳನ್ನು ತೆರೆದು ಸಾಯಲು, ಕೊಲ್ಲಲೂ ಕೂಡ ಸಿದ್ಧರಾಗುತ್ತಾರೆ. ಗುರುಮೀತ್‌ ರಾಮ್ ರಹೀಮ್ ಸಿಂಗ್‌, ರಾಮ್ ಪಾಲ್ ‌ಮತ್ತು ಆಸಾರಾಮ್ ಕೂಡ ಇವರುಗಳ ಸೋದರ ಸಂಬಂಧಿಗಳಂತೆಯೇ. ಜೊತೆಗೆ ಇರಾಕ್‌ನಲ್ಲಿ ಕೋಲಾಹಲ ಉಂಟುಮಾಡುತ್ತಿರುವ ಇಸ್ಲಾಮಿಕ್‌ ಸ್ಟೇಟ್‌ನ ಆತಂಕವಾದಿಗಳೂ ಅಷ್ಟೇ. ಇವರಿಗೆ ಧರ್ಮದ ಹೆಸರಿನಲ್ಲಿ ಲೂಟಿ ಮಾಡಲು ಜನರನ್ನು ಮತಿಭ್ರಷ್ಟರನ್ನಾಗಿ ಮಾಡಬೇಕಾಗಿದೆ.

ವಿರೋಧ ಪಕ್ಷದವರಿಗೆ ಭಾಜಪಾ ಮತ್ತು ನರೇಂದ್ರ ಮೋದಿಯವರನ್ನು ಹಣಿಯಲು ಅವಕಾಶ ಸಿಕ್ಕಿತು. ಹಿಂದೂ ಧರ್ಮದ ಪೊಳ್ಳುತನ ಬಯಲಾದ ನಂತರ ಇರುವ ಅವಕಾಶ ಸಿಕ್ಕಿದಾಗ ಹೆಚ್ಚು ಗದ್ದಲ ಮಾಡಿರುತ್ತಾರೆಯೇ? ಅದೇ ಸಂಸತ್ತಿನಲ್ಲಿಯೂ ನಡೆಯಿತು.

ಪ್ರಶ್ನೆ ಏನೆಂದರೆ ಇಂತಹ ಶಬ್ದ ಧರ್ಮದ ಹೆಸರಿನಲ್ಲಿ ನಾಲಿಗೆಯಲ್ಲಿ ಬರುವುದಾದರೂ ಏಕೆ? ಧರ್ಮದ ಹೆಸರಿನಲ್ಲಿ ಒಂದು ಸುಳ್ಳು ಕಾಲ್ಪನಿಕ ಶಕ್ತಿಯನ್ನು ಮಾರಲಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಮಾರುವವರು ಎಲ್ಲ ಬಗೆಯ ಲೋಕವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗುತ್ತಾರೆ.

ಶತಮಾನಗಳಿಂದಲೂ ಧರ್ಮದ ಹೆಸರಿನಲ್ಲಿ ರಾಜರುಗಳಿಗೆ ಇತರರ ಹತ್ಯೆಗಳನ್ನು ಮಾಡಲು ಪ್ರೇರೇಪಿಸಲಾಗಿದೆ. ತಮ್ಮ ಕಾಲ್ಪನಿಕ ಈಶ್ವರ ಅಥವಾ ಸ್ವರೂಪ, ಮಗ ಇತ್ಯಾದಿಗಳ ಭವನ, ಮಂಟಪ ಅಥವಾ ಸ್ಮಾರಕಗಳನ್ನು ನಿರ್ಮಿಸಲಾಯಿತು. ಒಂದು ವೇಳೆ ಇತರರು ವಿರೋಧಿಗಳು ಅಥವಾ ಪ್ರತಿಸ್ಪರ್ಧಿಗಳನ್ನು ಬೈಯದಿದ್ದರೆ ಭಕ್ತರಲ್ಲಿ ಜೋಶ್‌ ಉಂಟಾಗುವುದಿಲ್ಲ. ಸ್ವಯಂ ನರೇಂದ್ರ ಮೋದಿಯವರು 5ಕ್ಕೆ 25 ಎಂದು ಹೇಳಿ ಮತಗಳನ್ನು ಒಟ್ಟುಗೂಡಿಸಿದರು. ಇಂದಿರಾಗಾಂಧಿ ವಿದೇಶೀ ಕೈವಾಡ ಇದೆ ಎಂದು ಹೇಳಿ ಮತಗಳನ್ನು ಕೂಡಿಸುತ್ತಿದ್ದರು. ಲಾಲೂ ಪ್ರಸಾದ್‌ ಯಾದವ್ ಬರೀ ಮೋಸ, ವಂಚನೆ ಇರುವ ಕಡೆಯೇ ಓಡಾಡುತ್ತಾರೆ. ಮಾಯಾವತಿ ಸ್ಮಾರಕಗಳ ಹೆಸರಿನಲ್ಲಿ ಮಂದಿರಗಳನ್ನು ನಿರ್ಮಿಸಲು ಪ್ರಯತ್ನಿಸಿದರು.

ಇವರೆಲ್ಲರೂ ಆಗಾಗ್ಗೆ ವಿರೋಧಿಗಳನ್ನು ಉದ್ದೇಶಿಸಿ ನಿರಂಜನ್‌ ಜ್ಯೋತಿ ಉಪಯೋಗಿಸಿದ ಭಾಷೆಯಲ್ಲೇ ಸಂಬೋಧಿಸುತ್ತಾರೆ.  ಮನೆಗಳಲ್ಲಿ ಗಂಡ ಹೆಂಡತಿ ಆ ಭಾಷೆಯಲ್ಲಿ ಮಾತಾಡುತ್ತಾರೆ. ಅತ್ತಿಗೆಯರು, ನಾದಿನಿಯರು, ವಾರಗಿತ್ತಿಯರು, ಸೊಸೆಯಂದಿರು ಅಷ್ಟೇ ಅಲ್ಲ ಅಕ್ಕ ತಂಗಿಯರು, ಅಣ್ಣ ತಮ್ಮಂದಿರೂ ಇಂತಹ ಭಾಷೆಯನ್ನು ಪ್ರಯೋಗಿಸುತ್ತಿದ್ದಾರೆ.

ದಾರಿಹೋಕರಿಂದ ಹಿಡಿದು ವೇಶ್ಯಾ ಗೃಹ, ನೈಟ್‌ಕ್ಲಬ್‌ಗಳವರೆಗೆ ಈ ಭಾಷೆ ಉಪಯೋಗಿಸುದು ಸಾಮಾನ್ಯವಾಗಿದೆ. ಆದರೆ ಇದು ಗೆಳೆಯರಲ್ಲಿ ನಡೆಯುತ್ತದೆ. ಆದರೆ ತಿಳಿಯದೆ ಇಂತಹ ಭಾಷೆ ಪ್ರಯೋಗಿಸಿದರೆ ಕೋಲಾಹಲ ಉಂಟಾಗುತ್ತದೆ. ಮಹಿಳೆಯರು ನೆರೆಹೊರೆಯವರನ್ನು ಕುರಿತು ಈ ಭಾಷೆ ಬಳಸುತ್ತಾರೆ, ಆದರೆ ಮುಚ್ಚಿದ ಕೋಣೆಗಳಲ್ಲಿ. ಧಾರ್ಮಿಕ ನಾಯಕರಿಗೆ ಆ ಕಟ್ಟುಪಾಡಿಲ್ಲ. ಅವರು ಬಹಿರಂಗ ಸಭೆಗಳಲ್ಲಿ ಈ ಶಬ್ದಗಳನ್ನು ಬಳಸುತ್ತಾರೆ. ಏಕೆಂದರೆ ಅವರಿಗೆ ಸುರಕ್ಷತೆಯ ಗ್ಯಾರಂಟಿ ಇರುತ್ತದೆ. ಭಕ್ತರ ಗುಂಪು ಅವರಿಗೆ ರಾಮ್ ರಹೀಮ್, ರಾಮ್ ಪಾಲ್‌, ಭಂಡರಾರಂತಹವರ ಸುರಕ್ಷತೆ ಕೊಡಿಸುತ್ತದೆ.

ಈ ಬೈಗುಳಗಳು ಸಮಾಜದಲ್ಲಿ ಹೆಚ್ಚು ಕೊಳಕನ್ನು ಹರಡುತ್ತಿವೆ. ಮಹಿಳೆಯರ ಸುರಕ್ಷತೆಗೆ ಇದೇ ಅಡ್ಡಿಯಾಗುತ್ತದೆ. `ಹರಾಮ್ ಜಾದೆ’ ಶಬ್ದ ಅಸಲಿಗೆ ಮದುವೆಯಾಗದೆ ಮಗುವನ್ನು ಪಡೆದ ಮಹಿಳೆಯನ್ನು ಅಪಮಾನಿಸುವುದಾಗಿದೆ. ದೋಷ ಮಗುವಿನದ್ದಲ್ಲ. ಆ ಮಹಿಳೆಯದ್ದಲ್ಲ. ಆದರೆ ಆ ಮಹಿಳೊಂದಿಗೆ ಮಲಗಿದ ಪುರುಷನದ್ದಾಗಿದೆ. ಆದರೆ ಅವನಂತೂ ಸುಲಭವಾಗಿ ಪಾರಾಗಿಬಿಡುತ್ತಾನೆ. ಬೈಗುಳಗಳು ಆ ಮಹಿಳೆ ಹಾಗೂ ನಿರ್ದೋಷಿ ಮಕ್ಕಳಿಗೆ ಅನ್ವಯಿಸುತ್ತವೆ.

ಇದು ಶಿಕ್ಷಣ ಸಿದ್ಧಾಂತಕ್ಕೆ ವಿರುದ್ಧ

ಶಿಕ್ಷಣ ಸಚಿವೆ ಸ್ಮೃತಿ ಇರಾನಿ ಗುಜರಾತ್‌ ಮಾದರಿಯ `ತಿಥಿ ಭೋಜನ’ವನ್ನು ದೇಶಾದ್ಯಂತ ಜಾರಿಗೆ ತರುವ ಯೋಜನೆ ರೂಪಿಸಿದ್ದಾರೆ. ಈ ಯೋಜನೆಯನ್ವಯ ಜನರು ವಿಶೇಷ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಊಟ ಮಾಡಿಸುತ್ತಾರೆ.

ಇದು ಅವರ ಮಗುವಿನ ಹುಟ್ಟುಹಬ್ಬ ಅಥವಾ ಪರೀಕ್ಷೆಯಲ್ಲಿ ಉನ್ನತ ರಾಂಕ್‌ ಗಳಿಸಿದ ಸಂದರ್ಭವೇ ಆಗಿರಬಹುದು. ಸ್ಮೃತಿ ಇರಾನಿ ಅವರ ಪ್ರಕಾರ, ಈ ತೆರನಾದ ಆಹಾರ ಮಕ್ಕಳಲ್ಲಿ ಪರಸ್ಪರ ಪ್ರೀತಿ, ಪೋಷಕರಲ್ಲಿ ಸಂವಾದ ಮತ್ತು ಸಮಾನತೆಯ ಭಾವನೆ ಮೂಡಿಸುತ್ತದೆ.

ವಾಸ್ತವದಲ್ಲಿ ಈ ಪುಕ್ಕಟೆ ಆಹಾರ ಪುರೋಹಿತರಿಗೆ ಆಹಾರ ನೀಡುವ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಖುಷಿಯ ಸಂದರ್ಭದಲ್ಲಿ ಗೆಳೆಯರು ಸಂಬಂಧಿಕರು ಒಟ್ಟಾಗಿ ಸೇರಿ ಊಟ ಮಾಡುವುದೇನೋ ಸರಿ. ಅಂತಹ ಖುಷಿಯ ಊಟ ಆಗಾಗ ಇತರರ ಮನೆಯಲ್ಲೂ ನಡೆಯುತ್ತಿರುತ್ತದೆ. ಆದರೆ ಭಾರಿ ಸಂಖ್ಯೆಯ ಶಾಲಾ ಮಕ್ಕಳಿಗೆ ಆಹಾರ ಕೊಡಿಸುವುದು ಸುಲಭದ ಮಾತಲ್ಲ. ಇದನ್ನು ಕೆಲವೇ ಜನರು ಮಾಡಲು ಸಾಧ್ಯ ಹಾಗೂ ಉಳಿದ ಮಕ್ಕಳು ಬಡ ಭಿಕ್ಷುಕರ ಹಾಗೆ ತಿನ್ನುತ್ತವೆ.

ಈ ಸಂಸ್ಕೃತಿಯೇ ವಿಚಿತ್ರವಾಗಿದೆ. ಅವರು ಭಕ್ತರಿಂದ ಕೇವಲ ಆಹಾರವನ್ನಷ್ಟೇ ಅಲ್ಲ ಐಶಾರಾಮಿ ಸಾಧನ, ಹುಡುಗಿಯರು, ಮಹಿಳೆಯರನ್ನು ಕೂಡ ಅಪೇಕ್ಷಿಸುತ್ತಾರೆ. ಆದರೂ ಅವರ ಧರ್ಮ ಗುರುಗಳು ಉಪಕಾರ ಮಾಡುವವರಂತೆ ಗುರ್‌ಎನ್ನುತ್ತಿರುತ್ತಾರೆ.

ಸ್ಮೃತಿ ಇರಾನಿ ಈ ಪರಂಪರೆಗೆ ಸರ್ಕಾರಿ ರೂಪ ಕೊಡುತ್ತಿದ್ದಾರೆ. ಮಧ್ಯಾಹ್ನ ಆಹಾರ ನೀಡುವುದನ್ನು ಹಿಂದಿನ ಸರ್ಕಾರ ಮಾಡುತ್ತಿತ್ತು. ಅದೇನು ಪುಣ್ಯ ಸಂಪಾದಿಸುವ ಭಾಗವಲ್ಲ. ಆಹಾರ ಪಡೆಯುವುದು ಪ್ರತಿಯೊಬ್ಬ ಮಗುವಿನ ಹಕ್ಕಾಗಿರುತ್ತದೆ. ಅದರಲ್ಲಿ ಯಾವುದೇ ದಾನಿ ಅಥವಾ ದಾನ ಪಡೆಯುವವ ಎಂಬಂತಿರುವುದಿಲ್ಲ.

ಉಚಿತ ಆಹಾರವನ್ನು ಹಲವು ಧರ್ಮಗಳಲ್ಲಿ ನೀಡಲಾಗುತ್ತದೆ. ಆದರೆ ಇದನ್ನು ಧರ್ಮದ ಹೆಸರಿನಲ್ಲಿ ಮಾಡುವ ಕೆಲಸ ಎಂದು ಭಾವಿಸಿ ನೀಡಲಾಗುತ್ತದೆ. ದೇವರನ್ನು ಖುಷಿಪಡಿಸುವುದು ಇದರ ಹಿಂದಿನ ತರ್ಕ. ಈ ಜನ್ಮದಲ್ಲಿ ಇಲ್ಲಿ ಮುಂದಿನ ಜನ್ಮದಲ್ಲಾದರೂ ತಮಗೆ ಒಳ್ಳೆಯ ಫಲ ದೊರೆಯಬೇಕೆನ್ನುವುದು ಅವರ ಯೋಚನೆ. ಧರ್ಮ ಈ ಬಗೆ ಬಗೆಯ ಚಮತ್ಕಾರ, ಸುಳ್ಳು ಕಥೆಗಳನ್ನು ಪಸರಿಸುವುದರ ಮೂಲಕ ಮಾಡುತ್ತಿರುತ್ತದೆ.

ಕಿಟಿ ಪಾರ್ಟಿಗಳಲ್ಲೂ ಕೂಡ ಒಬ್ಬರು ಇತರರಿಗೆ ಊಟದ ವ್ಯವಸ್ಥೆ ಮಾಡುತ್ತಿರುತ್ತಾರೆ. ಆ ಬಳಿಕ ಇನ್ನೊಬ್ಬರು ಉಳಿದವರಿಗೆ ಊಟ ಕೊಡಿಸುತ್ತಾರೆ. ಈ ಸರದಿ ಹೀಗೆಯೇ ಮುಂದುವರಿಯುತ್ತಿರುತ್ತದೆ. ಅದು ದಾನವೇನೂ ಆಗಿರುವುದಿಲ್ಲ. ಆದರೆ ಇದು ಶಿಕ್ಷಣ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಇದೇ ಧರ್ಮ ಸಂಸ್ಕೃತಿಯ ಅಂಗವಾಗಿದೆ.

ಭಾರತೀಯ ಜನತಾ ಪಾರ್ಟಿ ಧರ್ಮದ ರಥ ಏರಿ ಗೆದ್ದಿದೆ. ಆದರೆ ಅದನ್ನೇ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅನ್ವಯಿಸುವುದು ಸರಿಯಲ್ಲ.

ಕ್ರೂರತೆಯ ಬಲಿ : ಪ್ರಶ್ನೆಗಳು ನೂರಾರು

`ಕುಟುಂಬದ ಪ್ರತಿಷ್ಠೆಗೆ ಧಕ್ಕೆ ಬರದಿರಲಿ’ ಎಂದು ಅದೆಷ್ಟು ಜೀಲಗಳು ಬಲಿಯಾಗುತ್ತವೆ ಹೇಳುವುದು ಕಷ್ಟ. ಇನ್ನೂ ಅದೆಷ್ಟು ಜನರು ಜೀವಂತ ಶವವಾಗಿ ನರಳುತ್ತಿರುತ್ತಾರೋ ಅದನ್ನು ಊಹಿಸುವುದೂ ಕಷ್ಟ. ದೆಹಲಿಯಲ್ಲಿರುವ ರಾಜಾಸ್ಥಾನದ ಯಾದವ ಕುಟುಂಬದ ಹುಡುಗಿಯೊಬ್ಬಳು ಅದೇ ಮಹಾನಗರಿಯ ಪಂಜಾಬಿ ಖತ್ರಿ ಕುಟುಂಬದ ಹುಡುಗನನ್ನು ಪ್ರೀತಿಸಿ ಮದುವೆಯಾದಳು. ಅದು ಹುಡುಗಿಯ ಮನೆಯವರನ್ನು ಅದೆಷ್ಟು ರೊಚ್ಚಿಗೆಬ್ಬಿಸಿತೆಂದರೆ ಅವರು ಆಕೆಯನ್ನು ಕೊಂದು ಹಾಕಿದರು.

ಈವರೆಗೆ ಹಳ್ಳಿಯವರು ಮಾತ್ರ ಹೀಗೆ ಮಾಡುತ್ತಾರೆ, ಖಾಪ್‌ ಪಂಚಾಯತ್‌ ನಿರ್ದೇಶನದಂತೆ ಇಂತಹ ಘಟನೆಗಳು ನಡೆಯುತ್ತಿದ್ದವು. ಆದರೆ ಇಂದಿನ ಆಧುನಿಕ ಯುಗದಲ್ಲಿ ಉಪಾಯದಿಂದ ಮಗಳನ್ನು ಮನೆಗೆ ಕರೆಸಿ ಅವಳನ್ನು ಹೊಡೆದು ಸುಟ್ಟುಹಾಕುವುದು ಹಳೆಯ ಯುಗದಂತೆ ನಡೆಯುತ್ತಿದೆ.

ಮಗಳು ತಮ್ಮ ವಿರುದ್ಧ ಹೋಗಬಾರದು, ತಂದೆ ತಾಯಿಯ ಮಾತನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂಬುದು ಅಪೇಕ್ಷೆ.  ಪ್ರತಿಯೊಬ್ಬ ತಂದೆ ತಾಯಿಯೂ ಸರಿಯಾಗಿರುತ್ತಾರೆ ಎಂದು ಹೇಳಲಾಗುವುದಿಲ್ಲ, ಮಕ್ಕಳು ಆಜ್ಞಾಧಾರಕರಾಗಿರುತ್ತಾರೆ ಎಂದೂ ಹೇಳಲು ಆಗದು. ಪ್ರೀತಿ ಪ್ರೇಮದ್ದೇ ಆಗಿರಬಹುದು, ಬಟ್ಟೆ ಆಯ್ಕೆಯದ್ದೇ ಇರಬಹುದು, ಕೆರಿಯರ್‌ ಇಷ್ಟಪಡುವುದಾಗಿರಬಹುದು ಎಲ್ಲದರಲ್ಲೂ ತಮ್ಮದೇ ಮಾತು ನಡೆಯಬೇಕು ಎಂದು ಪೋಷಕರು ಯೋಚಿಸುತ್ತಾರೆ. ತಂದೆ ತಾಯಿ ಹೇಳಿದ್ದನ್ನು ಮಕ್ಕಳು ಒಪ್ಪಿಯೇ ಒಪ್ಪುತ್ತಾರೆ ಎಂದು ಹೇಳಲಾಗದು. ಮಕ್ಕಳು ತಾವು ಅಂದುಕೊಂಡಂತೆಯೇ ಆಗಬೇಕೆಂದು ಪಟ್ಟುಹಿಡಿದರೆ ಪಾಲಕರು ಅವರ ಹಿತದೃಷ್ಟಿಯಿಂದ ಒಪ್ಪಿಕೊಳ್ಳಲೇಬೇಕಾಗುತ್ತದೆ.

ಮದುವೆಯ ಬಾಬತ್ತಿನಲ್ಲಿ ಸಾಮಾನ್ಯವಾಗಿ ಪೋಷಕರು ತಮ್ಮ ಮಗನಿಗೆ ಎಂತಹ ಹುಡುಗಿ ಇರಬೇಕು, ಹುಡುಗಿಗಾದರೆ ಎಂತಹ ಅಳಿಯ ಇರಬೇಕು ಎಂದೆಲ್ಲ ಅಂದಾಜು ಹಾಕುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಸಾಕಷ್ಟು ವ್ಯವಹಾರಿಕ ಸಂಗತಿಗಳ ಬಗ್ಗೆ ಯೋಚಿಸಲಾಗುತ್ತದೆ. ತಮ್ಮ ಮಗಳನ್ನು ವರಿಸಲಿರುವ ಹುಡುಗ ಒಳ್ಳೆಯ ಕುಟುಂಬದವನಾಗಿ, ಚೆನ್ನಾಗಿ ಗಳಿಸುತ್ತಿದ್ದು. ಯಾವುದೇ ವಿವಾದದಲ್ಲಿ ಸಿಲುಕಿರಬಾರದು ಎಂದು ಗಮನಿಸಲಾಗುತ್ತದೆ.

ಅಂತರ್ಜಾತೀಯ ಮದುವೆಗಳಲ್ಲಂತೂ ಇನ್ನೊಂದು ತೆರನಾದ ಭೀತಿ ಪೋಷಕರಲ್ಲಿ ಆವರಿಸಿಕೊಂಡಿರುತ್ತದೆ. ತಮ್ಮ ಮನೆಯ ಸೊಸೆ ಅಥವಾ ಅಳಿಯನಾಗುವವ ಎಂತಹ ಸ್ವಭಾವದವನಾಗಿರಬಹುದು ಎಂದೆಲ್ಲ ತರ್ಕ ಮಾಡಿಕೊಂಡು ಮೊದಲ ದಿನದಿಂದಲೇ ಹಠಕ್ಕೆ ಕಟ್ಟುಬೀಳುತ್ತಾರೆ. ಮನೆಯಿಂದ ಹೊರಗೆ ಹೋಗುವ ಆದೇಶ ಕೂಡ ಕೊಟ್ಟುಬಿಡುತ್ತಾರೆ. ಇನ್ನು ಕೆಲವು ಮುಂಗೋಪಿ ಪೋಷಕರು ಒಬ್ಬರು ಅಥವಾ ಇಬ್ಬರನ್ನೂ ಕೊಲೆ ಮಾಡಿಬಿಡುತ್ತಾರೆ.

ಈ ಹತ್ಯೆ ಅದೆಷ್ಟು ಘಾತಕ ಎನ್ನುವುದು ಗೊತ್ತೇ ಇದೆ. ಆ ಬಳಿಕ ತಂದೆತಾಯಿ, ಚಿಕ್ಕಪ್ಪ, ಅಣ್ಣ ತಮ್ಮ ಇವರನ್ನೆಲ್ಲ ಬಂಧಿಸಲಾಗುತ್ತದೆ. ಬಹಳಷ್ಟು ಕಡಿಮೆ ಪ್ರಕರಣಗಳು ಸದ್ದಿಲ್ಲದೆ ಮುಚ್ಚಿ ಹಾಕಲ್ಪಡುತ್ತವೆ. ಆದರೆ ಈಗ ಮುಚ್ಚಿಹಾಕುವುದು ಸುಲಭವಲ್ಲ. ತಂದೆ ತಾಯಿಯರು ಹೇಳಿಕೆ ಕೊಡುತ್ತಲೇ ಇರುತ್ತಾರೆ. ನ್ಯಾಯಾಲಯಗಳು ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡುತ್ತವೆ. ಈ ಪ್ರಕರಣದಲ್ಲಿ ಒಂದು ವೇಳೆ ಹುಡುಗಿಯ ಗಂಡ ಹೆಚ್ಚು ಸಕ್ರಿಯನಾಗಿದ್ದರೆ, ವರ್ಷಾನುವರ್ಷ ಹುಡುಗಿಯ ತಂದೆ ತಾಯಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ನಡೆಸುತ್ತಾರೆ. ನ್ಯಾಯಾಲಯದಿಂದ ಯುವತಿಯ ತಂದೆ ತಾಯಿಗಳಿಗೆ ಯಾವುದೇ ಸಹಾನುಭೂತಿಯೂ ದೊರಕುವುದಿಲ್ಲ.

ಹೊಡೆದಾಟ, ಹತ್ಯೆಗಳು ಮತ್ತು ಮನೆಯಿಂದ ಹೊರಬಿದ್ದ ಪ್ರೀತಿ ಮತ್ತು  ಮದುವೆಗೆ ಯಾವುದೇ ಚಿಕಿತ್ಸೆಯಿಲ್ಲ. ಅದನ್ನು ಸಹಜವಾಗಿ ಸ್ವೀಕರಿಸಿ. ಕೋಪದ ಜಾಗದಲ್ಲಿ ಪ್ರೀತಿಯನ್ನು ಪ್ರೀತಿಯಿಂದ ನೋಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ