ಸೀಮಾಳ ಮದುವೆಯಾಗಿ 7 ವರ್ಷವಾಗಿತ್ತು. ಆದರೂ ಆಕೆಗೆ ಮಗುವಾಗಿರಲಿಲ್ಲ. ಆಕೆಯ ಗಂಡ ಮೋಹನ್‌ ಅವಳನ್ನು `ಬಂಜೆ’ ಎಂದು ಕರೆದು ದಿನ ಅವಳನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದ. ವೈದ್ಯರ ಪರೀಕ್ಷೆಯಿಂದ ಸೀಮಾ ತಾಯಿಯಾಗುವ ಸಾಧ್ಯತೆ ಇದೆಯೆಂದು ತಿಳಿದು ಬಂದಿತ್ತು.

ಸೀಮಾಳ ಪತಿ ಮೋಹನ್‌ ಮಾತ್ರ ಎಂದೂ ತನ್ನನ್ನು ತಾನು ಪರೀಕ್ಷೆಗೊಳಪಡಿಸಲಿಲ್ಲ. ಆದರೆ ಅವನು ಸೀಮಾಳಿಗೆ ಕಷ್ಟ ಕೊಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಅದೊಂದು ದಿನ ಪತಿಯ ದೈನಂದಿನ ಕಾಟಕ್ಕೆ ಬೇಸತ್ತು ಸೀಮಾ ಗಂಡನೊಂದಿಗೆ ಜಗಳವಾಡಿಬಿಟ್ಟಳು. ಈ ಪ್ರಕರಣ ಪೊಲೀಸ್‌ ಠಾಣೆಗೆ ಹಾಗೂ ಅಲ್ಲಿಂದ ಮುಂದೆ ನ್ಯಾಯಾಲಯದ ಕಟಕಟೆಯವರೆಗೂ ಹೋಗಿ ತಲುಪಿತು. ದೈನಂದಿನ ಅಪಮಾನ ಹಾಗೂ ಮಾನಸಿಕ ಹಿಂಸೆಗೆ ಪ್ರತಿಯಾಗಿ ಅವಳು ಗಂಡನನ್ನು ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿದಳು.

ಡಾ. ಸಂಧ್ಯಾ ಹೀಗೆ ಹೇಳುತ್ತಾರೆ, ಬಂಜೆತನಕ್ಕೆ ಸ್ತ್ರೀ-ಪುರುಷ ಇಬ್ಬರಲ್ಲಿ ಯಾರೊಬ್ಬರೂ ಕಾರಣವಾಗಿರಬಹುದು. ಸಮಾಗಮದ ಸಮಯದಲ್ಲಿ ಪುರುಷನ ವೀರ್ಯಾಣು ಸ್ತ್ರೀಯ ಅಂಡಾಣುವಿನ ಜೊತೆ ಮಿಲನಾಗುವುದನ್ನೇ `ಗರ್ಭಧಾರಣೆ’ ಎಂದು ಕರೆಯುತ್ತಾರೆ.

ಅದೆಷ್ಟೋ ಸಲ ಪರಿಪಕ್ವ ಅಂಡಾಣು ಗರ್ಭಕೋಶದ ತನಕ ತಲುಪುದೇ ಇಲ್ಲ. ಆ ಕಾರಣದಿಂದಾಗಿಯೇ ಮಹಿಳೆ ಗರ್ಭ ಧರಿಸುವುದಿಲ್ಲ.

ಒಮ್ಮೊಮ್ಮೆ ಸಿಫಲಿಸ್‌, ಗನೋರಿಯಾ, ಟಿ.ಬಿ., ಹಿಮೋಗ್ಲೋಬಿನ್‌ ಕೊರತೆ ಇವು ಅಂಡಾಣು ಗರ್ಭಕೋಶದ ತನಕ ತಲುಪದೇ ಇರಲು ಅಡ್ಡಿಯಾಗಿ ಪರಿಣಮಿಸುತ್ತವೆ.

ಪುರುಷನ ವೀರ್ಯಾಣು ಅತ್ಯಂತ ದುರ್ಬಲವಾಗಿರುವುದು ಅಥವಾ ವೀರ್ಯನಾಳ ಮುಚ್ಚಿದ್ದರೆ ಈ ಕಾರಣದಿಂದಲೂ ಮಹಿಳೆ ಗರ್ಭಧಾರಣೆಯಿಂದ ವಂಚಿತಳಾಗುತ್ತಾಳೆ.

ಪುರುಷರ ಸಮಸ್ಯೆ

ಪುರುಷರ ಈ ತೆರನಾದ ಸಮಸ್ಯೆಗೆ ಮುಖ್ಯ ಕಾರಣಗಳೆಂದರೆ, ಬೊಜ್ಜು, ಹೃದ್ರೋಗ, ಮಧುಮೇಹ, ಕ್ಷಯ, ಗನೋರಿಯಾ ರೋಗಗಳು. ಈ ಕಾರಣಗಳಿಂದಾಗಿ ವೀರ್ಯಾಣು ನಾಳ ಬಂದ್‌ ಆಗುತ್ತದೆ ಅಥವಾ ಎಷ್ಟೋ ಸಲ ಅದು ಸಂಕುಚನಗೊಳ್ಳುತ್ತದೆ. ಈ ಕಾರಣದಿಂದಾಗಿ ವೀರ್ಯಾಣು ವೀರ್ಯದ ದಾರಿಯಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ.

ಅಪಘಾತದ ಸಂದರ್ಭದಲ್ಲಿ ಅಂಡಕೋಶಕ್ಕೆ ಪೆಟ್ಟು ತಗುಲುವುದು, ಅಂಡಕೋಶದ ರೋಗ ಮತ್ತು ಥೈರಾಯ್ಡ್ ಗ್ರಂಥಿಯ ರೋಗ ಅಂತಃಸ್ರಾವದ ಗ್ರಂಥಿಗಳ ಕಾರ್ಯಸಾಮರ್ಥ್ಯ ಹಾಗೂ ಚಲನೆಯ ಕೊರತೆಯುಂಟಾಗುತ್ತದೆ. ಅದರಿಂದಾಗಿ ತಂದೆಯಾಗದಿರುವ ಸಮಸ್ಯೆ ಉತ್ಪನ್ನವಾಗುತ್ತದೆ.

ಬೇರೆ ಕಾರಣಗಳು

ಹುಟ್ಟು ವಿಕೃತಿಗಳ ಕಾರಣದಿಂದ ಅಂಡಗ್ರಂಥಿ ಮತ್ತು ಗುಪ್ತಾಂಗದ ಬೆಳವಣಿಗೆ ಆಗದಿರುವುದು. ವೀರ್ಯಾಣುವಿನ ಕೊರತೆ ಅಂದರೆ ಪರಿಪೂರ್ಣ ರೂಪದಲ್ಲಿ ನಿರ್ಮಾಣವಾಗದಿರುವುದು ಹಾಗೂ ವೀರ್ಯದ ಮುಖಾಂತರ ವೃಷಣ ಕೋಶದಲ್ಲಿ ಪ್ರವೇಶಿಸದಿರುವುದು.

ಸಮಾಗಮ ಕ್ರಿಯೆಯ ಬಗ್ಗೆ ಪರಿಪೂರ್ಣ ಜ್ಞಾನ ಇಲ್ಲದೆ ಇರುವುದು. ಈ ಕಾರಣದಿಂದಾಗಿ ಪತ್ನಿಯ ಜೊತೆ ಸೂಕ್ತ ರೀತಿಯಲ್ಲಿ ಸಮಾಗಮ ಹೊಂದದೇ ಇರುವುದು.

ಸಮಾಗಮದ ಸಮಯದಲ್ಲಿ  ಗುಪ್ತಾಂಗದಲ್ಲಿ ನಿಮಿರಿನ ಕೊರತೆಯ ಕಾರಣದಿಂದ ವೀರ್ಯ ಒಳಕ್ಕೆ ಪ್ರವೇಶಿಸದೇ ಇರುವುದು.

ಅಧಿಕ ಧೂಮಪಾನ ಹಾಗೂ ಮದ್ಯಸೇವನೆ.

ಚಿಕಿತ್ಸೆ ಏನು?

ಡಾ. ಸಂಧ್ಯಾ ಹೇಳುವುದೇನೆಂದರೆ, ಪುರುಷರ ಸಮಸ್ಯೆಗಳಿಗೆ ಉಪಾಯ ಕಂಡುಕೊಳ್ಳುವುದು ಈಗ ಸುಲಭವಾಗಿದೆ. ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಔಷಧಿ ಅಥವಾ ಶಸ್ತ್ರಚಿಕಿತ್ಸೆಯ ಮುಖಾಂತರ ಚಿಕಿತ್ಸೆ ಕೈಗೊಳ್ಳಲಾಗುತ್ತದೆ. ಚಿಕಿತ್ಸೆಯ ವಿಧಾನಗಳೆಂದರೆ :

ಮಧುಮೇಹ, ರಕ್ತದೊತ್ತಡಕ್ಕೆ ಪರಿಹಾರ ಹಾಗೂ ದೌರ್ಬಲ್ಯ ಮತ್ತು ರಕ್ತದ ಕೊರತೆಯನ್ನು ನೀಗಿಸುವುದು.

ಔಷಧಿಗಳಿಂದ ವೀರ್ಯದಲ್ಲಿನ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುವುದು.

ಎಫ್‌ಎಸ್‌ಎಚ್‌, ಎಲ್ಎಚ್‌ ಮತ್ತು ಟೆಸ್ಟೊಸ್ಟೆರಾನ್‌ಗಳನ್ನು ಅವಶ್ಯಕತೆಗೆ ಅನುಗುಣವಾಗಿ ಉಪಯೋಗಿಸಿ.

ಮಹಿಳೆಯರಲ್ಲಿ ಬಂಜೆತನ

ಬಂಜೆತನಕ್ಕೆ ಮುಖ್ಯ ಕಾರಣಗಳೆಂದರೆ

ಅತಿಯಾದ ಬೊಜ್ಜು

ರುಮ್ಯಾಟಿಸಂನ ತೊಂದರೆ

ಗರ್ಭಕೋಶ ಪರಿಪೂರ್ಣವಾಗಿ ವಿಕಾಸಗೊಳ್ಳದಿರುವುದು

ಅಂಡಾಣು ನಾಳದ ವಿಕೃತಿ

ಗರ್ಭಕೋಶದಲ್ಲಿ ಊತ

ಗರ್ಭಕೋಶ ತನ್ನ ಜಾಗದಿಂದ ಸ್ಥಳಾಂತರಗೊಂಡಿರುವುದು

ಅಂಡಾಣು ನಾಳದಲ್ಲಿ ಊತ ಬಂದಿರುವುದು.

ಯೋನಿ ಸ್ರಾದಲ್ಲಿ ಆಮ್ಲದ ಪ್ರಮಾಣ ಅತಿಯಾಗಿರುವುದು.

ಸಮಾಗಮ ಕ್ರಿಯೆಗೆ ಆಸಕ್ತಿ ಇಲ್ಲದೇ ಇರುವುದು.

ಯೋನಿ ಮಾರ್ಗದಲ್ಲಿ ವಿಕಾರ.

ಡಾ. ಸಂಧ್ಯಾ ಅವರ ಪ್ರಕಾರ, ಈ ಸಮಸ್ಯೆಗಳು ಮತ್ತು ಸ್ತ್ರೀಯರಿಗೆ ಉಂಟಾಗುವ ಬೇರೆ ಕೆಲವು ಸಮಸ್ಯಗಳಾದ ಋತುಚಕ್ರ, ಬಿಳಿಸೆರಗು, ಯೋನಿ ರಕ್ತಸ್ರಾವ, ಗರ್ಭಕೋಶದಲ್ಲಿ ಗೆಡ್ಡೆ ಮುಂತಾದವುಗಳನ್ನು ಔಷಧಿ ಇಲ್ಲಿ ಶಸ್ತ್ರಚಿಕಿತ್ಸೆಯ ಮುಖಾಂತರ ನಿವಾರಿಸಲಾಗುತ್ತದೆ. ಇದರ ಹೊರತಾಗಿ ಯೋನಿ ಸ್ರಾವದ ಆಮ್ಲೀಯತೆಯಿಂದಾಗಿ ಪುರುಷನ ವೀಯಾಣು ಜೊತೆಗೆ ಮಹಿಳೆಯ ಅಂಡಾಣು ಮಿಲನಕ್ಕೆ ಉಂಟಾಗುವ ಅಡೆತಡೆ ನಿವಾರಿಸಲು ಪುರುಷನ ವೀರ್ಯಾಣು ಹಾಗೂ ಮಹಿಳೆಯ ಅಂಡಾಣು ಪಡೆದು, ಭ್ರೂಣದ ರೂಪ ಕೊಟ್ಟ ಬಳಿಕ ಮಹಿಳೆಯ ಗರ್ಭಕೋಶದಲ್ಲಿ ಸೇರಿಸಲಾಗುತ್ತದೆ. ಇದನ್ನು ಪ್ರನಾಳ ಶಿಶು ಅಥವಾ `ಐವಿಎಫ್‌ತಂತ್ರಜ್ಞಾನ’ ಎಂದು ಹೇಳಲಾಗುತ್ತದೆ. ಬಾಡಿಗೆ ತಾಯಿಯ ಮುಖಾಂತರ ಮಹಿಳೆ ತಾಯಿಯಾಗಬಹುದು.

ಒಂದೇ ಅಂಡವಾಹಕ ಇರುವವರಿಗೆ ಸ್ತ್ರೀ ಪುರುಷರ ಅಂಡಾಣು ಹಾಗೂ ವೀರ್ಯಾಣುವನ್ನು ಪ್ರೂಯೋಗಶಾಲೆಯಲ್ಲಿ ಸಮ್ಮಿಳಿತಗೊಳಿಸಿ, ಭ್ರೂಣದ ರೂಪ ಕೊಟ್ಟ ಬಳಿಕ ಲ್ಯಾಪ್ರೊಸ್ಕೋಪಿಯ ಮುಖಾಂತರ ಮಹಿಳೆಯ ಅಂಡನಾಳಕ್ಕೆ ಸೇರಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು `ಗ್ಯಾಮಿಟಿ ಇಂಟ್ರಾಫೆಲೋಪಿಯನ್‌ ಟ್ರಾನ್ಸ್ ಫರ್‌’ ಅಥವಾ `ಝೈಗೋಟ್‌ ಇಂಟ್ರಾ ಫೆಲೋಪಿಯನ್‌ ಟ್ರಾನ್ಸ್ ಫರ್‌’ ವಿಧಾನ ಎಂದು ಕರೆಯಲಾಗುತ್ತದೆ.

ಸ್ತ್ರೀ ಪುರುಷರ ಅಂಡಾಣು ಮತ್ತು ವೀರ್ಯಾಣುಗಳ ಕೊರತೆ ಇದ್ದಾಗ ಸೂಕ್ಷ್ಮರಂಧ್ರದ ಮುಖಾಂತರ ವೀರ್ಯಾಣುವನ್ನು ಅಂಡಾಣುವಿನಲ್ಲಿ ಸೇರಿಸಲಾಗುತ್ತದೆ. ಹೀಗಾಗಿ ಇದರಲ್ಲಿ ಸಬ್‌ರೋನ್‌ ಸ್ಪರ್ಮ್ ಇಂಜೆಕ್ಷನ್‌ ಹಾಗೂ ಐಸಿಐ ತಂತ್ರಜ್ಞಾನ ಬಳಸಲಾಗುತ್ತದೆ.

ಬಂಜೆತನ ಈಗ ಅಸಾಧ್ಯದ ಸಮಸ್ಯೆ ಏನಲ್ಲ. ಕೊರತೆಗಳನ್ನು ನಿವಾರಿಸಿಕೊಂಡು ಮನೆಯಲ್ಲಿ ಮಗುವಿನ ನಗುವನ್ನು ಕಂಡು ಆನಂದಿಸಬಹುದು.

ಡಾ. ನಳಿನಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ