ಇಂದು ಪ್ರತಿ ಮಹಿಳೆಯೂ ಸುಂದರವಾಗಿ ಕಾಣಿಸಲು ಬಯಸುತ್ತಾಳೆ. ಸುಂದರವಾಗಿ ಕಾಣಿಸಲು ಫೇಶಿಯಲ್‌ಗಿಂತ ಒಳ್ಳೆಯ ಆಯ್ಕೆ ಯಾವುದೂ ಇಲ್ಲ. ಆಗಾಗ್ಗೆ ಫೇಶಿಯಲ್ ಮಾಡಿಸುವುದರಿಂದ ಮುಖ ಇನ್ನಷ್ಟು ಆಕರ್ಷಕವಾಗುತ್ತದೆ ಹಾಗೂ ತ್ವಚೆಗೆ ಹೊಳಪು ಬರುತ್ತದೆಯಲ್ಲದೆ, ಯೌವನದ ಹೊಸ ಅನುಭೂತಿ ಕೊಡುತ್ತದೆ.

ಬೇರೆ ಬೇರೆ ತರಹದ ತ್ವಚೆಗಳಿಗೆ ಮಾರುಕಟ್ಟೆಯಲ್ಲಿ ಬೇರೆ ಬೇರೆ ರೀತಿಯ ಫೇಶಿಯಲ್‌ಗಳು ಸಿಗುತ್ತವೆ. ಆದರೆ ಯಾವ ರೀತಿಯ ಫೇಶಿಯಲ್‌ನಿಂದ ನಿಮ್ಮ ಮುಖ ಹಾಗೂ ತ್ವಚೆಯನ್ನು ಇನ್ನಷ್ಟು ಹೊಳೆಯುವಂತೆ ಮಾಡಬೇಕೆಂದು ತಿಳಿಸಿಕೊಡುತ್ತೇವೆ ಬನ್ನಿ.

ಸಾಧಾರಣ ಕ್ಲೀನ್ಅಪ್

ಕ್ಲೀನ್‌ ಅಪ್‌ ಮಾಡಿಸುವುದರಿಂದ ತ್ವಚಿ ಸ್ವಚ್ಛವಂತೂ ಆಗುತ್ತದೆ. ಅದರ ಡೆಡ್‌ ಸೆಲ್ಸ್ ಕೂಡ ದೂರವಾಗುತ್ತವೆ ಮತ್ತು ಇನ್ನೂ ಹೆಚ್ಚು ಹೊಳೆಯುತ್ತದೆ. ಇದರಲ್ಲಿ ಮುಖಕ್ಕೆ ಸ್ಟೀಮ್ ಕೊಟ್ಟು ತ್ವಚೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ನಂತರ ಮುಖದ ಮೇಲಿರುವ ವೈಟ್‌ಮತ್ತು ಬ್ಲ್ಯಾಕ್‌ ಹೆಡ್ಸ್ ದೂರ ಮಾಡಲಾಗುತ್ತದೆ. ಅದಕ್ಕೆ ಮುಖದ ಮೇಲೆ ಕೈಗಳಿಂದ ಹಗುರವಾಗಿ ಗುಂಡಗೆ ಸುತ್ತುತ್ತಾ ಮಸಾಜ್ ಮಾಡಿ ಮುಖವನ್ನು ಸ್ವಚ್ಛ ಮಾಡವಾಗುತ್ತದೆ. ಇದನ್ನು ಎಲ್ಲ ವಯಸ್ಸಿನ ಮಹಿಳೆಯರು ಮತ್ತು ಹುಡುಗಿಯರು ಮನೆಯಲ್ಲಿ ಕುಳಿತೇ ಮಾಡಿಸಿಕೊಳ್ಳಬಹುದು.

ನಿಯಮಿತ ಫೇಶಿಯಲ್

ನಿಯಮಿತ ಫೇಶಿಯಲ್ ಅತ್ಯಂತ ಪ್ರಭಾವಶಾಲಿ ವಿಧಾನವಾಗಿದೆ. ಇದರಲ್ಲಿ ಸ್ಟೀಮ್ ಕೊಟ್ಟು ಮುಖವನ್ನು ಸ್ವಚ್ಛಗೊಳಿಸಲಾಗುತ್ತದೆ. ನಂತರ ಸ್ಕ್ರಬ್‌ ಉಪಯೋಗಿಸಿ ಮುಖಕ್ಕೆ ಮಸಾಜ್‌ ಮಾಡಲಾಗುತ್ತದೆ. ಆಮೇಲೆ ಮುಖದ ತ್ವಚೆಗೆ ಅನುಸಾರವಾಗಿ ಫೇಶಿಯಲ್ ಸ್ಕ್ರಬಿಂಗ್‌ ಮಾಡಲಾಗುತ್ತದೆ. ಕೊನೆಯಲ್ಲಿ ಒಳ್ಳೆಯ ಕ್ವಾಲಿಟಿಯ ಮಾಯಿಶ್ಚರೈಸರ್‌ ಹಚ್ಚಿ ತ್ವಚೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ತಿಂಗಳಲ್ಲಿ 2 ಬಾರಿ ಈ ರೀತಿ ಮಾಡಿದರೆ ಮುಖ ಅರಳುತ್ತದೆ.

ಕಲೆಗಳನ್ನು ನಿವಾರಿಸುವ ಫೇಶಿಯಲ್

ತೈಲಯುಕ್ತ ಹಾಗೂ ಕಲೆಗಳಿರುವ ತ್ವಚೆಗೆ ಈ ಫೇಶಿಯಲ್ ಸಾಕಷ್ಟು ಪ್ರಭಾವಶಾಲಿಯಾಗಿರುತ್ತದೆ. ಜೊತೆಗೆ ಪ್ರೌಢರಿಗೆ ಹಾಗೂ ಯುವತಿಯರಿಗೆ ಸೂಕ್ತವಾಗಿದೆ.

ಎಲೆಕ್ಟ್ರಿಕ್ಶಾಕ್ಫೇಶಿಯಲ್

ಈ ಫೇಶಿಯಲ್ ಸಾಕಷ್ಟು ಚಾಲ್ತಿಯಲ್ಲಿದೆ. ಎಲೆಕ್ಟ್ರಿಕ್‌ ಫೇಶಿಯಲ್‌ನಲ್ಲಿ ಮೈಕ್ರೋ ಕರೆಂಟ್‌ನ್ನು ಉಪಯೋಗಿಸಲಾಗುತ್ತದೆ. ಇದರಲ್ಲಿ ಪಾಸಿಟಿವ್ ‌ಮತ್ತು ನೆಗೆಟಿವ್ ‌ಅಲೆಯನ್ನು ನಿರ್ಮಿಸಿ ಫೇಶಿಯಲ್ ಮಾಡಲಾಗುತ್ತದೆ.

ಗ್ಯಾಲ್ವಾನಿಕ್ಫೇಶಿಯಲ್

ಈ ಫೇಶಿಯಲ್ ಒಣ ತ್ವಚೆಯವರಿಗಾಗಿ ಬಹಳ ಪರಿಣಾಮಕಾರಿಯಾಗಿರುತ್ತದೆ. ಈ ಫೇಶಿಯಲ್ ಮುಖದ ಶುಷ್ಕತೆ ದೂರ ಮಾಡಿ ತ್ವಚೆಯಲ್ಲಿ ಆರ್ದ್ರತೆ ಉಂಟು ಮಾಡುತ್ತದೆ. ಹೃದಯ ರೋಗಿಗಳು ಈ ಫೇಶಿಯಲ್ ಮಾಡಿಸಿಕೊಳ್ಳಬಾರದು.

ಫ್ರೂಟ್ಫೇಶಿಯಲ್

ಈ ಫೇಶಿಯಲ್ ಸಂಪೂರ್ಣವಾಗಿ ಪ್ರಾಕೃತಿಕ ಹಾಗೂ ಕಡಿಮೆ ಖರ್ಚಿನದ್ದೂ ಆಗಿದೆ. ಮುಖವನ್ನು ಹೊಳೆಯುವಂತೆ ಮಾಡಲು  ಫ್ರೂಟ್‌ ಫೇಶಿಯಲ್ ಪರಿಣಾಮಕಾರಿಯಾಗಿದೆ. ಪ್ಯಾರಾಫಿನ್‌ ಫೇಶಿಯಲ್ ಇಂದು ಎಲ್ಲ ಕಡೆ ಈ ಫೇಶಿಯಲ್ ಉಪಯೋಗಿಸಲಾಗುತ್ತದೆ. ಸೆಲೆಬ್ರಿಟಿಗಳೂ ಸಹ ಪ್ಯಾರಾಫಿನ್‌ ಫೇಶಿಯಲ್‌ನ್ನೇ ಉಪಯೋಗಿಸುತ್ತಾರೆ.

ಗೋಲ್ಡ್ ಫೇಶಿಯಲ್

ಈ ಫೇಶಿಯಲ್ ಮಾಡಲು 24 ಕ್ಯಾರೆಟ್‌ ಚಿನ್ನವಿರುವ ಕ್ರೀಮನ್ನು ಉಪಯೋಗಿಸುತ್ತಾರೆ. ಈ ಫೇಶಿಯಲ್‌ನಲ್ಲಿ ಮಾಸ್ಕ್ ಕೂಡ ಚಿನ್ನದ್ದೇ ಉಪಯೋಗಿಸಲಾಗುತ್ತದೆ.

ವೈನ್ಫೇಶಿಯಲ್

ವೈನ್‌ ಫೇಶಿಯಲ್ ಇಂದು ಪ್ರಸಿದ್ಧ ವಿಧಾನವಾಗಿದೆ. ಅದರಿಂದ ತ್ವಚೆ ಹೊಳೆಯುವುದಲ್ಲದೆ, ರಕ್ತ ಸಂಚಾರ ಸುಗಮವಾಗುತ್ತದೆ. ಈ ಫೇಶಿಯಲ್ ಕೂಡ ಸಾಕಷ್ಟು ಪರಿಣಾಮಕಾರಿ.

ಚಾಕಲೇಟ್ಫೇಶಿಯಲ್

ಚಾಕಲೇಟ್‌ನಿಂದ ಬರೀ ಮೂಡ್‌ ಬದಲಾಗುತ್ತದೆ ಎಂದು ನೀವು ಯೋಚಿಸಿದರೆ ಅದು ತಪ್ಪು. ಏಕೆಂದರೆ ಈಗ ಚಾಕಲೇಟ್‌ ನಿಮ್ಮ ಸೌಂದರ್ಯಕ್ಕೆ 4 ಗರಿಗಳನ್ನು ಮೂಡಿಸುತ್ತದೆ. ಚಾಕಲೇಟ್‌ಫೇಶಿಯಲ್‌ನಿಂದ ನಿಮ್ಮ ಮುಖಕ್ಕೆ ಹೊಸ ಹೊಳಪು ಬರುತ್ತದೆ. ಚಾಕಲೇಟ್‌ ಕ್ರೀಂ, ಪೇಸ್ಟ್ ಮತ್ತು ಸ್ಕ್ರಬ್‌ನಿಂದ ಚಾಕಲೇಟ್‌ ಫೇಶಿಯಲ್ ಮಾಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ