ತೊಂದರೆಯಾಗುವುದಿಲ್ಲ………!
ದುಬಾರಿ ಬೆಲೆಯ ಬ್ರ್ಯಾಂಡೆಡ್ ಬ್ರಾ ಬೇಗನೇ ಹಾಳಾದರೆ ತೊಂದರೆಯಾಗುವುದು ಸಹಜವೇ. ಎಷ್ಟೇ ಒಳ್ಳೆಯ ಕ್ವಾಲಿಟಿಯ ಬ್ರಾ ಖರೀದಿಸಲಿ ಅದು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಬ್ರಾವನ್ನು ಸರಿಯಾಗಿ ಗಮನಿಸದಿರುವುದು. ಕೆಲವು ವಿಷಯಗಳ ಬಗ್ಗೆ ಗಮನ ಕೊಟ್ಟರೆ ದೀರ್ಘಕಾಲದವರೆಗೆ ಬ್ರಾ ಉಪಯೋಗಿಸಬಹುದು.
ಚೆನ್ನಾಗಿ ಒಗೆಯಿರಿ
ಮಹಿಳೆಯರು ತಮ್ಮ ಸೀರೆ, ಬ್ಲೌಸ್ ಅಥವಾ ಸಲ್ವಾರ್ ಸೂಟ್‌ನ ಸ್ವಚ್ಛತೆಯ ಬಗ್ಗೆ ಬಹಳ ಗಮನ ನೀಡುತ್ತಾರೆ. ಆದರೆ ಬ್ರಾದ ಬಗ್ಗೆ ಎಷ್ಟು ನಿರ್ಲಕ್ಷ್ಯತೆ ತೋರುತ್ತಾರೆಂದರೆ ಒಮ್ಮೊಮ್ಮೆ ಅದನ್ನು ನೀರಿನಲ್ಲಿ ನೆನೆಸಿ, ಹಿಂಡಿ ಒಣಗಿಸಲು ಬಿಸಿಲಿನಲ್ಲಿ ಹಾಕುತ್ತಾರೆ. ಅದನ್ಯಾರು ತಾನೇ ನೋಡುತ್ತಾರೆ ಎಂಬ ಆಲೋಚನೆ ಅವರಿಗಿರುತ್ತದೆ.
ಕೊಳಕಾದ ಬ್ರಾ ಪರ್ಸನಲ್ ಹೈಜೀನ್‌ಗೆ ತೊಂದರೆಯಾಗುತ್ತದೆ. ಜೊತೆಗೆ ಕೊಳಕಿನಿಂದಾಗಿ ಅದು ಬೇಗ ಹಾಳಾಗುತ್ತದೆ. ನಿಯಮಿತವಾಗಿ ಸ್ವಚ್ಛಗೊಳಿಸದೆ ವಾರಕ್ಕೊಮ್ಮೆ ಗಟ್ಟಿಯಾಗಿ ಒಗೆಯುವುದರಿಂದ ಅದು ಹರಿದುಹೋಗುತ್ತದೆ. ಅದನ್ನು ವಾಷಿಂಗ್ ಮೆಶಿನ್‌ನಲ್ಲಿ ಒಗೆಯದೆ ಕೈಗಳಿಂದ ಹಗುರವಾಗಿ ಉಜ್ಜಿ ಒಗೆದು ನೆರಳಿನಲ್ಲಿ ಒಣಗಿಸಿದರೆ ಬ್ರಾ ಹೆಚ್ಚು ದಿನ ಬಾಳಿಕೆ ಬರುತ್ತದೆ.
ನೀರಿನಲ್ಲಿ ನೆನೆಸಿಡಬೇಡಿ
ಬಹಳ ಹೊತ್ತು ನೀರಿನಲ್ಲಿ ನೆನೆಸಿಟ್ಟರೆ ಬ್ರಾದ ಫಿಟ್‌ನೆಸ್ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ ಹಾಗೂ ಅದು ಬೇಗನೆ ಹಾಳಾಗುತ್ತದೆ. ಅದನ್ನು ನೀರಿನಲ್ಲಿ ನೆನೆಸಿ ಕೂಡಲೇ ಒಗೆಯಿರಿ. ದುಬಾರಿ ಬ್ರಾವನ್ನು ಮೈಲ್ಡ್ ಬಾಡಿ ಕ್ಲೆನ್ಸರ್‌ನಿಂದಲೇ ಒಗೆಯಿರಿ ಮತ್ತು ಅದರ ನೀರು ತೆಗೆಯಲು ಅದನ್ನು ಬಾಥ್‌ರೂಮಿನಲ್ಲಿ ತೂಗುಬಿಡಿ.
ಬೆವರು ಮತ್ತು ತಾಪಮಾನದ ಪ್ರಭಾವ
ಕೆಲವು ಮಹಿಳೆಯರಿಗೆ ಬಾಡಿ ಟೆಂಪರೇಚರ್ ಕೊಂಚ ಹೆಚ್ಚಾಗಿರುತ್ತದೆ. ಅದು ನಾಜೂಕಾದ ಬ್ರಾ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಏನು ಮಾಡಲೂ ಸಾಧ್ಯವಿಲ್ಲ. ಬೆವರಿನಿಂದ ಹೆಚ್ಚು ಅಸಿಡಿಕ್ ಆಗಿ ಬ್ರಾದ ಫ್ಯಾಬ್ರಿಕ್ ಮತ್ತು ಎಲಾಸ್ಟಿಕ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಸಂದರ್ಭಕ್ಕೆ ತಕ್ಕಂತೆ ಬ್ರಾ
ಸಂದರ್ಭಕ್ಕೆ ಒಪ್ಪುವ ಬ್ರಾವನ್ನೇ ಧರಿಸಿ. ಮಾರ್ನಿಂಗ್ ವಾಕ್‌ಗೆ ತೆಳುವಾದ ಲೇಸ್‌ನ ಬ್ರಾ ಧರಿಸುವುದು ಪಾರ್ಟಿಗಳಲ್ಲಿ ಜಿಮ್ ಬ್ರಾ ಧರಿಸುವಷ್ಟೇ ಕೆಟ್ಟದಾಗಿರುತ್ತದೆ. ಎಕ್ಸರ್‌ಸೈಜ್ ಮತ್ತು ಬೆವರಿನಿಂದಾಗಿ ಸೂಕ್ಷ್ಮವಾದ ಬ್ರಾಗೆ ಹಾನಿಯುಂಟಾಗುತ್ತದೆ. ಹೀಗಾಗಿ ಸಂದರ್ಭಕ್ಕೆ ತಕ್ಕನಾದ ಬ್ರಾ ಆರಿಸಿಕೊಳ್ಳಿ.
ಸರಿಯಾಗಿ ಧರಿಸಿ
ಬ್ರಾ ಧರಿಸುವ ಸರಿಯಾದ ವಿಧಾನವೆಂದರೆ ಮೊದಲು ಸ್ಟ್ರಾಪ್ಸ್ ನಲ್ಲಿ ಕೈ ಹಾಕಿ ನಂತರ ಬ್ರೆಸ್ಟ್ ನ್ನು ಕಪ್ಸ್ ನಲ್ಲಿ ಅಡ್ಜಸ್ಟ್ ಮಾಡಿ ಕೊನೆಯಲ್ಲಿ ಹಿಂದೆ ಇರುವ ಹುಕ್ ಸಿಕ್ಕಿಸಿ. ಅನೇಕ ಮಹಿಳೆಯರು ಮೊದಲು ಹುಕ್ ಹಾಕುತ್ತಾರೆ, ನಂತರ ಸ್ಟ್ರಾಪ್ಸ್ ನಲ್ಲಿ ಕೈ ಹಾಕಿ ಕೊನೆಯಲ್ಲಿ ಬ್ರೆಸ್ಟ್ ನ್ನು ಕಪ್ಸ್ ನಲ್ಲಿ ಅಡ್ಜಸ್ಟ್ ಮಾಡುತ್ತಾರೆ. ಅದರಿಂದ ಬ್ರಾದ ಎಲಾಸ್ಟಿಕ್ ಸ್ಟ್ರಾಪ್ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಬದಲಿಸಿ ಬದಲಿಸಿ ಧರಿಸಿ
ದಿನ 2 ಬ್ರಾಗಳನ್ನು ಬದಲಿಸಿ ಧರಿಸುವ ಬದಲು ಕನಿಷ್ಠ 4 ಬ್ರಾಗಳನ್ನು ನಿಯಮಿತವಾಗಿ ಉಪಯೋಗಿಸಿ.
– ಅಂಜಲಿ ರಾವ್